ವಿಮೆ ಬಗ್ಗೆ ಮಾಹತಿ | Information About Insurance in Kannada

0
383
ವಿಮೆ ಬಗ್ಗೆ ಮಾಹತಿ | Information About Insurance in Kannada
ವಿಮೆ ಬಗ್ಗೆ ಮಾಹತಿ | Information About Insurance in Kannada

ವಿಮೆ ಬಗ್ಗೆ ಮಾಹತಿ Information About Insurance vime bagge mahiti in kannada


Contents

ವಿಮೆ ಬಗ್ಗೆ ಮಾಹತಿ

Information About Insurance in Kannada
Information About Insurance in Kannada

ಈ ಲೇಖನಿಯಲ್ಲಿ ವಿಮೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

Information About Insurance in Kannada

ಪ್ರಪಂಚದಲ್ಲಿ ಕಂಡು ಬರುವ ಮನುಷ್ಯ ವರ್ಗದವರನ್ನೂ ಸೇರಿಸಿ ಎಲ್ಲ ವಸ್ತುಗಳು ಒಂದಲ್ಲ ಒಂದು ರೀತಿಯ ಅಪಾಯಗಳಿಗೊಳಗಾಗುತ್ತವೆ. ಈ ವಸ್ತುಗಳು ಮನುಷ್ಯವರ್ಗದವರನ್ನು ಸೇರಿಸಿ ಪ್ರಾಣಿವರ್ಗಗಳಾಗಿರಬಹುದು, ಯಂತ್ರಗಳಾಗಿರಬಹುದು, ಕಟ್ಟಡಗಳಾಗಿರಬಹುದು. ಒಬ್ಬ ಮನುಷ್ಯ ಅಥವಾ ಪ್ರಾಣಿ ಆಕಸ್ಮಿಕವಾಗಿ ಗಾಯಗೊಳ್ಳಬಹುದು ಅಥವಾ ಸಾಯಬಹುದು. ಮನುಷ್ಯರಿಗೆ, ಪ್ರಾಣಿಗಳಿಗೆ, ವಸ್ತುಗಳಿಗೆ ಆಗುವ ಆಕಸ್ಮಿಕಗಳಿಂದ ಹೆಚ್ಚು ನಷ್ಟಗಳನ್ನು ಹಾನಿ ಎನ್ನುತ್ತೇವೆ.

ವಿಮೆ ಎಂದರೇನು ?

ಒಂದು ನಿರ್ಧಿಷ್ಟ ಹಣ ಮೌಲ್ಯದ ಕಂತನ್ನು ಪಾವತಿಸಿ ಒಬ್ಬ ಮನುಷ್ಯನು ತನಗಾಗಲೀ ಅಥವಾ ತನ್ನ ವಸ್ತುಗಳಿಗಾಗಲಿ ಬಳಗಾಗುವ ಕೆಲವು ಅಪಾಯಗಳಿಂದ ಅಥವಾ ಹಾನಿಗಳಿಂದ ರಕ್ಷಿಸಿಕೊಳ್ಳಲು ಒಂದು ಪರಿಹಾರವನ್ನು ಕೊಡಲು ಒಪ್ಪುವವನನ್ನು ವಿಮಾಕರ್ತ ಎನ್ನುತ್ತೇವೆ. ನಷ್ಟ ಪರಿಹಾರ ಪಡೆಯುವವನನ್ನು ವಿಮದಾರ ಎನ್ನುತ್ತೇವೆ. ನಷ್ಟ ಪರಿಹಾರವನ್ನು ಕೊಡಲು ಒಪ್ಪುವವನನ್ನು ವಿಮಾಕರ್ತ ಎನ್ನುತ್ತೇವೆ. ನಷ್ಟ ಪರಿಹಾರ ಪಡೆಯುವವನನ್ನು ವಿಮದಾರ ಎನ್ನುತ್ತೇವೆ.

ವಿಮಾಕರ್ತನು ವಿಮಾದಾರನಿಗಾಗಲಿ ಅಥವಾ ಅವನಿಂದ ನಾಮ ನಿರ್ದೇಶಿಸಿರುವ ವ್ಯಕ್ತಿಗಾಗಲಿ ವಿಮೆ ಮಾಡಿರುವ ಮೊತ್ತವನ್ನು ಹಕ್ಕಿನ ಮೂಲಕ ಕೊಡಬೇಕಾಗುತ್ತದೆ. ವಿಮಾ ಸಂಸ್ಥೆಯು ವಿಮಾ ಪಾಲಿಸಿಯ ಮೊತ್ತವನ್ನು ಹಕ್ಕಿನ ಮೂಲಕ ಕೊಡಬೇಕಾಗುತ್ತದೆ. ವಿಮಾ ಸಂಸ್ಥೆಯು ವಿಮಾ ಪಾಲಿಸಿಯ ಮೊತ್ತವನ್ನು ಅನಿರೀಕ್ಷಿತ ಸಂದರ್ಭಗಳಲ್ಲಿ ನಷ್ಟ ಭರ್ತಿ ಮಾಡಿಕೊಡಬೇಕಾಗುತ್ತದೆ. ಜೀವ ವಿಮೆಯು ಮನುಷ್ಯನ ಜೀವನಕ್ಕೆ ಸಂಬಂಧಪಟ್ಟಿರುವುದಾಗಿರುತ್ತದೆ. ಸಂಕ್ಷಿಪ್ತವಾಗಿ ಹೇಳುವುದಾದರೆ ವಿಮೆಯು ವಿಮಾ ಸಂಸ್ಥೆ ಮತ್ತು ವಿಮಾದಾರನ ಮಧ್ಯೆ ಏರ್ಪಡುವ ಒಂದು ಒಪ್ಪಂದವಾಗಿರುತ್ತದೆ.

ವಿಮೆಯ ಪ್ರಾಮುಖ್ಯತೆ :

 • ವಿಮೆಯು ಅಪಾಯ, ಹಾನಿ ಅಥವಾ ಮರಣ ಸಂಭವನೀಯತೆಯನ್ನು ರಕ್ಷಿಸುತ್ತದೆ.
 • ವಿಮೆಯು ಕಡ್ಡಾಯ ಉಳಿತಾಯವನ್ನು ಪೋತ್ಸಾಹಿಸುತ್ತದೆ.
 • ವಿಮೆಯು ವಿಮಾದಾರನ ಅಭೀಷ್ಟತೆಯನ್ನು ಈಡೇರಿಸಲು ಸಹಾಯ ಮಾಡುತ್ತದೆ.
 • ವಿಮೆಯು ಜೀವ ಮತ್ತು ವಸ್ತು ನಷ್ಟಗಳನ್ನು ಭರಿಸುವುದರಿಂದ ವಿಮಾದಾರನು ಶಾಂತವಾಗಿರಲು ಸಾಧ್ಯವಾಗುತ್ತದೆ.
 • ವಿಮೆಯು ಜೀವ ನಷ್ಟದ ವಿವಾರಣೆಗೆ ಸಹಾಯಮಾಡುತ್ತದೆ.
 • ವಿಮೆಯು ಸಾಮಾಜಿಕ ಒಳತಿಗಾಗಿ ಸಹಾಯಮಾಡುತ್ತದೆ.
 • ವಿಮೆಯು ಹಣದ ಠೇವಣಿಗಳನ್ನು ಪೋತ್ಸಾಹಿಸುತ್ತದೆ.
 • ವಿಮೆಯು ಋಣ ಸಂದಾಯಗಳಿಗೆ ಅನುವು ಮಾಡಿಕೊಡುತ್ತದೆ.
 • ವಿಮೆಯು ಸಾಲಗಳನ್ನು ಕೊಡುತ್ತದೆ ಮತ್ತು ತೆರಿಗೆಗಳ ವಿನಾಯಿತಿಗೆ ಸಹಾಯ ಮಾಡುತ್ತದೆ.

ಜೀವ ವಿಮೆ ಏಕೆ ಬೇಕು?

 • ಒಬ್ಬ ಮುನುಷ್ಯನಿಗೆ ಏನಾದರು ವಿಪತ್ತು ಅಥವಾ ಅನಾಹುತ ಸಂಭವಿಸಿದಲ್ಲಿ ಆ ಮನುಷ್ಯನ ಕುಟುಂಬಕ್ಕೆ ತಕ್ಷಣಕ್ಕೆ ಬೇಕಾದ ಹಣದ ಸಂರಕ್ಷಣೆಗಾಗಿ.
 • ಮಕ್ಕಳ ವಿದ್ಯಾಭ್ಯಾಸ ಅಥವಾ ಇತರೆ ಅವಶ್ಯಕತೆಗಳಿಗಾಗಿ.
 • ನಿವೃತ್ತಿ ಹೊಂದಿದ ಮೇಲೆ ಒಂದು ನಿರಂತರ ಆದಾಯದ ಮೂಲಕ್ಕಾಗಿ ಅಥವಾ ಉಳಿತಾಯದ ಯೋಜನೆಗಾಗಿ.
 • ಏನಾದರೂ ಅಪಘಾತ ಅಥವಾ ಗಂಬೀರ ಖಾಯಿಲೆಯಿಂದಾಗಿ ಆದಾಯ ಕುಂಠಿತಗೊಂಡಾಗ ಬೇಕಾಗುವ ಹಣದ ಭರವಸೆಗಾಗಿ.
 • ಜೀವನ ಶ್ಯೆಲಿಯ ಬದಲಾವಣೆಗಳಿಗೆ ಅನುಗುಣವಾಗಿ ಅಥವಾ ಇತರೆ ಏನಾದರೂ ಹಣದ ಅನಿಶ್ಚಿತತೆಯ ಸಂಭವಗಳಿಗಾಗಿ ವಿಮೆಯು ಬೇಕಾಗುತ್ತದೆ.

ವಿಮೆಯಲ್ಲಿ ಉಪಯೋಗಿಸುವ ಪದಗಳು :

ವಿಮಾ ಪಾಲಿಸಿ :

ಇದು ವಿಮಾಕರ್ತ ಮತ್ತು ವಿಮಾದಾರನ ನಡುವೆ ಏರ್ಪಡುವ ಒಂದು ಬರವಣಿಗೆಯ ಮೂಲಕದ ಕರಾರು. ಇದರಲ್ಲಿ ಎಲ್ಲಾ ಕರಾರುಗಳು ಅಂದರೆ ಹಕ್ಕುಸಾಧನೆ, ಅವಧಿ, ನಾಮ ನಿರ್ದೇಶನ ವಿಮೆಯ ಅವಧಿ ಮುಗಿದ ನಂತರ ಕೊಡಬೇಕಾಗುವ ಹಣ, ವಿಮಾಕಂತು ಮುಂತಾದುವೆಲ್ಲವನ್ನು ತೋರಿಸಿರುತ್ತಾರೆ. ಇದನ್ನು ಜೀವ ವಿಮಾಬಾಂಡು ಎಂದೂ ಕರೆಯುತ್ತಾರೆ.

ಹಕ್ಕುಸಾಧನೆ :

ಇದು ವಿಮಾದಾರನಾಗಲೀ, ಅವನ ನಾಮನಿರ್ದೇಶಕನಾಗಲಿ ಅಥವಾ ನ್ಯಾಯಬದ್ಧ ಹಕ್ಕುದಾರನಾಗಲೀ ವಿಮಾಕರ್ತನಿಗೆ ಅವಧಿ ಮುಗಿದ ನಂತರ ಅಥವಾ ವಿಮಾ ಪಾಲಿಸಿಯ ರೀತ್ಯಾ ಅಪಘಾತ ಅಥವಾ ಹಾನಿ ಸಂಭವಿದಾಗ ವಿಮಾ ಸಂಸ್ಥೆಗೆ ವಿಮೆಯ ಹಣವನ್ನು ಪಾವತಿಸಲು ಕೇಳಿಕೊಳ್ಳುವ ಸಾಧನ.

ವಿಮಾವಂತಿಗೆ :

ಜೀವ ವಿಮೆಯ ರಕ್ಷಣೆಗಾಗಿ ವಿಮಾದಾರನು ನಿರ್ಧಿಷ್ಟ ಅವಧಿಯವರೆಗೂ ಜೀವವಿಮಾ ಸಂಸ್ಥೆಗೆ ಅವಧಿಗನುಗುಣವಾಗಿ ಪಾವತಿಸಬೇಕಾದ ವಂತಿಗೆಯಾಗಿದೆ. ಇದು ವಿಮಾ ಹಣಕ್ಕೆ ವಿಮಾದಾರನಿಗೂ ವಿಮಾಸಂಸ್ಥೆಗೂ ಮಧ್ಯ ನಿರ್ಧರಿಸಿರುವ ವಿನಿಮಯದ ಹಣವಾಗಿರುತ್ತದೆ.

ವಿಮೆಯ ತತ್ವಗಳು

ಪ್ರತಿಯೊಂದು ವಿಮೆಯ ಕರಾರು ವಿಮಾದಾರನಿಗೆ ಮುಂಬರುವ ಅನಿರೀಕ್ಷಿತ ಘಟನೆಗಳಿಗೆ ಹಣಕಾಸಿನ ರಕ್ಷಣೆಯಿಂದ ಕೂಡಿರುತ್ತದೆ. ವಿಮಾಕರ್ತನು ಈ ಹಣಕಾಸನ್ನು ತನ್ನ ಕರ್ತವ್ಯವನ್ನು ಎಂದೂ ಮರೆಯಬಾರದು.

ಅತ್ಯಧಿಕ ವಿಶ್ವಾಸಾರ್ಹತೆಯ ತತ್ವ :

ಈ ತತ್ವವು ಮೂಲಭೂತ ಮತ್ತು ಪ್ರಾಥಮಿಕ ತತ್ವವಾಗಿರುತ್ತದೆ. ಇದರ ಪ್ರಕಾರ ವಿಮೆಯ ಕರಾರಿಗೆ ವಿಮಾಕರ್ತ ಮತ್ತು ವಿಮಾದಾರ ಇಬ್ಬರೂ ಸಹಿಹಾಕಿರಬೇಕು ಮತ್ತು ಒಬ್ಬರಲ್ಲೊಬ್ಬರಿಗೆ ವಿಶ್ವಾಸಾರ್ಹತೆಯಿರಬೇಕು.

ವಿಮಾರ್ಹ ಹಿತಾಸಕ್ತಿ :

ಇದರ ಪ್ರಕಾರ ವಿಮಾದಾರನಿಗೆ ವಿಮೆ ಮಾಡುತ್ತಿರುವ ವಸ್ತುವಿನ ಮೇಲೆ ವಿಮಾರ್ಹ ಹಿತಾಸಕ್ತಿ ಇರಬೇಕಾಗುತ್ತದೆ.

ನಷ್ಟ ಪರಿಹಾರ ತತ್ವ :

ನಷ್ಟ ಪರಿಹಾರ ಅಂದರೆ ರಕ್ಷಣೆ, ಪೋಷಣೆ ಮತ್ತು ಪರಿಹಾರಗಳನ್ನು ಹಾನಿ ಅಥವಾ ನಷ್ಟವನ್ನು ಭವಿಷ್ಯತ್‌ ಕಾಲದಲ್ಲಿ ಕೂಡುವುದೇ ಆಗಿದೆ. ಇದರ ಪ್ರಕಾರ ವಿಮಾ ಒಪ್ಪಂದವು ಅಸಂಭವನೀಯ ಹಣಕಾಸಿನ ನಷ್ಟ ಆದಾಗ ರಕ್ಷಣೆ ಕೊಡುವುದೇ ಆಗಿದೆ.

ಕೊಡುಗೆ ತತ್ವ :

ಈ ತತ್ವವು ವಿಮಾಕರಾರಿನ ಇಬ್ಬರು ವ್ಯಕ್ತಿಗಳಿಗೂ ಅನ್ವಯವಾಗುತ್ತದೆ. ವಿಮಾದಾರನು ವಾಸ್ತವ ನಷ್ಟಕ್ಕಿಂತ ಹೆಚ್ಚು ಪರಿಹಾರ ಪಡೆಯಲು ಸಾಧ್ಯವಿಲ್ಲ ಹಾಗೂ ವಿಮಾಕರ್ತ ಈ ನಷ್ಟವನ್ನು ಕಟ್ಟಿಕೊಡಲೇಬೇಕಾಗುತ್ತದೆ.

ಸಮಾನ ಅನುಭೋಗದ ತತ್ವ :

ಈ ತತ್ವದಂತೆ ವಿಮೆಗೊಳಿಸಲಾದ ಸ್ವತ್ತು ನಾಶಗೊಂಡಾಗ ವಿಮೆಮಾಡಿದವನ ನಷ್ಟವನ್ನು ವಿಮಾಕರ್ತ ಪೂರ್ಣವಾಗಿ ಸಲ್ಲಿಸುವಂತೆ ಮತ್ತು ವಿಮಾದಾರ ಪೂರ್ಣವಾಗಿ ಪಡೆಯುವ ಎಲ್ಲ ಹಕ್ಕುಗಳನ್ನು ಹೊಂದಿರುತ್ತದೆ.

ಕನಿಷ್ಟ ನಷ್ಟಶಮನ ತತ್ವ :

ಈ ತತ್ವದ ಪ್ರಕಾರ ವಿಮಾದಾರನು ಯಾವಾಗಲೂ ವಿಮ ಮಾಡಿಸುವ ಸ್ವತ್ತನ್ನು ಹಾನಿಗಳಿಂದಾಗುವ ನಷ್ಟವನ್ನು ಕಡಿಮೆ ಮಾಡುವಂತಿರಬೇಕು.

ನಿಕಟ ಕಾರಣ ತತ್ವ :

ಈ ತತ್ವದ ಪ್ರಕಾರ ವಿಮಾದಾರನಿಗೆ ಯಾವ ವಸ್ತುಗಳ ಮೇಲೆ ನಷ್ಟದ ವಿರುದ್ಧ ವಿಮೆ ಮಾಡಲಾಗಿಯೋ ಆ ನಷ್ಟವನ್ನು ಮಾತ್ರ ವಿಮಾಕರ್ತನು ಕಟ್ಟಿಕೊಡಬೇಕಾಗುತ್ತದೆ.

ವಿಮಾ ಸಂಸ್ಥೆಗಳಿಂದಾಗುವ ಅನುಕೂಲಗಳು

 • ಅನೇಕರಿಗೆ ಯುಕ್ತ ಅಥವಾ ವಿವೇಚನೆಯ ಲಾಭಗಳಿಕೆ ಆಗುತ್ತದೆ.
 • ಜನರಿಗೆ ರಕ್ಷಣಾ ಮನೋಭಾವ ಉಂಟಾಗುತ್ತದೆ.
 • ಅನೇಕರಿಗೆ ಉದ್ಯೋಗಾವಕಾಶ ದೊರೆಯುತ್ತದೆ.
 • ಆಸ್ತಿ ಅಥವಾ ಸ್ವತ್ತಿನ ಸುರಕ್ಷತೆ ಉಂಟಾಗುತ್ತದೆ.
 • ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುತ್ತದೆ.
 • ಐಶ್ವರ್ಯವಂತರಿಗೂ ಬಡವರಿಗೂ ತಾರತಮ್ಯ ಇರುವುದಿಲ್ಲ.
 • ಸಂಶೋಧನಾಕಾರ್ಯಗಳಿಗೆ ಸಹಾಯ ಮಾಡುತ್ತವೆ.
 • ನಷ್ಟಕ್ಕೆ ಈಡಾಗುವುದನ್ನು ತಪ್ಪಿಸುತ್ತದೆ.
 • ಆರ್ಥಿಕ ಬೆಳವಣಿಗೆಗೆ ಉತ್ತೇಜನ ಕೊಡುತ್ತದೆ.
 • ರಕ್ಷಣೆಯ ಭರವಸೆ ಕೊಡುತ್ತದೆ.
 • ವ್ಯಾಪಾರ ಪೈಪೋಟಿಯನ್ನು ಉತ್ತೇಜಿಸುತ್ತದೆ.
 • ಅಂತರ ರಾಷ್ಟ್ರೀಯ ವ್ಯಾಪಾರವನ್ನು ಪೋತ್ಸಾಹಿಸುತ್ತದೆ.

ವಿಮಾ ಪಾಲಿಸಿಯನ್ನು ತೆಗೆದುಕೊಳ್ಳಲು ಅನುಸರಿಸಬೇಕಾದ ವಿಧಾನ

 • ಯಾವ ವಿಮಾಸಂಸ್ಥೆಯಿಂದ ವಿಮಾಪಾಲಿಸಿ ಪಡೆಯಬೇಕೆಂದಿರುವಿರೋ ಅದನ್ನು ಗುರ್ತಿಸಿ.
 • ನೀವು ತೆಗೆದುಕೊಳ್ಳಲು ಇಷ್ಟಪಡುವ ವಿಮೆಯ ವೆಚ್ಚ ಮತ್ತು ವಂತಿಗೆಗಳನ್ನು ವಯಸ್ಸಿಗನುಗುಣ ತಿಳಿದುಕೊಳ್ಳಿ.
 • ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ. ಇದನ್ನು ಪ್ರಪೋಸಲ್‌ ಫಾರಂ ಎನ್ನುತ್ತಾರೆ.
 • ಪ್ರಪೋಸಲ್‌ ಫಾರಂನ್ನು ಪೂರ್ಣವಾಗಿ ಭರ್ತಿ ಮಾಡಿ, ಈ ಅರ್ಜಿ ನಮೂನೆಯಲ್ಲಿ ಮೂಲಭೂ ವಿವರಗಳಾದ ವಿವರಗಳಾದ ತೂಕ, ಎತ್ತರ, ಜನ್ಮ ದಿನಾಂಕ, ಆದಾಯದ ವಿವರ, ಕುಟುಂಬದ ಸದಸ್ಯರ ವಿವರ ಮುಂತಾದುವೆಲ್ಲ ಸೇರಿರುತ್ತದೆ.
 • ವಿವರಗಳನ್ನೆಲ್ಲ ಕರಾರುವಾಕ್ಕಾಗಿ ಭರ್ತಿಮಾಡಿ ಇದಕ್ಕೆ ವಿಮಾ ಸಂಸ್ಥೆಯ ಅಧಿಕಾರಿಗಳಿಂದಾಗಲೀ ಅಥವಾ ಏಜೆಂಟರಿಂದಾಗಲೀ ಸಹಾಯ ಪಡೆಯಿರಿ.
 • ವಿಮಾ ಕಂತಿನ ಹಣದೊಂದಿಗೆ ಪಾಲಿಸಿಯ ಜೊತೆಯಲ್ಲಿ ಲಗತ್ತಿಸಬೇಕಾದ ಪತ್ರಗಳೊಂದಿಗೆತಲುಪಿದ ತಲುಪಿಸಿ.ವಿಮ
 • ವಿಮಾ ಸಂಸ್ಥೆ ನಿಮ್ಮ ಅರ್ಜಿ ನಮೂನೆಯಲ್ಲಿ ನೀವು ಕೊಟ್ಟಿರುವ ವಿವರಗಳನ್ನೇಲ್ಲ ಪರಾಮರ್ಶಿಸಿ ಕೆಲವು ದಿನಗಳಲ್ಲಿ ನಿಮಗೆ ವಿಮಾ ಬಾಂಡನ್ನು ಕಳುಹಿಸಲಾಗುತ್ತದೆ.
 • ವಿಮಾ ಬಾಂಡು ಬಂದ ನಂತರ ನಿಮ್ಮ ವಿಮಾ ಪಾಲಿಸಿ ಅಂಗೀಕಾರವಾಗಿದೆಯೆಂದು ತಿಳಿದು, ಈ ಬಾಂಡನ್ನು ಸರಕ್ಷಿತವಾಗಿಡಿ.

FAQ

ಭಾರತದ ಕೇಂದ್ರ ಬ್ಯಾಂಕ್‌ ಯಾವುದು?

RBI

ಭಾರತದಲ್ಲಿ ನಾಣ್ಯಗಳನ್ನು ಮುದ್ರಿಸುವವರು ಯಾರು?

ಹಣಕಾಸು ಸಚಿವಾಲಯ.

ಇತರೆ ವಿಷಯಗಳು :

ಕುಟುಂಬದ ಬಗ್ಗೆ ಮಾಹಿತಿ

ಮಹಿಳಾ ಶಿಕ್ಷಣದ ಮೇಲೆ ಪ್ರಬಂಧ

LEAVE A REPLY

Please enter your comment!
Please enter your name here