ಪ್ರಮುಖ ಉದ್ದಿಮೆದಾರರ ಬಗ್ಗೆ ಮಾಹಿತಿ | Information About Key Entrepreneurs in Kannada

0
306
ಪ್ರಮುಖ ಉದ್ದಿಮೆದಾರರ ಬಗ್ಗೆ ಮಾಹಿತಿ | Information About Key Entrepreneurs in Kannada
ಪ್ರಮುಖ ಉದ್ದಿಮೆದಾರರ ಬಗ್ಗೆ ಮಾಹಿತಿ | Information About Key Entrepreneurs in Kannada

ಪ್ರಮುಖ ಉದ್ದಿಮೆದಾರರ ಬಗ್ಗೆ ಮಾಹಿತಿ Information About Key Entrepreneurs Pramukavada Uddimedarara Bagge Mahiti in Kannada


Contents

Information About Key Entrepreneurs in Kannada

Information About Key Entrepreneurs in Kannada
Information About Key Entrepreneurs in Kannada

ಈ ಲೇಖನಿಯಲ್ಲಿ ಉದ್ದಿಮೆದಾರರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಉದ್ದಿಮೆದಾರರು

ಭಾರತದ ಅತ್ಯಂತ ಪ್ರಖ್ಯಾತ ಉದ್ಯಮಿಗಳು ಒಂದೇ ರೀತಿಯ ಉದ್ಯಮಗಾರಿಕೆಯ ಚೈತನ್ಯ ಹೊಂದಿದ್ದಾರೆ. ಇವರು ತಮ್ಮ ವಂಶಪಾರಂಪರ್ಯದಿಂದ ಐಶ್ವರ್ಯವನ್ನು ಗಳಿಸಿದವರಲ್ಲ ಅಥವಾ ಲಕ್ಷಾಂತರ ಡಾಲರುಗಳ ಕ್ರೀಡಾ ಕರಾರುಗಳಿಗೆ ಸಹಿ ಹಾಕಿದವರಲ್ಲಾ ಇವರೆಲ್ಲರು ತಮ್ಮ ದೇಶದ ಉತ್ಪಾದನೆಯ ಬಗ್ಗೆ ಕನಸು ಕಂಡು ಯಶಸ್ವಿಯಾಗಿದ್ದಾರೆ. ಇವರು ತಮ್ಮ ಶ್ರಮ, ಸಾಧನೆ ಮತ್ತು ಸಮರ್ಪಣೆಯಿಂದ ಲಕ್ಷಾಂತರ ರೂಗಳನ್ನು ಗಳಿಸಿಸಿದ್ದಾರೆ. ಕೆಲವು ಯಶಸ್ವಿ ಉದ್ದಿಮೆಗಾರರ ಬಗ್ಗೆ ತಿಳಿಯಲಾಗಿದೆ.

ಡಾ. ಪ್ರತಾಪರೆಡ್ಡಿ :

ಇವರು ಭಾರತದಲ್ಲಿ ಆರೋಗ್ಯ ಕ್ಷೆತ್ರದಲ್ಲಿ ವೈದ್ಯಶಾಲೆಗಳ ಸಂಕೀರ್ಣವನ್ನು ಅಭಿವೃದ್ದಿ ಪಡಿಸಿದವರಲ್ಲಿ ಮೊದಲಿಗರಾಗಿದ್ದಾರೆ. ಇವರು ಹುಟ್ಟುಹಾಕಿದ “ಅಪೋಲೋ” ವೈಧ್ಯಶಾಲೆಗಳ ಗುಂಪು ಸುಮಾರು ೭೫೦ ಆಧುನಿಕ ರೀತಿಯ ದವಾಕಾನೆಗಳನ್ನು ಹೊಂದಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಇವರಿಗೆ ಆಸ್ಪತ್ರೆಗಳನ್ನು ಪ್ರಾರಂಭಿಸಲು ಪ್ರೇರಣೆಕೊಟ್ಟದ್ದು, ಒಬ್ಬ ರೋಗಿಯು ತನ್ನ ತೆರೆದ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕದ ಟೆಕ್ಸಾಸಗೆ ಹೋಗಲು ಸಾಧ್ಯವಾಗದೆ ಹೋಗಿ ಮರಣ ಹೊಂದಿದ್ದೆ ಆಗಿದೆ. ಇವರ ವೈದ್ಯಕೀಯ ಕ್ಷೇತ್ರದ ಸಾಧನೆ ಭಾರತದ ಸಾಮಾನ್ಯ ಜನರಿಗೂ ದೊರಕುವಂತಹುದೇ ಆಗಿದೆ.

ನರೇಶ್‌ ಗೋಯಲ್‌ :

ಇವರು ಜೆಟ್‌ ವಾಯುಮಾರ್ಗಗಳನ್ನು ಹುಟ್ಟು ಹಾಕಿದವರು ಮತ್ತು ಅದರ ಅಧ್ಯಕ್ಷರಾಗಿದ್ದಾರೆ. ಈ ವಾಯುಮಾರ್ಗವು ಭಾರತದ ಅತಿದೊಡ್ಡ ಆಂತರಿಕ ವಾಯುಮಾರ್ಗವಾಗಿದೆ. ವಿಶ್ವ ವಿದ್ಯಾಲಯದ ಪದವಿ ಪಡೆದ ನಂತರ ಸಂಚಾರ ಉದ್ದಿಮೆಯಲ್ಲಿ ಕೆಲಸ ಮಾಡಿದರು. ೧೯೭೪ ರ ವೇಳೆಗೆ ಗೋಯಲ್‌ರವರು ಜೆಟ್ ವಾಯುಮಾರ್ಗವನ್ನು ವಿದೇಶಿ ವಿಮಾನಮಾರ್ಗಗಳ ಮಾರಾಟ ಮತ್ತು ಮಾರುಕಟ್ಟೆಯನ್ನು ನೋಡಿಕೊಳ್ಳಲು ಪ್ರಾರಂಭಿಸಿದರು. ಗೋಯಲ್ ರವರು ಭಾರತದ ಸರ್ಕಾರದ ೧೯೧೭ ರ ತೆರೆದ ಅಂತರಿಕ್ಷ ನೀತಿಯ ಸದವಕಾಶವನ್ನು ಉಪಯೋಗಿಸಿಕೊಂಡು ಜೆಟ್‌ ವಾಯುಮಾರ್ಗವನ್ನು ಆಂತರಿಕ ಸಂಚಾರಕ್ಕೆ ಭಾರತದಲ್ಲಿ ನಿಶ್ಚಿತ ವೇಳೆಗಳಲ್ಲಿ ಓಡಾಡಲು ಪ್ರಾರಂಭಿಸಿದರು.

ನಾರಾಯಣ ಮೂರ್ತಿ :

೧೯೯೯ ರಲ್ಲಿ ಭಾರತದಲ್ಲಿ ಇನ್ ಪೋಸಿಸ್‌ ತಂತ್ರಜ್ಞಾನ ನಿಗಮವನ್ನು ಪ್ರಾರಂಭಿಸಿದವರಲ್ಲಿ ಒಬ್ಬರಾಗಿದ್ದಾರೆ. NASDAQ ನಲ್ಲಿ ನೋಂದಾಯಿತಗೊಂಡ ಭಾರದ ಪ್ರಪಥಮ ತಂತ್ರಜ್ಞಾನದ ಸಂಸ್ಥೆಯು ಇನ್‌ ಪೋಸಿಸ್‌ ಆಗಿದೆ. ೨೦೧೭ ರ ವೇಳೆಗೆ ಸಂಸ್ಥೆಯು ಎರಡು ಲಕ್ಷಕ್ಕೂ ಮಿಗಿಲಾದ ಕೆಲಸಗಾರರನ್ನು ನೇಮಿಸಿಕೊಂಡು ಹತ್ತು ಬಿಲಿಯನ್‌ ಡಾಲರ್‌ ಗಳಿಗಿಂತ ಮಿಗಿಲಾದ ವ್ಯಾಪಾರ ವಹಿವಾಟು ನಡೆಸುತ್ತಿದೆ. ಮೂರ್ತಿಯವರ ಪ್ರಾಮಾಣಿಕತೆ, ಸತ್ಯಸಂದತೆ, ತರೆದ ವಹಿವಾಟು ಮತ್ತು ನೀತಿಪೂರ್ಣ ಸಮಗ್ರತೆಯಂತಹ ಅಂಶಗಳು ಅವರ ವಹಿವಾಟುಗಳ ಸಮಗ್ರ ಯಶಸ್ವಿಗೆ ಕಾರಣಗಳಾಗಿವೆ.

ವರ್ಗಿಸ್‌ ಕುರಿಯನ್‌ :

ಇವರು ಹೆಸರಾಂತ ಪ್ರಖ್ಯಾತ ಉದ್ಯಮ ಶೀಲರು. ಬಿಳಿಕ್ರಾಂತಿಯ ಪಿತಾಮಹ ಎನಿಸಿದ್ದಾರೆ. ಲಕ್ಷಾಂತರ ಲೀಟರ್‌ ಹಾಲಿನ ಉತ್ಪಾದನೆಯ ಕಲ್ಪನೆ ಹಾಲಿನ ಹೊಳೆ ಹರಿಸುವುದರ ಮೂಲಕ ಬೇಸಾಯದ ಅಭಿವೃದ್ದಿಯ ಅತ್ಯಂತ ಹಿರಿಯ ವ್ಯಕ್ತಿಗಳಾಗಿದ್ದಾರೆ. ಅಮುಲ್‌ ಹಾಲು ಮತ್ತು ಹಾಲಿನ ಉತ್ಪನ್ನಗಳ ತಯಾರಿಕೆ ಇವರ ಸಾಧನೆಯಾಗಿದ್ದು ಗುಜರಾತಿನ ಕೈರಾ ಜಿಲ್ಲೆಯ ಆನಂದ್‌ ಎಂಬಲ್ಲಿ ಹೈನುಗಾರಿಕೆಯನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿ ಬೃಹತ್ತಾಗಿ ಭಾರದಲ್ಲೇ ಅತ್ಯಂತ ದೊಡ್ಡ ಹೈನುಗಾರಿಕೆಯಾಗಿ ಅಭಿವೃದ್ದಿ ಸಾಧಿಸಿದರು.

ಧೀರುಭಾಯಿ ಅಂಬಾನಿ :

ಇವರು ಭಾರತದ ಅತ್ಯಂತ ಸಾಹಸಿ ಉದ್ಯಮಶೀಲರು. ಇವರು ಭಾರತದ ಸಮ್ಮೇಳನ ಸಂಸ್ಥೆಯನ್ನು ಹುಟ್ಟುಹಾಕಿದವರಲ್ಲಿ ಅತ್ಯಂತ ಪ್ರಮುಖರೆಂದು ನೆನಪಿನಲ್ಲಿಟ್ಟುಕೊಳ್ಳಬೇಕಾಗಿದೆ. ದೀರೂಭಾಯಿ ಅಂಬಾನಿಯವರ ತಂದೆ ಶಾಲಾ ಉಪಧ್ಯಾಯರಾಗಿದ್ದರು. ಇವರು ಮೌಂಟ್ ಗಿರ್‌ ನಾರ್‌ ಎಂಬಲ್ಲಿ ವಾರಾಂತ್ಯದಲ್ಲಿ ಭಜನೆಗಳ ಪುಸ್ತಕಗಳನ್ನು ಯಾತ್ರಾರ್ಥಿಗಳಿಗೆ ಮಾರುವುದರ ಮೂಲಕ ಉದ್ಯಮವನ್ನು ಪ್ರಾರಂಭಿಸಿದರು.

ಅಜೀಮ್‌ ಪ್ರೇಮ್‌ ಜೀ :

ಇವರು ವಿಪ್ರೋ ತಂತ್ರಜ್ಞಾನ ಸಂಸ್ಥೆಯು ಸಾಪ್ಟವೇರ್‌ ದಿಸೆಯಲ್ಲಿ ಭಾರತದಲ್ಲಿ ಅತ್ಯಂತ ದೊಡ್ಡ ಸಂಸ್ಥೆಯಾಗಿದೆ. ಅವರ ತಂದೆಯ ಮರಣದ ಕಾರಣದಿಂದಾಗಿ ವಿಧ್ಯಾರ್ಥಿಯಾಗಿದ್ದ ಇವರು ಮನೆಗೆ ಹಿಂದುರುಗಿದರು. ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಒಬ್ಬ ಷೇರುದಾರರು ಅಜೀಮ್‌ ಪ್ರೇಮ್‌ ಜೀಯವರನ್ನು ತಮ್ಮ ಭಾಗದ ಷೇರುಗಳನ್ನು ಮಾರುವಂತೆ ಆದೇಶ ಮಾಡಿದರು. ಇದು ಇವರನ್ನು ತಮ್ಮ ಸಂಸ್ಥೆಯನ್ನು ಮುನ್ನಡೆಸುವಂತೆ ಪ್ರಚೋದಿಸಿತು.

FAQ

ಬಿಳಿಕ್ರಾಂತಿಯ ಪಿತಾಮಹ ಯಾರು ?

ವರ್ಗಿಸ್‌ ಕುರಿಯನ್

‌ಪ್ರಮುಖ ಉದ್ದಿಮೆದಾರರನ್ನು ಹೆಸರಿಸಿ ?

ಧೀರುಭಾಯಿ ಅಂಬಾನಿ, ಅಜೀಮ್‌ ಪ್ರೇಮ್‌ ಜೀ, ವರ್ಗಿಸ್‌ ಕುರಿಯನ್‌, ಡಾ. ಪ್ರತಾಪರೆಡ್ಡಿ ಇನ್ನು ಮುಂತಾದವರು.

ಇತರೆ ವಿಷಯಗಳು :

ನಮ್ಮ ಸಂಸ್ಕೃತಿ ನಮ್ಮ ಹೆಮ್ಮೆಯ ಪ್ರಬಂಧ

ನುಡಿಮುತ್ತುಗಳು ಕನ್ನಡದಲ್ಲಿ

LEAVE A REPLY

Please enter your comment!
Please enter your name here