ರಾಷ್ಟ್ರೀಯ ಆದಾಯದ ಬಗ್ಗೆ ಮಾಹಿತಿ | Information about National Income in Kannada

0
923
ರಾಷ್ಟ್ರೀಯ ಆದಾಯದ ಬಗ್ಗೆ ಮಾಹಿತಿ Information about National Income Rashtriya Adayada Bagge Mahiti in Kannada

ರಾಷ್ಟ್ರೀಯ ಆದಾಯದ ಬಗ್ಗೆ ಮಾಹಿತಿ Information about National Income Rashtriya Adayada Bagge Mahiti in Kannada


Contents

ರಾಷ್ಟ್ರೀಯ ಆದಾಯದ ಬಗ್ಗೆ ಮಾಹಿತಿ

Information about National Income in Kannada
Information about National Income in Kannada

ಈ ಲೇಖನಿಯಲ್ಲಿ ರಾಷ್ಟ್ರೀಯ ಆದಾಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ರಾಷ್ಟ್ರೀಯ ಆದಾಯ

ಒಂದು ದೇಶ ಒಂದು ವರ್ಷದಲ್ಲಿ ಉತ್ಪಾದಿಸಿರುವ ಅಂತಿಮ ಸರಕು ಮತ್ತು ಸೇವೆಗಳ ಮಾರುಕಟ್ಟೆಯ ಮೊತ್ತದ ಮೌಲ್ಯವನ್ನು ರಾಷ್ಟ್ರೀಯ ಆದಾಯ ಎನ್ನುವರು. ಇದು ಅಂತಿಮ ಸರಕು ಮತ್ತು ಸೇವೆಗಳ ಮೊತ್ತದ ಮೌಲ್ಯವನ್ನು ಮಾತ್ರ ಒಳಗೊಂಡಿರುತ್ತದೆ. ಇದು ಆಂತರಿಕ ಮತ್ತು ಬಾಹ್ಯ ಆದಾಯವನ್ನು ಒಳಗೊಂಡಿರುತ್ತದೆ. ಸರಕು – ಸೇವೆಗಳನ್ನು ಮಾಪನ ಮಾಡಲು ಒಂದೇ ಬಾರಿ ಮಾತ್ರ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ದ್ವಿಗಣನೆಗೆ ಅವಕಾಶವಿಲ್ಲ. ಮಧ್ಯವರ್ತಿ / ದಲ್ಲಾಳಿಗಳಿಂದ ಬಂದಿರುವ ಆದಾಯವು ಸೇರ್ಪಡೆಯಾಗುವುದಿಲ್ಲ. ಯಂತ್ರೋಪಕರಣಗಳಿಗಾಗಿರುವ ಸವಕಳಿವೆಚ್ಚ ಇದರಲ್ಲಿ ಸೇರುವುದಿಲ್ಲ. ಸ್ವ ಅನುಭೋಗಿ ಸರಕು – ಸೇವೆಗಳ ಮೊತ್ತದ ಮೌಲ್ಯವನ್ನು ಹೊಂದಿರುವುದಿಲ್ಲ ಇದು ಭಾರತದ ಆರ್ಥಿಕ ವರ್ಷಕ್ಕೆ ಮಾತ್ರ ಸಂಬಂದಿಸಿರುತ್ತದೆ. ಇದು ಹಣದ ರೂಪದಲ್ಲಿರುತ್ತದೆ. ಇದು ಒಂದು ವರ್ಷಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಭಾರತದ ಆರ್ಥಿಕ ವರ್ಷ ಎಪ್ರಿಲ್‌ ೧ ಮಾರ್ಚ್‌ ೩೧ ಆಗಿದೆ. ೧೮೬೮ ರಲ್ಲಿ ಭಾರತದಲ್ಲಿ ಪ್ರಥಮಬಾರಿಗೆ ರಾಷ್ಟ್ರೀಯ ಆದಾಯವನ್ನು ಅಂದಾಜು ಮಾಡಿದವರು ದಾದಾಬಾಯಿ ನವರೋಜಿಯವರು.

ದಾದಾಬಾಯಿ ನವರೋಜಿ :

ಭಾರತದ ವೃದ್ದ ಪಿತಾಮಹ ( Grand Old Man of India ) ಎನ್ನುವರು.

೧೮೬೮ ರಲ್ಲಿ ಭಾರತದ ಪ್ರಥಮ ರಾಷ್ಟ್ರೀಯ ಆದಾಯವನ್ನು ಅಂದಾಜು ಮಾಡಿದರು.

೧೯೨೫ – ೨೯ ರಲ್ಲಿ ವೈಜ್ಞಾನಿಕವಾಗಿ ರಾಷ್ಟ್ರೀಯ ಆದಾಯವನ್ನು ಮಾಪನ ಮಾಡಿದವರು V.‌ K. R. V ರಾವ್ ರವರು.

೧೮೭೧ ರಲ್ಲಿ ಇವರು ಭಾರತದಲ್ಲಿ ಬಡತನ ಮತ್ತು ಬ್ರಿಟಿಷರ ದುರಾಡಳಿತ ಎಂಬುದನ್ನು ಬರೆದರು.

ಇವರು ಮಂಡಿಸಿದ ಸಿದ್ದಾಂತವೆಂದರೆ ಸಂಪತ್ತಿನ ಸೋರಿಕೆ ಸಿದ್ದಾಂತವನ್ನು ಮಂಡಿಸಿದರು.

ರಾಷ್ಟ್ರೀಯ ಆದಾಯ ಸಮಿತಿ ( NIC )

 • ಆರಂಭ – ೧೯೪೯ ಆಗಸ್ಟ್‌ ೬
 • ಕೇಂದ್ರ ಕಚೇರಿ – ನವದೆಹಲಿ
 • ಉದ್ದೇಶ – ರಾಷ್ಟ್ರೀಯ ಆದಾಯ ಮತ್ತು ತಲಾ ಆದಾಯವನ್ನು ಅಳತೆ ಮಾಡುವುದು.
 • ಅಧ್ಯಕ್ಷರು – P C ಮಹಲ್‌ ನೋಬಿಸ್‌
 • ಸದಸ್ಯರು – V.‌ K. R. V ರಾವ್ ಮತ್ತು D. R ಗಾಡ್ಗಿಲ್‌
 • ೧೯೫೧ ರಲ್ಲಿ NIC ಬದಲಾಗಿ CSO ಸಂಸ್ಥೆಯನ್ನು ಸ್ಥಾಪಿಸಲಾಯಿತು.

ಕೇಂದ್ರಿಯ ಅಂಕಿ – ಸಂಖ್ಯೆಗಳ ಸಂಸ್ಥೆ ( CSO )

 • ಆರಂಭ – ೧೯೫೧
 • ಕೇಂದ್ರ ಕಚೇರಿ – ನವದೆಹಲಿ
 • ಉದ್ದೇಶ – ರಾಷ್ಟ್ರೀಯ ಆದಾಯ ಮತ್ತು ತಲಾ ಆದಾಯವನ್ನು ಅಳತೆ ಮಾಡುವುದು.
 • ಅಧ್ಯಕ್ಷರು – P C ಮಹಲ್‌ ನೋಬಿಸ್‌
 • ಪ್ರಥಮ ಮೂಲ ಆಧಾರ ವರ್ಷ – ೧೯೪೮ – ೪೯
 • ಪ್ರಸ್ತುತ ಮೂಲ ಆಧಾರ ವರ್ಷ – ೨೦೧೧ – ೧೨
 • ರಾಷ್ಟ್ರೀಯ ಆದಾಯವನ್ನು ಮಾಪನ ಮಾಡುವ ಮಾನ GVA

ರಾಷ್ಟ್ರೀಯ ಆದಾಯದ ಪರಿಕಲ್ಪನೆಗಳು

GDP ( Gross Domestic Product ) / ಒಟ್ಟು ದೇಶಿಯ / ಆಂತರಿಕ ಉತ್ಪನ್ನ :

ದೇಶದ ಆಂತರಿಕ ಗಡಿಯೊಳಗೆ ಉತ್ಪಾದಿಸುವ ಸರಕು ಮತ್ತು ಸೇವೆಗಳ ಮೊತ್ತದ ಮೌಲ್ಯವನ್ನು GDP ಎನ್ನುತ್ತೇವೆ.

ಇದು ದೇಶದ ಗಡಿಯೊಳಗೆ ನಿವಾಸಿಗಳ ಆದಾಯವನ್ನು ಒಳಗೊಂಡಿರುತ್ತದೆ. ಭಾರತದಲ್ಲಿರುವ ವಿದೇಶಿ ನಿವಾಸಿಗಳ ಆದಾಯವನ್ನು ಒಳಗೊಂಡಿರುತ್ತದೆ.

ವಿದೇಶದಲ್ಲಿರುವ ಭಾರತೀ ನಿವಾಸಿಗಳ ಆದಾಯವನ್ನು ಒಳಗೊಂಡಿರುವುದಿಲ್ಲ.

ಇದು ನಿವ್ಹಳ ರಫ್ತಿನ ಮೌಲ್ಯವನ್ನು ಒಳಗೊಂಡಿರುತ್ತದೆ.

ಇದು ದೇಶದ ಆರ್ಥಿಕ ಬೆಳವಣಿಗೆ ದರವನ್ನು ತಿಳಿಸುತ್ತದೆ.

NDA ( Net Domestic Product ) / ನಿವ್ಹಳ ಆಂತರಿಕ ಉತ್ಪನ್ನ :

ಒಟ್ಟು ದೇಶಿಯ ಉತ್ಪನ್ನದಲ್ಲಿ ಆಗಿರಿವ ಸವಕಳಿ ವೆಚ್ಚವನ್ನು ಕಳೆದಾಗ NDP ದೊರೆಯುತ್ತದೆ.

ಇದು ದೇಶದ ಆರ್ಥಿಕ ಬೆಳವಣಿಗೆಯನ್ನು ತಿಳಿಸುತ್ತದೆ.

ಇದು ದೇಶದನಿಶ್ಚಿತ ಬಂಡವಾಳದ ಮೊತ್ತವನ್ನು ತಿಳಿಸುತ್ತದೆ.

GNP ( Gross National Product ) / ಒಟ್ಟು ರಾಷ್ಟ್ರೀಯ ಉತ್ಪನ್ನ :

ಒಟ್ಟು ದೇಶಿಯ ಉತ್ಪನ್ನದಲ್ಲಿ ವಿದೇಶದಿಂದ ಬಂದಿರುವ ಆದಾಯವನ್ನು ಸೇರಿಸಿದಾಗ GNPಯು ದೊರೆಯುತ್ತದೆ.

ಇದು ದೇಶದ ಆಂತರಿಕ ಮತ್ತು ಬಾಹ್ಯ ಆದಾಯಗಳನ್ನು ಒಳಗೊಂಡಿರುತ್ತದೆ.

ಇದು ಭಾರತೀಯ ನಿವಾಸಿಗಳ ಆದಾಯ / ವಿದೇಶದಲ್ಲಿರುವ ಭಾರತೀಯ ನಿವಾಸಿಗಳ ಆದಾಯವನ್ನು ಒಳಗೊಂಡಿರುತ್ತದೆ.

ವಿದೇಶಿ ನಿವ್ಹಳ ಗಳಿಕೆಯು ಧನಾತ್ಮಕವಾಗಿದ್ದರೆ, GNP ಯು GDP ಗಿಂತಲೂ ಅಧಿಕವಾಗಿರುತ್ತದೆ.

NNP ( Net National Product ) / ನಿವ್ಹಳ ರಾಷ್ಟ್ರೀಯ ಉತ್ಪನ್ನ :

ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಆಗಿರುವ ಸವಕಳಿ ವೆಚ್ಚವನ್ನು ಕಳೆದಾಗ NNP ಯು ದೊರೆಯುತ್ತದೆ.

NNP = GNP – ಸವಕಳಿವೆಚ್ಚ.

FAQ

ರಾಷ್ಟ್ರೀಯ ಆದಾಯ ಎಂದರೇನು ?

ಒಂದು ದೇಶ ಒಂದು ವರ್ಷದಲ್ಲಿ ಉತ್ಪಾದಿಸಿರುವ ಅಂತಿಮ ಸರಕು ಮತ್ತು ಸೇವೆಗಳ ಮಾರುಕಟ್ಟೆಯ ಮೊತ್ತದ ಮೌಲ್ಯವನ್ನು ರಾಷ್ಟ್ರೀಯ ಆದಾಯ ಎನ್ನುವರು.

ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಆಗಿರುವ ಸವಕಳಿ ವೆಚ್ಚವನ್ನು ಕಳೆದಾಗ ಎನು ದೊರೆಯುತ್ತದೆ ?

ಒಟ್ಟು ರಾಷ್ಟ್ರೀಯ ಉತ್ಪನ್ನದಲ್ಲಿ ಆಗಿರುವ ಸವಕಳಿ ವೆಚ್ಚವನ್ನು ಕಳೆದಾಗ NNP ಯು ದೊರೆಯುತ್ತದೆ.

ಇತರೆ ವಿಷಯಗಳು :

ಮೇಜರ್‌ ಧ್ಯಾನ್‌ ಚಂದ್‌ ಖೇಲ್‌ ರತ್ನ ಪ್ರಶಸ್ತಿಯ ಬಗ್ಗೆ ಮಾಹಿತಿ

ಮಹಿಳಾ ಶಿಕ್ಷಣದ ಮೇಲೆ ಪ್ರಬಂಧ

LEAVE A REPLY

Please enter your comment!
Please enter your name here