ವ್ಯವಹಾರ ನಿರ್ವಹಣೆ ಬಗ್ಗೆ ಮಾಹಿತಿ | Information About Business Management in Kannada

0
657
ವ್ಯವಹಾರ ನಿರ್ವಹಣೆ ಬಗ್ಗೆ ಮಾಹಿತಿ | Information About Business Management in Kannada
ವ್ಯವಹಾರ ನಿರ್ವಹಣೆ ಬಗ್ಗೆ ಮಾಹಿತಿ | Information About Business Management in Kannada

ವ್ಯವಹಾರ ನಿರ್ವಹಣೆ ಬಗ್ಗೆ ಮಾಹಿತಿ Information About Business Management vyavahara nirvahane bagge mahiti in kannada


Contents

ವ್ಯವಹಾರ ನಿರ್ವಹಣೆ ಬಗ್ಗೆ ಮಾಹಿತಿ

Information About Business Management in Kannada
Information About Business Management in Kannada

ಈ ಲೇಖನಿಯಲ್ಲಿ ವ್ಯವಹಾರ ನಿರ್ವಹಣೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನಿಮಗೆ ಅನುಕೂಲವಾಗುವಂತೆ ತಿಳಿಸಿದ್ದೇವೆ.

ನಿರ್ವಹಣೆಯ ಅರ್ಥ

ʼನಿರ್ವಹಣೆʼ ಎಂಬ ಪದದ ಅರ್ಥವನ್ನು ಬೇರೆ-ಬೇರೆ ರೀತಿಗಳಲ್ಲಿ ಬಳಸಲಾಗುತ್ತಿದೆ. ಸಾಮಾನ್ಯವಾಗಿ ನಿರ್ವಹಣೆಯೆಂಬ ಪದವನ್ನು ಒಂದು ಸಂಸ್ಥೆಯ ಚಟುವಟಿಕೆಗಳನ್ನು ನಿರ್ವಹಿಸುವ ಒಂದು ಪ್ರಕ್ರಿಯೆ ಎಂಬ ಅರ್ಥದಲ್ಲಿ ಬಳಸಲಾಗುತ್ತದೆ. ನಿರ್ವಹಣೆ ಎಂಬ ಶಬ್ದವನ್ನು ಒಂದು ಅಧ್ಯಯನ ಕ್ಷೇತ್ರ ಅಥವ ಜ್ಞಾನದ ಶಾಖೆ ಎಂಬ ಅರ್ಥದಲ್ಲಿಯೂ ಬಳಸಲಾಗುತ್ತಿದೆ.

ನಿರ್ವಹಣೆಯ ತತ್ವಗಳು

ಒಂದು ವ್ಯವಹಾರ ಸಂಸ್ಥೆಯು ಸುಗಮವಾಗಿ ಹಾಗೂ ದಕ್ಷ ರೀತಿಯಲ್ಲಿ ನಿರ್ವಹಿಸಬೇಕಾದರೆ ಕೆಲವು ತತ್ವಗಳನ್ನು ಅಳವಡಿಸಿಕೊಳ್ಳುವುದು ಅತಿಮುಖ್ಯ.

ಕಾರ್ಯವಿಭಜನೆ:

ನೌಕರರ ಅಥವಾ ಕೆಲಸಗಾರರ ನಡುವೆ ಅವರು ಮಾಡಬೇಕಾದ ಕಾರ್ಯಗಳನ್ನು ಕ್ರಮ ಬದ್ಧವಾಗಿ ವಿಭಜಿಸಬೇಕು. ಇದರಿಂದಾಗಿ ಉತ್ಪಾದನೆ ಹೆಚ್ಚುತ್ತದೆ ಹಾಗೂ ಹೆಚ್ಚು ಲಾಭಗಳಿಸಲು ಸಾಧ್ಯವಾಗುತ್ತದೆ. ಉತ್ಪಾದನೆಯಲ್ಲಿ ಉಂಟಾಗುವ ನಷ್ಟವೂ ಕಡಿಮೆಯಾಗುತ್ತದೆ. ಈ ತತ್ವವನ್ನು ಸಂಸ್ಥೆಯ ಎಲ್ಲಾ ವಿಭಾಗಗಳಲ್ಲೂ ಅಳವಡಿಸಿಕೊಳ್ಳಬಹುದು.

ಅಧಿಕಾರ ಮತ್ತು ಜವಾಬ್ದಾರಿ:

ಈ ತತ್ವವು ಅಧಿಕಾರ ಮತ್ತು ಜವಾಬ್ದಾರಿಗೆ ಸಂಬಂಧಪಟ್ಟಿದ್ದಾಗಿದೆ. ಈ ಎರಡೂ ಅಂಶಗಳು ಆಡಳಿತಗಾರನ ಅಧಿಕಾರ ಮತ್ತು ನೌಕರರೊಂದಿಗಿನ ಜವಾಬ್ದಾರಿಯನ್ನು ತೋರಿಸುತ್ತವೆ. ಈ ಅಂಶಗಳು ಆಡಳಿತಗಾರರ ಬುದ್ಧವಂತಿಕೆ, ಈಗಿನ ಅನುಭವ, ಹಿಂದಿನ ಅನುಭವ, ನೈತಿಕ ಗುಣ ಮುಂತಾದುವುಗಳ ಸಮ್ಮಿಲನವಾಗಿರುತ್ತದೆ.

ಶಿಸ್ತು:

ಈ ತತ್ವವು ಅಧಿಕಾರಿಗಳ ಮತ್ತು ನೌಕರರ ಮಧ್ಯೆ ಕಾರ್ಯಪ್ರವರ್ತಕ ಗುಣಗಳನ್ನು ಎಲ್ಲಾ ಹಂತಗಳಲ್ಲೂ ಇರುವುದನ್ನು ಬಿಂಬಿಸುತ್ತದೆ. ಈ ಗುಣಗಳು ಸಂಘಟನೆಯ ಸಾಧನೆಗಳನ್ನು ಪೂರೈಸುತ್ತದೆ. ಹಿರಿಯ ಅಧಿಕಾರಿಗಳಲ್ಲಿ ಶಿಸ್ತು, ಮತ್ತು ಸ್ಪಷ್ಟತೆ ನಿಷ್ಪಕ್ಷಪಾತವಾಗಿರಬೇಕು. ಇದು ನ್ಯಾಯಬದ್ಧವಾದ ದಂಡ ವಿಧಿಸುವುದರಲ್ಲೂ ಇರಬೇಕು.

ಏಕರೂಪದ ಆಜ್ಞೆ:

ಈ ತತ್ವದ ಪ್ರಕಾರ ಕೆಲಸಗಾರರು ಯಾರಾದರೂ ಒಬ್ಬ ಹಿರಿಯ ಅಧಿಕಾರಿಯ ಆಜ್ಞೆಯನ್ನು ಪಾಲಿಸಲು ಸೂಚಿಸುತ್ತದೆ.

ಏಕರೂಪದ ಆದೇಶ:

ಈ ತತ್ವವು ಒಂದೇ ಉದ್ದೇಶದಿಂದ ಕೂಡಿರುವ ಗುಂಪು ಚಟುವಟಿಕೆಗಳಿಗೆ ಒಂದೇ ಆದೇಶ ಕೊಡಲು ತಿಳಿಸುತ್ತದೆ.

ಏಕವ್ಯಕ್ತಿಹಿತಾಸಕ್ತಿ ಮತ್ತು ಸಾಮಾನ್ಯಹಿತಾಸಕ್ತಿಯ ಅಧೀನತೆ:

ಈ ತತ್ವವು ನಿರ್ವಹಣೆಯು ಏಕವ್ಯಕ್ತಿಯ ಹಿತಾಸಕ್ತಿಯ ಭಿನ್ನಾಭಿಪ್ರಾಯವು ಸಾಮಾನ್ಯ ಗುರಿಗಳನ್ನು ತಲುಪುವಲ್ಲಿ ಪ್ರತಿಬಂಧಕವಾಗಿರಬಾರದೆಂದು ತಿಳಿಸುತ್ತದೆ.

ಉದ್ಯೋಗಿಗಳ ವೇತನ:

ಉದ್ಯೋಗಿಗಳಿಗೆ ನೀಡುವ ವೇತನವು ಪ್ರಾಮಾಣಿಕತೆಯಿಂದ ಕೂಡಿದ್ದು ಎಲ್ಲಾ ನೌಕರರಿಗೂ ಸಮಾಧಾನ ತರುವಂತಿರಬೇಕೆಂದು ಈ ತತ್ವವು ತಿಳಿಸುತ್ತದೆ.

ಕೇಂದ್ರೀಕೃತ ನಿರ್ವಹಣೆ:

ಈ ತತ್ವದ ಪ್ರಕಾರ ಅಧಿಕಾರವು ಕೇಂದ್ರೀಕೃವಾಗಿದ್ದು ವ್ಯಾಪಾರ ಸಂಘಟನೆಗೆ ಉತ್ತಮ ಫಲ ದೊರಕುವಂತಿರಬೇಕು.

ಹಂತಸರಪಳಿ:

ಈ ತತ್ವದ ಪ್ರಕಾರ ಪ್ರತಿ ಸಂಘಟನೆಯಲ್ಲು ಅಧಿಕಾರ ವರ್ಗದ ಹಂತಗಳಿರಬೇಕು. ಅಧಿಕಾರದ ಶ್ರೇಣಿ, ಅಧಿಕಾರ ವರ್ಗದವರ ಮತ್ತು ಕೆಳಉದ್ಯೋಗಿಗಳ ಮಧ್ಯೆ ಸ್ಪಷ್ಟವಾಗಿ ನಿರ್ಧಾರವಾಗಿರಬೇಕು.

ಸಮಾನತೆ:

ಈ ತತ್ವದ ಪ್ರಕಾರ ಅಧಿಕಾರವರ್ಗದವರ ಮತ್ತು ಸಾಮಾನ್ಯ ಉದ್ಯೋಗಿಗಳ ನಡುವೆ ಸಮಭಾವ ಮತ್ತು ಹೊಂದಾಣಿಕೆ ಗುಣಗಳನ್ನು ಹೊಂದಿರಬೇಕು.

ನಿರ್ವಹಣೆಯ ಕ್ಷೇತ್ರವ್ಯಾಪ್ತಿ

ನಿರ್ವಹಣೆಯು ಇತರರ ಶ್ರಮದ ಮೂಲಕ ಕೆಲಸ ಮಾಡಿಸಿಕೊಳ್ಳುವ ಒಂದು ಪ್ರಕ್ರಿಯೆಯಾಗಿದೆ. ಬೇರೆಯವರ ಮೂಲಕ ಕೆಲಸ ಮಾಡಿಸಿಕೊಳ್ಳುವುದಕ್ಕಾಗಿ ನಿರ್ವಹಣೆಯ ಚಡುವಟಿಕೆಗಳನ್ನು ನಿರ್ವಹಿಸುವುದನ್ನು ಕಾರ್ಯಗಳ ಕ್ಷೇತ್ರ ವ್ಯಾಪ್ತಿ ಎನ್ನುತ್ತೇವೆ.

ಯೋಜನೆ:

ಇದು ನಿರ್ವಹಣೆಯ ಕಾರ್ಯಕ್ಷೇತ್ರದಲ್ಲಿ ಒಂದು ಮುಖ್ಯವಾದ ಕ್ಷೇತ್ರವಾಗಿದೆ. ಯೋಜನೆಯೆಂದರೆ ಒಂದು ನಿರ್ದಿಷ್ಟ ಅವಧಿಗೆ ಭವಿಷ್ಯದ ಕಾರ್ಯಾಚರಣೆಗಳನ್ನು ಒಂದೆಡೆ ಸೇರಿಸುವುದೇ ಆಗಿದೆ. ಯೋಜನೆಯ ಪ್ರಕ್ರಿಯೆಯು ಸಂಸ್ಥೆಯ ಗುರಿಗಳ ಸಾಧನೆಗಾಗಿ ಉದ್ದೇಶಗಳ ನಿರ್ಣಯ, ನೀತಿ, ಕಾರ್ಯತಂತ್ರಗಳು, ಕಾರ್ಯಕ್ರಮಗಳು, ಕಾರ್ಯಾನುಗತಿಗಳ ಮತ್ತು ಪರಿಶಿಷ್ಟಗಳ ನಿರೂಪಣೆಯನ್ನು ಒಳಗೊಂಡಿರುತ್ತದೆ.

ಸಂಘಟನೆ:

ಸಂಘಟನೆಯೆಂದರೆ ಮಾನವ ಶಕ್ತಿ ಮತ್ತು ಭೌತಿಕ ಸಂಪನ್ಮೂಲಗಳನ್ನು ಒಂದೆಡೆ ಸೇರಿಸುವುದೇ ಆಗಿದೆ. ಕೆಲವು ಯಂತ್ರಗಳು ಮತ್ತು ಯಂತ್ರೋಪಕರಣ ಸಂಪನ್ಮೂಲಗಳನ್ನು ಮಾನವ ಸಂಪನ್ಮೂಲದ ಜೋತೆ ಸೇರಿಸಿ, ಕಾರ್ಯಕ್ಕೆ ತೊಡಗಿಸಿ ಸಂಸ್ಥೆಯ ಉದ್ದೇಶಗಳನ್ನು ಈಡೇರಿಸಿಕೊಳ್ಳುವುದೇ ಸಂಘಟನೆಯ ಮುಖ್ಯ ಧ್ಯೇಯವಾಗಿರುತ್ತದೆ. ಈ ಅಂಶವು ಪ್ರತಿನಿಧಿಯನ್ನು ನೇಮಿಸಿ ಇಲಾಖಾ ಪ್ರತಿನಿಧಿಗಳಿಗೆ ಅಗತ್ಯವಾದ ಭೌತಿಕ ಸೌಲಭ್ಯಗಳನ್ನು ಒದಗಿಸಿ ಬೇರೆ-ಬೇರೆ ಹಂತಗಳ ಕೆಲಸಗಾರರಿಗೆ ಸಮನ್ವಯ ರೀತಿಯಲ್ಲಿ ಕೆಲಸ ಮಾಡಲು ಅನುವು ಮಾಡಿಕೊಡುವ ಉದ್ದೇಶವನ್ನು ಹೊಂದಿರುತ್ತದೆ.

ಸಿಬ್ಬಂದಿ ಪೂರೈಕೆ:

ಈ ಅಂಶವು ಸಂಘಟನೆಯು ಸರಿಯಾದ ರೀತಿಯಲ್ಲಿ ನಡೆದು ಹೋಗಲು ಬೇಕಾದ ನೌಕರ ವರ್ಗದ ನೇಮಕಾತಿ, ಆಯ್ಕೆ, ಸ್ಥಾನೀಕರಣ, ತರಬೇತಿ ಮತ್ತು ಅವರ ಪ್ರಗತಿಗಳನ್ನು ಹೊಂದಿರುತ್ತದೆ.

ನಿರ್ದೇಶನ:

ಈ ಅಂಶವು ಸಂಸ್ಥೆಯ ಗುರಿಗಳ ಸಾಧನೆಗಾಗಿ ಸಂಸ್ಥೆಯಲ್ಲಿ ಕೆಲಸಮಾಡುವ ಜನರಿಗೆ ಸೂಚನೆಗಳನ್ನು ಕೊಡುವ, ಮಾರ್ಗದರ್ಶನ ನೀಡುವ, ವಿಚಾರಣೆ ನಡೆಸುವ ಮತ್ತು ಮುಂದಾಳತ್ವವನ್ನು ಒದಗಿಸುವ ಕಾರ್ಯವಾಗಿರುತ್ತದೆ. ಕೆಳಗಿನ ಹಂತದಲ್ಲಿ ಕೆಲಸ ಮಾಡುವವರಿಗೆ ಸೂಚನೆ ಮತ್ತು ಆದೇಶಗಳನ್ನು ನೀಡುವ ಮತ್ತು ಆ ಆದೇಶಗಳು ಕಾರ್ಯಾಚರಣೆಗೊಂಡಿವೆಯೇ ಎಂಬ ಕೆಲಸಗಳನ್ನು ಪ್ರಕ್ರಿಯೆಗೊಳಿಸುತ್ತದೆ.

ಸಂಯೋಜನೆ:

ಈ ಅಂಶವು ಅಪೇಕ್ಷಿತ ಗುರಿಗಳ ಸಾಧನೆಗಾಗಿ ವಿವಿಧ ಇಲಾಖೆಗಳ ತಜ್ಞರ ಸುಲಲಿತವಾದ ಮಿಶ್ರಣ ಅಥವಾ ಒಟ್ಟುಗೂಢಿಸುವಿಕೆಯಾಗಿರುತ್ತದೆ. ಕಾರ್ಯಾಚರಣೆಗಳ ಐಕ್ಯತೆಯನ್ನು ಕ್ರಮಬದ್ಧವಾಗಿ ವ್ಯವಸ್ಥೆಗೊಳಿಸುವ ಕಾರ್ಯವನ್ನು ಹೊಂದಿರುತ್ತದೆ.

ನಿಯಂತ್ರಣ:

ಈ ಅಂಶವು ಸಂಘಟನೆಯ ಮುಖ್ಯವಾದ ಕಾರ್ಯಗಳಿಗೆ ಸಂಬಂಧಪಟ್ಟ ಅಂಶವಾಗಿದೆ. ಇದು ವ್ಯವಹಾರ ನಿರ್ವಹಣೆಯ ಎಲ್ಲ ಚಟುವಟಿಕೆಗಳಲ್ಲೂ ವ್ಯಾಪಿಸಿರುತ್ತದೆ. ಸಂಸ್ಥೆಯ ಪ್ರತಿಯೊಬ್ಬ ಪ್ರಬಂಧಕರು ಅಥವಾ ಪ್ರತಿನಿಧಿಗಳು ಇಲ್ಲಿ ಕಾರ್ಯಮಗ್ನರಾಗಬೇಕಾಗುತ್ತದೆ.

FAQ

ಬೆಂಕಿರೋಗ ಬಹುಮುಖ್ಯವಾಗಿ ಯಾವ ಬೆಳೆಯಲ್ಲಿ ಕಾಣಿಸಿಕೊಳ್ಳುತ್ತದೆ?

ಭತ್ತ.

ಪೋಬೋಸ್ ಮತ್ತು ಡಿಮೋಸ್ ಯಾವ ಗ್ರಹದ ಉಪಗ್ರಹಗಳಾಗಿವೆ?

ಮಂಗಳ ಗ್ರಹ.

ಇತರೆ ವಿಷಯಗಳು :

ಸಾಮಾಜಿಕ ಜಾಲತಾಣಗಳ ಬಗ್ಗೆ ಪ್ರಬಂಧ

ಸಮಾನ ಶಿಕ್ಷಣದ ಅವಶ್ಯಕತೆ ಪ್ರಬಂಧ

LEAVE A REPLY

Please enter your comment!
Please enter your name here