ಬ್ಯಾಂಕು ವ್ಯವಹಾರಗಳ ಬಗ್ಗೆ ಮಾಹಿತಿ | Information About Bank Transactions in Kannada

0
414
ಬ್ಯಾಂಕು ವ್ಯವಹಾರಗಳ ಬಗ್ಗೆ ಮಾಹಿತಿ | Information About Bank Transactions in Kannada
ಬ್ಯಾಂಕು ವ್ಯವಹಾರಗಳ ಬಗ್ಗೆ ಮಾಹಿತಿ | Information About Bank Transactions in Kannada

ಬ್ಯಾಂಕು ವ್ಯವಹಾರಗಳ ಬಗ್ಗೆ ಮಾಹಿತಿ Information About Bank Transactions bank vyavaharagala bagge mahiti in kannada


Contents

ಬ್ಯಾಂಕು ವ್ಯವಹಾರಗಳ ಬಗ್ಗೆ ಮಾಹಿತಿ

Information About Bank Transactions in Kannada
Information About Bank Transactions in Kannada

ಬ್ಯಾಂಕುಗಳು ಸುಮಾರು ಎರಡುನೂರು ವರ್ಷಗಳ ಹಿಂದೆ ಅಭಿವೃದ್ಧಿ ಹೊಂದಿದವು. ಬ್ಯಾಂಕುಗಳ ಸ್ವರೂಪವು ಕಾಲಕ್ಕನುಗುಣವಾಗಿ ಬದಲಾವಣೆ ಹೊಂದುತ್ತಾ ಬಂದಿತು. ಬ್ಯಾಂಕು ಎಂಬ ಪದವು ಹಣಕಾಸಿನ ವ್ಯವಹಾರಗಳಿಗೆ ಸಂಬಂಧಪಟ್ಟಿದೆ. ಇವು ಹಣಕಾಸಿನ ಸಂಸ್ಥೆಗಳಾಗಿದ್ದು ಗ್ರಾಹಕರು ಭದ್ರತೆಯ ದೃಷ್ಟಿಯಿಂದ ಬ್ಯಾಂಕುಗಳಲ್ಲಿ ತಮ್ಮ ಹಣವನ್ನು ಇಟ್ಟು ತಮಗೆ ಬೇಕಾದಾಗ ಹಿಂದಿರುಗಿ ಪಡೆಯಲು ಸಾಧ್ಯವಾಗಿದೆ. ಬ್ಯಾಂಕುಗಳು ಗ್ರಾಹಕರಿಗೆ ಸಾಲಗಳನ್ನು ಕೊಟ್ಟ ಅವುಗಳಿಗೆ ಬಡ್ಡಿ ವಸೂಲು ಮಾಡುತ್ತವೆ. ವಿವಿಧ ದೇಶಗಳ ವಿವಿಧ ಹಣವನ್ನು ವಿನಿಮಯ ಮಾಡುವ ಕಾರ್ಯ ಮಾಡುತ್ತವೆ.

ಬ್ಯಾಂಕ್‌ ಎಂದರೇನು ?

ಬ್ಯಾಂಕು ಎಂಬ ಪದವು ಇಟಾಲಿಯನ್ ನ “ಬ್ಯಾಂಕೊ” ಅಥವಾ ಫ್ರೆಂಚಿನ “ಬ್ಯಾಂಕ್” ಎಂಬ ಶಬ್ಧಗಳಿಂದ ಬಂದಿದೆ. ಇವುಗಳ ಅರ್ಥ ʼಬೆಂಚುʼ ಅಥವಾ ಹಣವನ್ನು ವಿನಿಮಯ ಮಾಡಿಕೊಳ್ಳುವ ಟೇಬಲ್‌ ಆಗಿದೆ.

ಬ್ಯಾಂಕಿಂಗ್‌ ಕಂಪನಿಯ ಹಣಕಾಸಿನ ವ್ಯವಹಾರ ಅಂದರೆ ಹಣವನ್ನು ತಮ್ಮಲ್ಲಿ ಇಡುಗಂಟಾಗಿಟ್ಟುಕೊಂಡದ್ದನ್ನು ಸಾಲಕೊಡುವ ಸಂಸ್ಥೆಯಾಗಿದೆ ಎಂದು ವ್ಯಾಖ್ಯಾನಿಸಬಹುದು. ಬ್ಯಾಂಕು ಹಣಕಾಸಿನ ಸಂಸ್ಥೆಯಾಗಿದ್ದು ಠೇವಣಿಗಳನ್ನು ಸಾಲಗಳ ರೂಪದಲ್ಲಿ ಬೇರೆ-ಬೇರೆ ಸೇವೆಗಳಿಗಾಗಿ ಕೊಡುತ್ತದೆ. ಇದು ಯಾರು ಹಣವನ್ನು ಉಳಿತಾಯ ಮಾಡಬೇಕೆಂದು ಬಯಸುವರೋ ಅವರಿಂದ ಸ್ವೀಕರಿಸಿ ಯಾರಿಗೆ ಅವಶ್ಯವಿದೆಯೋ ಅವರಿಗೆ ಸಾಲದ ರೂಪದಲ್ಲಿ ಕೊಡುತ್ತದೆ. ಬ್ಯಾಂಕಿನಲ್ಲಿಯ ಸೇವೆಗಳನ್ನು ಉಪಯೋಗಿಸಿಕೊಳ್ಳುವ ಆ ವ್ಯವಹಾರಗಳನ್ನು ಬ್ಯಾಂಕಿಂಗ್‌ ಎನ್ನುತ್ತೇವೆ.

ಬ್ಯಾಂಕುಗಳ ಗುಣ ಲಕ್ಷಣಗಳು

 • ಹಣದ ವಹಿವಾಟು :

ಬ್ಯಾಂಕುಗಳು ಹಣಕಾಸಿನ ಸಂಸ್ಥೆಗಳಾಗಿದ್ದು ಸಾರ್ವಜನಿಕರ ಹಣದ ವಹಿವಾಟನ್ನು ಮಾಡುತ್ತವೆ.

 • ವ್ಯಕ್ತಿ/ಸಂಸ್ಥೆ/ಕಂಪನಿ :

ಬ್ಯಾಂಕು ಒಬ್ಬ ವ್ಯಕ್ತಿಯಾಗಿರಬಹುದು, ಸಂಸ್ಥೆ ಅಥವಾ ಕಂಪನಿ ಆಗಿರಬಹುದು. ಬ್ಯಾಂಕಿಂಗ್‌ ಕಂಪನಿ ಎಂದರೆ ಹಣಕಾಸಿನ ವ್ಯವಹಾರ ಮಾಡುವ ಸಂಸ್ಥೆ.

 • ಠೇವಣಿಗಳನ್ನು ಅಂಗೀಕರಿಸುತ್ತವೆ :

ಬ್ಯಾಂಕು ಸಾರ್ವಜನಿಕರಿಂದ ಠೇವಣಿಗಳನ್ನು ಅಂಗೀಕರಿಸುತ್ತದೆ. ಈ ಠೇವಣಿದಾರರು ಬೇಡಿಕೆ ಇಟ್ಟಾಗ ಅಥವಾ ಒಂದು ನಿರ್ಧಿಷ್ಟ ಅವಧಿ ಮುಗಿದ ಮೇಲೆ ಹಿಂದಿರುಗಿಸಬೇಕಾಗುತ್ತದೆ. ಈ ಠೇವಣಿಗಳಿಗೆ ಬ್ಯಾಂಕು ಭದ್ರತೆಯನ್ನು ಒದಗಿಸುತ್ತದೆ. ಬ್ಯಾಂಕು ಗ್ರಾಹಕರ ಠೇವಣಿಗಳಿಗೆ ಮೇಲ್ವಿಚಾರಕನಂತೆ ವರ್ತಿಸುತ್ತದೆ.

 • ಸಾಲಗಳನ್ನು ಕೊಡುವುದು :

ಬ್ಯಾಂಕು ಕೈಗಾರಿಕಾ ಕ್ಷೇತ್ರ, ಕೃಷಿಕ್ಷೇತ್ರ, ಶಿಕ್ಷಣ, ಗೃಹನಿರ್ಮಾಣ ಮೊದಲಾದ ಉದ್ದೇಶಗಳಿಗಾಗಿ ಹಣವನ್ನು ಸಾಲರೂಪದಲ್ಲಿ ಕೊಡುತ್ತದೆ.

 • ಪಾವತಿ ಮತ್ತು ಹಿಂದಕ್ಕೆ ಪಡೆಯುವುದು :

ಬ್ಯಾಂಕು ಸುಲಭ ರೀತಿಯಲ್ಲಿ ಠೇವಣಿದಾರರಿಗೆ ಚೆಕ್ಕು ಅಥವಾ ಹುಂಡಿಗಳ ಮೂಲಕ ಹಣವನ್ನು ಪಾವತಿಮಾಡುತ್ತದೆ ಮತ್ತು ಠೇವಣಿಗಳನ್ನು ಹಿಂದಕ್ಕೆ ಪಡೆಯಲು ಅನುವು ಮಾಡಿಕೊಡುತ್ತದೆ.

 • ಏಜೆಂಟ್‌ ಅಥವಾ ಏಜೆಂಟ್‌ ನಿಯೋಜನೆ ಮತ್ತು ಉಪಯುಕ್ತ ಸೇವೆಗಳು :

ಬ್ಯಾಂಕು ತನ್ನ ಗ್ರಾಹಕರಿಗೆ ಏಜೆಂಟರಂತೆ ಅನೇಕ ಉಪಯುಕ್ತ ಸೇವೆಗಳನ್ನು ಒದಗಿಸುತ್ತದೆ.

 • ಲಾಭ ಮತ್ತು ಸೇವಾ ಭಾವನೆ :

ಬ್ಯಾಂಕು ಸೇವೆಯ ಮನೋಭಾವ ಹೊಂದಿದ್ದು ಲಾಭ ಪಡೆಯುವ ಒಂದು ಸಂಸ್ಥೆಯಾಗಿದೆ.

 • ನಿರಂತರ ವಿಸ್ತರಿಸುತ್ತಾ ಹೋಗುವ ಕಾರ್ಯಗಳು :

ಬ್ಯಾಂಕುಗಳು ತಮ್ಮ ಕಾರ್ಯಗಳನ್ನು ನಿರಂತರವಾಗಿ ಬೇರೆ-ಬೇರೆ ದಿಕ್ಕುಗಳತ್ತ ಸೇವೆಗಳನ್ನು ಮತ್ತು ಚಟುವಟಿಕೆಗಳನ್ನು ವಿಸ್ತರಿಸಿಕೊಂಡು ಹೋಗುತ್ತವೆ.

 • ಸಂಬಂಧ ಕಲ್ಪಿಸುವ ಕೊಂಡಿ :

ಬ್ಯಾಂಕು ಠೇಣಿದಾರರು ಮತ್ತು ಸಾಲ ಪಡೆಯುವವರ ಮಧ್ಯೆ ಸಂಪರ್ಕ ಕಲ್ಲಿಸುವ ಒಂದು ಕೊಂಡಿಯಂತೆ ತಮ್ಮ ಕಾರ್ಯಗಳನ್ನು ನಡೆಸುತ್ತದೆ. ಗ್ರಾಹಕರ ಉಳಿಕೆ ಹಣವನ್ನು ಠೇವಣಿಗಳ ಮೂಲಕ ಸಂಗ್ರಹಿಸಿ ಇದನ್ನು ಯಾರಿಗೆ ಅವಶ್ಯಕವಿದೆಯೋ ಅವರಿಗೆ ಸಾಲ ರೂಪದಲ್ಲಿ ಕೊಡುತ್ತದೆ.

 • ಬ್ಯಾಂಕಿಂಗ್‌ ವ್ಯವಹಾರ :

ಬ್ಯಾಂಕಿನ ಮುಖ್ಯ ಚಟುವಟಿಕೆ ಹಣಕಾಸಿನಿಂದ ಕೂಡಿದ ವ್ಯವಹಾರ (ಬ್ಯಾಂಕಿಂಗ್) ವಾಗಿದ್ದು ಇತರೆ ವ್ಯವಹಾರಗಳಿಗೆ ಅಧೀನವಾಗಿರುವುದಿಲ್ಲ.

ಬ್ಯಾಂಕಿನ ಕಾರ್ಯಗಳು :

೧. ಸಾರ್ವಜನಿಕರಿಂದ ಅಥವಾ ಇತರರಿಂದ ಠೇವಣಿಗಳನ್ನು ಅಂಗೀಕರಿಸುವುದು.

೨. ಸಾರ್ವಜನಿಕರಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸಾಲಗಳನ್ನು ಕೊಡುವುದು.

೩. ಹಣವನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾಯಿಸುವುದು.

೪. ಚೆಕ್ಕು ಮತ್ತು ಹುಂಡಿಗಳ ಮೇಲೆ ಹಣ ವಸೂಲಿ ಮಾಡುವುದು.

೫. ಹುಂಡಿಗಳನ್ನು ಸೋಡಿ ಮಾಡುವುದು.

೬. ಭದ್ರತಾ ಕಪಾಟುಗಳನ್ನು ಬಾಡಿಗೆಗೆ ಕೊಡುವುದು.

೭. ವಿದೇಶಿ ವಿನಿಮಯದ ವ್ಯವಹಾರಗಳನ್ನು ನಿರ್ವಹಿಸುವುದು.

೮. ಬೆಲೆ ಬಾಳುವ ವಸ್ತುಗಳನ್ನು ತಮ್ಮ ಸುಪರ್ಧಿಗಳಲ್ಲಿ ಭದ್ರವಾಗಿ ಇಟ್ಟುಕೊಳ್ಳುವುದು.

೯. ಸಾಲಪತ್ರಗಳನ್ನು ಮತ್ತು ಜವಾಬ್ಧಾರಿ ಪತ್ರಗಳನ್ನು ಕೊಡುವುದು.

೧೦. ಸರ್ಕಾರದ ( ಕೇಂದ್ರ ಹಾಗೂ ರಾಜ್ಯ ) ಹಣಕಾಸಿನ ವ್ಯವಹಾರಗಳನ್ನು ನಿರ್ವಹಿಸುವುದು.

ಬ್ಯಾಂಕರನಿಗೂ ಮತ್ತು ಗ್ರಾಹಕರಿಗೂ ಇರುವ ಸಂಬಂಧ :

೧. ಸಾಮಾನ್ಯ ಸಂಬಂಧ :

 • ಪ್ರಾಥಮಿಕ ಸಂಬಂಧ (ಸಾಲಿಗ ಮತ್ತು ಸಾಲಗಾರನ ಸಂಬಂಧದಂತೆ)
 • ಸಹಾಯಕ ಅಥವಾ ಉಪಕಾರ ಸಂಬಂಧ
 • ಕಾರಬಾರಿ ಅಥವಾ ನಿಯೋಗಿ ಮತ್ತು ಮುಖ್ಯಸ್ಥನ ಸಂಬಂಧ.

೨. ವಿಶೇಷ ಸಂಬಂಧ :

 • ಚೆಕ್ಕುಗಳನ್ನು ಮನ್ನಣೆ ಮಾಡುವುದು.
 • ಗ್ರಾಹಕನ ಲೆಕ್ಕಗಳ ಗೋಪ್ಯತೆ ಕಾಪಾಡುವುದು.

ಬ್ಯಾಂಕುಗಳು ಸಲ್ಲಿಸುವ ಸೇವೆಗಳು

೧. ಜಮಾ ಕಾರ್ಡುಗಳನ್ನು ಕೊಡುವುದು.

೨. ಖಾಸಗಿ ಸಾಲಗಳು.

೩. ಮನೆ ಕಟ್ಟಲು ಅಥವಾ ವಾಹನ ಖರೀದಿಸಲು ಸಾಲ ಕೊಡುವುದು.

೪. ಪರಸ್ವರ ನಿಧಿಗಳನ್ನು ನಿರ್ವಹಿಸುವುದು

೫. ವ್ಯಾಪಾರಕ್ಕೆ ಬೇಕಾದ ಸಾಲಗಳು.

೬. ಭದ್ರತಾ ಅಥವಾ ರಕ್ಷಣಾ ಕಪಾಟುಗಳನ್ನು ಕೊಡುವುದು.

೭. ಭರವಸೆ ಸೇವೆಗಳು

೮. ಸಹಿಗಳಿಗೆ ಜವಾಬ್ದಾರಿ ಹಾಕುವುದು.

ಬ್ಯಾಂಕಿಂಗ್‌ ವ್ಯವಹಾರ

ಬ್ಯಾಂಕುಗಳು ಮತ್ತು ಅಂಚೆ ಕಚೇರಿಗಳು

ಯಾವುದೇ ಒಂದು ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದ ಲೆಕ್ಕಗಳನ್ನು ಬ್ಯಾಂಕು ವ್ಯವಹಾರಗಳೆನ್ನುತ್ತೇವೆ. ಬ್ಯಾಂಕುಗಳು ಹಣಕಾಸಿನ ಸಂಬಂಧ ವ್ಯವಹಾರಗಳನ್ನು ನಿರ್ವಹಿಸುವ ಸಂಸ್ಥೆಗಳಾಗಿವೆ. ಬ್ಯಾಂಕುಗಳು ಗ್ರಾಹಕರ ಹಣವನ್ನು ಠೇವಣಿಗಳಾಗಿ ಇಟ್ಟುಕೊಳ್ಳುತ್ತದೆ ಮತ್ತು ಈ ಠೇವಣಿಗಳಿಂದ ಸಂಗ್ರಹವಾದ ಹಣವನ್ನು ಗಿರಾಕಿಗಳ ಠೇವಣಿಗಳನ್ನು ಬೇಡಿಕೆ ಇರುವ ಗ್ರಾಹಕರಿಗೆ ಸಾಲಗಳ ರೂಪದಲ್ಲಿ ಕೊಟ್ಟು ಇದಕ್ಕೆ ಬಡ್ಡಿ ವಸೂಲು ಮಾಡುತ್ತವೆ. ಈ ಬಡ್ಡಿಯಿಂದ ಬಂದ ಸ್ವಲ್ಪ ಭಾಗದ ಹಣವನ್ನು ತನ್ನ ಠೇವಣಿದಾರರಿಗೂ ಬಡ್ಡಿ ರೂಪದಲ್ಲಿ ಕೊಡುತ್ತವೆ. ಈ ಬಡ್ಡಿಯು ಠೇವಣಿದಾರರ ಅದಾಯವಾಗಿರುತ್ತದೆ. ಬ್ಯಾಂಕುಗಳು ತಮ್ಮ ಗಿರಾಕಿಗಳ ಹಣವನ್ನು ಸ್ಥಳೀಯ ಮತ್ತು ವಿದೇಶ ವ್ಯಾಪಾರಗಳಲ್ಲಿ ತೊಡಗಿಸಿ ಹಣವನ್ನು ವೃದ್ಧಿಮಾಡಿಕೊಳ್ಳುತ್ತವೆ.

ಭಾರತದಲ್ಲಿ ಬ್ಯಾಂಕುಗಳ ಎಲ್ಲ ಚಟುವಟಿಕೆಗಳು ರಿಜರ್ವ್‌ ಬ್ಯಾಂಕಿನ ಹತೋಟಿಯಲ್ಲಿರುತ್ತದೆ. ರಿಜರ್ವ್ ಬ್ಯಾಂಕನ್ನು ಬ್ಯಾಂಕುಗಳ ಬ್ಯಾಂಕು ಅಥವಾ ಬ್ಯಾಂಕುಗಳ ತಾಯಿ ಎಂದೂ ಕರೆಯಬಹುದು. ರಿಜರ್ವ್‌ ಬ್ಯಾಂಕು ದೇಶದ ಕೇಂದ್ರ ಬ್ಯಾಂಕಾಗಿದೆ. ಇದು ಹಣಕಾಸಿನ ಕಾರ್ಯ ನೀತಿಯನ್ನು ರೂಪಿಸುತ್ತದೆ. ಈ ಕಾರ್ಯ ನೀತಿಯನ್ನು ಎಲ್ಲ ಬ್ಯಾಂಕುಗಳು ಪಾಲಿಸಬೇಕಾಗುತ್ತದೆ. ಈಗ ನಮ್ಮಲ್ಲಿ ಸ್ಟೇಟ್‌ ಬ್ಯಾಂಕ್‌ ಸಮೂಹಗಳು, ಇಪ್ಪತ್ತೊಂದು ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಇಪ್ಪತ್ತೊಂದು ಖಾಸಗಿ ಬ್ಯಾಂಕುಗಳು ಇದೆ. ಹತ್ತೊಂಬತ್ತು ವಿದೇಶೀ ಬ್ಯಾಂಕುಗಳು ಇದ್ದು ಇದರ ಜಾಲ ಸುಮಾರು ೮೦೦೦ ಉಪಶಾಖೆಗಳಿಂದ ಕಾರ್ಯ ನಿರ್ವಹಿಸುತ್ತಿದೆ. ಗ್ರಾಮಾಂತರ ಅಲ್ಲದೆ ಬ್ಯಾಂಕುಗಳು ಮತ್ತು ರಾಜ್ಯ ಸರ್ಕಾರದ ಹಾಗೂ ಖಾಸಗಿ ಸಹಕಾರಿ ಬ್ಯಾಂಕುಗಳು ಇವೆ.

ಬ್ಯಾಂಕುಗಳ ಉದ್ಯಮದಲ್ಲಿ ಇತ್ತೀಚಿನ ಬೆಳವಣಿಗೆ ಎಂದರೆ ಅಂಚೆ ಕಚೇರಿಗಳನ್ನು ಬ್ಯಾಂಕು ವ್ಯವಹಾರಗಳ ಅಂಕಿತದೊಳಕ್ಕೆ ತಂದಿರುವುದು. ಭಾರತೀಯ ಅಂಚೆ ಕಚೇರಿಗಳನ್ನು ಬ್ಯಾಂಕು ವ್ಯವಹಾರಗಳ ಅಂಕಿತದೊಳಕ್ಕೆ ತಂದಿರುವುದು. ಭಾರತೀಯ ಅಂಚೆ ಇಲಾಖೆ “ಭಾರತೀಯ ಅಂಚೆ ಬ್ಯಾಂಕ್‌ ” ನ ಜಾಲವನ್ನು ಅಂಚೆ ಕಚೇರಿಗಳೊಡನೆ ದೇಶದಾದ್ಯಂತ ಪ್ರಾರಂಭ ಮಾಡಲು ಯೋಜನೆಯನ್ನು ರೂಪಿಸಿದೆ. ಇವುಗಳಲ್ಲಿ ಶೇ ೯೦ ರಷ್ಟು ಗ್ರಾಮಾಂತರ ಮತ್ತು ಸಣ್ಣ ಸಣ್ಣ ಪಟ್ಟಣಗಳಲ್ಲಿ ಪ್ರಾರಂಭಿಸಲು ನಿರ್ಧರಿಸಿದೆ. ಅಂಚೆ ಇಲಾಖೆಯು ಈಗಾಗಲೆ ರಾಷ್ಟೀಯ ಉಳಿತಾಯ ಪತ್ರಗಳು, ಅಂಚೆ ಉಳಿತಾಯ ಖಾತೆಗಳು, ಕಿಸಾನ್‌ ವಿಕಾಸ ಪತ್ರಗಳು, ಮಹೆಯಾನ ತೀರು ಠೇವಣಿಗಳು, ಅಂಚೆ ವಿಮೆ, ನಿವೃತ್ತಿವೇತನ, ಹಣವನ್ನು ವರ್ಗಾಯಿಸುವುದು ಮುಂತಾದ ಅನೇಕ ಹಣಕಾಸಿನ ವ್ಯವಹಾರಗಳನ್ನು ಕೈಗೊಂಡಿದೆ. ಅಂಚೆ ಇಲಾಖೆಯು ಒಂದು ಸಾವಿರ ಕೋಟಿ ರೂಪಾಯಿಗಳಷ್ಟು ಬಂಡವಾಳವನ್ನು ಬ್ಯಾಂಕು ವ್ಯವಹಾರಕ್ಕೆ ತೊಡಗಿಸಲು ಯೋಜನೆ ಹಾಕಿಕೊಂಡಿದೆ. ಇದು ಅಂಚೆ ಇಲಾಖೆಯ ಸಹಾಯಕ ಕ್ಷೇತ್ರ ವಾಗುತ್ತದೆ.

ಬ್ಯಾಂಕುಗಳಲ್ಲಿ ತರೆಯಬಹುದಾದ ವಿವಿಧ ಖಾತೆಗಳು

ಉಳಿತಾಯ ಖಾತೆ :

ಸಾಮಾನ್ಯವಾಗಿ ವೇತನ ಪಡೆಯುವವರು ಅಥವಾ ಒಂದು ನಿಯಮಿತ ಆದಾಯ ಹೊಂದಿರುವ ಜನರಿಂದ ಉಳಿತಾಯ ಖಾತೆ ತರೆಯಲ್ಪಡುತ್ತದೆ. ಈ ಸೌಲಭ್ಯವನ್ನು ವಿದ್ಯರ್ಥಿಗಳು, ಹಿರಿಯ ನಾಗರಿಕರು, ಪಿಂಚಣಿದಾರರು ಕೂಡ ತೆರೆಯಲು ಅವಾಕಾಶವಿದೆ. ಈ ಖಾತೆಯು ಮಾಡುತ್ತದೆ. ಉಳಿತಾಯ ಮಾಡಲು ಸಹಾಯ ಮಾಡುತ್ತದೆ. ಉಳಿತಾಯ ಖಾತೆಯ ಗರಿಷ್ಠ ಮೊತ್ತಕ್ಕೆ ಪರಿಮಿತಿ ಇರುವುದಿಲ್ಲ. ಬ್ಯಾಂಕಿನಿಂದ ಹಣ ಹಿಂದಕ್ಕೆ ಪಡೆಯುವ ಚೀಟಿಯ ಮೂಲಕ ಸಾಧ್ಯವಿದೆ.

ಚಾಲ್ತಿ ಖಾತೆ :

ಈ ಖಾತೆಯನ್ನು ಸಾಮಾನ್ಯವಾಗಿ ಹೆಚ್ಚು ಬ್ಯಾಂಕು ವಹಿವಾಟು ನಡೆಸುವ ವ್ಯಾಪಾರಸ್ಥರು, ವಾಣಿಜ್ಯ ಮತ್ತು ಔದ್ಯೋಗಿಕ ಸಂಸ್ಥೆಯವರು ತೆರೆಯುತ್ತಾರೆ. ಇಲ್ಲಿ ಠೇವಣಿಗಳ ಮರುಪಾವತಿ ಮತ್ತು ಬೇಡಿಕೆ ಠೇವಣಿಗಳು ಅಥವಾ ಉಪಸರ್ಗ ವ್ಯವಹಾರಗಳ ಮೂಲಕ ಹಣವನ್ನು ಹಿಂಪಡೆಯಲು ಸಾಧ್ಯವಾಗುತ್ತದೆ. ಹಣವನ್ನು ದಿನಕ್ಕೆ ಎಷ್ಟು ಬಾರಿಯಾದರೂ ತುಂಬಬಹುದು ಮತ್ತು ಎಷ್ಟು ಬಾರಿಯಾದರೂ ಹಿಂಪಡೆಯಬಹುದು. ಈ ಖಾತೆಯ ಠೇವಣಿಗಳಿಗೆ ಬ್ಯಾಂಕುಗಳು ಬಡ್ಡಿಯನ್ನು ಕೊಡುವುದಿಲ್ಲ. ಆದರೆ ತಮ್ಮ ಸೇವೆಗೆ ಸೇವಾ ಶುಲ್ಕ ವಸೂಲು ಮಾಡುತ್ತವೆ.

ಆವರ್ತ ಠೇವಣಿ ಖಾತೆ :

ಆವರ್ತ ಠೇವಣಿ ಖಾತೆಗಳನ್ನು ಸಾಮಾನ್ಯವಾಗಿ ಭವಿಷ್ಯ ಕಾಲದಲ್ಲಿ ಯಾವುದಾದರೂ ಒಂದು ನಿರ್ಧಿಷ್ಟ ದಿನದಂದು ಹಿಂದಕ್ಕೆ ಪಡೆಯಲು ತೆರೆಯಲ್ಪಡುತ್ತದೆ. ಭವಿಷ್ಯದ ಅವಶ್ಯಕತೆಗಳಿಗೆ ತಿಂಗಳು ತಿಂಗಳು ವ್ಯವಸ್ಥಿತವಾಗಿ ಠೇವಣಿಗಳನ್ನು ಒಂದು ಅವಧಿಗೆ ಜಮಾ ಮಾಡುತ್ತಾರೆ. ಅವಧಿ ಮಗಿದ ನಂತರ ಠೇವಣಿ ಮಾಡಿದ ಹಣದ ಜೊತೆಗೆ ಬಡ್ಡಿಯನ್ನು ಸೇರಿಸಿ ಹಣವನ್ನು ಬ್ಯಾಂಕು ಹಿಂದಿರುಗಿಸುತ್ತದೆ.

ನಿಶ್ಚಿತ ಠೇವಣಿ ಖಾತೆ :

ಈ ಖಾತೆಯಲ್ಲಿ ಠೇವಣಿಯನ್ನು ಒಂದು ನಿಗಧಿತ ಅವಧಿಗೆ ಇಡಲಾಗುತ್ತದೆ. ಠೇವಣಿ ಹಣವನ್ನು ನಿಶ್ಚಿತ ಅವಧಿ ಮುಗಿದ ನಂತರ ಠೇವಣಿದಾರರಿಗೆ ಪಾವತಿ ಮಾಡಲಾಗುತ್ತದೆ. ಠೇವಣಿ ಹಣವನ್ನು ನಿಗದಿತ ಅವಧಿಗೆ ಮುಂಚೆ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ. ಬಡ್ಡಿದರ ಅವಧಿಗನುಗುಣವಾಗಿ ಹೆಚ್ಚಾಗಿರುತ್ತದೆ.

ಬ್ಯಾಂಕು ಖಾತೆಯನ್ನು ತೆಗೆಯುವ ವಿಧಾನ:

ಈ ದಿನಗಳಲ್ಲಿ ಬ್ಯಾಂಕುಗಳು ಮುಖ್ಯವಾದ ಹಣಕಾಸಿನ ಸಂಸ್ಥೆಗಳಾಗಿವೆ. ಬ್ಯಾಂಕುಗಳು ಸುರಕ್ಷಿತ ಪದ್ಧತಿಗಳ ಮೂಲಕ ಹಣದ ವ್ಯವಹಾರಗಳನ್ನು ನಿರ್ವಹಿಸಲು ಸಹಾಯ ಮಾಡುತ್ತವೆ. ಬ್ಯಾಂಕುಗಳ ಸೇವೆಗಳನ್ನು ಪಡೆಯಲು ವ್ಯಕ್ತಿಗಳಿಗೆ ಅಥವಾ ಸಂಸ್ಥೆಗಳಿಗೆ ಬ್ಯಾಂಕುಗಳಲ್ಲಿ ಖಾತೆಗಳನ್ನು ತೆಗೆಯುವುದು ಅವಶ್ಯಕ.

ಬ್ಯಾಂಕು ಖಾತೆಯನ್ನು ತೆಗೆಯುವುದರಿಂದ ಆಗುವ ಅನುಕೂಲಗಳು:

 • ಬ್ಯಾಂಕು ಖಾತೆಯು ಹಣದ ಭದ್ರತೆ ಕಾಪಾಡುತ್ತದೆ.
 • ಬ್ಯಾಂಕು ಖಾತೆಯು ಹಣದ ಪಾವತಿಗಳನ್ನು ಮಾಡಲು ಸಹಾಯ ಮಾಡುತ್ತದೆ.
 • ಬ್ಯಾಂಕು ಖಾತೆಯು ಹಣವನ್ನು ವಸೂಲು ಮಾಡಲು ಸಹಾಯ ಮಾಡುತ್ತದೆ.
 • ಬ್ಯಾಂಕು ಖಾತೆಯನ್ನು ಹೊಂದಿರುವವರು ಸಾಲ ಪಡೆಯಲು ಸಾಧ್ಯವಾಗುತ್ತದೆ.
 • ಬ್ಯಾಂಕು ಖಾತೆಯು ವ್ಯವಹಾರಗಳನ್ನು ಸುಗಮವಾಗಿ ನಡೆಸಲು ಸಾಧ್ಯಮಾಡಿಕೊಡುತ್ತದೆ.
 • ಬ್ಯಾಂಕು ಖಾತೆದಾರರು ಭದ್ರತಾ ಕಪಾಟುಗಳನ್ನು ಪಡೆಯಬಹುದು.

FAQ

ಯಾವ ಖಂಡವು ಅತಿ ಹೆಚ್ಚು ದೇಶಗಳನ್ನು ಒಳಗೊಂಡಿದೆ?

ಆಫ್ರಿಕಾ.

ರಿಸರ್ವ ಬ್ಯಾಂಕ್‌ ಆಫ್‌ ಇಂಡಿಯಾದ ಕೇಂದ್ರ ಕಚೇರಿಯು ಯಾರ ಅಧಿನಿಯಮದಲ್ಲಿ ಇರುತ್ತದೆ?

RBI ನ ಗವರ್ನರ್.

ರೂಪಾಯಿ ಚಿಹ್ನೆಯನ್ನು ನಿರ್ಮಿಸಿದವರು ಯಾರು ?

ಉದಯ್‌ ಕುಮಾರ್.

ಇತರೆ ವಿಷಯಗಳು :

ಅಂತರ್ಜಾಲದ ಬಗ್ಗೆ ಪ್ರಬಂಧ

ದಿಕ್ಕುಗಳ ಬಗ್ಗೆ ಪ್ರಬಂಧ

LEAVE A REPLY

Please enter your comment!
Please enter your name here