ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ | Information About Natural Resources in Kannada

0
833
ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ | Information About Natural Resources in Kannada
ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ | Information About Natural Resources in Kannada

ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ Information About Natural Resources naisargika sampanmulagala bagge mahiti in kannada


Contents

ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ

Information About Natural Resources in Kannada
Information About Natural Resources in Kannada

ಈ ಲೇಖನಿಯಲ್ಲಿ ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

Information About Natural Resources in Kannada

ನೈಸರ್ಗಿಕವಾಗಿ ಲಭ್ಯವಿದ್ದು, ತಾವಿದ್ಧ ಸ್ವರೂಪದಲ್ಲಿಯೇ ಮೌಲ್ಯಯುತ ಎಂದು ಪರಿಗಣಿತವಾಗಿರುವ ವಸ್ತುಗಳನ್ನು ನೈಸರ್ಗಿಕ ಸಂಪನ್ಮೂಲಗಳೆಂದು ಕರೆಯಬಹುದು. ಆಹಾರ ಬೆಳೆಯಲು ಉಪಯುಕ್ತವಿರುವ ಮಣ್ಣು, ನಮ್ಮ ಹಲವು ಚಟುವಟಿಕೆಗಳಿಗೆ ಮೂಲಾಧಾರವಾಗಿರುವ ನೀರು, ಹಲವು ಸೇವೆಗಳನ್ನು ಒದಗಿಸುವ ಮರಗಿಡಗಳು, ಜೀವಿಗಳು ಉಸಿರಾಡುವ ವಾಯು, ನಮ್ಮ ಹಲವಾರು ಉತ್ಪನ್ನಗಳಿಗೆ ಕಚ್ಚಾ ವಸ್ತುಗಳಾದ ಅದಿರುಗಳು, ಇತ್ಯಾದಿಗಳೆಲ್ಲವನ್ನೂ ನಾವು ಸಂಪನ್ಮೂಲಗಳು ಎಂದು ಕರೆಯುತ್ತೇವೆ.

ನೈಸರ್ಗಿಕ ಸಂಪನ್ಮೂಗಳನ್ನು ಸಾಮಾನ್ಯವಾಗಿ ʼಪುನರುತ್ಪತ್ತಿ ಹೊಂದುವ ಅಥವಾ ನವೀಕರಣಗೊಳ್ಳುವʼ ಹಾಗೂ ʼಮುಗಿದು ಹೋಗುವʼ ಎಂಬ ಎರಡು ವಿಧಗಳಲ್ಲಿ ವರ್ಗೀಕರಿಸಲಾಗಿದ್ದು, ಅವುಗಳನ್ನು ಈಗ ಅಭ್ಯಸಿಸೋಣ.

ನೈಸರ್ಗಿಕ ಸಂಪನ್ಮೂಲಗಳ ವಿಧಗಳು

ನವೀಕರಣಗೊಳ್ಳುವ ಅಥವಾ ಪುನರುತ್ಪತ್ತಿ ಹೊಂದುವ ಸಂಪನ್ಮೂಲಗಳು

ಕೆಲವು ನೈಸರ್ಗಿಕ ಸಂಪನ್ಮೂಲಗಳನ್ನು ನಾವು ಬಳಸಿಕೊಳ್ಳುತ್ತಾ ಹೋದಂತೆ ಅವು ಪುನಃ ತಮ್ಮ ಮೂಲ ಸ್ವರೂಪವನ್ನು ಪಡೆದುಕೊಂಡು ನಿರಂತರವಾಗಿ ನಮ್ಮ ಬಳಕೆಗೆ ದೊರಕುತ್ತವೆ. ಇಂತಹ ಸಂಪನ್ಮೂಲಗಳನ್ನು ನವೀಕರಣಗೊಳ್ಳುವ ಅಥವಾ ಪುನರುತ್ಪತ್ತಿ ಹೊಂದುವ ಅಥವಾ ಬರಿದಾಗದ ಸಂಪನ್ಮೂಲಗಳು ಎಂದು ಕರೆಯುತ್ತೇವೆ. ಇವುಗಳನ್ನು ನಾವು ಬಳಸಿದಂತೆ ಪ್ರಕೃತಿಯು ತನ್ನ ನೈಸರ್ಗಿಕ ಪ್ರಕ್ರಿಯೆಗಳ ಮೂಲಕ ಅವುಗಳನ್ನು ಮತ್ತೆ ಮತ್ತೆ ತುಂಬಿ ಕೊಡುತ್ತದೆ. ನೀರು, ಭೂಮಿ, ಅರಣ್ಯ, ಗಾಳಿ, ಸೂರ್ಯನ ಶಾಖ ಮೀನುಗಳು, ಮುಂತಾದುವು ಮುಗಿಯದ ಸಂಪನ್ಮೂಲಳಾಗಿವೆ.

ಮುಗಿದು ಹೋಗುವ ಸಂಪನ್ಮೂಲಗಳು

ಕೆಲವು ನೈಸರ್ಗಿಕ ಸಂಪನ್ಮೂಲಗಳು ನಾವು ಬಳಸಿದಂತೆ ಕ್ರಮೇಣ ಕಡಿಮೆಯಾಗಿ ಅಂತಿಮವಾಗಿ ಖಾಲಿಯಾಗುವ ಅಥವಾ ಬರಿದಾಗುವ ಲಕ್ಷಣ ಹೊಂದಿವೆ. ಅವುಗಳ ಸೃಷ್ಟಿ ಮತ್ತೆ ಸಾಧ್ಯವಿಲ್ಲ. ಇಂತಹ ಸಂಪನ್ಮೂಲಳನ್ನು ಮುಗಿದು ಹೋಗುವ ಸಂಪನ್ಮೂಲಗಳು ಎನ್ನುತ್ತೇವೆ. ಕಬ್ಬಿಣದ ಅದಿರು, ತಾಮ್ರ, ಚಿನ್ನ, ಮ್ಯಾಂಗನೀಸ್‌, ಬಾಕ್ಸೈಟ್‌ ಮುಂತಾದ ಖನಿಜಗಳು; ಕಲ್ಲಿದ್ದಲು, ಪೆಟ್ರೋಲಿಯಮ್‌, ನೈಸರ್ಗಿಕ ಅನಿಲ; ಯುರೇನಿಯಮ್‌, ಥೋರಿಯಮ್‌ ಮುಂತಾದ ಇಂಧನಮೂಲಗಳು ಬಳಸಿದಂತೆ ಮುಗಿದುಹೋಗುತ್ತವೆ. ಇವುಗಳಿಗೆ ʼನವೀಕರಿಸಲಾಗದ ಸಂಪನ್ಮೂಲಗಳುʼ ಎಂತಲೂ ಕರೆಯುತ್ತಾರೆ.

ಸಂಪನ್ಮೂಲಗಳ ಕೊರತೆ

ನಮ್ಮ ಎಲ್ಲಾ ಮೂಲ ಅವಶ್ಯಕತೆಗಳಾದ ಆಹಾರ, ವಸತಿ, ಬಟ್ಟೆ, ಮುಂತಾದವುಗಳನ್ನು ವಿವಿಧ ನೈಸರ್ಗಿಕ ಸಂಪನ್ಮೂಲಗಳಾದ ಗಾಳಿ, ನೀರು, ಮಣ್ಣು, ಅದಿರು, ಕಲ್ಲಿದ್ದಲು, ಪೆಟ್ರೋಲಿಯಮ್‌, ಪ್ರಾಣಿ ಹಾಗೂ ಸಸ್ಯ ಸಂಕುಲ, ಇತ್ಯಾದಿಗಳಿಂದ ಪೊರೈಸಿಕೊಳ್ಳುತ್ತೇವೆ. ಆದರೆ ಇನ್ನು ಎಷ್ಟು ದಿನಗಳವರೆಗೆ ಈ ಅಮೂಲ್ಯ ಸಂಪನ್ಮೂಲಗಳು ನಮ್ಮ ಬಳಕೆಗೆ ಲಭ್ಯವಿರುತ್ತವೆ? ಏರುಗತಿಯಲ್ಲಿರುವ ಜನಸಂಖ್ಯೆಯಲ್ಲದೇ ತೀವ್ರಗೊಳ್ಳುತ್ತಿರುವ ಔದೋಗೀಕರಣ ಹಾಗೂ ನಗರಿಕರಣಗಳು ಸಂಪನ್ಮೂಲಗಳ ಬೇಡಿಕೆಯನ್ನು ಅಗಾಧವಾಗಿ ಹೆಚ್ಚಿಸಿವೆ. ಅದರಲ್ಲೂ ಸದಾ ಹೆಚ್ಚಿತ್ತಿರುವ ಮಾನವನ ಇಷ್ಟಗಳಿಗೆ ಹೋಲಿಸಿದರೆ ಸಂಪನ್ಮೂಲಗಳು ತುಂಬಾ ಕಡಿಮೆ ಪ್ರಮಾಣದಲ್ಲಿದೆ.

ಮಿತಿಮೀರಿದ ಜನಸಂಖ್ಯೆ:

ಅಗಾಧ ಪ್ರಮಾಣದಲ್ಲಿ ಹೆಚ್ಚಿತ್ತಿರುವ ಜನಸಂಖ್ಯೆಗೆ ಆಹಾರ ಮತ್ತು ವಸತಿ ಸೌಕರ್ಯ ಒದಗಿಸಲು ಹೆಚ್ಚುವರಿ ಜಮೀನು ಬೇಕಾಗುತ್ತದೆ. ಇದಕ್ಕೆ ಅರಣ್ಯಗಳನ್ನು ಕೃಷಿ ಭೂಮಿಯಾಗಿ, ಕೃಷಿ ಭೂಮಿಯನ್ನು ವಸತಿ, ವಾಣಿಜ್ಯಿಕ ಮತ್ತು ಔದ್ಯಮಿಕ ಭೂಮಿಯಾಗಿ ಮಾರ್ಪಡಿಸಿ ಪೊರೈಸಿಕೊಳ್ಳಲಾಗುತ್ತಿದೆ.

ಹೆಚ್ಚುತ್ತಿರುವ ಔದ್ಯೋಗೀಕರಣ:

ಉದ್ಯಮಗಳ ಸಂಖ್ಯೆ ಹೆಚ್ಚಿದಂತೆ, ಅದಿರು, ಕಚ್ಚಾ ತೈಲ ಮತ್ತು ನೀರಿನ ಹೊರತೆಗೆಯುವಿಕೆ ಅಧಿಕವಾಗಿದ್ದು ಹಲವಾರು ಗಣಿಗಳು, ತೈಲ ಬಾವಿಗಳು ಮತ್ತು ಜಲಮೂಲಗಳು ಒರಿದಾಗಿದೆ.

ವಿಸ್ತರಣೆಯಾಗುತ್ತಿರುವ ನಗರ ಪ್ರದೇಶಗಳು:

ಒಂದು ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂಖ್ಯೆ ವಾಸವಾಗಿರುವುದನ್ನು ನಾವು ನಗರ ಪ್ರದೇಶ ಎನ್ನುತ್ತೇವೆ. ಅಂಥ ಪ್ರದೇಶಗಳಲ್ಲಿ ಸಹಜವಾಗಿ ಸಂಪನ್ಮೂಲಗಳ ಬಳಕೆ ಮತ್ತು ತ್ಯಾಜ್ಯ ಉತ್ಪಾದನಾ ಪ್ರಮಾಣವು ಅತ್ಯಧಿಕವಾಗಿರುತ್ತದೆ. ಇದು ಸಂಪನ್ಮೂಲಗಳ ಪ್ರಮಾಣ ಹಾಗೂ ಗುಣಮಟ್ಟಗಳೆರಡನ್ನೂ ಕಡಿಮೆ ಮಾಡುತ್ತದೆ. ನೂರಾರು ಕಿಲೋಮೀಟರುಗಳ ದೂರದಿಂದ ನೀರು ಪಡೆದು, ಆ ಶುದ್ಧ ನೀರನ್ನು ಕುಟುಂಬಗಳು ಮತ್ತು ಉದ್ಯಮಗಳು ಅದನ್ನು ಕೊಳಚೆ ನೀರಾಗಿ ಪರಿವರ್ತಿಸುವ ಸಂಕಷ್ಟವನ್ನು ಊಹಿಸಿಕೊಂಡರೆ ನಗರೀಕರಣದ ಪರಿಣಾಮವನ್ನು ಅರ್ಥೈಸಿಕೊಳ್ಳಬಹುದಾಗಿದೆ.

ವಾಯು ಮಾಲಿನ್ಯ:

ಪಳೆಯುಳಿಕೆ ಇಂಧನಗಳಾದ ಕಲ್ಲಿದ್ದಲು ಡೀಸೆಲ್‌ ಮತ್ತು ಪೆಟ್ರೋಲ್‌ ಇವುಗಳ ದಹಿಸುವಿಕೆಯಿಂದಾಗಿ, ಹಾನಿಕಾರಕ ಅಂಶಗಳಾದ ಇಂಗಾಲದ ಡೈ ಆಕ್ಸೈಡ್‌, ಹೈಡ್ರೋಜನ್‌ ಸಲ್ಫೈಡ್‌, ಮಸಿ, ಧೂಳು ಮುಂತಾದವುಗಳು ವಾಯು ಮಂಡಲವನ್ನು ಪ್ರವೇಶಿಸಿ ಅದನ್ನು ಮಲಿನಗೊಳಿಸುತ್ತವೆ. ಇದರಿಂದಾಗಿ ಶುದ್ಧ ವಾಯುವಿನ ಲಭ್ಯತೆ ಕಡಿಮೆಯಾಗುತ್ತದೆ.

ಜಲಮಾಲಿನ್ಯ ಮತ್ತು ಭೂ ಸವಕಳಿ:

ಮಾನವರ, ಅಸ್ಪತ್ರೆಗಳ, ಉದ್ಯಮಗಳ ಹಾಗೂ ಇತರ ತ್ಯಾಜ್ಯಗಳನ್ನು ಬಯಲಿನಲ್ಲಿ ಸುರಿಯುವುದರಿಂದ ಅಲ್ಲಿನ ಭೂಮಿ ಮತ್ತು ನೀರಿನ ಉಪಯುಕ್ತತೆ ಕಡಿಮೆಯಾಗುತ್ತದೆ. ಕೃಷಿ ಹಾಗೂ ಕುಟುಂಬಗಳ ಚಟುವಟಿಕೆ ದೆಸೆಯಿಂದಾಗಿ ಸಹ ಜಲ ಮಾಲಿನ್ಯ ಉಂಟಾಗುತ್ತದೆ. ಇವುಗಳ ಕಾರಣದಿಂದಾಗಿ ಭೂಮಿಯ ಫಲವತ್ತತೆ ನಶಿಸಿ ಉತ್ಪಾದನೆಯ ನಷ್ಟವಾಗುತ್ತದೆ.

ಸಂಪನ್ಮೂಲಗಳ ಸಂರಕ್ಷಣೆ:

ಸಂಪನ್ಮೂಲಗಳ ಬಳಕೆಯಲ್ಲಿನ ತೀವ್ರ ಏರಿಕೆ ಹೆಚ್ಚಳ ಅವುಗಳ ಮಾಲಿನ್ಯವು ಮಾನವ ಜನಾಂಗಕ್ಕೆ ಗಂಭೀರ ಸ್ವರೂಪದ ಸಮಸ್ಯೆಗಳನ್ನು ತಂದೊಡ್ಡುತ್ತದೆ. ನಮಗೆ ಕುಡಿಯಲು ಶುದ್ಧ ನೀರು ಸಿಗದಿರಬಹುದು, ಉಸಿರಾಡಲು ಶುದ್ಶ ಗಾಳಿ ಇರದಿರಬಹುದು, ಹಲವಷ್ಟು ಸಂಪನ್ಮೂಲಗಳು ಬರಿದಾಗಬಹುದು, ಜೀವ ವೈವಿಧ್ಯತೆ ವಿರಳವಾಗಿ ಇಡೀ ವಿಶ್ವವೇ ತ್ಯಾಜ್ಯಗುಂಡಿಯಾಗಿಬಿಡುವ ಅಪಾಯವಿದೆ. ಈ ಸಮಸ್ಯೆಗಳನ್ನು ಹೇಗೆ ಎದುರಿಸುವುದು? ಇದನ್ನು ಸಂಪನ್ಮೂಲಗಳ ಸಂರಕ್ಷಣೆಯ ಮೂಲಕ ಮಾಡಬಹುದಾಗಿದೆ.

ಸಂಪನ್ಮೂಲಗಳ ಸಂರಕ್ಷಣೆಯೆಂದರೆ ಅವುಗಳ ಅಪಬಳಕೆಯನ್ನು ಕಡಿಮೆ ಮಾಡಿ ಅವುಗಳ ನ್ಯಾಯೋಚಿತ ಬಳಕೆಯನ್ನು ಪೋತ್ಸಾಹಿಸಿ ಪರಿಸರ ಮತ್ತು ಸಂಪನ್ಮೂಲ ಬಳಕೆಗಳ ನಡುವೆ ಸಮತೋಲನ ಕಾಯ್ದುಕೊಳ್ಳುವುದಾಗಿದೆ.

  • ಸಂಪನ್ಮೂಲಗಳ ಬಳಕೆಯನ್ನು ಕಡಿಮೆ ಮಾಡುವುದು:

ಸಂಪನ್ಮೂಲಗಳನ್ನು ಅದಷ್ಟು ಕಡಿಮೆ ಬಳಕೆ ಮಾಡುವುದಲ್ಲದೇ ಅವುಗಳ ಪೋಲು ಮಾಡುವಿಕೆಯನ್ನು ಕಡಿಮೆಗೊಳಿಸುವುದಾಗಿದೆ. ಯಾವುದೇ ಕೆಲಸಕ್ಕೆ ಬೇಕಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆಯನ್ನು ಕಡಿಮೆ ಮಾಡುವ ಪ್ರಯತ್ನ ಮಾಡಿದರೆ ಒಟ್ಟಾರೆ ಮಾಲಿನ್ಯವೂ ಕಡಿಮೆಯಾಗುತ್ತದೆ.

  • ಸಂಪನ್ಮೂಲಗಳ ಮರು ಬಳಕೆ ಮಾಡುವುದು:

ಇದು ಸಂಪನ್ಮೂಲ ಸಂರಕ್ಷಣೆಗೆ ಒಂದು ಸರಳ ಆದರೆ ತುಂಬಾ ಪರಿಣಾಮಕಾರಿ ಮಾರ್ಗವಾಗಿದೆ. ಪ್ರತಿಯೊಂದು ಸಂಪನ್ಮೂಲಗಳನ್ನು ಬೇರೆ-ಬೇರೆ ಕೆಲಸಗಳಿಗಲ್ಲದೇ ಹಲವು ಬಾರಿ ಉಪಯೋಗಿಸಬಹುದಾಗಿದೆ.

  • ಸಂಪನ್ಮೂಲಗಳ ಪುನಃರ್ಭರ್ತಿ ಮಾಡುವುದು:

ನಮ್ಮ ಪ್ರಜ್ಞಾಪೂರ್ವಕ ಪ್ರಯತ್ನಗಳಿಂದ ಸಂಪನ್ಮೂಲಗಳನ್ನು ವೃದ್ಧಿಸುವ ಕಾರ್ಯಗಳು ಈ ವಿಧಗಳಲ್ಲಿ ಬರುತ್ತದೆ. ಅಂತರ್ಜಲ ಮರುಪೂರಣಗೊಳಿಸುವ ಎಲ್ಲ ಕಾರ್ಯಗಳು, ಅರಣ್ಯೀಕರಣದಿಂದ ಮರಗಿಡಗಳ ಸಂಖ್ಯೆಯ ವೃದ್ಧಿ ಹಾಗೂ ತನ್ಮೂಲಕ ಜೀವ ವೈವಿಧ್ಯತೆಯ ವಿಸ್ತರಣೆಗಳು ಇಲ್ಲಿ ನೀಡಬಹುದಾದ ಉದಾಹರಣೆಗಳಾಗಿವೆ.

  • ಸಂಶೋಧನೆ:

ಬರಿದಾಗುವ ಸಂಪನ್ಮೂಲಗಳಿವೆ ಪರ್ಯಾಯವಾಗಿ ಬಳಕೆ ಮಾಡಬಹುದಾದ ನವೀಕರಣಗೊಳಿಸಬಹುದಾದ ವಸ್ತುಗಳ ಸಂಶೋಧನೆ ನಿರಂತರವಾಗಿ ಆಗಬೇಕು. ನಾವು ಈ ಬಳಸುತ್ತಿರುವ ಇಂಧನಕ್ಕೆ ಸೌರಶಕ್ತಿ ಮತ್ತು ಪವನ ಶಕ್ತಿಗಳು ಉತ್ತಮ ಪರ್ಯಾಯಗಳಾಗಿವೆ.

FAQ

ಓಝೋನ್ ಪದರವು ನಾಶವಾಗುತ್ತಿರುವುದುಕ್ಕೆ ಪ್ರಮುಖ ಕಾರಣ ಯಾವುದು?

ಕ್ಲೋರೋ ಪ್ಲೋರೋ ಕಾರ್ಬನ್.

ಬಾಕ್ಸೈಟ್ ಯಾವ ಲೋಹದ ಅದಿರಾಗಿದೆ?

ಅಲ್ಯುಮಿನಿಯಂ

ಇತರೆ ವಿಷಯಗಳು :

ಪರಿಸರ ಸಂರಕ್ಷಣೆ ಕುರಿತು ಪ್ರಬಂಧ ಬರೆಯಿರಿ

ಜಾಗತೀಕರಣ ಪ್ರಬಂಧ

LEAVE A REPLY

Please enter your comment!
Please enter your name here