ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಯ ಪ್ರಬಂಧ | Our Culture is Our Pride Essay in Kannada

0
1181
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಯ ಪ್ರಬಂಧ | Our Culture is Our Pride Essay in Kannada
ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಯ ಪ್ರಬಂಧ | Our Culture is Our Pride Essay in Kannada

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಯ ಪ್ರಬಂಧ Our Culture is Our Pride Essay Namma Samskruti Namma Hemme in Kannada


Contents

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಯ ಪ್ರಬಂಧ

Our Culture is Our Pride Essay in Kannada
Our Culture is Our Pride Essay in Kannada

ಈ ಲೇಖನಿಯಲ್ಲಿ ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಪೀಠಿಕೆ

ನಮ್ಮ ಸಂಸ್ಕೃತಿ ಎಂದರೆ ನಮಗೆಲ್ಲರಿಗೂ ಹೆಮ್ಮೆ ಎನಿಸಬೇಕು. ಆ ಜನಾಂಗದ ಜೀವನ ವಿಧಾನವಾಗಿದೆ. ನಮ್ಮ ನಂಬಿಕೆ, ಮತಾಚಾರ, ಹಾಗೂ ನಡವಳಿಕೆಯಲ್ಲಿ ಸಂಸೃತಿಯನ್ನು ಕಾಣಬಹುದಾಗಿದೆ. ಸಂಸ್ಕೃತಿಯು ಆ ನಾಡಿನ, ಅಲ್ಲಿನ ಜನರ ವ್ಯಕ್ತಿತ್ವದ ಬಗ್ಗೆ ಸೂಚಿಸುತ್ತದೆ. ಪ್ರತ್ಯಕ್ಷ ಜೀವನದ ಅನೇಕ ಸಂಸ್ಕಾರಗಳ ಮೂಲಕ ಮನುಷ್ಯನ ಅಂತರಂಗ ಪಡೆಯುವ ಪರಿಪಕ್ವತೆಯನ್ನು ಸಂಸೃತಿ ಎನ್ನುತ್ತೇವೆ.

ವಿಷಯ ವಿವರಣೆ

ಒಂದು ನಾಡು ಅಥವಾ ಅಲ್ಲಿನ ಜನರ ಜೀವನದ ವಿಧಾನ ಹಾಗೂ ಇನ್ನೊಂದು ನಾಡಿನ ಮತ್ತು ಅಲ್ಲಿನ ಜನರ ಜೀವನದ ವಿಧಾನಗಳು ಬೇರೆ ಬೇರೆ ವಿಶಿಷ್ಟತೆಗಳನ್ನು ಸೂಚಿಸುವುದೇ ಒಂದು ನಾಡಿನ ಸಂಸೃತಿ ಎನಿಸಿಕೊಳ್ಳತ್ತದೆ. ಸಂಸೃತಿಯು ಒಂದೇ ದಿನದಲ್ಲಿ ಸೃಷ್ಟಿಯಾಗುವುದಿಲ್ಲ. ಶತಮಾನಗಳಿಂದ ಒಂದು ನಾಡಿನ ಜೀವನ ಶೈಲಿ, ನಡೆ ನುಡಿ, ಅಲ್ಲಿನ ಪದ್ದತಿಗಳು ಇನ್ನು ಮುಂತಾದವುಗಳ ಒಟ್ಟು ಮೊತ್ತವೇ ಸಂಸ್ಕೃತಿಯಾಗಿದೆ. ಭಾರತವು ಸಂಸ್ಕೃತಿಯ ನಾಡಾಗಿದೆ. ಬಹು-ಸಂಸ್ಕೃತಿಗಳನ್ನು ಒಳಗೊಂಡ ನಾಡು ನಮ್ಮದು ಎಂದು ಹೇಳಿಕೊಳ್ಳಲು ನಮಗೆಲ್ಲರಿಗೂ ಹೆಮ್ಮೆಯಾಗುತ್ತದೆ. ಜನರ ಆಹಾರ ಪದ್ದತಿ, ಉಡುಗೆ ತೊಡುಗೆ, ನಂಬಿಕೆ, ತತ್ವಜ್ಞಾನ ಇವು ಜನರ ಬದುಕಿನ ಕ್ರಮವಾಗಿವೆ, ಆದರೆ ಇವೇ ಈಗ ಸಂಸೃತಿಗಳಾಗಿವೆ.

ನಮ್ಮ ನಾಡಿನ ಸಂಸೃತಿಗಳು ನಮ್ಮ ಹೆಮ್ಮೆ

ನೃತ್ಯ :

ಯಕ್ಷಗಾನವು ನಮ್ಮ ರಾಜ್ಯದ ನೃತ್ಯವಾಗಿದೆ. ಯಕ್ಷಗಾನದ ವಿಶಿಷ್ಟ ಕಲಾ ಪ್ರಕಾರದ ನೃತ್ಯವಾಗಿದೆ. ನಮ್ಮ ನಾಡಿನ ನೃತ್ಯವಾಗಿದೆ. ಇದು ನಮಗೆಲ್ಲರಿಗೂ ಹಾಗು ನಮ್ಮ ನಾಡಿಗೆ, ನಾಡಿನ ಜನತೆಗೆ ಹೆಮ್ಮೆಯ ವಿಷಯವಾಗಿದೆ.

ಕಲೆ ಮತ್ತು ವಾಸ್ತು ಶಿಲ್ಪ :

ನಮ್ಮ ನಾಡಿನಲ್ಲಿ ಪ್ರಸಿದ್ದವಾದಂತಹ ಕಲೆಮತ್ತು ವಾಸ್ತು ಶಿಲ್ಪವನ್ನು ಕಾಣಬಹುದು. ನಮ್ಮ ನಾಡಿನ ಕಲೆ ಮತ್ತು ವಾಸ್ತು ಶಿಲ್ಪವು ಅತಿ ಹೆಚ್ಚು ಪ್ರಾಮುಖ್ಯತೆಯನ್ನು ಹೊಂದಿವೆ. ಒಂದು ಕಲ್ಲಿಗೆ ಕೆತ್ತನೆಯ ಮೂಲಕ ಆ ಕಲ್ಲಿಗೆ ಜೀವ ತುಂಬುತ್ತಾರೆ. ಹಲವಾರು ಶೈಲಿಯ ವರ್ಣಚಿತ್ರಗಳು, ಸಾಮಾನ್ಯವಾಗಿ ದಂತಕಥೆಗಳು, ಪೌರಾಣಿಕ ದೃಶ್ಯಗಳು ಮತ್ತು ರಾಜಮನೆತನದ ಚಿತ್ರಣಗಳಾಗಿವೆ.

ಹಬ್ಬಗಳು :

ನಮ್ಮ ನಾಡು ಹಬ್ಬಗಳ ಸುರಿಮಳೆಯಾಗಿದೆ. ಯಾವುದೇ ಬೇಧ ಭಾವವನ್ನು ಮಾಡದೆ ಎಲ್ಲರೂ ಸೇರಿ ಒಟ್ಟಾಗಿ ಸಂಭ್ರಮದಿಂದ ಆಚರಿಸುತ್ತಾರೆ. ನಮ್ಮ ನಾಡಿನಲ್ಲಿ ಅಚರಿಸುವಂತ ಹಬ್ಬಗಳಿಂದ ನಮ್ಮ ಸಂಸ್ಕೃತಿಯನ್ನು ಇನ್ನು ಹೆಚ್ಚಿಸಿದಂತಾಗುತ್ತದೆ. ಮತ್ತು ನಮ್ಮ ಸಂಸಕೃತಿಯು ಪ್ರಸಿದ್ದಿಯನ್ನು ಹೊಂದುವುದು. ನಮ್ಮ ದೇಶದ ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಮತ್ತು ಗಾಂಧಿ ಜಯಂತಿ ಹಾಗು ಧಾರ್ಮಿಕ ಹಬ್ಬಗಳಾದ ದೀಪಾವಳಿ, ಗಣೇಶ ಚತುರ್ಥಿ, ಹೋಳಿ, ಯುಗಾದಿ, ಸಂಕ್ರಾಂತಿ, ರಕ್ಷಾ ಬಂಧನ, ರಥ ಯಾತ್ರೆ, ಮಹಾ ಶಿವರಾತ್ರಿ, ಕ್ರಿಸ್‌ಮಸ್, ಓಣಂ, ಜನ್ಮಾಷ್ಟಮಿ, ಮತ್ತು ಅನೇಕ ಇತರ ಹಬ್ಬಗಳನ್ನು ಆಚರಿಸುವುದು ದೇಶದಾದ್ಯಂತ ಬಹಳ ಹೆಮ್ಮೆಯ ಮತ್ತು ಏಕತೆಯನ್ನು ಸಾಧಿಸಲು ಸಾಧ್ಯವಾಗುತ್ತದೆ.

ನಮ್ಮ ನಾಡಿನ ಆಹಾರ ಪದ್ದತಿ :

ಪ್ರತಿಯೊದು ನಾಡಿನಲ್ಲು ಕೂಡ ವಿಧ ವಿಧವಾದ ಅಡುಗೆ ವಿಧಾನವನ್ನು ಹೊಂದಿರುತ್ತವೆ. ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಈಶಾನ್ಯ ವರ್ಗೀಕರಣಗಳನ್ನು ಮಾಡಬಹುದು. ಭಾರತೀಯ ಅಡುಗೆಯ ಪದಾರ್ಥಗಳಲ್ಲಿ ಅನೇಕ ಅಧಿಕೃತ ಮಸಾಲೆಗಳು ಮತ್ತು ಗಿಡಮೂಲಿಕೆಗಳು ಕಂಡುಬರುತ್ತವೆ. ಇದು ನಮ್ಮ ನಾಡಿಗೆ ಹೆಮ್ಮೆ ತರುವಂತ ಪ್ರಮುಖವಾದ ಅಂಶವಾಗಿದೆ.

ಉಪಸಂಹಾರ

ನಾವೆಲ್ಲರೂ ಕೂಡ ನಮ್ಮ ನಾಡಿನ ಸಂಸ್ಕೃತಿಯನ್ನು ಗೌರವಿಸೋಣ ಮತ್ತು ಬೆಳೆಸೋಣ. ನಮ್ಮ ನಾಡಿನ ಸಂಸ್ಕೃತಿಯು ಬೇರೆ ನಾಡಿಗೆ ಮಾದರಿಯಾಗಿಬೇಕು. ನಮ್ಮ ಸಂಸೃತಿನ್ನು ಉಳಿಸುವವುದು, ಬೆಳೆಸುವುದು ನಮ್ಮ ಕರ್ತವ್ಯವಾಗಿದೆ. ಕನ್ನಡದ ಸಂಸೃತಿಯನ್ನು ಕನ್ನಡದವರು ಮಾತ್ರವಲ್ಲದೆ ಬೇರೆ ದೇಶಗಳಲ್ಲೂ ಕನ್ನಡನಾಡಿನ ಸಂಸೃತಿಯು ಪರಿಚಿತವಾಗುವಂತೆ ನಮ್ಮ ಸಂಸೃತಿಯನ್ನು ನಾವೇ ಬೆಳೆಸೋಣ.

FAQ

ನಮ್ಮ ನಾಡಿನ ಆಹಾರ ಪದ್ದತಿಯ ಬಗ್ಗೆ ತಿಳಿಸಿ ?

ಪ್ರತಿಯೊದು ನಾಡಿನಲ್ಲು ಕೂಡ ವಿಧ ವಿಧವಾದ ಅಡುಗೆ ವಿಧಾನವನ್ನು ಹೊಂದಿರುತ್ತವೆ. ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ ಮತ್ತು ಈಶಾನ್ಯ ವರ್ಗೀಕರಣಗಳನ್ನು ಮಾಡಬಹುದು. ಭಾರತೀಯ ಅಡುಗೆಯ ಪದಾರ್ಥಗಳಲ್ಲಿ ಅನೇಕ ಅಧಿಕೃತ ಮಸಾಲೆಗಳು ಮತ್ತು ಗಿಡಮೂಲಿಕೆಗಳು ಕಂಡುಬರುತ್ತವೆ. ಇದು ನಮ್ಮ ನಾಡಿಗೆ ಹೆಮ್ಮೆ ತರುವಂತ ಪ್ರಮುಖವಾದ ಅಂಶವಾಗಿದೆ.

ಕರ್ನಾಟಕ ರಾಜ್ಯದ ನೃತ್ಯ ಯಾವುದು ?

ಯಕ್ಷಗಾನ

ಇತರೆ ವಿಷಯಗಳು :

ದಾದಾಭಾಯಿ ನೌರೋಜಿ ಜೀವನಚರಿತ್ರೆ

ಜೋಗ್ ಫಾಲ್ಸ್ ಮಾಹಿತಿ 

LEAVE A REPLY

Please enter your comment!
Please enter your name here