ಭಾರತದ ಸಾರಿಗೆ ಮತ್ತು ಸಂಪರ್ಕದ ಬಗ್ಗೆ ಮಾಹಿತಿ | Information About Transport And Connectivity in India Kannada

0
803
ಭಾರತದ ಸಾರಿಗೆ ಮತ್ತು ಸಂಪರ್ಕದ ಬಗ್ಗೆ ಮಾಹಿತಿ | Information About Transport And Connectivity in India Kannada
ಭಾರತದ ಸಾರಿಗೆ ಮತ್ತು ಸಂಪರ್ಕದ ಬಗ್ಗೆ ಮಾಹಿತಿ | Information About Transport And Connectivity in India Kannada

ಭಾರತದ ಸಾರಿಗೆ ಮತ್ತು ಸಂಪರ್ಕದ ಬಗ್ಗೆ ಮಾಹಿತಿ Information About Transport And Connectivity in India bharatada sarige mattu samparka bagge in kannada


Contents

ಭಾರತದ ಸಾರಿಗೆ ಮತ್ತು ಸಂಪರ್ಕದ ಬಗ್ಗೆ ಮಾಹಿತಿ

Information About Transport And Connectivity in India Kannada
Information About Transport And Connectivity in India Kannada

ಸಾರಿಗೆಯ ಅರ್ಥ:

ಸರಕು, ಸೇವೆ ಮತ್ತು ಪ್ರಮಾಣಿಕರನ್ನು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗಿಸುವುದನ್ನು ʼಸಾರಿಗೆʼ ಎನ್ನುವರು. ಇದು ಸ್ಥಳ ಮತ್ತು ಕಾಲದ ಉಪಯುಕ್ತತೆಯನ್ನು ಪೊರೈಸುತ್ತದೆ. ಉತ್ಪಾದನೆ, ವಿತರಣೆ, ವಿನಿಮಯ ಹಾಗೂ ಎಲ್ಲಾ ಇತರೆ ಸಂಬಂಧಪಟ್ಟ ಕಾರ್ಯ ನಿರ್ವಹಣೆಗೆ ಸಂಪರ್ಕ ಕಲ್ಪಿಸುತ್ತದೆ.

ಪ್ರಾಮುಖ್ಯತೆ:

ಪ್ರಥಮ, ದ್ವಿತೀಯ ಮತ್ತು ತೃತೀಯ ಕ್ಷೇತ್ರದ ಮಾನವನ ಚಟುವಟಿಕೆಗಳ ಎಲ್ಲಾ ಪರಿಸ್ಥಿತಿಗಳ ಅಭಿವೃದ್ಧಿಯಲ್ಲಿ ಸಾರಿಗೆ ವ್ಯವಸ್ಥೆ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ “ರಾಷ್ಟ್ರೀಯ ವ್ಯವಸ್ಥೆಯೊಂದರಲ್ಲಿ ಕೃಷಿ ಮತ್ತು ಕೈಗಾರಿಕೆಗಳು ದೇಹ ಮತ್ತು ಅಸ್ಥಿಗಳಾದರೆ ಸಾರಿಗೆ ಮತ್ತು ಸಂಪರ್ಕ ಮಾಧ್ಯಮಗಳ ಜಾಲವು ರಕ್ತನಾಳಗಳಿದ್ದಂತೆ” ಎಂಬ ನಾಣ್ಣುಡಿಯಿದೆ.

ಸಮರ್ಥನೀಯ ಮತ್ತು ಸುಲಭ ದರದ ಸಾರಿಗೆ ಸೌಲಭ್ಯವು ಸಂಪನ್ಮೂಲಗಳು ಮತ್ತು ಕೃಷಿಯ ಅಭಿವೃದ್ಧಿ ನೆರವಾಗುತ್ತದೆ. ಇದು ಕೈಗಾರಿಕಾ ಪ್ರಗತಿಗೆ ಉತ್ತೇಜನ, ಮಾರುಕಟ್ಟೆಯ ವಿಸ್ತರಣೆ, ದೇಶೀಯ ಮತ್ತು ವಿದೇಶೀ ವ್ಯಾಪಾರದ ವೃದ್ಧಿ, ಉದ್ಯೋಗ ಸೃಷ್ಟಿ, ಜನರ ಆದಾಯ ಮತ್ತು ಜೀವನ ಮಟ್ಟದ ಸುಧಾರಣೆ, ಪ್ರವಾಸೋದ್ಯಮಕ್ಕೆ ಪೋತ್ಸಾಹ ಮತ್ತು ರಕ್ಷಣಾ ಪಡೆಗೂ ನೆರವಾಗುತ್ತದೆ.

ಸಾರಿಗೆ ವಿಧಗಳು

೧. ಭೂಸಾರಿಗೆ

a) ರಸ್ತೆ ಸಾರಿಗೆ

b) ರೈಲು ಸಾರಿಗೆ

c) ಕೊಳವೆ ಮಾರ್ಗಗಳು

೨. ಜಲಸಾರಿಗೆ

a) ಒಳನಾಡಿನ ಜಲ ಸಾರಿಗೆ

b) ಸಾಗರ ಜಲ ಸಾರಿಗೆ

೩. ವಾಯುಸಾರಿಗೆ

a) ರಾಷ್ಟ್ರೀಯ ವಾಯು ಸಾರಿಗೆ

b) ಅಂತಾರಾಷ್ಟ್ರೀಯ ವಾಯು ಸಾರಿಗೆ

೧. ಭೂಸಾರಿಗೆ

a) ರಸ್ತೆ ಸಾರಿಗೆ :

ರಸ್ತೆಗಳು ಬಹುಪ್ರಾಚೀನ ಹಾಗೂ ಸಾರ್ವತ್ರಿಕವಾದ ಸಾರಿಗೆ ಮಾಧ್ಯಮ. ಅವು ಒಂದು ದೇಶದ ಅರ್ಥಿಕಾಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುವವು. ಭಾರತವು ಹಳ್ಳಿ ಪ್ರಧಾನ ದೇಶ ಹಾಗೂ ಕೃಷಿ ಪ್ರಧಾನ ರಾಷ್ಟ್ರ. ದೇಶದ ಕೃಷಿ ಮತ್ತು ಗ್ರಾಮೀಣ ಕೈಗಾರಿಕೆಗಳ ಪ್ರಗತಿಗಾಗಿ ರಸ್ತೆಗಳು ಅತ್ಯಾವಶ್ಯಕ. ಏಕೆಂದರೆ ಮೂಲೆ ಮೂಲೆಗಳಲ್ಲಿರುವ ಹಳ್ಳಿಗಳನ್ನು ಸಂಪರ್ಕಿಸಲು ರಸ್ತೆಗಳು ಬಹಳ ಸೂಕ್ತವಾದವು.

ರಸ್ತೆಗಳನ್ನು ಅರಣ್ಯ ಮತ್ತು ಗುಡ್ಡಗಾಡುಗಳಲ್ಲಿಯೂ ನಿರ್ಮಿಸಬಹುದು. ಅವು ಬಹುದೂರದ ಅಥವಾ ಎಲ್ಲೋ ಇರುವ ಸ್ಥಳಗಳನ್ನು ಪಟ್ಟಣ ನಗರಗಳೊಂದಿಗೆ ಸಂಪರ್ಕ ಕಲ್ಪಿಸುತ್ತವೆ. ಮನೆಮನೆಗೆ ಸೇವೆ ಕಲ್ಪಿಸುತ್ತವೆ. ರೈಲು ಸಂಚಾರ, ಬಂದರು ಮತ್ತು ವಿಮಾನ ನಿಲ್ದಾಣಗಳಿಗೆ ಸಂಪರ್ಕ ಕಲ್ಪಿಸುತ್ತವೆ. ಅವು ಪ್ರವಾಸೋದ್ಯಮ, ವ್ಯಾಪಾರ ಮತ್ತು ವಾಣಿಜ್ಯ ಹಾಗೂ ಕೈಗಾರಿಕಾಭಿವೃದ್ಧಿಗೆ ಹೆಚ್ಚು ನೆರವಾಗುತ್ತವೆ.

b) ರೈಲು ಸಾರಿಗೆ :

ರೈಲು ಮಾರ್ಗಗಳು ಭಾರತದ ಮತ್ತೊಂದು ಪ್ರಮುಖ ಭೂಸಾರಿಗೆ ಮಾಧ್ಯಮ. ಅವು ಭಾರವಾದ ಸರಕು ಮತ್ತು ಅಧಿಕ ಸಂಖ್ಯೆಯ ಪ್ರಮಾಣಿಕರನ್ನು ದೂರದ ಸ್ಥಳಗಳಿಗೆ ಸಾಗಿಸುವ ಹೆಚ್ಚು ಉಪಯುಕ್ತವಾದವು. ಅವು ಕೃಷಿ, ಕೈಗಾರಿಕೆ ಮತ್ತು ಭಾರತದ ಅರ್ಥಿಕತೆಯ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅಲ್ಲದೆ ದೇಶದ ವ್ಯಾಪಾರ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೂ ನೆರವಾಗುವುವು.

c) ಕೊಳವೆ ಮಾರ್ಗಗಳು :

ಇದು ಹೊಸ ಭೂಸಾರಿಗೆ ವಿಧಾನ. ಕೊಳವೆ ಮಾರ್ಗಗಳನ್ನು ನೆಲದೊಳಗೆ ಹಾಸಲಾಗಿರುತ್ತದೆ. ವಿಶೇಷವಾಗಿ ಕಚ್ಚಾ ತೈಲವನ್ನು ತೈಲ ಶುದ್ಧೀಕರಣ ಕೇಂದ್ರಗಳಿಗೆ, ನೈಸರ್ಗಿಕಾನಿಲ ಹಾಗೂ ಕೆಸರು ರೂಪದಲ್ಲಿ ಖನಿಜಗಳನ್ನು ಸಾಗಿಸಲು ಕೊಳವೆ ಮಾರ್ಗಳನ್ನು ಬಳಸಲಾಗುವುದು.

೨. ಜಲಸಾರಿಗೆ

ಪುರಾತನ ಕಾಲದಲ್ಲಿ ಪ್ರಪಂಚದ ಪ್ರಮುಖ ಸಮುದ್ರಯಾನ ರೂಢಿಸಿಕೊಂಡಿದ್ದ ದೇಶಗಳಲ್ಲಿ ಭಾರತವೂ ಒಂದಾಗಿತ್ತು ಜಲಸಂಚಾರವು ಹಡಗು ದೋಣಿಗಳಿಂದ ನೌಕಾಯಾನ ಸೌಲಭ್ಯ ಕಲ್ಪಿಸುತ್ತದೆ.

a) ಒಳನಾಡಿನ ಜಲಸಾರಿಗೆ :

ಒಳನಾಡಿನ ಜಲಸಂಚಾರವು ನದಿ, ಸರೋವರ, ಹಿನ್ನೀರು ಮತ್ತು ಕಾಲುವೆಗಳ ಮೂಲಕ ಸಾಗುತ್ತದೆ. ಹಿಂದಿನ ಕಾಲದಲ್ಲಿ ಒಳನಾಡಿನ ಜಲ ಸಾರಿಗೆಯು ಭಾರತದ ಸಾರಿಗೆ ಮಾಧ್ಯಮದಲ್ಲಿ ಪ್ರಾಮುಖ್ಯತೆ ಹೊಂದಿತ್ತು. ಇಂದು ರಸ್ತೆ ಮತ್ತು ರೈಲುಸಾರಿಗೆಗಳ ಪ್ರಗತಿಯಿಂದಾಗಿ ಅದರ ಮಹತ್ವವು ಕಡಿಮೆಯಾಗಿದೆ. ಭಾರತದಲ್ಲಿ ಒಳನಾಡಿನ ಜಲಸಾರಿಗೆಗಳ ಮುಖ್ಯವಾಗಿ ಕೆಲವು ಸರಕು ಮತ್ತು ಪ್ರಯಾಣಿಕರ ಸಾಗಾಣಿಕೆಗೆ ಸಂಬಂಧಿಸಿದೆ. ಅದು ಹೆಚ್ಚಾಗಿ ಉತ್ತರ ಭಾರತದ ಗಂಗ, ಬ್ರಹ್ಮಪುತ್ರ ಮತ್ತು ಅವುಗಳ ಉಪನದಿಗಳ ಮೂಲಕ ಸಾಗುವುದು. ಒಳನಾಡಿನ ಜಲಸಾರಿಗೆಯು ದಕ್ಷಿಣ ಭಾರತದ ನದಿಗಳ ಮುಖಜ ಭಾಗಕ್ಕೆ ಸೀಮಿತಗೊಂಡಿದೆ.

b) ಸಾಗರ ಜಲಸಾರಿಗೆ :

ಸಮುದ್ರ ಮತ್ತು ಸಾಗರಗಳ ಮೂಲಕ ಏರ್ಪಡುವ ನೌಕಾಯಾನವೇ ಸಾಗರ ಜನರ ಜಲಸಾರಿಗೆ. ಭಾರತದ ಉದ್ದವಾದ ಸಮುದ್ರ ತೀರ ಮತ್ತು ಕೆಲವು ನೈಸರ್ಗಿಕ ಬಂದರುಗಳ ಜೊತೆಗೆ ದೇಶವು ಪೂರ್ವಾರ್ಧಗೋಳದ ಮಧ್ಯದಲ್ಲಿ ನೆಲೆಸಿದೆ. ದೇಶದ ವಿದೇಶಿ ವ್ಯಾಪಾರದಲ್ಲಿ ಶೇ. ೮೫ ಭಾಗವು ಸಾಗರ ಮಾರ್ಗದ ಮೂಲಕ ಸಾಗುತ್ತದೆ. ಈ ಎಲ್ಲಾ ಅಂಶಗಳು ದೇಶದ ಸಾಗರ ಜಲಸಾರಿಗೆಗೆ ಪೂರಕವಾಗಿವೆ.

೩. ವಾಯು ಸಾರಿಗೆ

ಇದು ಅತ್ಯಂತ ವೇಗಯುತ ಸಾರಿಗೆ ಮಾಧ್ಯಮ. ಪ್ರಮಾಣಿಕರು ಮತ್ತು ಟಪಾಲು ಸಾಗಿಸಲು ಬಹಳ ಸಮರ್ಪಕವಾದ ಸಾರಿಗೆ ಸೌಲಭ್ಯ. ಸಮರ, ಪ್ರವಾಹ, ಭೂಕಂಪಗಳಂತಹ ತುರ್ತುಪರಿಸ್ಥಿತಿಗೆ ಇದು ಬಹುಉಪಯುಕ್ತ. ಭಾರತವು ವಿಶಾಲವಾದ ದೇಶವಾಗಿದ್ದು ವಾಯುಸಾರಿಗೆ ಅಭಿವೃದ್ಧಿಗೆ ಅಗತ್ಯವಾದ ಎಲ್ಲಾ ಪೂರಕ ಅಂಶಗಳನ್ನು ಹೊಂದಿದೆ.

FAQ

ಭಾರತಕ್ಕೆ ಅಮೆರಿಕಾಗೆ ಎಷ್ಟು ಸಮಯ ವ್ಯತ್ಯಾಸವಿದೆ?

೯-೩೦ ನಿಮಿಷ.

ಕರ್ನಾಟಕದಲ್ಲಿ ಪ್ರಥಮವಾಗಿ ವಿದ್ಯುತ್‌ ಸಂಪರ್ಕ ಪಡೆದ ನಗರ ಯಾವುದು?

ಬೆಂಗಳೂರು.

ಕರ್ನಾಟಕದಲ್ಲಿ ಆರಂಭವಾದ ಪ್ರಥಮ ಕಾಲೇಜು ಯಾವುದು?

ಸೆಂಟ್ರಲ್‌ ಕಾಲೇಜು.

ಇತರೆ ವಿಷಯಗಳು :

ಮಾನವ ಸಂಪನ್ಮೂಲಗಳ ಬಗ್ಗೆ ಮಾಹಿತಿ

ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here