ಸಂವಿಧಾನದ ಭಾಗ 9 ರಲ್ಲಿರುವ ವಿಷಯಗಳ ಬಗ್ಗೆ ಮಾಹಿತಿ | Information on Matters Contained in Part 9 of The Constitution in Kannada

0
374
ಸಂವಿಧಾನದ ಭಾಗ 9 ರಲ್ಲಿರುವ ವಿಷಯಗಳ ಬಗ್ಗೆ ಮಾಹಿತಿ | Information on Matters Contained in Part 9 of The Constitution in Kannada
ಸಂವಿಧಾನದ ಭಾಗ 9 ರಲ್ಲಿರುವ ವಿಷಯಗಳ ಬಗ್ಗೆ ಮಾಹಿತಿ | Information on Matters Contained in Part 9 of The Constitution in Kannada

ಸಂವಿಧಾನದ ಭಾಗ 9 ರಲ್ಲಿರುವ ವಿಷಯಗಳ ಬಗ್ಗೆ ಮಾಹಿತಿ Information on Matters Contained in Part 9 of The Constitution Samvidanada Baga ೯ ralliruva Vishayagala Bagge Mahiti in Kannada


Contents

ಸಂವಿಧಾನದ ಭಾಗ 9 ರಲ್ಲಿರುವ ವಿಷಯಗಳ ಬಗ್ಗೆ ಮಾಹಿತಿ

Information on Matters Contained in Part 9 of The Constitution in Kannada
Information on Matters Contained in Part 9 of The Constitution in Kannada

ಈ ಲೇಖನಿಯಲ್ಲಿ ಸಂವಿಧಾನದ ಭಾಗ 9 ರಲ್ಲಿರುವ ವಿಷಯಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ವಿಧಿಗಳುವಿಷಯ
243 – ವ್ಯಾಖ್ಯಾನಗಳು ಈ ವಿಧಿಯು ೯ನೇ ಭಾಗದಲ್ಲಿ ಬರುವ ಪ್ರಮುಖ ಪದಗಳನ್ನು ವ್ಯಾಖ್ಯಾನಿಸುತ್ತದೆ.
243 A – ಗ್ರಾಮಸಭೆಗ್ರಾಮ ಮಟ್ಟದಲ್ಲಿ ಶಾಸನಬದ್ದವಾಗಿ ಮತ್ತು ಕಾನೂನು ಬದ್ದವಾಗಿ ಕಾರ್ಯನಿರ್ವಹಿಸುವ ಒಂದು ಸಭೆಯೇ ಗ್ರಾಮಸಭೆ ( ಹಳ್ಳಿಯ ವಿಧಾನಸಭೆ )
243 B – ಪಂಚಾಯತಿಗಳ ರಚನೆಗ್ರಾಮ ಮಟ್ಟದಲ್ಲಿ – GP ಗ್ರಾಮ ಪಂಚಾಯತ್‌
ಮಧ್ಯಂತರ ಮಟ್ಟದಲ್ಲಿ – TP ತಾಲೂಕು ಪಂಚಾಯಿತಿ
ಜಿಲ್ಲಾ ಮಟ್ಟದಲ್ಲಿ – ZP
243 C – ಪಂಚಾಯತಿಗಳ ಅಂಗರಚನೆಪ್ರತಿ ಪಂಚಾಯಿತಿಯು ಚುನಾಯಿತ ಸದಸ್ಯರು ಹಾಗೂ ಸ್ಥಳೀಯ ಮತದಾರರಪಟ್ಟಿಯಲ್ಲಿ ಹೆಸರಿರುವ ಸಂಸದರು ಮತ್ತು ಶಾಸಕರಿಂದ ಕೂಡಿರಬೇಕು.
243 D – ಸ್ಥಾನಗಳ ಮೀಸಲಾತಿSC, ST, OBC ಮತ್ತು ಮಹಿಳೆಯರಿಗೆ ( ೩೩ % ) ಮೀಸಲಾತಿ ಕಲ್ಪಿಸಬೇಕು.
ಮಹಿಳೆಯರಿಗೆ ಪ್ರಸ್ತುತ ೫೦ % ರಷ್ಟು ಮೀಸಲಾತಿ ಕಲ್ಪಿಸಲಾಗುತ್ತಿದೆ. ( ೧೧೦ ನೇ ತಿದ್ದುಪಡಿಯನ್ವಯ )
ಅಧ್ಯಕ್ಷ ಹುದ್ದೆಯ ಮೀಸಲಾತಿಯನ್ನು ಆಯಾ ರಾಜ್ಯದ ಜನಸಂಖ್ಯೆಗೆ ಅನುಗುಣವಾಗಿ ಕಲ್ಪಿಸುವುದು.
243 E – ಪಂಚಾಯತಿಗಳ ಕಾಲಾವಧಿ೩ ಹಂತದ ಪಂಚಾಯತಿಗಳ ಅವಧಿ ಅದರ ಮೊದಲ ಸಭೆಯ ಪ್ರಾರಂಭವಾದ ದಿನಾಂಕದಿಂದ ೫ ವರ್ಷಗಳು ಇರುತ್ತವೆ.
243 F – ಸದಸ್ಯರ ಅನರ್ಹತೆರಾಜ್ಯ ವಿಧಾನ ಮಂಡಲ ಮಾಡಿದ ಯಾವುದೇ ಕಾನೂನಿನ್ವಯ ಅನರ್ಹಗೊಳಿಸಬಹುದು.
೨೧ ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಪಂಚಾಯತ್‌ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
243 G – ಪಂಚಾಯತಿಗಳ ಅಧಿಕಾರ ಮತ್ತು ಜವಬ್ದಾರಿಗಳುರಾಜ್ಯ ಸರಕಾರ ವಹಿಸಿದ ಕಾರ್ಯಗಳನ್ನು ನಿರ್ವಹಿಸುವುದು.
ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿ ಯೋಜನೆಗಳನ್ನು ರೂಡಿಸಿ ಅನುಷ್ಟಾನಗೊಳಿಸುವಿಕೆ.
೧೧ ನೇ ಅನುಸೂಚಿಯಲ್ಲಿ ೨೯ ವಿಷಯಗಳನ್ನು ನಿರ್ವಹಿಸುವುದು.
243 H – ತೆರಿಗೆ ಮತ್ತು ನಿಧಿ ಸಂಗ್ರಹಪಂಚಾಯತಿಗಳು ತೆರಿಗೆ ವಿಧಿಸುವ ಮತ್ತು ವಸೂಲಿ ಮಾಡುವ ಅಧಿಕಾರ ಹೊಂದಿದೆ.
ರಾಜ್ಯ ಸರಕಾರ ವಿಧಿಸಿದ ತೆರಿಗೆ ಶುಲ್ಕಗಳನ್ನು ಪಂಚಾಯತಿಗಳಿಗೆ ಹಸ್ತಾಂತರಿಸುವುದು.
ಪಂಚಾಯತಿಗಳ ಎಲ್ಲಾ ಆದಾಯ ಸಂದಾಯ ಮಾಡಲು ಒಂದು ನಿಧಿ ಸ್ಥಾಪಿಸುವುದು.
ರಾಜ್ಯದ ಸಂಚಿತ ನಿಧಿಯಿಂದ ಪಂಚಾಯತಿಗಳಿಗೆ ಧನಸಹಾಯ ಮಾಡಲು ಕಾನೂನು.
243 I – ಆರ್ಥಿಕ ಸ್ಥಿತಿಗಳನ್ನು ಸುಧಾರಿಸಲು ಹಣಕಾಸು ಆಯೋಗದ ರಚನೆ.೫ ವರ್ಷಗಳಿಗೊಮ್ಮೆ ರಾಜ್ಯಪಾಲರು ಹಣಕಾಸು ಆಯೋಗದ ರಚನೆ ಮಾಡುತ್ತಾರೆ.
ಪ್ರಸ್ತುತ ಕರ್ನಾಟಕದಲ್ಲಿ ೪ ನೇ ಹಣಕಾಸು ಆಯೋಗ ಜಾರಿಯಲ್ಲಿದೆ.
೧ ನೇ – ೧೯೯೫ – G ತಿಮ್ಮಯ್ಯ
೨ ನೇ – ೨೦೦೦ – K P ಸುರೇಂದ್ರನಾಥ್‌
೩ ನೇ – ೨೦೦೬ – A P ಕೊಡ್ಲಿ
೪ ನೇ – ೨೦೧೫ – C G ಚೆನ್ನಸ್ವಾಮಿ
243 J – ಪಂಚಾಯತಿಯ ಲೆಕ್ಕ ಪರಿಶೀಲನೆಪಂಚಾಯತಿಗಳ ಲೆಕ್ಕ ಪತ್ರಗಳ ನಿರ್ವಹಣೆ ಮತ್ತು ಪರಿಶೀಲನೆಗಾಗಿ ರಾಜ್ಯ ಶಾಸಕಾಂಗವು ಕಾನೂನನ್ನು ರೂಪಿಸಬಹುದು.
243 K – ಪಂಚಾಯತಿಯ ಚುನಾವಣೆಗಳುಪಂಚಾಯತಿಗಳ ಚುನಾವಣೆಗಳು ರಾಜ್ಯಪಾಲರಿಂದ ನೇಮಕಗೊಂಡ ಚುನಾವಣೆ ಆಯುಕ್ತರನ್ನು ಒಳಗೊಂಡ ರಾಜ್ಯ ಚುನಾಣಾ ಆಯೋಗದ ಮೂಲಕ ನಡೆಯುತ್ತದೆ. ಚುನಾವಣಾ ಆಯುಕ್ತರನ್ನು ಹೈಕೋರ್ಟ್‌ ನ್ಯಾಯಾಮೂರ್ತಿಗಳನ್ನು ಅಧಿಕಾರದಿಂದ ಕೆಳಗಿಸುವ ಮಾದರಿಯಲ್ಲಿ ತೆಗೆಯಬೇಕು.
243 L – ಒಕ್ಕೂಟ ರಾಜ್ಯ ಕ್ಷೇತ್ರಗಳಿಗೆ ಅನ್ವಯಕೆಲವು ರಾಜ್ಯಗಳು ತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ರಾಷ್ಟ್ರಪತಿಗಳು ಕೆಲವು ವಿನಾಯಿತಿ ನೀಡಿ ಪಂಚಾಯತಿ ವ್ಯವಸ್ಥೆಯನ್ನು ಜಾರಿಗೊಳಿಸಲು ಆದೇಶಿಸಬಹುದು.
ಕೆಲವು ಈಶಾನ್ಯ ರಾಜ್ಯಗಳಲ್ಲಿ ೨೦೧೦ ರ ಹಿಂದೆ ಪಂಚಾಯತಿ ಸಂಸ್ಥೆಗಳು ಜಾರಿಯಲ್ಲಿರಲಿಲ್ಲ.
೭೩ ನೇ ತಿದ್ದುಪಡಿ ಕಾಯ್ದೆ ಜಮ್ಮು ಕಾಶ್ಮೀರ ರಾಜ್ಯದಲ್ಲಿ ಜಾರಿಯಲಿಲ್ಲ.
243 M – ಕೆಲವು ಪ್ರದೇಶಗಳಿಗೆ ಈ ಕಾಯ್ದೆ ಅನ್ವಯವಾಗದಿರುವುದು.ಸಂವಿಧಾನದ ೨೪೪ ನೇ ವಿಧಿಯಲ್ಲಿ ಸೂಚಿಸಿರುವ ಅನುಸೂಚಿತ ಪ್ರದೇಶ ಮತ್ತು ಬುಡಕಟ್ಟು ಪ್ರದೇಶಗಳಿಗೆ ಈ ಕಾಯ್ದೆ ಅನ್ವಯವಾಗುವುದಿಲ್ಲ.
243 N – ಜಾರಿಯಲ್ಲಿರುವ ಕಾನೂನು ಪಂಚಾಯತಿಗಳ ಮುಂದುವರಕೆ.ಪಂಚಾಯತಿಗೆ ಸಂಬಂದಿಸಿದ ಎಲ್ಲಾ ರಾಜ್ಯದ ಕಾನೂನುಗಳು ಈ ಕಾಯ್ದೆಯು ಆರಂಭವಾಗಿ ಮುಗಿಯುವರೆಗೆ ಜಾರಿಯಲ್ಲಿರ ತಕಕದ್ದು.
ಅಸ್ತಿತ್ವದಲ್ಲಿರುವ ಪಂಚಾಯತಿಗಳು ಅವಧಿ ಮುಗಿಯುವವರೆಗೂ ಮುಂದುವರೆಯುವುದು.
243 O – ಚುನಾವಣ ವಿಷಯಗಳಲ್ಲಿ ನ್ಯಾಯಾಲಯಗಳ ಮಧ್ಯಪ್ರವೇಶ ನಿಷೇಧ.ಪಂಚಾಯತಿ ಚುನಾವಣಾ ಕ್ಷೇತ್ರಗಳ ಮೀಸಲಾತಿ ಹಂಚಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳ ಮಧ್ಯ ಪ್ರವೇಶ ಮಾಡುವಂತಿಲ್ಲ.
ಸಂವಿಧಾನದ ಭಾಗ 9 ರಲ್ಲಿರುವ ವಿಷಯಗಳ ಬಗ್ಗೆ ಮಾಹಿತಿ

FAQ

ಗ್ರಾಮಸಭೆಗಳ ಬಗ್ಗೆ ಎಷ್ಟನೆ ವಿಧಿಯು ತಿಳಿಸುತ್ತದೆ ?

೨೪೩ A

ಸ್ಥಾನಗಳ ಮೀಸಲಾತಿಯನ್ನು ಎಷ್ಟನೇ ವಿಧಿಯು ತಿಳಿಸುತ್ತದೆ ?

೨೪೩ D

ಇತರೆ ವಿಷಯಗಳು :

ಪ್ರಸಿದ್ದ ವ್ಯಕ್ತಿಗಳ ಜನ್ಮಸ್ಥಳಗಳ ಬಗ್ಗೆ ಮಾಹಿತಿ 

ದಕ್ಷಿಣ ಭಾರತದ ನದಿಗಳ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here