ರಕ್ತ ಮತ್ತು ರಕ್ತದ ಗುಂಪುಗಳ ಬಗ್ಗೆ ಮಾಹಿತಿ | Information About Blood And Blood Groups in Kannada

0
517
ರಕ್ತ ಮತ್ತು ರಕ್ತದ ಗುಂಪುಗಳ ಬಗ್ಗೆ ಮಾಹಿತಿ | Information About Blood And Blood Groups in Kannada
ರಕ್ತ ಮತ್ತು ರಕ್ತದ ಗುಂಪುಗಳ ಬಗ್ಗೆ ಮಾಹಿತಿ | Information About Blood And Blood Groups in Kannada

ರಕ್ತ ಮತ್ತು ರಕ್ತದ ಗುಂಪುಗಳ ಬಗ್ಗೆ ಮಾಹಿತಿ Information About Blood And Blood Groups Rakta Mattu Raktada Bagge Mahiti in Kannada


Contents

ರಕ್ತ ಮತ್ತು ರಕ್ತದ ಗುಂಪುಗಳ ಬಗ್ಗೆ ಮಾಹಿತಿ

Information About Blood And Blood Groups in Kannada
Information About Blood And Blood Groups in Kannada

ಈ ಲೇಖನಿಯಲ್ಲಿ ರಕ್ತ ಮತ್ತು ರಕ್ತದ ಗುಂಪುಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ರಕ್ತ / BLOOD

ಮಾನವನ ರಕ್ತವು ಪ್ರತ್ಯಾಮ್ಲಿಯ ಗುಣವನ್ನು ಹೊಂದಿದೆ. ಕೆಂಪು ರಕ್ತ ಕಣಗಳು ಕಣದಂಗಗನ್ನು ಒಳಗೊಂಡಿರುವುದಿಲ್ಲ. ಅರೋಗ್ಯವಂತ ಮಾನವನಲ್ಲಿ ೪.೫ ರಿಂದ ೫.೬ ಲೀಟರ್‌ ಇರುತ್ತದೆ. ರಕ್ತ ಹೆಪ್ಪೆಗಟ್ಟಲು ೨ ನಿಮಿಷ ಅವಧಿ ಬೇಕು. ರಕ್ತವು ಒಂದು ದ್ರವಸಂಯೋಜಕ ಅಂಗಾಂಶ ಹಾಗೂ ರಕ್ತದ PH ಮೌಲ್ಯ ೭.೪ ರಕ್ತ ರೋಗಗಳು ಮತ್ತು ಚಿಕಿತ್ಸೆಯ ಅಧ್ಯಯನ ಹೆಮಟಾಲಾಜಿ. ರಕ್ತದ ವೈಜ್ಞಾನಿಕ ಅಧ್ಯಯನ ಸಿರಾಲಾಜಿ. ರಕ್ತ ಹೆಪ್ಪು ಗಟ್ಟಲು ಸಹಾಯಕವಾದ ಖನಿಜ ಕ್ಯಾಲ್ಸಿಯಂ. ರಕ್ತ ಹೆಪ್ಪು ಗಟ್ಟು ಸಹಾಯಕವಾದ ರಕ್ತದ ಕಣಗಳು ಕಿರುತಟ್ಟೆ / ಪ್ಲೇಟ್‌ ಲೆಟ್ಸ್ ಗಳು. ರಕ್ತ ಹೆಪ್ಪಗಟ್ಟಲು ಸಹಾಯಕವಾದ ಪ್ರೋಟೀನ್‌ ಪೈಬ್ರಿನೋಜನ್‌. ರಕ್ತ ಹೆಪ್ಪುಗಟ್ಟಲು ಸಹಾಯಕವಾದ ವಿಟಾಮಿನ್‌ K ಆಗಿದೆ. ರಕ್ತವು ಪ್ಲಾಸ್ಮಾ ಕೆಂಪು ರಕ್ತಕಣಗಳು, ಬಿಳಿ ರಕ್ತಕಣಗಳು ಮತ್ತು ಕಿರುತಟ್ಟೆಗಳನ್ನು ಒಳಗೊಂಡಿದೆ.

ರಕ್ತದ ಕಣಗಳು

ಕೆಂಪು ರಕ್ತ ಕಣಗಳು :

ಇವುಗಳನ್ನು ಎರಿಥ್ರೋಸೈಟ್‌ ಗಳೆಂದು ಕರೆಯುತ್ತಾರೆ. ಇವುಗಳಲ್ಲಿ ಕಬ್ಬಿಣದ ಅಂಶವನ್ನು ಹೊಂದಿರುವ ಹಿಮೋಗ್ಲೋಬಿನ್‌ ಇರುತ್ತದೆ. ಇವುಗಳನ್ನು ಭ್ರೂಣದಲ್ಲಿ ಲೀವರ್‌ ಮತ್ತು ಗುಲ್ಮದಲ್ಲಿ ಉತ್ಪತ್ತಿಯಾಗುತ್ತದೆ. ಈ ಕಣಗಳು ಆಮ್ಲಜನಕವನ್ನು ಜೀವಕೋಶಗಳಿಗೆ ಸರಬರಾಜು ಮಾಡುತ್ತದೆ. ಈ ಕಣಗಳು ಆಮ್ಲಜನಕವನ್ನು ಒಂದು ಸೆಕೆಂಡಿಗೆ ೧.೨ ಮಿಲಿಯನ್‌ಗಳ ವೇಗದಲ್ಲಿ ಉತ್ಪತ್ತಿಯಾಗುತ್ತದೆ. ಈ ಕಣಗಳ ಜೀವಿತಾವಧಿ ೧೨೦ ದಿನಗಳಾಗಿದೆ. ಕೆಂಪು ರಕ್ತಕಣಗಳ ಸಂಖ್ಯೆ ಕಡಿಮೆಯಾದರೆ ಅನಿಮಿಯಾ ಮತ್ತು ಹೆಚ್ಚಾದರೆ ಪಾಲಿ ಸೈಥಾಮೀಯಾ ಎಂಬ ಕಾಯಿಲೆ ಉಂಟಾಗುತ್ತದೆ. ರಕ್ತ ಹೀನತೆ ಅಥವಾ ಅನಿಮೀಯಾ ರೋಗ ಬಿ – ೧೨ ಜೀವಸತ್ವದ ಕೊರೆಯಿಂದ ಕಂಡುಬರುತ್ತದೆ.

ಬಿಳಿ ರಕ್ತಕಣಗಣಗಳು :

ಇವು ನ್ಯೂಕ್ಲಿಯಸ್ ನ್ನು ಹೊಂದಿರುತ್ತದೆ. ಇವುಗಳನ್ನು ಲುಕೋಸೈಟ್ಸಗಳೆಂದು ಕರೆಯುತ್ತಾರೆ. ಈ ಕಣಗಳ ಜೀವಿತಾವಧಿಯು ೧೨ ಗಂಟೆಯಿಂದ ಕೆಲವು ವಾರಗಳವರೆಗೆ ಇದರ ಅವಧಿಯಾಗಿದೆ. ಇವು ಅಸ್ತಿಮಜ್ಜೆ ಮತ್ತು ಪ್ಲೀಹ / ಗುಲ್ಮದಲ್ಲಿ ಉತ್ಪತ್ತಿಯಾಗುತ್ತದೆ. ಇವು ಮಾನವನ ದೇಹವನ್ನು ಪ್ರವೇಶಿಸಿರುವ ಸೂಕ್ಷ್ಮಾಣು ಜೀವಿಗಳನ್ನು ನಾಶಪಡಿಸುತ್ತವೆ. ಇವುಗಳನ್ನು ದೇಹದ ಸೈನಿಕರೆಂದು ಕರೆಯುತ್ತಾರೆ. ಇವು ಪ್ರತಿಕಾಯಗಳನ್ನು ಉತ್ಪತ್ತಿ ಮಾಡಿ ರೋಗಾಣುಗಳನ್ನು ನಾಶಮಾಡುತ್ತವೆ.

ಪ್ಲೇಟ್‌ ಲೆಟ್ಸ್‌ ಗಳು / ಕಿರುತಟ್ಟೆಗಳು :

ಇವುಗಳನ್ನು ಥ್ರೋಂಬೋ ಸೈಟ್‌ ಎಂದು ಕರೆಯುತ್ತಾರೆ. ಇವು ಅಸ್ತಿಮಜ್ಜೆಯಲ್ಲಿ ಉತ್ಪತ್ತಿಯಾಗುತ್ತದೆ. ಇವುಗಳ ಜೀವಿತಾವಧಿ ೭ ರಿಂದ ೯ ದಿನಗಳಾಗಿವೆ. ಇವುಗಳ ಸಂಖ್ಯೆ ೨,೫೦,೦೦೦ ಕ್ಯುಬಿಕ್‌ ಮಿಲಿ ಮೀಟರ್‌ ಇವು ರಕ್ತ ಹೆಪ್ಪುಗಟ್ಟಿಸುವಿಕೆಯಲ್ಲಿ ಪಾಲ್ಗೋಳ್ಳುತ್ತವೆ. ಇವು ನ್ಯೂಕ್ಲಿಯಸ್‌ ನ್ನು ಹೊಂದಿರುವುದಿಲ್ಲ. ರಕ್ತ ಹೆಪ್ಪುಗಟ್ಟದೇ ಇರುವ ಸ್ಥಿತಿಯನ್ನು ಹಿಮೋಫಿಲಿಯಾ / ರಾಯಲ್‌ ಕಾಯಿಲೆ ಎನ್ನುವರು.

ರಕ್ತದ ಗುಂಪುಗಳು

AB ರಕ್ತದ ಗುಂಪನ್ನು ಸಾರ್ವತ್ರಿಕ ಸ್ವೀಕಾರಿ ಎನ್ನುವರು.

O ರಕ್ತದ ಗುಂಪನ್ನು ಸಾರ್ವತ್ರಿಕ ದಾನಿ ಎನ್ನುವರು.

ಭಾರತೀಯರಲ್ಲಿ ಅತಿ ಹೆಚ್ಚಿನ ರಕ್ತದ ಗುಂಪು B ಕಂಡುಬರುತ್ತದೆ.

Rh ಅಂಶಕ್ಕೆ ಸಂಬಂಧಿಸಿದಂತೆ ರೋಗದ ಹೆಸರು ಎರಿಥ್ರೋ – ಬ್ಲಾಸ್ಟೋ – ಪಿಟಾಲಿಸ್

FAQ

ಆರೋಗ್ಯವಂತ ಮಾನವನಲ್ಲಿ ರಕ್ತವು ಎಷ್ಟು ಲೀಟರ್‌ ಇರಬೇಕು ?

೪.೫ ರಿಂದ ೫.೬ ಲೀಟರ್‌ ರಕ್ತವು ಇರಬೇಕು.

ರಕ್ತದ PH ಮೌಲ್ಯ ಎಷ್ಟಿರುತ್ತದೆ ?

೭.೪

ಇತರೆ ವಿಷಯಗಳು :

ಪ್ರಮುಖ ವ್ಯಕ್ತಿಗಳ ಬಿರುದುಗಳ ಬಗ್ಗೆ ಮಾಹಿತಿ

ಪ್ರಮುಖ ಪ್ರಾಚೀನ ದೇವಾಲಯಗಳ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here