ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyate Essay In Kannada

0
1975
ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyate Essay In Kannada
ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyate Essay In Kannada

ರಾಷ್ಟ್ರೀಯ ಭಾವೈಕ್ಯತೆ ಪ್ತಬಂಧ in kannaḑa, ರಾಷ್ಟ್ರೀಯ ಭಾವೈಕ್ಯತೆ essay, rashtriya bhavaikyate essay in kannada, rashtriya bhavaikyate prabandha in kannada


Contents

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ:

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyate Essay In Kannada
ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ | Rashtriya Bhavaikyate Essay In Kannada

ಮುನ್ನುಡಿ:

ನಾವು ಭಾರತೀಯರು , ನಾವೆಲ್ಲರು ಒಂದೇ ಎಂಬ ಪರಿಕಲ್ಪನೆಯನ್ನು ಹೊಂದಿರುವುದೇ ರಾಷ್ಟ್ರೀಯ ಭಾವೈಕ್ಯತೆ.ಇಲ್ಲಿ ನಾವು ಹಲವಾರು ಜಾತಿ, ಧರ್ಮಗಳನ್ನು ಕಾಣಬಹುದು. ಇಲ್ಲಿ ವೈವಿಧ್ಯಮಯ ರೀತಿಯ ಸಂಸ್ಕೃತಿ, ಆಚರಣೆ , ಆಚಾರ ವಿಚಾರಗಳನ್ನು ನೋಡಬಹುದು. ರಾಷ್ಟ್ರೀಯ ಭಾವೈಕ್ಯತೆಯು ನಾವೆಲ್ಲರೂ ಒಂದೇ ಎಂಬ ಮನೋಭಾವನೆಯನ್ನು ಮೂಡಿಸುತ್ತದೆ. ರಾಷ್ಟ್ರೀಯ ಭಾವೈಕ್ಯತೆಯ ಪರಿಧಿಯಲ್ಲಿ ವಿವಿಧ ಜಾತಿ, ಧರ್ಮ, ಪ್ರಾದೇಶಿಕತೆ, ಭಾಷೆಗಳನ್ನು ಒಳಗೊಂಡ ಶಕ್ತಿಯುತವಾದಂತಹ ಐಕ್ಯತೆಯನ್ನು ನೋಡಬಹುದು.

ಪೀಠಿಕೆ:

ವಿವಿಧತೆಯಲ್ಲಿ ಏಕತೆಯಿಂದ ಇರುವುದಕ್ಕೆ ಭಾವೈಕ್ಯತೆ ಎನ್ನುವರು. ಭಾರತೀಯ ನಾಗರಿಕತೆಯು ಯಾವಾಗಲೂ ಧಾರ್ಮಿಕ ಮತ್ತು ನೈತಿಕತೆಯ ಮೇಲೆ ಸಾಗುತ್ತದೆ. ಬಾರತದ ಸಂವಿಧಾನದಲ್ಲಿ ಚೌಕಟ್ಟಿನಲ್ಲಿ ಭಾರತದಂತಹ ರಾಷ್ಟ್ರ ವಿಶಾಲವಾದ ಭೌಗೋಳಿಕ ಮತ್ತು ಪ್ರಾಕೃತಿಕ ವೈವಿಧ್ಯತೆಯನ್ನು ಹೊಂದಿರುವುದು ಮತ್ತು ವಿವಿಧ ಧರ್ಮಗಳ ಆಚರಣೆಗಳ ನಡುವೆಯೂ ಅದ್ವಿತೀಯವಾದ ಅಖಂಡತೆಯನ್ನು ಉಳಿಸಿಕೊಂಡು ಬಂದಿದೆ. ರಾಷ್ಟ್ರೀಯ ಭಾವೈಕ್ಯತೆಯನ್ನು ಮೂಡಿಸುವುದು, ಧಾರ್ಮಿಕ ಐಕ್ಯತೆಯನ್ನು ಮೂಡಿಸುವುದು, ಸಾಂಸ್ಕೃತಿಕ ಮತ್ತು ಭಾಷಾ ಐಕ್ಯತೆಯನ್ನು ಮೂಡಿಸಿ ನಾವು ಭಾರತೀಯರೆಲ್ಲ ಒಂದೇ ಎಂಬ ಭಾವನೆ ಮೂಡಿಸುವುದು. ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆ.

ರಾಷ್ಟ್ರೀಯ ಐಕ್ಯತೆಯನ್ನು ವೃದ್ಧಿಗೊಳಿಸುವ ಅಂಶಗಳಾದ ರಾಷ್ಟ್ರೀಯ ಹಬ್ಬಗಳ ಆಚರಣೆ, ಜಾತ್ಯಾತೀತೆ, ಸಾಮರಸ್ಯ, ರಾಷ್ಟ್ರೀಯ ಲಾಂಛನಗಳಿಗೆ ನೀಡುವ ಗೌರವದಿಂದಾಗಿ, ಮಕ್ಕಳಲ್ಲಿ ಸರ್ವಧರ್ಮ ಸಮನ್ವಯತೆ, ಆರೋಗ್ಯಕರವಾದ ಒಗ್ಗೂಡುವಿಕೆಯ ಮನೋಭಾವನೆ ಮೂಡಿಸುವುದು. ಸಂವಿಧಾನದ ದ್ರಷ್ಟಿಯಲ್ಲಿ ಬಡವ-ಬಲ್ಲಿದ ಎಲ್ಲರೂ ಸಮಾನರು. ಈ ಹಿನ್ನಲೆಯಲ್ಲಿಯೇ ಸ್ತ್ರೀ ಪುರುಷರೆಂಬ ಪ್ರಾಂತ್ಯ, ಲಿಂಗ, ಭಾಷೆ, ಜಾತಿ-ಧರ್ಮ, ಆಹಾರ, ಉಡುಗೆ-ತೊಡುಗೆ, ರೀತಿ-ನೀತಿ, ಸಂಪ್ರದಾಯಗಳ ಭೇದವನ್ನೆಣಿಸದೇ ನಾವೆಲ್ಲಾ ಒಂದೇ ಎಂದು ಪರಿಗಣಿಸಿದ್ದಾರೆ.ರಾಷ್ತ್ರೀಯ ಹಬ್ಬ ಮತ್ತು ರಾಷ್ಟ್ರ ನಾಯಕರುಗಳ ಜನ್ಮದಿನಾಚರಣೆಗಳನ್ನು ಶಾಲಾ ಕಾಲೇಜುಗಳಲ್ಲಿ ಆಚರಿಸುವುದರ ಮೂಲಕ ಇವುಗಳಿಗೆ ಸಾಮೂಹಿಕವಾಗಿ ಗೌರವವನ್ನು ಸಲ್ಲಿಸಿ, ಭಿನ್ನತೆ ಮರೆತು ಭ್ರಾತೃತ್ವದಿಂದ ಮತ್ತು ಶಾಂತಿಯಿಂದ ಬಾಳುವ ಮೂಲಕ ರಾಷ್ತ್ರೀಯ ಭಾವೈಕ್ಯತೆಯನ್ನು ಮೂಡಿಸಬೇಕು. ರಾಷ್ಟ್ರಗೀತೆ, ರಾಷ್ಟ್ರಲಾಂಛನ, ರಾಷ್ಟ್ರ ಚಿಹ್ನೆ, ರಾಷ್ಟ್ರ ಧ್ವಜ, ರಾಷ್ಟ್ರ ಭಾಷೆ ಇವುಗಳು ನಮ್ಮ ಏಕತೆಯ ಸಂಕೇತಗಳಾಗಿವೆ.

ಉಪಸಂಹಾರ:

ರಾಷ್ಟ್ರೀಯ ಭಾವೈಕ್ಯತೆಯನ್ನು ನಾವು ಬೆಳೆಸಿಕೊಳ್ಳಬೇಕು. ಎಲ್ಲಾ ಧರ್ಮಗಳ ಪವಿತ್ರ ಗ್ರಂಥಗಳ ವಾಚನ ಮಾಡುವುದು ಮತ್ತು ಸರ್ವಧರ್ಮ ಸಮನ್ವಯ ಗೀತೆಗಳನ್ನು ಪಠಿಸುವುದು. ಎಲ್ಲ ಜಾತಿಯ ಜನರು ಸಮಾನತೆಯನ್ನು ಕಾಪಾಡಿಕೊಳ್ಳಬೇಕು. ನಮ್ಮ ವೇಷ, ಭಾಷೆ ಬೇರೆಯಾದರು ನಾವೆಲ್ಲರೂ ಒಂದೇ ಎಂಬ ಐಕ್ಯತೆ ನಮ್ಮಲ್ಲಿ ಮೂಡಬೇಕು. ಸಾಂಸ್ಕೃತಿಕ ಉತ್ಸವಗಳನ್ನು ಆಚರಣೆ ಮಾಡಿ, ರಾಷ್ಟ್ರೀಯ ವೈವಿಧ್ಯತೆಯ ಪ್ರದರ್ಶಿಸುವುದು. ನಮ್ಮ ರಾಷ್ಟ್ರದ ಪ್ರಗತಿಪರ ಬೆಳವಣಿಗೆಗೆ ಭಾವೈಕ್ಯತೆ ಮುಖ್ಯವಾಗಿದೆ.

ಭಾವೈಕ್ಯತೆ ಎಂದರೇನು?

ವಿವಿಧತೆಯಲ್ಲಿ ಏಕತೆಯಿಂದ ಇರುವುದಕ್ಕೆ ಭಾವೈಕ್ಯತೆ ಎನ್ನುವರು.

ರಾಷ್ಟ್ರೀಯ ಭಾವೈಕ್ಯತೆ ಎಂದರೇನು?

ರಾಷ್ಟ್ರೀಯ ಭಾವೈಕ್ಯತೆಯ ಪರಿಧಿಯಲ್ಲಿ ವಿವಿಧ ಜಾತಿ, ಧರ್ಮ, ಪ್ರಾದೇಶಿಕತೆ, ಭಾಷೆಗಳನ್ನು ಒಳಗೊಂಡ ಶಕ್ತಿಯುತವಾದಂತಹ ಐಕ್ಯತೆ ಮತ್ತು ನಾವು ಭಾರತೀಯರು , ನಾವೆಲ್ಲರು ಒಂದೇ ಎಂಬ ಪರಿಕಲ್ಪನೆಯನ್ನು ಹೊಂದಿರುವುದೇ ರಾಷ್ಟ್ರೀಯ ಭಾವೈಕ್ಯತೆ.

ಏಕತೆಯ ಸಂಕೇತಗಳು ಯಾವುವು?

ರಾಷ್ಟ್ರಗೀತೆ, ರಾಷ್ಟ್ರಲಾಂಛನ, ರಾಷ್ಟ್ರ ಚಿಹ್ನೆ, ರಾಷ್ಟ್ರ ಧ್ವಜ, ರಾಷ್ಟ್ರ ಭಾಷೆ ಇವುಗಳು ನಮ್ಮ ಏಕತೆಯ ಸಂಕೇತಗಳಾಗಿವೆ.

ಇತರೆ ವಿಷಯಗಳು:

ಯೋಗ ಅಭ್ಯಾಸ ಪ್ರಬಂಧ

ಬದುಕುವ ಕಲೆ ಕುರಿತು ಪ್ರಬಂಧ 

ಗ್ರಾಮೀಣ ಕ್ರೀಡೆಗಳು ಪ್ರಬಂಧ

ಭಾರತದ ಜನಸಂಖ್ಯೆ ಪ್ರಬಂಧ

LEAVE A REPLY

Please enter your comment!
Please enter your name here