ಕರ್ನಾಟಕದ ಸಮಾಜಮುಖಿ ಚಳುವಳಿಗಳ ಬಗ್ಗೆ ಮಾಹಿತಿ | Information About Social Movements in Karnataka in Kannada

0
561
ಕರ್ನಾಟಕದ ಸಮಾಜಮುಖಿ ಚಳುವಳಿಗಳ ಬಗ್ಗೆ ಮಾಹಿತಿ | Information About Social Movements in Karnataka in Kannada
ಕರ್ನಾಟಕದ ಸಮಾಜಮುಖಿ ಚಳುವಳಿಗಳ ಬಗ್ಗೆ ಮಾಹಿತಿ | Information About Social Movements in Karnataka in Kannada

ಕರ್ನಾಟಕದ ಸಮಾಜಮುಖಿ ಚಳುವಳಿಗಳ ಬಗ್ಗೆ ಮಾಹಿತಿ Information About Social Movements in Karnataka Karnatakada samajamuki Chaluvaligala Bagge Mahiti in Kannada


Contents

ಕರ್ನಾಟಕದ ಸಮಾಜಮುಖಿ ಚಳುವಳಿಗಳ ಬಗ್ಗೆ ಮಾಹಿತಿ

Information About Social Movements in Karnataka in Kannada

ಈ ಲೇಖನಿಯಲ್ಲಿ ಕರ್ನಾಟಕದ ಸಮಾಜಮುಖಿ ಚಳುವಳಿಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಕರ್ನಾಟಕದ ಸಮಾಜಮುಖಿ ಚಳುವಳಿಗಳು

ಕರ್ನಾಟಕದ ಸಮಾಜಮುಖಿ ಚಳುವಳಿಗಳನ್ನು ಈ ಕೆಳಕಂಡಂತೆ ತಿಳಿಸಲಾಗಿದೆ.

ಪರಿಸರ ಚಳುವಳಿ

ನಮ್ಮ ಭೂಮಿಯ ಭಾಗವಾಗಿರುವ ಮಣ್ಣು, ಕಲ್ಲು, ನೀರು, ಗಾಳಿ, ಬೆಳಕುಗಳನ್ನು ಅವಲಂಭಿಸಿ ಪಶುಪಕ್ಷಿಗಳು, ಗಿಡಮರಗಳು ಮತ್ತು ಮನುಷ್ಯ ಸೇರಿದಂತೆ ಉಳಿದೆಲ್ಲ ಜೀವಿಗಳು ಬದುಕಬೇಕಾಗಿದೆ. ಪ್ರಕೃತಿಯಲ್ಲಿ ಸಹಜ ಸಮತೋಲನವಾಗಿದೆ. ಮನುಷ್ಯ ನಾಗರಿಕನಾಗಿ ಬೆಳೆಯುತ್ತಿದ್ದಂತೆ ಪರಿಸರವನ್ನು ತನ್ನ ಅಂಕೆಯಿಲ್ಲದ ಆಸೆಗಳಿಗೆ ಬಲಿಕೊಡುತ್ತಿದ್ದಾನೆ. ಪ್ರಕೃತಿಯನ್ನು ಸೃಷ್ಟಿಯ ಬೆಡಗು ಎಂದು ಅರಿಯದೆ ಕೇವಲ ತನ್ನ ಉಪಯೋಗಕ್ಕಾಗಿ ಇರುವ ಕಚ್ಚಾವಸ್ತುವೆಂದು ಪರಿಗಣಿಸಿದ್ದಾನೆ. ಮನೆಮನೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಗುಬ್ಬಚ್ಚಿಗಳನ್ನು ನೋಡಲು ಊರ ಹೊರಗಡೆ ಹೋಗಬೇಕಾದ ಪರಿಸ್ಥಿತಿ ಬಂದೊದಗಿದೆ.

ಸಾಲುಮರದ ತಿಮ್ಮಕ್ಕ : ಇವರು ನಿಜವಾದ ಪರಿಸರ ಪ್ರೇಮಿಯಾಗಿದ್ದಾರೆ. ಇವರು ಸುಮಾರು ೨೮೪ ಮರಗಳ ತಾಯಿ. ಅಕ್ಷರಸ್ಥರಲ್ಲದಿದ್ದರೂ ಪರಿಸರ ಸಂರಕ್ಷಣೆಯ ಪಾಠ ಹೇಳಿಕೊಟ್ಟ ನಿಸ್ವಾರ್ಥ ಬದುಕು ಇವರದು.

ಮಹಿಳಾ ಚಳುವಳಿ

ಮಹಿಳಾ ಚಳುವಳಿಯು ಆರಂಭದಲ್ಲಿ ಮುಖ್ಯವಾಗಿ ಸ್ತ್ರೀ ಶಿಕ್ಷಣಕ್ಕೆ ಒತ್ತುನೀಡಿತು. ಕರ್ನಾಟಕದಲ್ಲಿ ಶ್ರೀರಂಗಮ್ಮ ಮತ್ತು ರುಕ್ಮಿಣಮ್ಮ ಎಂಬವರು ಬಿ. ಎ ಆನರ್ಸ್‌ ಪದವಿ ಗಳಿಸಿದ ಮೊದಲ ಮಹಿಳೆಯರು. ಇಂದಿರಮ್ಮ ಎಂಬುವರು ಬೆಂಗಳೂರಿನ ಪ್ರಥಮ ಮಹಿಳಾ ಮೇಯರ್‌ ಆಗಿದ್ದರು. ಇಷ್ಟಾದರೂ ಮಹಿಳೆಯರ ಸಬಲೀಕರಣವೆನ್ನುವುದು ಮರೀಚಿಕೆಯಾಗಿತ್ತು. ಮಹಿಳೆಯರಿಗೆ ಆಸ್ತಿಯಲ್ಲಿ ಪಾಲು ಸಿಗುತ್ತಿರಲ್ಲಿ. ವಿವಿಧ ಧರ್ಮೀಯ ಮಹಿಳೆಯರು ಬೇರೆ ಬೇರೆ ಬಗೆಯಲ್ಲಿ ಶೋಷಣೆಗೆ ಒಳಗಾಗಿದ್ದಾರೆ.

ರೈತ ಚಳುವಳಿ

ರೈತರನ್ನು ನಮ್ಮ ದೇಶದ ಬೆನ್ನೇಲುಬು ಎಂದು ಮೊದಲಿನಿಂದಲು ಕರೆಯಲಾಗಿದೆ. ಆದರೆ ಈ ಬೆನ್ನೆಲುಬು ಗಟ್ಟಿಯಾಗಿರಲು ಬೇಕಾದ ಅವಶ್ಯಕತೆಗಳನ್ನು ಒದಗಿಸಲಿಲ್ಲ. ಇಂದೂ ಸಹ ನಮ್ಮ ರೈತರು ಸರ್ಕಾರದ ನೆರವಿಲ್ಲದೆ ಬದುಕಲಾರದ ಸ್ಥಿತಿಯಲ್ಲಿದ್ದಾರೆ. ಕೈಗಾರಿಕೊದ್ಯಮಿಗಳು ತಾವು ಉತ್ಪಾದಿಸಿದ ವಸ್ತುವಿನ ಬೆಲೆಯನ್ನು ತಾವೇ ನಿರ್ಧರಿಸುತ್ತಾರೆ. ಆದರೆ ರೈತರು ಇಂದಿಗೂ ತಮ್ಮ ಉತ್ಪನ್ನಗಳ ಬೆಲೆ ನಿರ್ಧರಿಸುವ ಹಂತಕ್ಕೆ ಬೆಳೆದಿಲ್ಲ. ಅವರು ವರುಣನ ಕೃಪೆ ಸದಾ ಒಳಗಾಗಿದ್ದಾರೆ. ತಮ್ಮನ್ನು ರಕ್ಷಿಸಬೇಕಾದ ಸರಕಾರಗಳು ತಮ್ಮ ಕಷ್ಟದ ದಿನಗಳಲ್ಲಿ ನೆರವಿಗೆ ಬಾರದಿದ್ದಾಗ ರೈತರು ಹೋರಾಟದ ಹಾದಿಗಳನ್ನು ಹಿಡಿಯುತ್ತಾರೆ.

ದಲಿತ ಚಳುವಳಿಗಳು

ಪ್ರಸಿದ್ದ ಮನಃ ಶಾಸ್ತ್ರಜ್ಞ ಆರ್‌. ಡಿ. ಲಿಯಾಂಗ್‌ ಒಂದು ಅದ್ಬುತವಾದ ಮಾತನ್ನು ದಾಖಲಿಸುತ್ತಾರೆ. ಇತರರ ಅನುಭವವನ್ನು ನೀವು ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಆದರೆ ಈ ಅನುಭವಗಳನ್ನು ನೀವು ಅನುಭವಿಸಲು ಸಾಧ್ಯವೇ ಇಲ್ಲ. ದಲಿತ ಮತ್ತು ಮಹಿಳಾ ನೆಲೆಗಳಿಗೆ ಇದು ಅಕ್ಷರಶಃ ಅನ್ವಯವಾಗುತ್ತದೆ. ಸಾಮಾಜಿಕವಾಗಿ ಯಾವುದೇ ಸ್ಥಾನವನ್ನು ಹೊಂದಿರದ ಅಸ್ಪೃಶ್ಯ ಜಾತಿಗಳಿಂದ ಹುಟ್ಟಿದ ಒಂದೇ ಕಾರಣಕ್ಕಾಗಿ ಈ ಸಮುದಾಯ ಸಮಾಜದ ಮುಖ್ಯ ವಾಹಿನಿಯಿಂದ ಹೊರಗುಳಿಯಿತು. ನಂತರ ದಲಿತರಿಗೆ ಸಂಬಂದಿಸಿದಂತೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಯಿತು.

ಸ್ವಾಮಿ ವಿವೇಕಾನಂದರ ಮೈಸೂರಿನ ಭೇಟಿಯ ನಂತರ ಅವರ ಸಲಹೆಯ ಮೇರೆಗೆ ದಲಿತ ವರ್ಗದ ಪ್ರಮುಖ ಪ್ರಶ್ನೆಗಳನ್ನು ಅಂದಿನ ಮೈಸೂರಿನ ಮಹಾರಾಜರಾದ ಹತ್ತನೇ ಚಾಮರಾಜ ಒಡೆಯರು ಗಂಭೀರವಾಗಿ ಪರಿಗಣಿಸಿ ದಲಿತರಿಗೆ ಪ್ರತ್ಯೇಕ ಶಾಲೆಗಳನ್ನು ತೆರೆದರು. ಕಾಲಕ್ರಮೇಣ ದಲಿತ ಚಳುವಳಿಯಲ್ಲಿ ಬಿರುಕುಗಳು ಹುಟ್ಟಿಕೊಂಡವು.ನಂತರ ಬೇರೆ ಬೇರೆ ಹೆಸರುಗಳಿಂದ ಹಲವಾರು ಸಂಘಟನೆಗಳು ಹುಟ್ಟಿಕೊಂಡವು.

ಕನ್ನಡ ಉಳಿಸಿ ಚಳುವಳಿ ಅಥವಾ ಕನ್ನಡ ಕಾವಲು ಚಳುವಳಿ

ಏಕೀಕರಣ ಚಳುವಳಿಯು ಕನ್ನಡಿಗರಲ್ಲಿ ಆತ್ಮವಿಶ್ವಾಸ ಮತ್ತು ಅನ್ಯೋನ್ಯತೆಯನ್ನು ತಂದಿತು. ಸಾಹಿತ್ಯ ಸೃಷ್ಠಿಯ ಮೂಲಕ ಕನ್ನಡದ ಲೇಖಕರು ಜನರ ಕನ್ನಡತನವನ್ನು ಜೀವಂತವಾಗಿ ಇಟ್ಟಿದ್ದರು. ಈ ನಿಟ್ಟಿನಲ್ಲಿ ಸಾಂಸ್ಕೃತಿಕ ಹಾಗೂ ಕನ್ನಡಪರ ಸಂಘಟನೆಗಳ ಪಾತ್ರ ಹಿರಿದಾಗಿದೆ. ೧೯೬೦ ರ ದಶಕದ ನಂತರ ಬೆಂಗಳೂರಿನಲ್ಲಿ ಅನ್ಯಭಾಷಿಕರ ಅಬ್ಬರ ಹೆಚ್ಚಾದಾಗ ರಾಮಮೂರ್ತಿ, ವಾಟಾಳ ನಾಗರಾಜ್‌, ಚಿದಾನಂದ ಮೂರ್ತಿ ಇನ್ನು ಮುಂತಾದವರು ಹಾಗೂ ಕರ್ನಾಟಕ ಯುವಜನ ಸಭಾ ಮುಂತಾದ ಸಂಘಟನೆಗಳು ಕನ್ನಡ, ಕನ್ನಡಿಗ ಮತ್ತು ಕರ್ನಾಟಕದ ಮೇಲ್ಗೈಯನ್ನು ಸಾಧಿಸುವಲ್ಲಿ ಸಫಲರಾದರು.

ಗೋಕಾಕ್‌ ಚಳುವಳಿ

೧೯೮೨ ರಲ್ಲಿ ಗೋಕಾಕ್‌ ವರದಿಯ ಅನುಷ್ಟಾನಕ್ಕಾಗಿ ಒಂದು ನಿರ್ಣಾಯಕ ಚಾರಿತ್ರಿಕ ಹೋರಾಟ ಪ್ರಾರಂಭವಾಯಿತು. ಇಡೀ ಸಮುದಾಯ ಅಭೂತಪೂರ್ವ ರೀತಿಯಲ್ಲಿ ಈ ಹೋರಾಟವವನ್ನು ನಡೆಸಿತು. ಕರ್ನಾಟಕದಲ್ಲಿ ಇದ್ದ ಭಾಷಾ ಅಲ್ಪ ಸಂಖ್ಯಾತರು ಕನ್ನಡವನ್ನು ಕಡ್ಡಾಯವಾಗಿ ಕಲಿಯದೆ ಅವರ ಮಾತೃಭಾಷೆಯಲ್ಲೇ ಶಿಕ್ಷಣ ಪಡೆಯುತ್ತೇವೆ ಎಂಬ ಹಠಕ್ಕೆ ಬಿದ್ದರು.

ಗೋಕಾಕ್‌ ವರದಿಯನ್ನು ಅಂದಿನ ಸರ್ಕಾರ ಒಪ್ಪಲಿಲ್ಲ. ಡಾ. ರಾಜ್‌ ಕುಮಾರ್‌ ಅವರ ನೇತೃತ್ವದಲ್ಲಿ ಕರ್ನಾಟಕದಾದ್ಯಂತ ಬೃಹತ್ ಆಂದೋಲನ ನಡೆಯಿತು.

FAQ

ಕರ್ನಾಟಕದ ಸಮಾಜಮುಖಿ ಚಳುವಳಿಗಳನ್ನು ತಿಳಿಸಿ ?

ಗೋಕಾಕ್‌ ಚಳುವಳಿ, ಕನ್ನಡ ಕಾವಲು ಚಳುವಳಿ, ದಲಿತ ಚಳುವಳಿ, ರೈತ ಚಳುವಳಿ ಇನ್ನು ಮುಂತಾದವುಗಳು

ಮಾತೃ ಭಾಷ ದಿನವನ್ನು ಯಾವಾಗ ಆಚರಿಸುತ್ತಾರೆ ?

ಫೆಬ್ರವರಿ ೨೧

ಇತರೆ ವಿಷಯಗಳು :

ಪ್ರಾಮಾಣಿಕತೆ ಅತ್ಯುತ್ತಮ ನೀತಿ ಪ್ರಬಂಧ

ಶ್ರೀ ಸಾಯಿ ಅಷ್ಟೋತ್ತರಶತನಾಮಾವಳಿ 

LEAVE A REPLY

Please enter your comment!
Please enter your name here