ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ ಬಗ್ಗೆ ಮಾಹಿತಿ | Information About Mineral and Energy Resources of India Kannada

0
504
ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ ಬಗ್ಗೆ ಮಾಹಿತಿ | Information About Mineral and Energy Resources of India Kannada
ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ ಬಗ್ಗೆ ಮಾಹಿತಿ | Information About Mineral and Energy Resources of India Kannada

ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ ಬಗ್ಗೆ ಮಾಹಿತಿ Information About Mineral and Energy Resources of India bharatada khanija mattu shakti sampanmulagala bagge mahiti in kannada


Contents

ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ ಬಗ್ಗೆ ಮಾಹಿತಿ

Information About Mineral and Energy Resources of India Kannada
Information About Mineral and Energy Resources of India Kannada

ಈ ಲೇಖನಿಯಲ್ಲಿ ಭಾರತದ ಖನಿಜ ಮತ್ತು ಶಕ್ತಿ ಸಂಪನ್ಮೂಲಗಳ ಬಗ್ಗೆ ಸಂಫರ್ಣವಾದ ಮಾಹಿತಿಯನ್ನು ನೀಡಿದ್ದೇವೆ.

ಖನಿಜಗಳ ಅರ್ಥ :

ಖನಿಜವು ಒಂದು ನೈಸರ್ಗಿಕ ಅಜೈವಿಕ ಮೂಲಧಾತುವಾಗಿದ್ದು ಅದು ನಿಗದಿತ ರಾಸಾಯನಿಕ ಸಂಯೋಜನೆ ಮತ್ತು ಭೌತಿಕ ಗುಣ ಧರ್ಮಗಳನ್ನು ಹೊಂದಿರುತ್ತದೆ. ಉದಾ: ಕಬ್ಬಿಣದ ಅದಿರು, ಮ್ಯಾಂಗನೀಸ್‌, ಬಾಕ್ಸೈಟ್‌ ಇತ್ಯಾದಿ. ಭೂಮಿಯಿಂದ ಖನಿಜಗಳನ್ನು ಹೊರತೆಗೆಯುವ ಕಾರ್ಯವನ್ನು ʼಗಣಿಗಾರಿಕೆʼ ಎನ್ನುವರು.

ಖನಿಜಗಳು ಪ್ರಕೃತಿಯ ಕೊಡುಗೆ, ದೇಶವೊಂದರ ಸಮೃದ್ಧಿಯಲ್ಲಿ ಇವುಗಳ ಪಾತ್ರ ಮಹತ್ವದ್ದು. ಅವು ಕೈಗಾರಿಕೆ, ನಿರ್ಮಾಣಕಾರ್ಯ, ಸಾರಿಗೆ ಮತ್ತು ಸಂಪರ್ಕಗಳ ಪ್ರಗತಿ, ವ್ಯಾಪಾರ ಮತ್ತು ವಾಣಿಜ್ಯೋದ್ಯಮಗಳ ಪ್ರಗತಿಗೆ ಹೆಚ್ಚು ಉಪಯುಕ್ತ. ಕೆಲವು ಖನಿಜಗಳಂತೂ ಆರ್ಥಿಕ ಮೌಲ್ಯಗಳನ್ನುಳ್ಳವು. ಉದಾ: ಚಿನ್ನ, ವಜ್ರ, ಇತ್ಯಾದಿ. ಭಾರತದ ವಿವಿಧ ಖನಿಜ ಸಂಪತ್ತುಗಳನ್ನು ಹೊಂದಿದೆ.

ಪ್ರಮುಖ ಖನಿಜಗಳು :

ಕಬ್ಬಿಣದ ಅದಿರು :

ಇದೊಂದು ಕಬ್ಬಿಣಾಂಶವುಳ್ಳ ಲೋಹ ಖನಿಜ, ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಯ ಅತಿ ಪ್ರಮುಖ ಕಚ್ಚಾ ವಸ್ತು. ಭಾರತದಲ್ಲಿ ಅಪಾರವಾದ ಕಬ್ಬಿಣ ಅದಿರು ನಿಕ್ಷೇಪವಿದೆ. ಅದು ಅನೇಕ ರಾಜ್ಯಗಳಲ್ಲಿ ಕಂಡುಬರುತ್ತದೆ. ಆದರೆ ಕೆಲವು ರಾಜ್ಯಗಳಲ್ಲಿ ಸಮೃದ್ಧವಾಗಿ ಹಂಚಿಕೆಯಾಗಿದೆ. ಉದಾ: ಒಡಿಶಾ, ಕರ್ನಾಟಕ, ಛತ್ತೀಸ್ ಗರ್.‌ ಜಾರ್ಖಂಡ್‌, ತೆಲಂಗಾಣ, ಮಧ್ಯಪ್ರದೇಶ, ಮಹಾರಾಷ್ಟ್ರ, ಮತ್ತು ರಾಜಸ್ತಾನ. ಇವು ಪ್ರಮುಖ ಕಬ್ಬಿಣದ ಅದಿರು ಉತ್ಪಾದಿಸುವ ರಾಜ್ಯಗಳೂ ಆಗಿದೆ.

ಒಡಿಶಾ ಭಾರತದಲ್ಲಿ ಅತ್ಯಧಿಕ ಕಬ್ಬಿಣ ಅದಿರು ಉತ್ಪಾದಿಸುವ ರಾಜ್ಯ. ಈ ರಾಜ್ಯದ ಕಬ್ಬಿಣದ ಅದಿರು ನಿಕ್ಷೇಪ ಹೆಚ್ಚಾಗಿ ಮಯೂರ್ಬಂಜ್‌, ಕಿಯೊಂಜಾರ್‌, ಸುಂದರ್‌ಗಡ್‌ ಮತ್ತು ಕಟಕ್‌ ಜಿಲ್ಲೆಗಳಲ್ಲಿ ದೊರೆಯುತ್ತದೆ. ಛತ್ತೀಸ್ ಗರ್‌ನ ಬಸ್ತಾರ್‌, ದುರ್ಗ್‌ ಮತ್ತು ಜಬಲ್ಪುರ, ಜಾರ್ಖಂಡ್‌ ನ ಸಿಂಗಭೂಮ್‌, ಪಲಮಾವು, ಧನ್ಭಾದ್‌ ಮತ್ತು ಹಜಾರಿಬಾಗ್‌, ಕರ್ನಾಟಕದ ಸಂಡೂರು, ಹೊಸಪೇಟೆ, ಕೆಮ್ಮಣ್ಣುಗುಂಡಿ ಮತ್ತು ಕುದುರೆಮುಖ ಭಾಗಗಳು ಇತರೆ ಪ್ರಮುಖ ಕಬ್ಬಿಣದ ಅದಿರು ನಿಕ್ಷೇಪವುಳ್ಳವು. ಗೋವಾ, ತಮಿಳುನಾಡು, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳಲ್ಲಿಯೂ ಕಬ್ಬಿಣದ ಅದಿರು ದೊರೆಯುತ್ತದೆ.

ಭಾರತವು ಪ್ರಪಂಚದ ೪ನೇ ಪ್ರಮುಖ ಕಬ್ಬಿಣದ ಅದಿರು ಉತ್ಪಾದಿಸುವ ದೇಶ. ಇದು ತನ್ನ ಒಟ್ಟು ಉತ್ಪಾದನೆಯಯಲ್ಲಿ ಶೇ. ೩೫ ಭಾಗದಷ್ಟನ್ನು ತನ್ನ ಕಬ್ಬಿಣ ಮತ್ತು ಉಕ್ಕು ಕೈಗಾರಿಕೆಗಾಗಿ ಉಪಯೋಗ ಮಾಡಿಕೊಳ್ಳುತ್ತದೆ. ಉಳಿದ ಹೆಚ್ಚಿನ ಭಾಗವನ್ನು ರಫ್ತು ಮಾಡುವುದು.

ಮ್ಯಾಂಗನೀಸ್‌ ಅದಿರು :

ಇದು ಅತ್ಯಂತ ಪ್ರಮುಖವಾದ ಮಿಶ್ರಲೋಹ ಖನಿಜ. ಇದನ್ನು ಹೆಚ್ಚಾಗಿ ಉಕ್ಕು ತಯಾರಿಸಲು ಉಪಯೋಗಿಸಲಾಗುವುದು. ಅಲ್ಲದೆ ಬ್ಯಾಟರಿ, ಬಣ್ಣ, ಗಾಜು, ಪಿಂಗಾಳಿ ವಸ್ತು ಮತ್ತು ಕ್ಯಾಲಿಕೊ ಪ್ರಿಂಟಿಂಗಾಗಿಯೂ ಬಳಸಲಾಗುವುದು. ಪ್ರಪಂಚದಲ್ಲಿ ಮ್ಯಾಂಗನೀಸ್‌ ಉತ್ಪಾದಿಸುವ ಮತ್ತು ರಫ್ತು ಮಾಡುವ ದೇಶಗಳಲ್ಲಿ ಭಾರತವೂ ಒಂದಾಗಿದೆ. ಒಡಿಶಾ, ಮಹಾರಾಷ್ಟ್ರ, ಮಧ್ಯ ಪ್ರದೇಶ ಮತ್ತು ಕರ್ನಾಟಕಗಳು ಭಾರತದ ಪ್ರಮುಖ ಮ್ಯಾಂಗನೀಸ್‌ ಉತ್ಪಾದಿಸುವ ರಾಜ್ಯಗಳು. ಇವುಗಳಲ್ಲಿ ಒಡಿಶಾವು ದೇಶದಲ್ಲೇ ಅಧಿಕ ಪ್ರಮಾಣದ ಮ್ಯಾಂಗನೀಸ್‌ ನಿಕ್ಷೇಪಗಳನ್ನು ಹೊಂದಿರುವ ಹಾಗೂ ಉತ್ಪಾದಿಸುವ ರಾಜ್ಯ. ಈ ರಾಜ್ಯದ ಸುಂದರ್ ಗಡ್‌, ಕಾಲಹಂಡಿ ಮತ್ತು ಕೋರಾಪುಟ್‌ ಜಿಲ್ಲೆಗಳಲ್ಲಿ ಉತ್ತಮ ದರ್ಜೆಯ ಮ್ಯಾಂಗನೀಸ್‌ ನಿಕ್ಷೇಪ ದೊರೆಯುತ್ತದೆ.

ಮಹಾರಾಷ್ಟ್ರದ ನಾಗಪುರ, ಭಂಡಾರ, ರತ್ನಗಿರಿ, ಮಧ್ಯ ಪ್ರದೇಶದ ಬಾಲ್ಘಾಟ್‌, ಚಿಂದ್ವಾರ, ಜಬಲ್ಪುರ ಮತ್ತು ದೀವಾಸ್‌, ಕರ್ನಾಟಕದ ಉತ್ತರ ಕನ್ನಡ, ಶಿವಮೊಗ್ಗ, ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳು ಭಾರತದ ಇತರ ಮುಖ್ಯ ಮ್ಯಾಂಗನೀಸ್‌ ಉತ್ಪಾದಿಸುವ ಭಾಗಗಳು. ತೆಲಂಗಾಣ, ರಾಜಸ್ತಾನ, ಗುಜರಾತ್‌, ಜಾರ್ಖಂಡ್‌ ಮತ್ತು ಬಿಹಾರ ರಾಜ್ಯಗಳಲ್ಲಿಯೂ ಮ್ಯಾಂಗನೀಸ್‌ ಉತ್ಪಾದನೆಯಾಗುತ್ತಿದೆ.

ಬಾಕ್ಸೈಟ್‌ :

ಇದು ಅಲ್ಯೂಮಿನಿಯಂ ಲೋಹ ತಯಾರಿಕೆಗೆ ಅಗತ್ಯವಾದ ಮುಖ್ಯ ಕಚ್ಚಾವಸ್ತು. ಭಾರತದಲ್ಲಿ ಅಪಾರವಾದ ಬಾಕ್ಸೈಟ್‌ ನಿಕ್ಷೇಪವಿದೆ. ಅದು ಹೆಚ್ಚಾಗಿ ಒಡಿಶಾ, ಗುಜರಾತ್‌, ಜಾರ್ಖಂಡ್‌, ಮಹಾರಾಷ್ಟ್ರ, ಛತ್ತಿಸ್ ಗಡ್‌, ತಮಿಳುನಾಡು ಮತ್ತು ಮಧ್ಯಪ್ರದೇಶಗಳಲ್ಲಿ ಹಂಚಿಕೆಯಾಗಿದೆ.

ಒಡಿಶಾವು ಭಾರತದಲ್ಲೇ ಅತ್ಯಧಿಕ ಬಾಕ್ಸೈಟ್‌ ನಿಕ್ಷೇಪ ಮತ್ತು ಉತ್ಪಾದನೆಗಳೆರಡರಲ್ಲೂ ಪ್ರಥಮ ಸ್ಥಾನದಲ್ಲಿದೆ. ಈ ರಾಜ್ಯದ ಬಾಕ್ಸೈಟ್‌ ನಿಕ್ಷೇಪವು ಹೆಚ್ಚಾಗಿ ಕಾಲಹಂಡಿ, ಕೋರಾಪುಟ್‌, ಸುಂದರಗಡ ಮತ್ತು ಸಾಂಬಲ್ಪುರ ಜಿಲ್ಲೆಗಳಲ್ಲಿ ಹಂಚಿಕೆಯಾಗಿದೆ. ಛತ್ತೀಸ್ ಗರ್ ನ ಬಿಲಾಸ್ಪುರ, ದುರ್ಗ್‌, ಸುರ್ಗುಜ ಮತ್ತು ರಾಯ್ ಗರ್‌, ಮಹಾರಾಷ್ಟ್ರದ ರತ್ನಗಿರಿ, ಕೊಲ್ಲಾಪುರ, ಥಾಣೆ ಮತ್ತು ಸತಾರ, ಜಾರ್ಖಂಡ್ ನ ರಾಂಚಿ, ಲೊಹಾರ್ಡಾಗ ಮತ್ತು ಪಲಮಾವು, ಗುಜರಾತ್ ನ ಜಾಮನಗರ, ಜುನಾಗಡ, ಖೆಡ ಮತ್ತು ಬಾವನಗರ, ಮಧ್ಯ ಪ್ರದೇಶದ ಶಾಹದೋಲ್‌, ಮಂಡಲ ಮತ್ತು ಬಾಲ್ಘಾಟ್‌, ಆಂಧ್ರಪ್ರದೇಶದ ಗೋದಾವರಿ ಮತ್ತು ವಿಶಾಖಪಟ್ಟಣ, ತಮಿಳುನಾಡಿನ ಸೇಲಂ ಮತ್ತು ನೀಲಗಿರಿ ಹಾಗೂ ಕರ್ನಾಟಕದ ಉತ್ತರ ಕನ್ನಡ, ಬೆಳಗಾವಿ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಾಕ್ಸೈಟ್‌ ನಿಕ್ಷೇಪವು ಕಂಡುಬರುತ್ತದೆ.

ಅಬ್ರಕ :

ಪ್ರಮುಖ ಅಲೋಹ ಖನಿಜ. ಇದನ್ನು ಬಹಳ ತೆಳುವಾದ ಹಾಳೆಗಳಾಗಿ ವಿಭಜಿಸಬಹುದು. ಅವು ಪಾರದರ್ಶಕವೂ ಮತ್ತು ಶಾಖ ನಿರೋಧಕ ಗುಣವುಳ್ಳವು. ಅವುಗಳನ್ನು ಹೆಚ್ಚಾಗಿ ವಿದ್ಯುದುಪಕರಣ ಉದ್ಯಮ, ಟೆಲಿಫೋನ್‌, ವಿಮಾನ ತಯಾರಿಕೆ, ಸ್ವಚಾಲನಾ ವಾಹನ ಕೈಗಾರಿಕೆ ಮತ್ತು ನಿಸ್ತಂತು ಸಂಪರ್ಕ ಮಾಧ್ಯಮಗಳಲ್ಲಿ ಬಳಕೆ ಮಾಡಲಾಗುತ್ತದೆ.

ಅಬ್ರಕದ ನಿಕ್ಷೇಪವು ವ್ಯಾಪಕವಾಗಿ ಆಂಧ್ರಪ್ರದೇಶ, ರಾಜಸ್ತಾನ, ಜಾರ್ಖಂಡ್‌ ಮತ್ತು ಬಿಹಾರ ರಾಜ್ಯಗಳಲ್ಲಿ ಹಂಚಿಕೆಯಾಗಿದೆ. ಆಂಧ್ರಪ್ರದೇಶ ಭಾರತದಲ್ಲೇ ಅತಿ ಹೆಚ್ಚು ಅಬ್ರಕ ಉತ್ಪಾದಿಸುವ ರಾಜ್ಯ. ಈ ರಾಜ್ಯದಲ್ಲಿ ಅಬ್ರಕ ನಿಕ್ಷೇಪಗಳು ಪ್ರಮುಖವಾಗಿ ನೆಲ್ಲೂರು, ಕೃಷ್ಣ, ವಿಶಾಖ ಪಟ್ಟಣ, ಗೋದಾವರಿ ಮತ್ತು ಅನಂತಪುರ ಜಿಲ್ಲೆಗಳಲ್ಲಿ ದೊರೆಯುತ್ತದೆ.

ಶಕ್ತಿ ಸಂಪನ್ಮೂಲಗಳು

ವಿದ್ಯುಚ್ಛಕ್ತಿ ಉತ್ಪಾದನೆಗೆ ಅಗತ್ಯವಾಗಿರುವ ಸಂಪನ್ಮೂಲಗಳನ್ನು ʼಶಕ್ತಿ ಸಂಪನ್ಮೂಲಗಳುʼ ಎಂದು ಕರೆಯಲಾಗಿದೆ.

ಒಂದು ದೇಶದ ಅರ್ಥೀಕಾಭಿವೃದ್ಧಿ ಮತ್ತು ಜನರ ಜೀವನ ಮಟ್ಟದ ಸುಧಾರಣೆಗೆ ಶಕ್ತಿ ಸಂಪನ್ಮೂಲಗಳು ಅತ್ಯಗತ್ಯ, ಕೈಗಾರಿಕೆ, ಕೃಷಿ, ವಾಣಿಜ್ಯೋದ್ಯಮ, ಸಾರಿಗೆ-ಸಂಪರ್ಕ ಮೊದಲಾದವುಗಳ ಪ್ರಗತಿಯಲ್ಲಿ ಶಕ್ತಿ ಸಂಪನ್ಮೂಲಗಳ ಪಾತ್ರ ಮುಖ್ಯವಾದುದು.

ಕಲ್ಲಿದ್ದಲು

ಕಲ್ಲಿದ್ದಲು ಸಸ್ಯಾವಶೇಷವುಳ್ಳ ಇಂಧನ ಖನಿಜ. ಸಾವಿರಾರು ವರ್ಷಗಳ ಹಿಂದೆ ಭೂಗರ್ಭದಲ್ಲಿ ಹುದುಗಿ ಹೋಗಿದ್ದ ಸಸ್ಯಾವಶೇಷವು ಅಧಿಕ ಉಷ್ಣಾಂಶ ಮತ್ತು ಒತ್ತಡಗಳಿಂದ ಕಲ್ಲಿದ್ದಲಾಗಿ ಪರಿವರ್ತನೆಗೊಂಡಿದೆ. ಹೀಗಾಗಿ ಕಲ್ಲಿದ್ದಲಿನಲ್ಲಿ ಹೆಚ್ಚು ಇಂಗಾಲವು ಸಂಯೋಜನೆಯಾಗಿರುತ್ತದೆ.

ಪೆಟ್ರೋಲಿಯಂ

ಪೆಟ್ರೋಲಿಯಂ ಪ್ರಮುಖವಾಗಿ ಹೈಡ್ರೋಕಾರ್ಬನ್‌ವುಳ್ಳ ಖನಿಜತೈಲ. ಇದೊಂದು ಅತಿ ಪ್ರಮುಖ ಇಂಧನ ಹಾಗೂ ಹಲವು ಕೈಗಾರಿಕೆಗಳಿಗೆ ಕಚ್ಚಾವಸ್ತುಗಳನ್ನು ಪೂರೈಸುವ ಮೂಲವೂ ಅಗಿದೆ. ವಾಣಿಜ್ಯ ದೃಷ್ಟಿಯಲ್ಲಿ ಮುಖ್ಯ ಶಕ್ತಿಯ ಮೂಲ ಮತ್ತು ಇದನ್ನು ಹೆಚ್ಚಾಗಿ ಸಾರಿಗೆಯಲ್ಲಿ ಬಳಸಲಾಗುತ್ತದೆ. ಕೃತಕ ರಬ್ಬರ್, ಕೃತಕ ರೇಷ್ಮೆ ಔಷಧಿ, ರಾಸಾಯನಿಕ ಗೊಬ್ಬರ, ಬಣ್ಣ ತಯಾರಿಕೆ ಮೊದಲಾದ ಕೈಗಾರಿಕೆಗಳಿಗೆ ಬೇಕಾದ ಕಚ್ಚಾಪಪಾರ್ಥಗಳನ್ನು ಪೂರೈಸುವುದು.

ಜಲವಿದ್ಯುಚ್ಛಕ್ತಿ

ಧುಮುಕುವ ನೀರಿನ ರಭಸದಿಂದ ಉತ್ಪಾದಿಸುವ ವಿದ್ಯುತ್ ನ್ನು ಜಲ ವಿದ್ಯುಚ್ಛಕ್ತಿ ಎಂದು ಕರೆಯಲಾಗಿದೆ. ಇದು ನವೀಕರಿಸಬಲ್ಲ, ಸುಲಭವಾದ ಬೆಲೆಗೆ ದೊರೆಯುವ ಹಾಗೂ ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳಿಗಿಂತ ಅಧಿಕ ಶಾಖ ಮತ್ತು ಶಕ್ತಿ ನೀಡುವಂತಹದು. ಇದನ್ನು ಬಳಸುವುದರಿಂದ ಯಂತ್ರಗಳು ಸ್ವಚ್ಛವಾಗಿರುತ್ತವೆ ಮತ್ತು ಇದರ ಪ್ರಸರಣವೂ ಸುಲಭ.

ಭಾರತವು ಸಾಕಷ್ಟು ಕಲ್ಲಿದ್ದಲು, ಪೆಟ್ರೋಲಿಯಂ ಮತ್ತು ನೈಸರ್ಗಿಕಾನಿಲಗಳಂತಹ ಪಳೆಯುಳಿಕೆ ಇಂಧನಗಳನ್ನು ಹೊಂದಿಲ್ಲ, ಹೀಗಾಗಿ ಜಲವಿದ್ಯುಚ್ಛಕ್ತಿ ಉತ್ಪಾದನಾ ಅಭಿವೃದ್ಧಿ ಅತ್ಯವಶ್ಯಕ. ಜೊತೆಗೆ ದೇಶದಲ್ಲಿ ಜಲವಿದ್ಯುಚ್ಛಿಕ್ತಿ ಅಭಿವೃದ್ದಿಗೆ ಅಗತ್ಯವಾದ ಅಂಶಗಳು ಪೂರಕವಾಗಿವೆ.

ಭಾರತದಲ್ಲಿ ಮೊಟ್ಟಮೊದಲಿಗೆ (೧೮೯೭) ಜಲವಿದ್ಯುಚ್ಛಕ್ತಿ ತಯಾರಿಕಾ ಕೇಂದ್ರವನ್ನು ಪಶ್ಚಿಮ ಬಂಗಾಳದ ಡಾರ್ಜಲಿಂಗ್ ನಲ್ಲಿ ಸ್ಥಾಪಿಸಲಾಗಿತ್ತು. ಆದರೆ ವಾಸ್ತವ ಜಲವಿದ್ಯುತ್‌ ಉತ್ಪಾದನೆಯು ಕಾವೇರಿ ನದಿಗೆ ಶಿವನಸಮುದ್ರದ ಬಳಿ (೧೯೦೨) ನಿರ್ಮಿಸಿದ ಜಲವಿದ್ಯುದಾಗಾರದಿಂದ ಆರಂಭಗೊಂಡಿತು.

ಪರಮಾಣುಶಕ್ತಿ

ಪರಮಾಣ್ವಕ ಖನಿಜಗಳಿಂದ ತಯಾರಿಸುವ ವಿದ್ಯುಚ್ಛಕ್ತಿಯನ್ನು ಪರಮಾಣುಶಕ್ತಿ ಎನ್ನುವರು. ಭಾರತದಲ್ಲಿ ವಿದ್ಯುಚ್ಛಕ್ತಿಗಾಗಿ ಬೇಡಿಕೆಯು ಹೆಚ್ಚಾಗಿದೆ. ಈ ಬೇಡಿಕೆಯನ್ನು ಪೂರೈಸುವಷ್ಟು ವಿದ್ಯುತ್‌ ಉತ್ಪಾದಬೆಯಾಗುತ್ತಿಲ್ಲ. ಹೀಗಾಗಿ ಭಾರತವು ಪರಮಾಣು ಶಕ್ತಿಯನ್ನು ಉತ್ಪಾದಿಸುವ ಯೋಜನೆಗಳನ್ನು ಹಮ್ಮಿಕೊಂಡಿದೆ.

ಭಾರತದಲ್ಲಿ ಅಪಾರವಾದ ಪರಮಾಣ್ವಕ ಖನಿಜಗಳಿವೆ. ಉದಾ: ಯುರೇನಿಯಂ ಮತ್ತು ಥೋರಿಯಂ. ಇವು ಪರಮಾಣು ವಿದ್ಯತ್‌ ತಯಾರಿಕೆಗೆ ಅಗತ್ಯ ಜೊತೆಗೆ ಭಾರತದಲ್ಲಿ ಅಗತ್ಯವಾಗಿ ತಂತ್ರಜ್ಞಾನ ಲಭ್ಯವಿದೆ.

ಅಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಅವಶ್ಯಕತೆ

ಭಾರತದಲ್ಲಿ ಅಪರಿಮಿತವಾದ ಅಸಂಪ್ರದಾಯಿಕ ಶಕ್ತಿ ಮೂಲಗಳು ದೊರೆಯುತ್ತವೆ. ಅವು ನವೀಕರಿಸಬಲ್ಲ ಮೂಲಗಳು, ಮಾಲಿನ್ಯ ಮುಕ್ತವಾದವು ಮತ್ತು ಪರಿಸರ ಸ್ನೇಹಿಗಳಾಗಿವೆ. ಅವುಗಳನ್ನು ಸುಲಭವಾಗಿ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಗೆ ಸರಬರಾಜು ಮಾಡಬಹುದು. ಅವುಗಳ ಉತ್ಪಾದನೆಯಿಂದ ದೇಶದ ವಿದ್ಯುತ್‌ ಅಭಾವವನ್ನು ನೀಗಿಸಬಹುದು. ಭಾರತದಲ್ಲಿ ಇತ್ತೀಚೆಗೆ ವಿದ್ಯುಚ್ಛಕ್ತಿ ಬಳಕೆಯ ದರವು ಹೆಚ್ಚಾಗಿದೆ. ಹೀಗಾಗಿ ತುರ್ತಾಗಿ ಪರ್ಯಾಯ ಶಕ್ತಿ ಸಂಪನ್ಮೂಲಗಳನ್ನು ಅಭಿವೃದ್ಧಿಪಡಿಸುವುದು ಅವಶ್ಯಕತೆ ಇದೆ.

ವಿದ್ಯುಚ್ಛಕ್ತಿಯ ಅಭಾವ:

ಇತ್ತೀಚಿನ ದಿನಮಾನಗಳಲ್ಲಿ ಭಾರತವು ಎದುರಿಸುತ್ತಿರುವ ಹಲವು ಸಮಸ್ಯೆಗಳಲ್ಲಿ ವಿದ್ಯುತ್‌ ಅಭಾವವೂ ಒಂದಾಗಿದೆ. ಈ ಮೊದಲಿಗೆ ಪ್ರಸ್ತಾಪಿಸಿದಂತೆ ಬೇಡಿಕೆಗೆ ತಕ್ಕಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ವಿದ್ಯುತ್‌ ಅಭಾವ ಎದುರಿಸುತ್ತಿರುವ ಹಲವು ಸಮಸ್ಯೆಗಳಲ್ಲಿ ವಿದ್ಯುತ್‌ ಅಭಾವವೂ ಒಂದಾಗಿದೆ. ಈ ಮೊದಲಿಗೆ ಪ್ರಸ್ತಾಪಿಸಿದಂತೆ ಬೇಡಿಕೆಗೆ ತಕಷ್ಟು ವಿದ್ಯುತ್‌ ಉತ್ಪಾದನೆಯಾಗುತ್ತಿಲ್ಲ. ಹೀಗಾಗಿ ವಿದ್ಯುತ್‌ ಅಭಾವ ಎದುರಾಗಿದೆ. ಇದರಿಂದ ದೇಶದ ಕೈಗಾರಿಕೆ, ಕೃಷಿ,ಸಾರಿಗೆ, ವ್ಯಾಪಾರ ಮೊದಲಾದವುಗಳ ಮೇಲೆ ಪ್ರತಿಕೂಲ ಪರಿಣಾಮವೇರ್ಪಡುತ್ತದೆ.

FAQ

ಏನು ತಿನ್ನುವುದರಿಂದ ಮರೆಗುಳಿತನ ಕಡಿಮೆಯಾಗುತ್ತದೆ?

ಸೀಗಡಿ.

ಪ್ರಪಂಚದಲ್ಲಿ ಅತ್ಯಧಿಕವಾಗಿ ಸಿಡಿಲು ಬೀಳುವ ಪ್ರದೇಶ ಯಾವುದು?

ವೆನಿಜುಲಾ.

ಇತರೆ ವಿಷಯಗಳು :

ವ್ಯವಹಾರ ನಿರ್ವಹಣೆ ಬಗ್ಗೆ ಮಾಹಿತಿ

ನಿರ್ವಹಣಾ ಮಾಹಿತಿ ವ್ಯವಸ್ಥೆ

LEAVE A REPLY

Please enter your comment!
Please enter your name here