ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ | Information About Major Tourist Places in Karnataka in Kannada

0
913
ಭೂಮಿಯ ಬಗ್ಗೆ ಮಾಹಿತಿ | Information about Earth in Kannada
ಭೂಮಿಯ ಬಗ್ಗೆ ಮಾಹಿತಿ | Information about Earth in Kannada

ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ Information about major tourist places Karnatakada Pravasi Stalagala Bagge Mahiti in Kannada


Contents

Information About major Tourist Places in Karnataka in Kannada

Information about major tourist places in Karnataka in Kannada

ಈ ಲೇಖನಿಯಲ್ಲಿ ಕರ್ನಾಟಕದ ಪ್ರಮುಖ ಪ್ರವಾಸಿ ಸ್ಥಳಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪ್ರವಾಸ

“ದೇಶ ನೋಡು ಕೋಶ ಓದು” ಎಂಬ ನಾಣ್ಣುಡಿ ಇದೆ. ಜನರು ತಮ್ಮ ವ್ಯಾಪಾರ ವಹಿವಾಟಿಗಾಗಿ, ಕುತೂಹಲಕ್ಕಾಗಿ, ಧಾರ್ಮಿಕ ಆಚರಣೆ, ಮನಃಶಾಂತಿ, ವಿಹಾರ, ಸುಂದರತಾಣಗಳನ್ನು ನೋಡುವ ಹಂಬಲ, ಸಂತೋಷಕ್ಕಾಗಿ, ಆರೋಗ್ಯ ವೃದ್ದಿಗಾಗಿ ತಮ್ಮ ಸ್ಥಳಗಳಿಂದ ಸೂಕ್ತವಾದ ಸ್ಥಳಗಳಿಗೆ ಹೋಗಿ ಕೆಲವು ದಿನ ಸಂಚಾರ ಮಾಡಿ ಬರುವುದನ್ನು ಪ್ರವಾಸ ಎನ್ನುವರು. ಪ್ರವಾಸಿ ಸ್ಥಳಗಳಲ್ಲಿ ತಂಗುವ ಮತ್ತು ಉಪಹಾರಗಳಿಗೆ ವ್ಯವಸ್ಥೆ ಇರುತ್ತದೆ. ಆದ್ದರಿಂದ ಅಲ್ಲಿ ಕೆಲವು ದಿನಗಳು ನೆಲಸಿದ್ದು ಬೇರೆ ಪ್ರೇಕ್ಷಣೀಯ ಸ್ಥಳಗಳಿಗೆ ಬೇಟಿ ನೀಡುತ್ತಾರೆ. ಆಧುನಿಕ ಪ್ರಪಂಚದಲ್ಲಿ ಪ್ರವಾಸವು ಮಾನವನ ಜೀವನದ ಅನಿವಾರ್ಯ ಸಂಗತಿಯಾಗಿದೆ. ಪ್ರವಾಸದಿಂದ ನಾಡು, ನುಡಿ, ಸಂಸ್ಕೃತಿ, ನಾಗರಿಕತೆ, ಜನಜೀವನದ ಕ್ರಮ ಮುಂತಾದವುಗಳನ್ನು ತಿಳಿಯುವುದು ಸಾಧ್ಯವಾಗುತ್ತದೆ.

ಕರ್ನಾಟಕವು ಭಾರತದಲ್ಲಿ ಅನೇಕ ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿರುವ ಅತ್ಯಂತ ಹೆಸರಾದ ರಾಜ್ಯಗಳಲ್ಲಿ ಒಂದಾಗಿದೆ. ಕರ್ನಾಟಕವು ಪ್ರಕೃತಿದತ್ತವಾದ ಅನೇಕ ಸುಂದರ ತಾಣಗಳನ್ನು ಹೊಂದಿದೆ. ಹಸಿರಿನಿಂದ ಕಂಗೋಳಿಸುವ ಸಹ್ಯಾದ್ರಿ ಘಟ್ಟಗಳು, ಅಲ್ಲಿನ ನದಿಗಳು, ಜಲಪಾತಗಳು, ಸುಂದರ ನಯನ ಮನೋಹರವಾದ ಕಣಿವೆಗಳು, ವನ್ಯಜೀವಿಗಳು, ಶ್ರೀಗಂಧದ ಕಾಡುಗಳು ಮುಂತಾದವುಗಳನ್ನು ಹೊಂದಿದೆ. ಸುಂದರ ಕಡಲತೀರಗಳು, ಐತಿಹಾಸಿಕ ತಾಣಗಳು, ಶಿಲ್ಪಕಲಾ ವೈಭವದಿಂದ ಕೂಡಿದ ದೇವಸ್ಥಾನಗಳು, ವಿವಿಧ ಧರ್ಮಗಳ ಧಾರ್ಮಿಕ ಕೇಂದ್ರಗಳು, ಯಾತ್ರಾ ಸ್ಥಳಗಳು ದೇಶ ವಿದೇಶಗಳ ಜನರನ್ನು ಆರ್ಕಷಿಸುತ್ತೇವೆ. ಇದರ ಮಹತ್ವವನ್ನು ಮನಗಂಡು ಕರ್ನಾಟಕದ ಪ್ರೇಕ್ಷಣೀಯ ಸ್ಥಳಗಳನ್ನು ಸಂದರ್ಶಿಸಲು ಸರ್ಕಾರ ೧೯೭೪ ರಲ್ಲಿ ವ್ಯವಸ್ಥಿತ ಪ್ರವಾಸ ಹಾಗೂ ನಿರ್ವಹಣೆಗಾಗಿ ಕರ್ನಾಟಕ ಪ್ರವಾಸೋಧ್ಯಮ ನಿಗಮವನ್ನು ಸ್ಥಾಪಿಸಿದ್ದು, ಪ್ರವಾಸಿಗರಿಗೆ ಮೂಲಸೌಲಭ್ಯಗಳನ್ನು ಒದಗಿಸಲು, ಯಾತ್ರಿ ನಿವಾಸ, ಪ್ರವಾಸಿ ಗೃಹ, ಉಪಹಾರ ಗೃಹ ಮುಂತಾದವುಗಳ ವ್ಯವಸ್ಥೆಯನ್ನು ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲಿ ಒದಗಿಸಿದೆ.

ಪ್ರಮುಖ ಪ್ರೇಕ್ಷಣೀಯ ಸ್ಥಳಗಳು

ಕರ್ನಾಟಕದ ಗಿರಿಧಾಮಗಳು :

ಕರ್ನಾಟಕವು ವೈವಿಧ್ಯಮಯವಾದ ಭೂಸ್ವರೂಪಗಳನ್ನು ಹೊಂದಿದ್ದು, ಅನೇಕ ಎತ್ತರದವಾದ ಗಿರಿಶ್ರೇಣಿಗಳನ್ನು ಹೊಂದಿದೆ. ಇದರಿಂದ ಅನೇಕ ಗಿರಿಧಾಮಗಳು ಕಂಡುಬರುತ್ತವೆ. ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಗಿರಿಧಾಮ ಪಮುಖವಾದುದ್ದು ಇದರ ಸುತ್ತಲೂ ಹಸಿರಿನಿಂದ ಕೂಡಿದ ದಟ್ಟ ಅರಣ್ಯಗಳು, ಬೆಟ್ಟಗಳು, ಕಾಫೀ ತೋಟಗಳು, ಇರುವುದರಿಂದ ಹೆಚ್ಚು ಆಕರ್ಷಣೆಯ ಸ್ಥಳವಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಗಿರಿಧಾಮವು ಸಮುದ್ರ ಮಟ್ಟದಿಂದ ಸುಮಾರು ೧೪೯೨ ಮೀ. ಎತ್ತರವಿದ್ದು, ತಂಪಾದ ಹವಾಮಾನವನ್ನು ಹೊಂದಿರುತ್ತದೆ. ಇದು ಬೆಂಗಳೂರಿಗೆ ಸಮೀಪದಲ್ಲಿರುವುದರಿಂದ ಲಕ್ಷಾಂತರ ಪ್ರವಾಸಿಗರನ್ನು ಆರ್ಕಷಿಸುತ್ತದೆ. ವಸತಿ ಮತ್ತು ಉಪಹಾರ ವ್ಯವಸ್ಥೆಯಿದ್ದು ತಂಗಲು ಅವಕಾಶವಿದೆ. ಮಹಾತ್ಮ ಗಾಂಧಿಯವರು ಆರೋಗ್ಯ ಸುಧಾರಣೆಗಾಗಿ ತಂಗಿದ್ದರಿಂದ ಇಲ್ಲಿ ಗಾಂಧಿ ಭವನ ನಿರ್ಮಿಸಲಾಗಿದೆ.

ಅದೇ ರೀತಿ ಬಿಳಿಗಿರಿ ರಂಗನಬೆಟ್ಟ, ಆಗುಂಬೆಯ ಸೂರ್ಯಾಸ್ತ ತಾಣ, ಕೆಮ್ಮಣ್ಣಗುಂಡಿ, ದೇವರಾಯನದುರ್ಗ, ಚಿತ್ರದುರ್ಗ ಜಿಲ್ಲೆಯ ಜೋಗಿಮಟ್ಟಿ, ಕೊಡಚಾದ್ರಿ, ಹಿಮವದ್‌ ಗೋಪಾಲಸ್ವಾಮಿಬೆಟ್ಟ, ವಿಸ್ಮಯಕಾರಿಯಾದ ಯಾಣದ ಬಂಡೆಗಳು, ಮಡಿಕೇರಿ ಮುಂತಾದವುಗಳು ಬೇಸಿಗೆಯ ತಂಗುದಾಣಗಳಾಗಿದ್ದು ಪ್ರವಾಸಿಗರನ್ನು ಆರ್ಕಷಿಸುತ್ತವೆ.

ಕರ್ನಾಟಕದ ಜಲಪಾತಗಳು :

ನಮ್ಮ ರಾಜ್ಯವು ಜಲಪಾತಗಳ ತವರೂರಾಗಿದೆ. ಮಲೆನಾಡು ಅನೇಕ ಜಲಪಾತಗಳನ್ನು ಹೊಂದಿದೆ. ಮಳೆಗಾಲದಲ್ಲಿ ನೀರು ರಭಸವಾಗಿ ಧುಮ್ಮಿಕ್ಕತ್ತವೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಅತಿ ಹೆಚ್ಚು ಜಲಪಾತಗಳನ್ನು ಹೊಂದಿದೆ. ಹಾಗೂ ಭಾರತದಲ್ಲೇ ಅತಿ ಎತ್ತರವಾದ ಜೋಗ್‌ ಜಲಪಾತವು ಶಿವಮೊಗ್ಗ ಜಿಲ್ಲೆಯಲ್ಲಿದೆ. ಸುಮಾರು ೨೫೩ ಮೀ ಎತ್ತರದಿಂದ ಶರಾವತಿ ನದಿಯು ನಾಲ್ಕು ಸೀಳಗಳಾಗಿ ಬೀಳುತ್ತದೆ. ಇವುಗಳನ್ನು ರಾಜ, ರಾಣಿ, ರೋರರ್‌ ಮತ್ತು ರಾಕೆಟ್‌ ಎಂದು ಕರೆಯುತ್ತಾರೆ. ಇದು ಮಳೆಗಾಲದಲ್ಲಿ ಮೈದುಂಬಿ ಧುಮುಕುವಾಗ ಮರೆಯಲಾಗದ ಚೆಲುವನ್ನು ಮೂಡಿಸುತ್ತದೆ.

ಕಾವೇರಿ ನದಿಯ ಮಂಡ್ಯ ಜಿಲ್ಲೆಯ ಶಿವನಸಮುದ್ರದ ಸಮೀಪದಲ್ಲಿ ಗಗನಚುಕ್ಕಿ ಮತ್ತು ಭರಚುಕ್ಕಿ ಅವಳಿ ಜಲಪಾತಗಳನ್ನು ನಿರ್ಮಿಸಿದೆ. ಮಡಿಕೇರಿ ಸಮೀಪ ಸುಂದರವಾದ ಅಬ್ಬಿ ಜಲಪಾತವಿದೆ. ಕೆಮ್ಮಣ್ಣು ಗುಂಡಿ ಗಿರಿಧಾಮದ ಬಳಿ ಹೆಬ್ಬೆ ಜಲಪಾತವಿದೆ. ಅಲ್ಲದೆ ಕಲ್ಹತ್ತಗಿರಿ ಜಲಪಾತ, ಉತ್ತರ ಕನ್ನಡ ಜಿಲ್ಲೆಯ ಉಂಚಳ್ಳಿ ಜಲಪಾತ, ಬೆಳಗಾವಿ ಜಿಲ್ಲೆಯ ಗೋಕಾಕ್‌ ಜಲಪಾತಗಳಿವೆ. ಕರ್ನಾಟಕದ ನಯಾಗಾರ್‌ ಎಂದು ಗೋಕಾಕ್‌ ಜಲಪಾತವನ್ನು ಕರೆಯುತ್ತಾರೆ.

ಕರ್ನಾಟಕದ ವನ್ಯ ಜೀವಿಗಳು :

ಕರ್ನಾಟಕವು ದಟ್ಟವಾದ ಅರಣ್ಯಗಳನ್ನು ಹೊಂದಿರುವ ಪ್ರದೇಶಗಳಿಂದ ಕೂಡಿದೆ. ಅರಣ್ಯಗಳು ಮತ್ತು ಕಾಡುಪ್ರಾಣಿಗಳ ಸಂರಕ್ಷಣೆಗಳಿಗಾಗಿ ಸರ್ಕಾರ ಅನೇಕ ವನ್ಯಜೀವಿಧಾಮ, ಪಕ್ಷಿಧಾಮ, ರಾಷ್ಟ್ರೀಯ ಉದ್ಯಾನ, ಹುಲಿಧಾಮ ಹಾಗೂ ಜೀವಿವೈವಿಧ್ಯತಾ ವಲಯಗಳನ್ನು ನಿರ್ವಹಿಸುತ್ತಿದೆ. ಕರ್ನಾಟಕದಲ್ಲಿ ಐದು ರಾಷ್ಟ್ರೀಯ ಉದ್ಯಾನವನಗಳಿವೆ. ಅವುಗಳೆಂದರೆ ನಾಗರಹೊಳೆಯ ರಾಜೀವ್‌ ಗಾಂಧಿ ರಾಷ್ಟ್ರೀಯ ಉದ್ಯಾನ, ಬಂಡಿಪುರ, ಬನ್ನೇರುಘಟ್ಟ, ಕುದುರೆಮುಖ ಹಾಗೂ ಅಂಶಿ ರಾಷ್ಟೀಯ ಉದ್ಯಾನಗಳನ್ನು ಕಾನಬಹುದು.

ಐತಿಹಾಸಿಕ ಸ್ಥಳಗಳು :

ನಮ್ಮ ನಾಡನ್ನಾಳಿದ ಕದಂಬರು, ಹೊಯ್ಸಳರು, ಚಾಲುಕ್ಯರು, ವಿಜಯನಗರದ ಅರಸರುಗಳು ತಾವು ನಿರ್ಮಿಸಿದ ಶಿಲ್ಪಕಲಾ ವೈಭವದಿಂದ ಕೂಡಿರುವ, ಜನಾಕರ್ಷಣೀಯವಾದ ಅನೇಕ ಸ್ಥಳಗಳನ್ನು ಬಿಟ್ಟು ಹೋಗಿದ್ದಾರೆ. ಅವುಗಳೆಂದರೆ ಹಂಪಿ, ಬೇಲೂರು, ಹಳೇಬೀಡು, ಸೋಮನಾಥಪುರ, ಬಾದಾಮಿ, ಪಟ್ಟದಕಲ್ಲು, ಐಹೊಳೆ, ವಿಜಯಪರದ ಗೋಳಗುಮ್ಮಟ, ಲಕ್ಕುಂಡಿ, ಬನವಾಸಿ, ಬಸರಾಳು, ಬಳ್ಳಿಗಾವಿ, ಮೈಸೂರು, ಶ್ರೀರಂಗಪಟ್ಟಣ, ಮುಂತಾದ ಚಾರಿತ್ರಿಕ ಐತಿಹ್ಯದ ತಾಣಗಳಿವೆ. ಇವು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿದೆ.

ಯಾತ್ರ ಸ್ಥಳಗಳು :

ಕರ್ನಾಟಕದಲ್ಲಿ ಅನೇಕ ಯಾತ್ರಸ್ಥಳಗಳಿವೆ. ಧರ್ಮಸ್ಥಳ, ಉಡುಪಿ, ಶೃಂಗೇರಿ, ಹೊರನಾಡು, ಕೊಲ್ಲೂರು, ಗೋಕರ್ಣ, ಉಳವಿ,ಸಿರ್ಸಿ, ಶ್ರವಣಬೆಳಗೋಳ, ಕೂಡಲಸಂಗಮ, ಮೇಲುಕೋಟೆ, ಕಾರ್ಕಳ, ದೇವರಗುಡ್ಡ, ಬಂದೇ ನವಾಜ್‌ ದರ್ಗಾ ಇನ್ನು ಮುಂತಾದವುಗಳು.

ಕರ್ನಾಟಕದ ಪ್ರಮುಖವಾದ ಕೋಟೆಗಳು :

ಚರಿತ್ರಾರ್ಹವಾದ ಸುಭದ್ರವಾದ ಕೋಟೆಗಳು ಕರ್ನಾಟಕದಲ್ಲಿ ಈಗಲೂ ಪ್ರವಾಸಿಗರ ಪ್ರಮುಖ ತಾಣಗಳಾಗಿವೆ. ಬೀದರನ ಕೋಟೆಗಳು, ವಿಜಯಪುರ, ಕಲಬುರಗಿ, ವಿಜಯನಗರ ಕೋಟೆ, ಕೆಳದಿ, ಚಿತ್ರದುರ್ಗ ಕೋಟೆ, ಮಧುಗಿರಿ, ನಂದಿಬೆಟ್ಟ, ಪಾವಗಡ, ಮಂಜರಾಬಾದ್‌, ಉಚ್ಚಂಗಿದುರ್ಗ, ಕವಲೇದುರ್ಗ, ಪರಸಗಡ ಇನ್ನು ಮುಂತಾದವುಗಳು.

ಈ ಮೇಲ್ಕಂಡ ಎಲ್ಲಾ ಪ್ರೇಕ್ಷಣೀಯ ಸ್ಥಳಗಳು ಕರ್ನಾಟಕದ ಹಿರಿಮೆಯನ್ನು ಹೆಚ್ಚಿಸಿವೆ. ನಮ್ಮ ರಾಜದಾನಿಯಾದ ಬೆಂಗಳೂರು ನಗರ ಇತ್ತೀಚಿನ ದಿನಗಳಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತದೆ.

FAQ

ಪ್ರವಾಸಿ ಭಾರತೀಯ ದಿನವನ್ನು ಯಾವಾಗ ಆಚರಿಸುತ್ತಾರೆ ?

ಜನವರಿ ೯

ಭಾರತೀಯ ಪ್ರವಾಸೋದ್ಯಮ ದಿನವನ್ನು ಯಾವಾಗ ಅಚರಿಸುತ್ತಾರೆ ?

ಜನವರಿ ೨೫

ಇತರೆ ವಿಷಯಗಳು :

ಸಚಿವಾಲಯದ ಬಗ್ಗೆ ಮಾಹಿತಿ

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಯ ಪ್ರಬಂಧ

LEAVE A REPLY

Please enter your comment!
Please enter your name here