ಸಂಸ್ಕೃತಿ ಬಗ್ಗೆ ಮಾಹಿತಿ | Information About Sanskrit in Kannada

0
1066
ಸಂಸ್ಕೃತಿ ಬಗ್ಗೆ ಮಾಹಿತಿ | Information About Sanskrit in Kannada
ಸಂಸ್ಕೃತಿ ಬಗ್ಗೆ ಮಾಹಿತಿ | Information About Sanskrit in Kannada

ಸಂಸ್ಕೃತಿ ಬಗ್ಗೆ ಮಾಹಿತಿ Information About Sanskrit Samskrutiya Bagge Mahiti in Kannada


Contents

ಸಂಸ್ಕೃತಿ ಬಗ್ಗೆ ಮಾಹಿತಿ

Information About Sanskrit in Kannada
Information About Sanskrit in Kannada

ಈ ಲೇಖನಿಯಲ್ಲಿ ಸಂಸ್ಕೃತಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನೀಡಲಾಗಿದೆ.

ಸಂಸ್ಕೃತಿ

ಮಾನವ ಸಾಮಜಿಕ ಜೀವಿ, ಸಂಘ ಜೀವಿ ಮಾತ್ರವಲ್ಲದೆ, ಸಾಂಸ್ಕೃತಿಕ ಜೀವಿಯೂ ಹೌದು. ಸಂಸ್ಕೃತಿಯು ಮಾನವ ಸಮಾಜವನ್ನು ಪ್ರಾಣಿ ಸಮಾಜದಿಂದ ಭಿನ್ನವಾಗಿಸುವ ವಿಶಿಷ್ಟ ಅಂಶವಾಗಿದೆ. ಪ್ರತಿಯೊಬ್ಬ ಮನುಷ್ಯನನ್ನು ಸಂಸ್ಕೃತಿಯ ಪ್ರತಿನಿಧಿ ಎಂದು ಪರಿಗಣಿಸಬಹುದು. ಸಂಸ್ಕೃತಿ ಮತ್ತು ಸಮಾಜ ಒಂದು ನಾಣ್ಯದ ಎರಡು ಮುಖಗಳಿದ್ದಂತೆ. ಮಾನವನ ಸಾಮಜಿಕ, ಧಾರ್ಮಿಕ, ರಾಜಕೀಯ, ಅರ್ಥಿಕ ಹಾಗೂ ಆಧ್ಯಾತ್ಮಕ ಇನ್ನೂ ಮುಂತಾದ ಅಂಶಗಳು ಸಂಸ್ಕೃತಿಯಿಂದಲೇ ನಿರ್ಧರಿಸಲ್ಪಡುತ್ತದೆ. ಸಂಸ್ಕೃತಿಯನ್ನು ಸಾಮಜಿಕ ಬದಲಾವಣೆಯ ಮುಖ್ಯ ಅಂಶವಾಗಿ ಪರಿಗಣಿಸಲಾಗುತ್ತದೆ. ಸಂಸ್ಕೃತಿಯನ್ನು ಮಾನವನ ಸಾಮಾಜಿಕ ಪರಂಪರೆಯ ಜೈವಿಕ ವ್ಯವಸ್ಥೆ ಎಂದು ವಿಶ್ಲೇಷಿಸಲಾಗಿದೆ.

ಸಂಸ್ಕೃತಿಯ ಅರ್ಥ

ಕಲ್ಚರ್‌ ಎಂಬ ಇಂಗ್ಲಿಷ್‌ ಪದವು ಲ್ಯಾಟೀನ್‌ ಭಾಷೆಯ ಕೂಲರ್‌ ಎಂಬ ಮೂಲ ಪದದಿಂದ ಉತ್ಪತ್ತಿಯನ್ನು ಹೊಂದಿದೆ. ಇದರ ಅರ್ಥ ಬೆಳೆಸು, ಪೋಷಿಸು, ಭೂಮಿಯನ್ನು ಉಳು ಎಂಬ ಅರ್ಥವನ್ನು ಹೊಂದಿದೆ. ಮಧ್ಯಕಾಲೀನ ಯುಗದಲ್ಲಿ ಕಲ್ಚರ್‌ ಎಂಬ ಪದಕ್ಕೆ ಬಿತ್ತಿದ ಬೆಳೆಯ ಪ್ರಗತಿದಾಯಕ ಸುಧಾರಣೆಯನ್ನು ಸೂಚಿಸಲು ಅಗ್ರಿಕಲ್ಚರ್‌ ಎಂಬ ರೂಪ ನೀಡಲಾಗಿದೆ. ಆದರೆ ೧೮ ಹಾಗೂ ೧೯ನೇ ಶತಮಾನದಲ್ಲಿ ಮಾನವನ ವರ್ತನೆಯ ಸ್ವರೂಪವನ್ನು ಸೂಚಿಸಲು ಕಲ್ಚರ್‌ ಪದವನ್ನು ಬಳಸುವ ಪರಿಪಾಠ ಆರಂಭವಾಗಿದೆ. ಸಂಸ್ಕೃತಿ ಎಂದರೆ ಒಂದು ಗುಂಪಿನ ಜನರ ಜೀವನ ಕ್ರಮ. ಇಲ್ಲಿ ನಡವಳಿಕೆಗಳು, ನಂಬಿಕೆಗಳು, ಮೌಲ್ಯಗಳು ಮತ್ತು ಆ ಜನರ ಗುಂಪು ಒಪ್ಪಿಕೊಂಡಿರುವ ಜೀವನ ಸಂಕೇತಗಳು ಇರುತ್ತವೆ. ಸಾಮಾನ್ಯವಾಗಿ ಅವುಗಳನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ರವಾನೆ ಮಾಡಲಾಗುತ್ತಿರುತ್ತದೆ.

ಸಂಸ್ಕೃತಿಯ ಬಗ್ಗೆ ಲೇಖರರ ಅಭಿಪ್ರಾಯವು ಈ ಕೆಳಗಿನಂತಿದೆ

ಇ. ಬಿ. ಟೇಲರ್‌ರವರ ಪ್ರಕಾರ ಮಾನವ ಸಮಾಜದ ಒಬ್ಬ ಸದಸ್ಯನಾಗಿ ಗಳಿಸಿಕೊಳ್ಳುವ ಜ್ಞಾನ, ನಂಬಿಕೆ, ಕಲೆ, ನೀತಿಗಳು, ಕಾನೂನು, ಸಂಪ್ರದಾಯ ಮತ್ತು ಇತರೆ ಯಾವುದೇ ಸಾಮಾರ್ಥ್ಯಗಳು ಮತ್ತು ರೂಡಿಗಳನ್ನು ಹೊಂದಿರುವ ಅಖಂಡವಾದ ಸಂಕೀರ್ಣ ವ್ಯವಸ್ಥೆಯೇ ಸಂಸ್ಕೃತಿಯಾಗಿದೆ.

ಮಾಲಿನೋವ್ ಸ್ಕಿ ರವರ ಪ್ರಕಾರ ಮಾನವ ತನ್ನ ಜೀವಿತದ ಗೊತ್ತುಗುರಿಗಳನ್ನು ರೂಪಿಸಿಕೊಳ್ಳಲು ನಿರ್ಮಿಸಿಕೊಂಡ ಸಾಧನೆವೇ ಸಂಸ್ಕೃತಿಯಾಗಿದೆ.

ಸಂಸ್ಕೃತಿಯ ಗುಣಲಕ್ಷಣಗಳು

ಸಂಸ್ಕೃತಿ ಅಮೂರ್ತವಾದದ್ದು :

ಸಂಸ್ಕೃತಿ ಎಂದರೆ ಒಂದು ಗುಂಪಿನ ಜನರ ಜೀವನಕ್ರಮ. ಅಂದರೆ ಒಪ್ಪಿಕೊಂಡಿರುವ ಸಂಕೇತಗಳನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ರವಾನೆಯಾಗುವ ಪ್ರಕ್ರಿಯೆ ನಡೆಯುತ್ತಿರುತ್ತದೆ. ಈ ಪ್ರಕ್ರಿಯೆಯು ಅಮೂರ್ತವಾಗಿ ಅಂದರೆ ದೃಷ್ಟಿಗೆ ಗೋಚರವಾಗದೆ ನಡೆ ಪ್ರಕ್ರಿಯೆ ನಡೆಯತ್ತಿರುತ್ತದೆ. ಈ ಪ್ರಕ್ರಿಯೆಯು ಅಮೂರ್ತವಾಗಿ ಅಂದರೆ ದೃಷ್ಟಿಗೆ ಗೋಚರವಾಗದೆ ನಡೆಯುತ್ತಿರುತ್ತದೆ.

ಸಂಸ್ಕೃತಿ ಸಾಮಾಜಿಕವಾದದ್ದು :

ಸಂಸ್ಕೃತಿಯು ವ್ಯಯಕ್ತಿಕವಾದುದಲ್ಲ. ಸಮಾಜದಲ್ಲಿ ಇರುವ ಎಲ್ಲರ ಜೊತೆ ಬದುಕುವುದು, ಆಹಾರ, ಆಚರಣೆ, ಉಡುಪು ಇತ್ಯಾದಿಗಳನ್ನು ಸಾಮುದಾಯಿಕವಾಗಿ ಅನುಸರಿಸುವುದು ಸಾಮಾನ್ಯವಾಗಿರುತ್ತದೆ. ಆದುದ್ದರಿಂದ ಸಂಸ್ಕೃತಿ ಎನ್ನುವುದು ಸಾಮಾಜಿಕವಾದದ್ದು.

ಸಂಸ್ಕೃತಿ ಕಲಿಕೆ :

ಸಂಸ್ಕೃತಿಯು ಮನುಷ್ಯನ ಹುಟ್ಟಿನಿಂದಲೇ ಬರುವ ಪ್ರವೃತ್ತಿಯಲ್ಲ. ಪ್ರಕೃತಿ ನಿರ್ಮಿತವೂ ಅಲ್ಲ. ಆದರೆ ಮಾನವ ಸಮಾಜದಲ್ಲಿ ವ್ಯಕ್ತಿ ವ್ಯಕ್ತಿಗಳ ನಡುವಿನ ಒಡನಾಟಗಳಿಂದ ರೂಪಿತವಾಗುತ್ತಿರುತ್ತದೆ. ಅಂದರೆ ಸಾಮಾಜೀಕರಣ ಪ್ರಕ್ರಿಯೆಯ ಮೂಲಕ ಮಗುವು ಆಯಾ ಸಮಾಜದ ನಡವಳಿಕೆಗಳನ್ನು ತನ್ನದಾಗಿಸಿಕೊಳ್ಳುತ್ತಿರುತ್ತದೆ. ನಿರಂತರ ಅಭ್ಯಾಸ, ಸಂವಾದ, ಚರ್ಚೆ, ಜೀವನಾನುಭವ ಮತ್ತು ಆಲೋಚನೆಗಳ ಮೂಲಕ ಕಲಿಯುಗದ ಗುಣಗಳೇ ಸಂಸ್ಕೃತಿಯಾಗಿರುತ್ತದೆ.

ಸಾಂಸ್ಕೃತಿಕ ಸಹಜೀವನ :

ಸಂಸ್ಕೃತಿಯು ಸಮಾಜದಲ್ಲಿ ಪ್ರತಿಯೊಬ್ಬ ಸದಸ್ಯರಿಗೂ ತಮ್ಮ ಮೌಲ್ಯಗಳನ್ನು ನಂಬಿಕೆಗಳನ್ನು ಹಂಚಿಕೊಳ್ಳುವ ಅವಕಾಶಗಳನ್ನು ನೀಡುತ್ತದೆ. ಆ ಮೂಲಕ ಸಮಾಜದಲ್ಲಿ ಇರುವ ಎಲ್ಲಾ ರೀತಿಯ ಸಂಪ್ರದಾಯಗಳು, ಲೋಕಾಚಾರಗಳು, ನೈತಿಕ ನಿಯಮಗಳು, ನಂಬಿಕೆ, ಆಚರಣೆಗಳು, ಮೌಲ್ಯಗಳು, ಆದರ್ಶಗಳು ಹಾಗೂ ಭಾಷೆಗಳು ಇವೇ ಮುಂತಾದ ಅಂಶಗಳು ಸಹಭಾಗಿತ್ವಗೊಳ್ಳುವ ಅವಕಾಶವನ್ನು ಸಂಸ್ಕೃತಿ ನೀಡುತ್ತದೆ.

ಸಂಸ್ಕೃತಿಯು ನಿರಂತರವಾದದ್ದು :

ಪ್ರತಿಯೊಂದು ಸಂಸ್ಕೃತಿಯು ಹೊಸ ಹೊಸ ಅಂಶಗಳ ಸೇರ್ಪಡೆಯಿಂದ ನಿರಂತರವಾಗಿ ಬೆಳೆಯುತ್ತದೆ. ಜ್ಞಾನ, ಕಲ್ಪನೆ, ನಿಯಮಗಳು, ಮೌಲ್ಯಗಳು ಒಂದು ಸಂಯೋಜಿತ ವ್ಯವಸ್ಥೆಯೊಂದರಲ್ಲಿ ನಿರ್ಮಾಣಗೊಂಡರೂ ಹಿಂದಿನ ನಡವಳಿಕೆಗಳನ್ನು ಮೌಲ್ಯಗಳನ್ನು ಸಂಪೂರ್ಣವಾಗಿ ಬದಲಾಯಿಸಿಕೊಳ್ಳದೆ, ಅದರಲ್ಲಿ ಸ್ವಲ್ಪಮಟ್ಟಿನ ಬದಲಾವಣೆಗಳನ್ನು ಮಾಡಿಕೊಂಡು ಮುಂದುವರೆಯುತ್ತಿರುತ್ತವೆ.

ಸಂಸ್ಕೃತಿಯು ಬಹುತ್ವದ್ದು :

ಪ್ರತಿಯೊಂದು ಜನ ಸಮೂಹಕ್ಕೆ ತನ್ನದೆ ಆದ ಸಂಸ್ಕೃತಿಯಿದೆ. ಆದುದರಿಂದ ಸಂಸ್ಕೃತಿಯು ಏಕರೂಪವಾಗಿಲ್ಲ. ಸಂಸ್ಕೃತಿಯು ವಿವಿಧಾಂಶಗಳಾದ ಸಂಪ್ರದಾಯ, ಲೋಕಾರೂಢಿ, ನೈತಿಕ ನಿಯಮ, ಕಲೆ, ನಡವಳಿಕೆ, ನಂಬಿಕೆ, ಭಾಷೆ ಇತ್ಯಾದಿಗಳು ಸಮಾಜದಿಂದ ಸಮಾಜಕ್ಕೆ ಬೇರೆ ಬೇರೆಯಾಗುತ್ತವೆ. ಆದಿವಾಸಿ, ಗ್ರಾಮೀಣ ಹಾಗೂ ನಗರ ಸಮುದಾಯಗಳಲ್ಲಿ ಬೇರೆ ಬೇರೆ ಪ್ರಕಾರದಲ್ಲಿ ಇದನ್ನು ಗುರುತಿಸಬಹುದು.

ಸಂಸ್ಕೃತಿಯ ಮಹತ್ವ

ಸಂಸ್ಕೃತಿಯು ಜ್ಞಾನಭಂಡಾರ :

ಮಾನವನ ಸಾಮಾಜಿಕ ಮತ್ತು ಭೌತಿಕ ಅಸ್ತಿತ್ವಕ್ಕೆ ಅಗತ್ಯವಾದ ಜ್ಞಾನವನ್ನು ಸಂಸ್ಕೃತಿಯು ನೀಡುವುದು. ಪ್ರಾಣಿ ಪಕ್ಷಿಗಳು ತಮ್ಮ ಪ್ರಕೃತಿ ಸಹಜವಾದ ಮೂಲ ಪ್ರವೃತ್ತಿಗಳಿಂದ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುವ ಪ್ರಯತ್ನ ಮಾಡುತ್ತವೆ ಮತ್ತು ಬದುಕುಳಿಯುತ್ತವೆ. ಆದರೆ ಮಾನವರು ಮಾತ್ರ ತನ್ನ ಕಲಿಕಾ ಶಕ್ತಿಯಿಂದ ಪರಿಸ್ಥಿತಿಯೊಂದಿಗೆ ಹೊಂದಿಕೊಳ್ಳುತ್ತಾ ಬಂದಿರುವುದನ್ನು ಕಾಣುತ್ತೇವೆ. ಇದಕ್ಕೆ ಮಾನವರು ಸಮಯೋಜಿತ ಸಾಂಸ್ಕೃತಿಕ ನಡವಳಿಕೆಗಳು ಕಾರಣವಾಗುತ್ತವೆ.

ಸಂಸ್ಕೃತಿಯು ಪರಿಸ್ಥಿತಿಯನ್ನು ವಿವರಿಸುತ್ತದೆ :

ಸಂಸ್ಕೃತಿಯು ನಮಗೆ ಆಯಾ ಸಂಧರ್ಭದ ಹಾಗೂ ಪರಿಸ್ಥಿತಿಗೆ ಅನುಸಾರವಾಗಿ ಮಾನವ ಸಮಾಜ ಹೇಗೆ ವಿಕಸನಗೊಂಡಿದೆ. ಎನ್ನುವುದನ್ನು ಸಂಸ್ಕೃತಿ ಅಧ್ಯಯನಗಳು ನಮಗೆ ತಿಳಿಸುತ್ತವೆ.

ಸಂಸ್ಕೃತಿಯು ಮೌಲ್ಯಗಳನ್ನು ವಿವರಿಸುವುದು :

ಮಾನವ ಸಮಾಜದ ಪ್ರವೃತ್ತಿ, ಮನೋಭಾವ ಮತ್ತು ನಡವಳಿಕೆಯ ವಿಚಾರಗಳನ್ನು ಮಾಪನಮಾಡುವ ಸಾಧನವೇ ಮೌಲ್ಯ.

ಸಂಸ್ಕೃತಿಯು ವರ್ತನೆಯ ಮಾದರಿಗಳನ್ನು ತಿಲಿಸುತ್ತದೆ :

ಸಂಸ್ಕೃತಿಯು ನಮಗೆ ಗುರಿಗಳನ್ನು ಮತ್ತು ಅವುಗಳನ್ನು ಸಾಧಿಸಲು ಮಾರ್ಗಗಳನ್ನು ನೀಡುತ್ತದೆ. ನಮ್ಮ ಸಮಾಜದಲ್ಲಿ ನಡೆಯುವ ಮಾನವೀಯ ನಡವಳಿಕೆಗಳನ್ನು, ಸಮಾಜಮುಖಿ ಸಾಧನೆಗಳನ್ನು ಸಂಸ್ಕೃತಿ ಪುರಸ್ಕರಿಸುತ್ತದೆ. ಹಾಗೆಯೇ ಸಮಾಜ ವಿರೋಧಿ, ಮಾನವ ವಿರೋಧಿ ಚಟುವಟಿಕೆಗಳನ್ನು ದಂಡಿಸುವ ವರ್ತನಾ ಮಾದರಿಗಲನ್ನು ಸಂಸ್ಕೃತಿಯು ಹೊಂದಿದೆ.

FAQ

ಸಂಸ್ಕೃತಿ ಎಂದರೇನು ?

ಒಂದು ಗುಂಪಿನ ಜನರ ಜೀವನ ಕ್ರಮ. ಇಲ್ಲಿ ನಡವಳಿಕೆಗಳು, ನಂಬಿಕೆಗಳು, ಮೌಲ್ಯಗಳು ಮತ್ತು ಆ ಜನರ ಗುಂಪು ಒಪ್ಪಿಕೊಂಡಿರುವ ಜೀವನ ಸಂಕೇತಗಳು ಇರುತ್ತವೆ. ಸಾಮಾನ್ಯವಾಗಿ ಅವುಗಳನ್ನು ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ರವಾನೆ ಮಾಡಲಾಗುತ್ತಿರುತ್ತದೆ.

ಕಲ್ಚರ್‌ ಎಂಬ ಪದವು ಯಾವ ಪದದಿಂದ ಉತ್ಪತ್ತಿಯನ್ನು ಹೊಂದಿದೆ ?

ಕಲ್ಚರ್‌ ಎಂಬ ಇಂಗ್ಲಿಷ್‌ ಪದವು ಲ್ಯಾಟೀನ್‌ ಭಾಷೆಯ ಕೂಲರ್‌ ಎಂಬ ಮೂಲ ಪದದಿಂದ ಉತ್ಪತ್ತಿಯನ್ನು ಹೊಂದಿದೆ.

ಇತರೆ ವಿಷಯಗಳು :

ಜನಪದ ಕಲೆಗಳ ವೈಭವದ ಬಗ್ಗೆ ಮಾಹಿತಿ

ಪ್ರಾಮಾಣಿಕತೆ ಅತ್ಯುತ್ತಮ ನೀತಿ ಪ್ರಬಂಧ

LEAVE A REPLY

Please enter your comment!
Please enter your name here