ಸಚಿವಾಲಯದ ಬಗ್ಗೆ ಮಾಹಿತಿ | Information About The Ministry in Kannada

0
206
ಸಚಿವಾಲಯದ ಬಗ್ಗೆ ಮಾಹಿತಿ | Information About The Ministry in Kannada
ಸಚಿವಾಲಯದ ಬಗ್ಗೆ ಮಾಹಿತಿ | Information About The Ministry in Kannada

ಸಚಿವಾಲಯದ ಬಗ್ಗೆ ಮಾಹಿತಿ Information About The Ministry Sacivalayada Bagee Mahiti in Kannada


Contents

ಸಚಿವಾಲಯದ ಬಗ್ಗೆ ಮಾಹಿತಿ

Information About The Ministry in Kannada

ಈ ಲೇಖನಿಯಲ್ಲಿ ಸಚಿವಾಲಯದ ಬಗ್ಗೆ ಸಂಪೂರ್ನವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಸಚಿವಾಲಯ

ಸಚಿವಾಲಯವುಮುಖ್ಯವಾಗಿ ಎರಡು ರೀತಿಯ ಸಚಿವಾಲಯಗಳನ್ನು ಹೊಂದಿರುವುದಾಗಿದೆ. ಅವುಗಳ ಬಗ್ಗೆ ಈ ಕೆಳಕಂಡಂತೆ ತಿಳಿಸಲಾಗಿದೆ.

ಕೇಂದ್ರ ಸಚಿವಾಲಯ :

ಆಡಳಿತದ ದಕ್ಷ ಮತ್ತು ಯಶಸ್ವಿ ಕಾರ್ಯನಿರ್ವಹಣೆಗೆ ವಿವಿಧ ಖಾತೆಗಳು ಹಾಗೂ ಇಲಾಖೆಗಳನ್ನು ರಚಿಸಲಾಗುತ್ತದೆ. ಈ ಸಚಿವಾಲಯವು ಕೇಂದ್ರ ಸರ್ಕಾರದ ವಿವಿಧ ಖಾತೆಗಳ ಮತ್ತು ಇಲಾಖೆಗಳ ಮಿಶ್ರಣವಾಗಿರುತ್ತದೆ. ಈ ಸಚಿವಾಲಯದ ಮುಖ್ಯ ಹೊಣೆಗಾರಿಕೆ ಎಂದರೆ ವಿವಿಧ ಖಾತೆಗಳ ರಾಜಕೀಯ ಮುಖ್ಯಸ್ಥರಾಗಿರುವ ಮಂತ್ರಿಗಳಿಗೆ ಅವರ ಕಾರ್ಯ ನಿರ್ವಹಣೆ ಮತ್ತು ಜವಾಬ್ದಾರಿಯನ್ನು ನಿರ್ವಹಿಸಲು ಸಹಾಯ ಮಾಡುವುದು. ಇದು ಕಾರ್ಯದರ್ಶಿಗಳನ್ನು ಆಡಳಿತಾತ್ಮಕ ಮುಖ್ಯಸ್ಥರನ್ನಾಗಿಯೂ, ಮಂತ್ರಿಗಲನ್ನು ರಾಜಕೀಯ ಮುಖ್ಯಸ್ಥರನ್ನಾಗಿ ಹೊಂದಿರುತ್ತದೆ್

ಕೇಂದ್ರ ಸಚಿವಾಲಯದ ರಚನೆ :

ಕೇಂದ್ರ ಸಚಿವಾಲಯವು ವಿವಿಧ ಖಾತೆಗಳ ಮತ್ತು ಇಲಾಖೆಗಳ ಸಂಗ್ರಹವಾಗಿದೆ. ಸಂವಿಧಾನದ ೭೭ (೩) ವಿಧಿ ಅನ್ವಯ ರಾಷ್ಟ್ರಾಧ್ಯಕ್ಷರು ಭಾರತ ಸರ್ಕಾರದ ಆಡಳಿತ ವ್ಯವಹಾರಗಳ ಸುಗಮ ನಿರ್ವಹಣೆಗಾಗಿ ಹಾಗೂ ಮಂತ್ರಿಗಳಲ್ಲಿ ಆ ವ್ಯವಹಾರಗಳ ಹಂಚುವಿಕೆಗಾಗಿ ನಿಯಮಗಳನ್ನು ರೂಪಿಸಲು ಅಧಿಕಾರ ಹೊಂದಿರುತ್ತಾರೆ. ಪ್ರತಿಯೊಬ್ಬ ಕ್ಯಾಬಿನೆಟ್‌ ಸಚಿವರು ಒಂದು ಸ್ವತಂತ್ರ ಖಾತೆಯನ್ನು ಹೊಂದಿರುತ್ತಾರೆ. ಅವರು ಹೊಂದಿರುವ ಖಾತೆ ದೊಡ್ಡದಾಗಿದ್ದರೆ, ಅವರಿಗೆ ಸಹಾಯ ಮಾಡಲು ರಾಜ್ಯಮಂತ್ರಿ ಮತ್ತು ಉಪಮಂತ್ರಿ ಇರುತ್ತಾರೆ. ಮಂತ್ರಿಯು ಖಾತೆಯ ರಾಜಕೀಯ ಮುಖ್ಯಸ್ಥರಾಗಿರುತ್ತಾರೆ. ಒಂದು ಖಾತೆಯು ಒಂದಕ್ಕಿಂತ ಹೆಚ್ಚು ಇಲಾಖೆಗಳನ್ನು ಹೊಂದಿರಬಹುದಾಗಿದೆ.

ಸಚಿವಾಲಯದ ಪಾತ್ರ ಮತ್ತು ಕಾರ್ಯಗಳು :

  • ಸಚಿವಾಯವು ಸರ್ಕಾರಕ್ಕೆ ಅವರ ಗುರಿ ಸಾಧನೆಗೆ ಸಹಾಯ ಸಂಘಟನೆಯಾಗಿದೆ. ಸರ್ಕಾರದ ನೀತಿಗಳನ್ನು ರೂಪಿಸುವಾಗ ಮಂತ್ರಿಗಳಿಗೆ ಇದು ಸಹಾಯ ಮಾಡುತ್ತದೆ.
  • ಮಂತ್ರಿಗಳು ತಮ್ಮ ಸಂಸದೀಯ ಜವಾಬ್ದಾರಿಯನ್ನು ನಿಭಾಯಿಸಲು ಸಚಿವಾಲಯವು ಸಹಾಯ ಮತ್ತು ಸಹಕಾರ ಒದಗಿಸುತ್ತದೆ.
  • ಆಡಳಿತ ವಿಧಿ – ವಿಧಾನಗಳನ್ನು ಸಚಿವಾಲಯವು ತಯಾರಿಸುತ್ತದೆ.
  • ಸಚಿವಾಯವು ಸಮಸ್ಯೆಗಳನ್ನು ಕೂಲಂಕುಷವಾಗಿ ಪರಿಶೀಲಿಸುತ್ತದೆ.
  • ಹಣಕಾಸಿನ ಇಲಾಖೆಯೊಂದಿಗೆ ನಿಕಟ ಸಂಪರ್ಕವನ್ನಿಟ್ಟುಕೊಂಡು ಆಯ- ವ್ಯಯ ಅಂದಾಜು ಪಟ್ಟಿಯನ್ನು ಸಿದ್ದಪಡಿಸುತ್ತದೆ.
  • ಕೇಂದ್ರ ಸರ್ಕಾರ ಮತ್ತು ಉಳಿದ ರಾಜ್ಯ ಸರ್ಕಾರಗಲ ನಡುವೆ ಸಚಿವಾಲಯವು ಪ್ರಮುಖ ಸಂಪರ್ಕ ಸೇತುವೆಯಂತೆ ಕಾರ್ಯನಿರ್ವಹಿಸುತ್ತದೆ.

ರಾಜ್ಯ ಸಚಿವಾಲಯ :

ಪ್ರತಿಯೊಂದು ರಾಜ್ಯದ ಸಚಿವಾಲಯ ನರಮಂಡಲದಂತೆ ಕಾರ್ಯನಿರ್ವಹಿಸುತ್ತದೆ. ಸಚಿವಾಲಯವು ವಿವಿಧ ಇಲಾಖೆಗಳನ್ನು ಹೊಂದಿರುತ್ತದೆ. ಈ ಇಲಾಖೆಗಳಿಗೆ ಮಂತ್ರಿಗಲು ರಾಜಕೀಯ ಮುಖ್ಯಸ್ಥರಾದರೆ, ಪ್ರಧಾನ ಕಾರ್ಯದರ್ಶಿಗಳು ಆಡಳಿತಾತ್ಮಕ ಮುಖ್ಯಸ್ಥರಾಗಿರುತ್ತಾರೆ. ಮುಖ್ಯ ಕಾರ್ಯದರ್ಶಿಯು ರಾಜ್ಯ ಸಚಿವಾಲಯದ ಮುಖ್ಯಸ್ಥರಾಗಿರುತ್ತಾರೆ. ಕಾರ್ಯದರ್ಶಿಯು ಒಂದು ಅಥವಾ ಎರಡು ಇಲಾಖೆಗಳಿಗೆ ಮುಖ್ಯಸ್ಥರಾಗಿರುತ್ತಾರೆ. ವರು ಸಾಮಾನ್ಯವಾಗಿ ಭಾರತೀಯ ಆಡಳಿತ ಸೇವಾ ಹಂತದ ಅಧಿಕಾರಿಯಾಗಿರುತ್ತಾರೆ.

ಸಚಿವಾಲಯದ ರಚನೆ :

ಮುಖ್ಯಮಂತ್ರಿಗಳು ಮಂತ್ರಿಗಳಿಗೆ ಖಾತೆಯನ್ನು ಹಂಚಿಕೆ ಮಾಡುತ್ತಾರೆ. ಸಚಿವರ ಖಾತೆಗಳ ಸಂಖ್ಯೆಯಲ್ಲಿ ರಾಜ್ಯದಿಂದ ರಾಜ್ಯಕ್ಕೆ ಭಿನ್ನತೆಯಿರುತ್ತದೆ. ಸಾಮಾನ್ಯವಾಗಿ ಇಲಾಖೆಗಳ ಸಂಖ್ಯೆ ೧೬ ರಿಂದ ೩೫ ರ ವರೆಗೆ ಇರುತ್ತದೆ. ರಾಜ್ಯದ ಕಾರ್ಯದರ್ಶಿಯು, ಸರ್ಕಾರದ ಆಡಳಿತಾತ್ಮಕ ಮುಖ್ಯಸ್ಥರೂ ಮತ್ತು ಸಚಿವಾಲಯ ಮುಖ್ಯಸ್ಥರೂ ಆಗಿರುತ್ತಾರೆ. ಸರ್ಕಾರ ಪ್ರತಿಯೊಂದು ಇಲಾಖೆಗೂ ಒಬ್ಬ ಕಾರ್ಯದರ್ಶಿ ಇರುತ್ತಾರೆ. ಸಚಿವರಿಗೆ ಇವರು ಆಡಳಿತಾತ್ಮಕ ಸಲಹೆಯನ್ನು ನೀಡುತ್ತಾರೆ.

ಪ್ರಧಾನ ಕಾರ್ಯದರ್ಶಿಯ ಕಛೇರಿಯನ್ನು ವಿವಿಧ ಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಪ್ರತಿಯೊಂದು ವಿಭಾಗವೂ ಸೆಕ್ಷನ್‌ ಆಫೀಸರ್‌ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಾರೆ. ತನ್ನ ವಿಭಾಗದ ಕಾಗದ ಪತ್ರ ಮತ್ತು ಕಡತಗಳನ್ನು ಪರಿಶೀಲಿಸಿ ಸಂಬಂಧಪಟ್ಟವರಿಗೆ ತಲುಪಿಸುವ ಹೊಣೆಯನ್ನು ಇವರು ಹೊಂದಿದ್ದಾರೆ. ಪ್ರತಿಯೊಂದು ವಿಭಾಗದಲ್ಲೂ ಕೆಲವು ತಜ್ಞ ಶೀಘ್ರಲಿಪಿಕಾರರು ಮತ್ತು ಬೆರಳಚ್ಚುಗಾರರೂ, ಪ್ರಥಮದರ್ಜೆ ಸಹಾಯಕರು, ದ್ವತಿಯ ದರ್ಜೆ ಸಹಾಯಕರು ಇರುತ್ತಾರೆ. ಸಚಿವಾಲಯದ ಶ್ರೇಣಿ ವ್ಯವಸ್ಥೆಯನ್ನು ಹೊಂದಿರುತ್ತದೆ.

ಸಚಿವಾಲಯದ ಕಾರ್ಯಗಳು :

  • ರಾಜ್ಯ ಸರ್ಕಾರದ ಅತ್ಯುನ್ನತವಾದ ಕಾರ್ಯಾಲಯವು ಸರ್ಕಾರದ ಆಡಳಿತಾಂಗದ ಸಾಧನವಾಗಿದೆ. ರಾಜ್ಯ ಸರ್ಕಾರದ ಆಡಳಿತಾಂಗದ ಸಾಧನವಾಗಿದೆ. ರಾಜ್ಯ ಸರ್ಕಾರದ ಆಡಳಿತದ ಸಮಸ್ತ ವಿಷಯಗಳ ಮೇಲೆ ಧೋರಣೆಗಳನ್ನು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಮಂತ್ರಿಗಳಿಗೆ ಸಹಾಯ ನೀಡುತ್ತದೆ.
  • ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವ ತಜ್ಞರ ಮಂಡಲಿಯಾಗಿ ಕಾರ್ಯನಿರ್ವಹಿಸುತ್ತದೆ.
  • ರಾಜ್ಯದ ಆಡಳಿತದ ಸಂಯೋಜನೆ ಅಂಗವಾಗಿ ಸರ್ಕಾರದ ನೀತಿ ಹಾಗೂ ಕಾರ್ಯಕ್ರಮಗಳನ್ನು ಸಂಯೋಜಿಸಿ ವಿವಿಧ ಇಲಾಖೆಗಳ ಆಂತರಿಕ ಆಡಳಿತದಲ್ಲಿ ಸಮನ್ವಯತೆಯನ್ನು ಸಾಧಿಸುತ್ತದೆ.
  • ಶಾಸನದ ಕರಡು ಪ್ರತಿಯನ್ನು ಸಿದ್ದಪಡಿಸುವುದು ನಿಯಮಾವಳಿಗಳನ್ನು ರೂಪಿಸುವುದು ಮತ್ತು ಹಣಕಾಸಿನ ನಿಯಂತ್ರಣಕ್ಕಾಗಿ ವಿಧಿವಿಧಾನಗಳನ್ನು ರೂಪಿಸುವುದರಲ್ಲಿ ಮಂತ್ರಿಗಳಿಗೆ ಸಹಾಯ ಮಾಡುತ್ತದೆ.
  • ರಾಜ್ಯದ ಆಯ – ವ್ಯಯವನ್ನು ಸಿದ್ದಪಡಿಸುವುದು ಮತ್ತು ಸಾರ್ವಜನಿಕ ವೆಚ್ಚದ ಮೇಲೆ ಮಿತಿ ವಿಧಿಸುವುದು.

FAQ

ಕೇಂದ್ರ ಸಚಿವಾಲಯದ ರಚನೆಯನ್ನು ತಿಳಿಸಿ ?

ಕೇಂದ್ರ ಸಚಿವಾಲಯವು ವಿವಿಧ ಖಾತೆಗಳ ಮತ್ತು ಇಲಾಖೆಗಳ ಸಂಗ್ರಹವಾಗಿದೆ. ಸಂವಿಧಾನದ ೭೭ (೩) ವಿಧಿ ಅನ್ವಯ ರಾಷ್ಟ್ರಾಧ್ಯಕ್ಷರು ಭಾರತ ಸರ್ಕಾರದ ಆಡಳಿತ ವ್ಯವಹಾರಗಳ ಸುಗಮ ನಿರ್ವಹಣೆಗಾಗಿ ಹಾಗೂ ಮಂತ್ರಿಗಳಲ್ಲಿ ಆ ವ್ಯವಹಾರಗಳ ಹಂಚುವಿಕೆಗಾಗಿ ನಿಯಮಗಳನ್ನು ರೂಪಿಸಲು ಅಧಿಕಾರ ಹೊಂದಿರುತ್ತಾರೆ. ಪ್ರತಿಯೊಬ್ಬ ಕ್ಯಾಬಿನೆಟ್‌ ಸಚಿವರು ಒಂದು ಸ್ವತಂತ್ರ ಖಾತೆಯನ್ನು ಹೊಂದಿರುತ್ತಾರೆ. ಅವರು ಹೊಂದಿರುವ ಖಾತೆ ದೊಡ್ಡದಾಗಿದ್ದರೆ, ಅವರಿಗೆ ಸಹಾಯ ಮಾಡಲು ರಾಜ್ಯಮಂತ್ರಿ ಮತ್ತು ಉಪಮಂತ್ರಿ ಇರುತ್ತಾರೆ. ಮಂತ್ರಿಯು ಖಾತೆಯ ರಾಜಕೀಯ ಮುಖ್ಯಸ್ಥರಾಗಿರುತ್ತಾರೆ. ಒಂದು ಖಾತೆಯು ಒಂದಕ್ಕಿಂತ ಹೆಚ್ಚು ಇಲಾಖೆಗಳನ್ನು ಹೊಂದಿರಬಹುದಾಗಿದೆ.

ರಾಜ್ಯ ಸಚಿವಾಲಯದ ಕಾರ್ಯಗಳನ್ನು ತಿಳಿಸಿ ?

ರಾಜ್ಯ ಸರ್ಕಾರದ ಅತ್ಯುನ್ನತವಾದ ಕಾರ್ಯಾಲಯವು ಸರ್ಕಾರದ ಆಡಳಿತಾಂಗದ ಸಾಧನವಾಗಿದೆ. ರಾಜ್ಯ ಸರ್ಕಾರದ ಆಡಳಿತಾಂಗದ ಸಾಧನವಾಗಿದೆ. ರಾಜ್ಯ ಸರ್ಕಾರದ ಆಡಳಿತದ ಸಮಸ್ತ ವಿಷಯಗಳ ಮೇಲೆ ಧೋರಣೆಗಳನ್ನು ಮತ್ತು ಕಾರ್ಯಕ್ರಮಗಳನ್ನು ರೂಪಿಸಲು ಮಂತ್ರಿಗಳಿಗೆ ಸಹಾಯ ನೀಡುತ್ತದೆ, ರಾಜ್ಯ ಸರ್ಕಾರಕ್ಕೆ ಸಲಹೆ ನೀಡುವ ತಜ್ಞರ ಮಂಡಲಿಯಾಗಿ ಕಾರ್ಯನಿರ್ವಹಿಸುತ್ತದೆ.

ಇತರೆ ವಿಷಯಗಳು :

ಕನಕದಾಸರ ಶ್ರೀರಾಮಧಾನ್ಯ ಚರಿತೆಯ ಸಾರಾಂಶ 

ಪ್ರಾಮಾಣಿಕತೆ ಅತ್ಯುತ್ತಮ ನೀತಿ ಪ್ರಬಂಧ

LEAVE A REPLY

Please enter your comment!
Please enter your name here