ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ | Talidavanu Baliyanu Gade in Kannada

1
2240
Talidavanu-Baliyanu-Gade-in-Kannada
Talidavanu-Baliyanu-Gade-in-Kannada

ತಾಳಿದವನು ಬಾಳಿಯಾನು ಗಾದೆ ಮಾತಿನ ವಿಸ್ತರಣೆ Talidavanu Baliyanu Gade in kannada information gade mathu ತಾಳಿದವನು ಬಾಳಿಯಾನು ಗಾದೆಯ ಅರ್ಥ ವಿವರಣೆ

ಇದರಲ್ಲಿ ಎಲ್ಲಾ ಶಾಲಾ ಹಾಗೂ ಕಾಲೇಜು ಮಕ್ಕಳಿಗೆ ತಾಳಿದವನು ಬಾಳಿಯಾನು ಗಾದೆ ಮಾತಿನ ಅರ್ಥ ಮತ್ತು ವಿವರಣೆಯನ್ನು ತಿಳಿಸಲಾಗಿದೆ.

Contents

ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ :

Talidavanu baliyanu gade in Kannada
ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ

ಗಾದೆಯ ಅರ್ಥ:

ಗಾದೆಯು ವೇದಕ್ಕೆ ಸಮಾನ. ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಗಾದೆಯು ಹಿರಿಯರ ಜೀವನದ ಅನುಭವದ ನುಡಿಮುತ್ತುಗಳು.ಅದರಲ್ಲಿ ಈ ಗಾದೆಯು ಒಂದಾಗಿದೆ. ದುಡುಕು, ಕೋಪ, ಆತುರ ಮುಂತಾದವು ಅನರ್ಥಸಾಧನಗಳು. ಜೀವನದಲ್ಲಿ ಏಳು ಬೀಳುಗಳು, ಕಷ್ಟ ಕಾರ್ಪಣ್ಯ, ಸುಖ ದುಃಖ, ದುಗುಡ ದುಮ್ಮಾನ, ಕೋಪ ತಾಪಗಳು ಸಹಜ, ಎಂತಹ ಸಂದರ್ಭದಲ್ಲಿಯೂ ವಿವೇಕವನ್ನು ಕಳೆದುಕೊಳ್ಳಬಾರದು ತಾಳ್ಮೆಯಿಂದಿರಬೇಕು.


ತಾಳಿದವನು ಬಾಳಿಯಾನು ಮನುಷ್ಯನ ಸಾಮಾನ್ಯ ಗುಣವೆಂದರೆ ಒಮ್ಮೆಲೇ ಎಲ್ಲವನ್ನೂ ಸಾಧಿಸಿಬಿಡಬೇಕೆಂಬುದು . ಹೇಗಾದರೂ ಮಾಡಿ ಆದಷ್ಟು ಬೇಗ ಎತ್ತರಕ್ಕೆ ಬೆಳೆಯಬೇಕು. ಸಮಾಜದಲ್ಲಿ ವಿಶೇಷ ಗೌರವ ಸಂಪಾದಿಸಬೇಕು ಎಂಬುದೇ ಆಗಿದೆ. ಆದರೆ ಇವುಗಳನ್ನು ಪಡೆಯಲು ಕೇವಲ ಮಾತಿನಿಂದ ಸಾಧ್ಯವಾಗದು .ಅದಕ್ಕೆ ಸಮಯ ಬರಬೇಕು . ಪ್ರಯತ್ನ ನಿರಂತರವಾಗಿ ಸಾಗಬೇಕು ಎಂಬುದು ಈ ಗಾದೆಯ ಸಾಮಾನ್ಯ ಅರ್ಥ . ಮನುಷ್ಯ ಸಮಾಜ ಜೀವಿ . ಸಮಾಜದಲ್ಲಿ ಅವನು ಎಲ್ಲರೊಡನೆ ಬೆರೆತು ಬಾಳಬೇಕಾಗುತ್ತದೆ .ಜೀವನದಲ್ಲಿ ತಾಳ್ಮೆಯು ಅತಿ ಮುಖ್ಯವಾದುದು. ದಾಸರ ನುಡಿಯಂತೆ ‘ತಾಳುವಿಕೆಗಿಂತ ತಪವಿಲ್ಲ’. ಸುಖ ಬಂದಾಗ ಹಿಗ್ಗದೇ, ದುಃಖ ಬಂದಾಗ ಕುಗ್ಗದೇ ಎರಡನ್ನು ಸಮಾನಭಾವದಿಂದ ಸ್ವೀಕರಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು.

ಇದಕ್ಕೆ ತಾಳ್ಮೆ ಬೇಕು. ತಾಳ್ಮೆಗೆಟ್ಟು ತೆಗೆದುಕೊಳ್ಳುವ ಆತುರದ ನಿರ್ಧಾರವು ಭವಿಷ್ಯಕ್ಕೇ ಮಾರಕವಾಗುತ್ತದೆ. ದಾಸರು ಹೇಳಿದ್ದಾರೆ. ಜೀವನದ ಕಷ್ಟಗಳನ್ನು ಎದುರಿಸಲಾಗದೇ ತಾಳ್ಮೆಗೆಟ್ಟು ದುಡುಕಿನಿಂದ ಹೇಡಿತನದ ನಿರ್ಧಾರಕ್ಕೆ ಬರಬಾರದು.ಜೀವನದಲ್ಲಿ ಅನೇಕ ಕಷ್ಟ-ನಷ್ಟಗಳು, ನೋವು ಸಂಕಟಗಳು, ದುಃಖಗಳನ್ನು ಎದುರಾಗುತ್ತದೆ. ಇವೆಲ್ಲವನ್ನೂ ನಾವು ತಾಳ್ಮೆಯಿಂದ ಎದುರಿಸಿ ಜಯಿಸಬೇಕು. ಆದ್ದರಿಂದ ತಾಳ್ಮೆ ಪ್ರತಿಯೊಬ್ಬರಲ್ಲಿ ಇರಬೇಕಾದ ಅತ್ಯಮೂಲ್ಯವಾದ ಒಂದು ಗುಣವಾಗಿದೆ.

ಗಾದೆಯ ವಿಸ್ತರಣೆ :

ಜೀವನದ ಕಷ್ಟಗಳನ್ನು ಎದುರಿಸಲಾಗದೇ ತಾಳ್ಮೆಗೆಟ್ಟು ದುಡುಕಿನಿಂದ ಹೇಡಿತನದ ನಿರ್ಧಾರಕ್ಕೆ ಬರಬಾರದು. ಏನೇ ಮಾಡಿದರೂ ಎರಡೆರಡು ಸಲ ಯೋಚನೆ ಮಾಡಿ ಮಾಡಬೇಕು. ಇದಕ್ಕೆ ತಾಳ್ಮೆಬೇಕು ದುಡುಕಿನ ನಿರ್ಧಾರ ತೆಗೆದುಕೊಳ್ಳಬಾರದು.ಅದು ನಮ್ಮ ಜೀವನದ ಮೇಲೆಯೇ ಭಾರಿ ಪರಿಣಾಮ ಉಂಟುಮಾಡಬಹುದು. ತಾಳ್ಮೆಗೆ ಬಂಗಾರಕ್ಕಿಂತ ಹೆಚ್ಚಿನ ಬೆಲೆಯಿದೆ. ಇಂದಿನ ಜೀವನ ಶೈಲಿಯಲ್ಲಂತು ಹೆಚ್ಚು ಬೇಡಿಕೆಯೂ ಇದೆ ಒಂದು ಕ್ಷಣದ ತಾಳ್ಮೆಯು, ಸಾವಿರ ಕ್ಷಣಕ್ಕಾಗುವಷ್ಟು ದುಃಖವನ್ನು ತಡೆಯಬಲ್ಲದು. ತಾಳ್ಮೆಯಿದ್ದಲ್ಲಿ ಪ್ರೀತಿಯು ಜನಿಸುತ್ತದೆ. ತಾಳ್ಮೆಯಿದ್ದಲ್ಲಿಭರವಸೆಯು  ಬೆಳೆಯುತ್ತದೆ. ತಾಳ್ಮೆಯಿಂದಿದ್ದರೆ ಅಲ್ಲಿ ನಂಬಿಕೆಯು ನೆಲೆಸುತ್ತದೆ. ಪ್ರೀತಿ, ಭರವಸೆ, ನಂಬಿಕೆಗಿರುವ ಆಗಾಧ ಶಕ್ತಿಯನ್ನು ಲೋಕವೇ ಮನ್ನಿಸಿ, ಗೌರವಿಸಿ, ನಮಿಸುತ್ತದೆ. ತಾಳ್ಮೆಯೆಂದರೆ ಕೇವಲ ಒಂದು ಶಕ್ತಿ ಮಾತ್ರವಲ್ಲ, ಅದೊಂದು ಬಗೆಯ ಜ್ಞಾನವೂ ಹೌದು. ಎಲ್ಲಾ ಸಮಸ್ಯೆಗಳಿಗೂ ಒಂದಲ್ಲಾ ಒಂದು ಪರಿಹಾರವಿದ್ದೇ ಇದೆ ಎಂಬ ಸತ್ಯವನ್ನು ಅರ್ಥಮಾಡಿಕೊಂಡು ಒಪ್ಪಿಕೊಳ್ಳಲೇಬೇಕು.

 ತಾಳ್ಮೆಯು ಇದನ್ನು ಪ್ರತಿಪಾದಿಸುತ್ತದೆ. ಕೆಸರು ತುಂಬಿ ರಾಡಿಯಾಗಿರುವ ಕೊಳದಲ್ಲಿನ ನೀರನ್ನು ಹಾಗೇ ಬಿಟ್ಟರೆ ನಿಧಾನವಾಗಿ ಮಣ್ಣೆಲ್ಲಾ ತಳಭಾಗವನ್ನು ಸೇರಿ ನೀರು ತಿಳಿಯಾಗುತ್ತದೆ. ಹರಿಯಲು ಬಿಟ್ಟರೆ ಪರಿಶುದ್ಧವೂ ಆದೀತು. ಹಾಗೆಯೇ ಬದುಕಿನಲ್ಲೂ ಕೆಲವೊಂದು ಕಷ್ಟಗಳು ನಮ್ಮಲ್ಲಿ ಆತಂಕ, ತಳಮಳ ಕಳವಳಗಳನ್ನುಂಟು ಮಾಡುತ್ತವೆ.ತಾಳ್ಮೆಯ ಅನುಪಸ್ಥಿತಿಯಿಂದ ಸುಮಧುರ ಸಂಬಂಧಗಳು ಹಾಳಾಗುತ್ತವೆ. ಗೆಲುವ ಪಡೆವ ಜಾಗದಲ್ಲಿ ನಾವು ಸೋಲನ್ನು ಕಂಡದ್ದೇ ಆದರೆ ತಾಳ್ಮೆಯನ್ನು ಮರೆತದ್ದೇ ಅದಕ್ಕೆ ಕಾರಣವಾಗಿರಬಹುದು. 

ತಾಳವೆಷ್ಟು ಮುಖ್ಯವೋ ಬಾಳಿಗೆ ತಾಳ್ಮೆ ಆಷ್ಟೇ ಮುಖ್ಯ. ಅದಕ್ಕೇ ಹೇಳುವುದು ಬದುಕಿನಲ್ಲಿ ತಾಳ್ಮೆಬೇಕು. ತಾಳದವನು ಬಳಲಿಯಾನು. ನಾವು ಬಹಳಷ್ಟು ಕೆಲಸಗಳನ್ನು ಆತುರಾತುರವಾಗಿ ಮಾಡಿಬಿಡುತ್ತೇವೆ. ಸರಿಯಾದ ಫಲ ಸಿಗದೇ ಇದ್ದಾಗ ಇನ್ನಾರನ್ನೋ ದೂರುತ್ತೇವೆ.ಹಾಗೂ ನೃತ್ಯಕ್ಕತಾಳವೆಷ್ಟು ಮುಖ್ಯವೋ ಬಾಳಿಗೆ ತಾಳ್ಮೆ ಆಷ್ಟೇ ಮುಖ್ಯ. ಅದಕ್ಕೇ ಹೇಳುವುದು ಬದುಕಿನಲ್ಲಿ ತಾಳ್ಮೆಬೇಕು. ತಾಳದವನು ಬಳಲಿಯಾನು. ನಾವು ಬಹಳಷ್ಟು ಕೆಲಸಗಳನ್ನು ಆತುರಾತುರವಾಗಿ ಮಾಡಿಬಿಡುತ್ತೇವೆ. ಸರಿಯಾದ ಫಲ ಸಿಗದೇ ಇದ್ದಾಗ ಇನ್ನಾರನ್ನೋ ದೂರುತ್ತೇವೆ.ತಾಳ್ಮೆಯೆಂದರೆ ಕೇವಲ ಒಂದು ಶಕ್ತಿ ಮಾತ್ರವಲ್ಲ,

ಅದೊಂದು ಬಗೆಯ ಜ್ಞಾನವೂ ಹೌದು. ಎಲ್ಲಾ ಸಮಸ್ಯೆಗಳಿಗೂ ಒಂದಲ್ಲಾ ಒಂದು ಪರಿಹಾರವಿದ್ದೇ ಇದೆ ಎಂಬ ಸತ್ಯವನ್ನು ಅರ್ಥಮಾಡಿಕೊಂಡು ಒಪ್ಪಿಕೊಳ್ಳಲೇ ಬೇಕು. ತಾಳ್ಮೆಗೆ ಕಾಯುವ ಗುಣ ಬೇಕು. ‘ಆತುರಗಾರನಿಗೆ ಬುದ್ಧಿಮಟ್ಟ’ ಜೀವನದಲ್ಲಿ ಸುಖ, ಶಾಂತಿ, ಸಮೃದ್ಧಿಯನ್ನು ಪಡೆಯಬೇಕೆಂದರೆ ಕಾಯಬೇಕು. ಕಾಯುವಂಥ ಸಹನೆ ಬೇಕು. ತಾಳ್ಮೆಯಿಂದ ತಪಸ್ಸು ಮಾಡಿದಾಗ ಸಿಗುವ ಫಲ ತುಂಬ ರುಚಿಯಾಗಿರುತ್ತದೆ, ಮಹತ್ವದ್ದಾಗಿರುತ್ತದೆ ಎಂಬಮಾತು ಸಾರ್ವಕಾಲಿಕ ಸತ್ಯ. ಆ ಗುಣ ಇಲ್ಲದವರು ತಮ್ಮದೇ ಭ್ರಮಾಲೋಕದಲ್ಲಿ ಮುಳುಗಿ ಹೋಗುತ್ತಾರೆ. ನಾವು ಎಷ್ಟೇ ಒಳ್ಳೆಯ ಗುಣಗಳನ್ನು ಹೊಂದಿದ್ದರೂ ತಾಳ್ಮೆಯೊಂದಿಲ್ಲದಿದ್ದರೆ ಆ ಒಳ್ಳೆಯ ಗುಣಗಳಿಗೆ ಬೆಲೆ ಸಿಗುವುದು ದುಸ್ತರ. ಹಿರಿಯರು ಹೇಳುವಂತೆ ಎಲ್ಲವೂ ವಿಫಲವಾದಾಗ ತಾಳ್ಮೆ ಸಫಲವಾಗುತ್ತದೆ.

ಒಂದು ಕ್ಷಣದ ತಾಳ್ಮೆಯು, ಸಾವಿರ ಕ್ಷಣಕ್ಕಾಗುವಷ್ಟು ದುಃಖವನ್ನು ತಡೆಯಬಲ್ಲದು. ತಾಳ್ಮೆಯಿದ್ದಲ್ಲಿ ಪ್ರೀತಿಯು ಜನಿಸುತ್ತದೆ. ತಾಳ್ಮೆಯಿದ್ದಲ್ಲಿಭರವಸೆಯು  ಬೆಳೆಯುತ್ತದೆ. ತಾಳ್ಮೆಯಿಂದಿದ್ದರೆ ಅಲ್ಲಿ ನಂಬಿಕೆಯು ನೆಲೆಸುತ್ತದೆ. ಪ್ರೀತಿ, ಭರವಸೆ, ನಂಬಿಕೆಗಿರುವ ಆಗಾಧ ಶಕ್ತಿಯನ್ನು ಲೋಕವೇ ಮನ್ನಿಸಿ, ಗೌರವಿಸಿ, ನಮಿಸುತ್ತದೆ. ತಾಳ್ಮೆಯೆಂದರೆ ಕೇವಲ ಒಂದು ಶಕ್ತಿ ಮಾತ್ರವಲ್ಲ, ಒಂದು ಆಯುಧವಾಗಿದೆ.ತಾಳ್ಮೆಯಿಂದ ಎಲ್ಲಾ ಕೆಲಸವನ್ನು ಸಾಧಿಸಬಹುದು.ತಾಳದವನು ಬಳಲಿಯಾನು. ನಾವು ಬಹಳಷ್ಟು ಕೆಲಸಗಳನ್ನು ಆತುರಾತುರವಾಗಿ ಮಾಡಿಬಿಡುತ್ತೇವೆ. ಸರಿಯಾದ ಫಲ ಸಿಗದೇ ಇದ್ದಾಗ ಇನ್ನಾರನ್ನೋ ದೂರುತ್ತೇವೆ. ಮಾಡುವ ಕೆಲಸ ಸಣ್ಣದೇ ಇರಲಿ, ದೊಡ್ಡದೇ ಆಗಿರಲಿ, ಸಹನೆಯಿಂದ ವಿವೇಚನೆಯೊಂದಿಗೆ ಮಾಡಿದರೆ ಅದರ ಫಲ ನಿಜಕ್ಕೂ ಅತ್ಯುತ್ತಮವಾಗಿರುತ್ತದೆ. ತಾಳ್ಮೆಗೆ ಕಾಯುವ ಗುಣ ಬೇಕು.

ಇತರೆ ವಿಷಯಗಳು:

ಪರಿಸರ ಮಹತ್ವ ಪ್ರಬಂಧ

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ

ಸಾವಯವ ಕೃಷಿ ಪ್ರಬಂಧ

ಸಜಾತಿ ಮತ್ತು ವಿಜಾತಿ ಪದಗಳು

1 COMMENT

LEAVE A REPLY

Please enter your comment!
Please enter your name here