ಪೌರತ್ವದ ಬಗ್ಗೆ ಮಾಹಿತಿ | Information About Citizenship in Kannada

0
562
ಪೌರತ್ವದ ಬಗ್ಗೆ ಮಾಹಿತಿ | Information About Citizenship in Kannada
ಪೌರತ್ವದ ಬಗ್ಗೆ ಮಾಹಿತಿ | Information About Citizenship in Kannada

ಪೌರತ್ವದ ಬಗ್ಗೆ ಮಾಹಿತಿ Information About Citizenship Pouratvada Bagge Mahiti in Kannada


Contents

Information About Citizenship in Kannada

Information About Citizenship in Kannada
Information About Citizenship in Kannada

ಈ ಲೇಖನಿಯಲ್ಲಿ ಪೌರತ್ವದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗುತ್ತದೆ.

ಪೌರತ್ವ

ಪ್ರತಿಯೊಬ್ಬ ವ್ಯಕ್ತಿಯು ಉತ್ತಮ ಜೀವನ ನಿರ್ವಹಿಸುವುದಕ್ಕೆ ಪೂರಕವಾಗಿರುವ ಸಂಘಟನೆಯನ್ನು ರಾಷ್ಟ್ರವೆಂದು ಕರೆಯುಲಾಗುತ್ತದೆ. ಒಂದು ರಾಷ್ಟ್ರಕ್ಕೆ ಸೇರಿದ ಜವಾಬ್ದಾರಿಯುತ ಸದಸ್ಯನನ್ನು ಪೌರನೆಂದು ಕರೆಯಲಾಗುತ್ತದೆ. ಪೌರತ್ವವನ್ನು ಹೊಂದಿರುವ ಪ್ರತಿಯೊಬ್ಬರೂ ಕೂಡ ಆ ರಾಷ್ಟ್ರ ಒದಗಿಸುವ ಹಕ್ಕುಗಳನ್ನು ಪಡೆದಿರುತ್ತಾರೆ. ಅಂದರೆ ಕನಿಷ್ಟ ಜೀವನ ಮಟ್ಟ, ಶಿಕ್ಷಣ, ಆರೋಗ್ಯ, ಸಾಮಾಜಿಕ ಭದ್ರತೆ ಹಾಗೂ ಇನ್ನಿತರ ಹಕ್ಕುಗಳನ್ನು ಪಡೆದಿರುತ್ತಾರೆ. ಜೊತೆಗೆ ಪೌರರಿಂದ ರಾಷ್ಟ್ರವು ಕೆಲವು ಕರ್ತವ್ಯಗಳನ್ನು ನಿರೀಕ್ಷಿಸುತ್ತದೆ. ಪೌರರು ತಮ್ಮ ರಾಷ್ಟ್ರದೊಂದಿಗೆ ನಿಕಟ ಸಂಬಂಧ ಹೊಂದಿರುತ್ತಾರೆ. ಏಕ ಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ರಾಷ್ಟ್ರಗಳ ಪೌರತ್ವ ಪಡೆಯಲು ಅವಕಾಶವಿರುವುದಿಲ್ಲ.

ಪೌರತ್ವದ ಲಕ್ಷಣಗಳು

  • ವ್ಯಕ್ತಿ ತಾನು ದೇಶದ ಪ್ರಜೆಯೆಂದು ಪೌರತ್ವದ ಮೂಲಕ ಗುರುತಿಸಿಕೊಳ್ಳುತ್ತಾನೆ.
  • ಪೌರರು ರಾಷ್ಟ್ರ ನೀಡುವ ಎಲ್ಲ ಹಕ್ಕುಗಳನ್ನು ಪಡೆಯಬಹುದು.
  • ಪೌರರಿಗೆ ರಾಷ್ಟ್ರವು ವಿಧಿಸಿದ ಕರ್ತವ್ಯಗನ್ನು ನಿರ್ವಹಿಸುತ್ತಾರೆ.
  • ಪೌರತ್ವವು ಪ್ರಜೆಗಳು ತಮ್ಮ ದೇಶದ ಕಾನೂನಿಗನುಗುಣವಾಗಿ ಜೀವನ ನಡೆಸುವಂತೆ ಮಾಡುತ್ತದೆ.
  • ದೇಶದ ಅತ್ಯನ್ನತ ಹುದ್ದೆಯಿಂದ ಹಿಡಿದು ಇನ್ನಿತರ ಹುದ್ದೆಗಳನ್ನು ಹೊಂದುವ ಅಧಿಕಾರವನ್ನು ಪೌರರು ಪಡೆಯುತ್ತಾರೆ.
  • ವಿದೇಶಿಯರಿಗೆ ರಾಜಕೀಯ ಹಕ್ಕನ್ನು ನಿರಾಕರಿಸುತ್ತದೆ.

ಪೌರತ್ವ ಪಡೆಯುವ ವಿಧಾನ

ಪ್ರಜೆಗಳು ಒಂದು ದೇಶದ ಪೌರತ್ವವನ್ನು ಈ ಕೆಳಕಂಡ ವಿಧಾನದ ಮೂಲಕ ಪಡೆಯಬಹುದು.

ಜನನದ ಮೂಲಕ :

ಯಾವುದೇ ವ್ಯಕ್ತಿ ತಾನು ಯಾವ ದೇಶದಲ್ಲಿ ಜನಿಸುತ್ತಾನೋ ಅಥವಾ ಜನಿಸುತ್ತಾಳೋ ಅವರು ತಾನು ಜನಿಸಿದ ದೇಶದ ಪೌರತ್ವವನ್ನು ಪಡೆಯುತ್ತಾರೆ. ಅಂತಹವರಿಗೆ ತಂದೆ ತಯಿ ಯಾವ ರಾಷ್ಟ್ರದವರೆಂದು ಪರಿಗಣಿಸದೆ ಪೌರತ್ವ ನೀಡಲಾಗುತ್ತದೆ. ಹಾಗಾಗಿ ಒಂದು ದೇಶದ ಪೌರತ್ವ ಪಡೆಯಲು ಜನನವು ಮುಖ್ಯ ಆಧಾರವಾಗಿದೆ. ೧೯೫೦ ಜನವರಿ ೨೬ಕ್ಕಿಂತಲೂ ಮುಂಚೆ ಮತ್ತು ನಂತರ ಭಾರತದ ಭೂ ಪ್ರದೇಶದಲ್ಲಿ ಜನಿಸಿದ ಪ್ರತಿ ಮಗುವಿಗೆ ಜನನದ ಆಧಾರದ ಮೇಲೆ ನಾಗರಿಕತ್ವವನ್ನು ನೀಡಲಾಗುತ್ತದೆ. ವೈರಿ ರಾಷ್ಟ್ರದವರು ಭಾರತದ ಭೂಪ್ರದೇಶವನ್ನು ವಶಪಡಿಸಿಕೊಂಡಾಗ ಆ ಪ್ರದೇಶದಲ್ಲಿ ಅವರಿಗೆ ಮಗು ಜನಿಸಿದಾಗ ಆ ಮಗುವಿನ ಜನನದ ಆಧಾರದ ಮೇಲೆ ನಾಗರಿಕತ್ವ ನೀಡಲಾಗುವುದಿಲ್ಲ.

ವಂಶದ ಮೂಲಕ :

೧೯೫೦ ಜನವರಿ ೨೬ ನಂತರ ವಿದೇಶದಲ್ಲಿ ಜನಿಸಿದಂತೆ ಮಗು ಭಾರತದ ನಾಗರಿಕತ್ವ ಪಡೆಯಬಹುದಾಗಿದೆ. ಅಂದರೆ ಅದರ ತಂದೆ ಅಥವಾ ತಾಯಿ ಭಾರತೀಯ ಮೂಲದವರಾಗಿದ್ದರೆ ರಕ್ತ ಸಂಬಂಧದ ಮೂಲಕ ಅಥವಾ ವಂಶದ ಮೂಲಕ ಭಾರತದ ನಾಗರಿಕತ್ವ ಪಡೆಯುವನು. ೧೯೫೦ ರಿಂದ ೧೯೯೨ ರ ವರೆಗೆ ತಂದೆ ಭಾರತೀಯನಾಗಿದ್ದರೆ ಮಾತ್ರ ಅವಕಾಶವಿತ್ತು. ೧೯೯೨ ರ ನಂತರ ತಂದೆ ಅಥವಾ ತಾಯಿ ಇಬ್ಬರಲ್ಲಿ ಯಾರಾದರೊಬ್ಬರು ಭಾರತೀಯರಾಗಿದ್ದರೂ ಸಹ ಭಾರತದ ನಾಗರಿಕತ್ವದ ಪಡೆಯಬಹುದು. ೨೦೦೪ ರ ನಂತರ ಮಗು ಜನಿಸಿದ ಒಂದು ವರ್ಷದ ಒಳಗಾಗಿ ಆ ದೇಶದ ರಾಯಭಾರಿ ಕಛೇರಿಯಲ್ಲಿ ನೋಂದಣಿ ಮಾಡಿಸತಕ್ಕದ್ದು.

ಸಹಜೀಕೃತದ ಮೂಲಕ :

ಭಾರತೀಯ ನಾಗರಿಕನಲ್ಲದ ವ್ಯಕ್ತಿ ಅಂದರೆ ವದೇಶಿಯ ವ್ಯಕ್ತಿ ಭಾರತದ ನಾಗರಿಕತ್ವ ಬೇಕೆಂದು ಬಯಸಿದಾಗ ಕೆಲವು ಷರತ್ತುಗಳಿಗೆ ಒಳಪಟ್ಟು ಭಾರತೀಯ ನಾಗರಿಕತ್ವ ನೀಡನೀಡಬಹುದಾಗಿದೆ. ಷರತ್ತುಗಳೆಂದರೆ ಭಾರತದ ಪ್ರಜೆಗೆ ಯಾವ ದೇಶದ ಪ್ರಜೆಗೆ ಯಾವ ದೇಶದ ಪ್ರಜೆಯಾಗಲು ಅವಕಾಶವಿಲ್ಲವೋ ಆ ದೇಶದಿಂದ ಬಂದಿರುವನಾಗಿರಾರದು. ಸಂವಿಧಾನದ ೮ ನೇ ಅನುಸೂಚಿಯಲ್ಲಿರುವ ೨೨ ಭಾಷೆಗಳಲ್ಲಿ ಯಾವುದಾದರೊಂದು ಭಾಷೆಯ ಬಗ್ಗೆ ಗೊತ್ತರಬೇಕು. ಭಾರತದ ನಾಗರಿಕತ್ವಬೇಕೆಂದು ಬಯಸಿರುವ ವ್ಯಕ್ತಿ ಭಾರತಕ್ಕೆ ಬಂದು ೭ ವರ್ಷಗಳಾಗಿರಬೇಕು. ಅದರಲ್ಲಿ ಕಡ್ಡಾಯವಾಗಿ ೪ ವರ್ಷಗಳ ಕಾಲ ಭಾರತದ ಭೂಪ್ರದೇಶದಲ್ಲಿಯೇ ವಾಸವಾಗಿರಬೇಕು. ನಂತರ ಅರ್ಜಿ ಸಲ್ಲಿಸಲು ಅರ್ಹರಾಗುತ್ತಾರೆ.

ನೋಂದಣಿ ಮೂಲದ ನಾಗರಿಕತ್ವ :

ಭಾರತದ ಪುರುಷ ವಿದೇಶಿ ಮಹಿಳೆಯನ್ನು ವಿವಾಹವಾದಾಗ ಅಥವಾ ವಿದೇಶಿ ಪುರುಷ ಭಾರತದ ಮಹಿಳೆಯೊಂದಿಗೆ ವಿವಾಹವಾದಾಗ ಆ ವಿದೇಶಿಯರು ಭಾರತಕ್ಕೆ ಬರಲು ಬಯಸಿದರೆ ವಿವಾಹದ ನೋದಣಿ ಆಧಾರದ ಮೇಲೆ ಭಾರತದ ನಾಗರಿಕತ್ವ ಪಡೆಯಬಹುದಾಗಿದೆ. ೧೯೮೬ ರ ತಿದ್ದುಪಡಿ ಕಾಯ್ದೆ ಮಾಡಿ ನೋದಣಿ ಮೂಲಕ ಪಡೆಯುವ ನಾಗರಿಕತ್ವಕ್ಕೆ ೬ ತಿಂಗಳು ಇದ್ದ ಅವಧಿಯನ್ನು ೫ ವರ್ಷಕ್ಕೆ ಹೆಚ್ಚಿಸಲಾಗಿದೆ.

ಭೂ ಪ್ರದೇಶದ ಸೇರ್ಪಡೆಯಿಂದ :

ವಿದೇಶಕ್ಕೆ ಸೇರಿದ ಯಾವುದೇ ಒಂದು ಭೂಪ್ರದೇಶ ಭಾರತಕ್ಕೆ ಸೇರ್ಪಡೆಯಾದರೆ ಅಲ್ಲಿ ನೆಲೆಸಿರುವನಾಗರಿಕರಿಗೆ ಭಾರತದ ನಾಗರಿಕತ್ವವನ್ನು ನೀಡಬಹುದು.

ನಾಗರಿಕತ್ವವನ್ನು ಕಳೆದುಕೊಳ್ಳುವ ವಿಧಾನಗಳು

ತ್ಯಜಿಸುವ ಮೂಲಕ :

ಭಾರತೀಯ ನಾಗರಿಕನು ಸಂಬಂಧಪಟ್ಟ ಪ್ರಾಧಿಕಾರದ ಎದುರು ನಿಗಧಿಪಡಿಸಿದ ಘೋಷಣೆಯ ಮೂಲಕ ತ್ಯಜಿಸಬಹುದಾಗಿದೆ. ಅವನ ಮಕ್ಕಳು ಅಪ್ರಾಪ್ತರಾಗಿದ್ದರೆ ವಯಸ್ಕರಾದ ನಂತರ ಭಾರತದ ನಾಗರಿಕತ್ವ ಬೇಕೆಂದು ಬಯಸಿದರೆ ಭಾರತದ ನಾಗರಿಕತ್ವವನ್ನು ಒಂದು ವರ್ಷದ ಒಳಗಾಗಿ ಪಡೆಯಬಹುದಾಗಿದೆ.

ರದ್ದು ಮಾಡುವ ವಿಧಾನ :

ಭಾರತದ ನಾಗರಿಕನು ಸ್ವ – ಇಚ್ಚೆಯಿಂದ ವಿದೇಶದ ನಾಗರಿಕತ್ವ ಪಡೆದಾಗ ಭಾರತದ ನಾಗರಿಕತ್ವವು ತಾನಾಗಿಯೇ ರದ್ದಾಗುತ್ತದೆ.

ಕಸಿದುಕೊಳ್ಳುವ ಮೂಲಕ :

ಯಾವುದೇ ಮಾಹಿತಿ ನೀಡದೆ ವಿದೇಶದಲ್ಲಿ ೭ ವರ್ಷಗಳ ಕಾಲ ವಾಸವಾಗಿದ್ದರೆ ಭಾರತದ ಸಂವಿಧಾನಕ್ಕೆ ಗೌರವ ತೋರದೆ ಇದ್ದರೆ ನಾಗರಿಕತ್ವವನ್ನು ಕಸಿದುಕೊಳ್ಳಲಾಗುವುದು. ನೋಂದಣಿ ಮೂಲಕ ಅಥವಾ ಸಹಜೀಕೃತದ ಮೂಲಕ ಪಡೆದ ನಾಗರಿಕತ್ವದ ನಂತರ ಆ ವ್ಯಕ್ತಿ ೫ ವರ್ಷಗಳಲ್ಲಿ ೨ ವರ್ಷ ಜೈಲುವಾಸ ಅನುಭವಿಸಿದ್ದರೆ ಕಸಿದುಕೊಳ್ಳಲಾಗುವುದು.

FAQ

ಪೌರತ್ವವನ್ನು ಯಾವ ದೇಶದಿಂದ ಎರವಲಾಗಿ ಪಡೆಯಲಾಗಿದೆ ?

ಬ್ರಿಟನ್

ಪೌರತ್ವದ ಬಗ್ಗೆ ಯಾವ ವಿದಿಯು ತಿಳಿಸುತ್ತದೆ ?

೫ ನೇ ವಿಧಿಯಿಂದ ೧೧ ನೇ ವಿಧಿಯವರೆಗೂ ಪೌರತ್ವದ ಬಗ್ಗೆ ತಿಳಿಸುತ್ತದೆ.

ಇತರೆ ವಿಷಯಗಳು :

ಕರ್ನಾಟಕದ ಸಮಾಜಮುಖಿ ಚಳುವಳಿಗಳ ಬಗ್ಗೆ ಮಾಹಿತಿ

ಸಚಿವಾಲಯದ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here