ಕುಟುಂಬದ ಬಗ್ಗೆ ಮಾಹಿತಿ | Information About The Family in Kannada

0
1086
ಕುಟುಂಬದ ಬಗ್ಗೆ ಮಾಹಿತಿ | Information About The Family in Kannada
ಕುಟುಂಬದ ಬಗ್ಗೆ ಮಾಹಿತಿ | Information About The Family in Kannada

ಕುಟುಂಬದ ಬಗ್ಗೆ ಮಾಹಿತಿ Information About The Family kutumbada bagge mahiti in kannada


Contents

ಕುಟುಂಬದ ಬಗ್ಗೆ ಮಾಹಿತಿ

Information About The Family in Kannada
Information About The Family in Kannada

ಈ ಲೇಖನಿಯಲ್ಲಿ ಕುಟುಂಬದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

Information About The Family in Kannada

ಮಾನವ ಸಮಾಜ ಮೂಲಭೂತ ಬಯಕೆಗಳನ್ನು ಈಡೇರಿಸಿಕೊಳ್ಳುವ ಉದ್ದೇಶದಿಂದಾಗಿ ಹಲವು ಸಾಮಾಜಿಕ ಸಂಸ್ಥೆಗಳನ್ನು ರೂಪಿಸಿಕೊಂಡಿದೆ. ಇಂತಹ ಸಂಸ್ಥೆಗಳಲ್ಲಿ ಕುಟುಂಬ ಅತ್ಯಂತ ಸಣ್ಣ ಸಾಮಾಜಿಕ ಸಂಸ್ಥೆಯಾದರೂ ಅದು ಸಮಾಜದ ಮೂಲಸಂಸ್ಥೆ. ಸಮಾಜದ ಎಲ್ಲಾ ಚಟುವಟಿಕೆಗಳು ನಡೆಯುವುದು ಕುಟುಂಬದ ಲಕ್ಷಣಗಳನ್ನು ಅರ್ಥಮಾಡಿಕೊಳ್ಳುವ ಮೂಲಕ ಅದನ್ನು ವಿವರವಾಗಿ ನಾವು ತಿಳಿಯಬಹುದು.

ಕುಟುಂಬವನ್ನು ಇಂಗ್ಲೀಷಿನಲ್ಲಿ ʼಫ್ಯಾಮಿಲಿʼ ಎಂದು ಕರೆಯುತ್ತಾರೆ. ʼಫ್ಯಾಮಿಲಿʼ ಎಂಬ ಶಬ್ದವು ʼಫ್ಯಾಮುಲಸ್‌ʼ ಎಂಬ ಲ್ಯಾಟಿನ್‌ ಶಬ್ದದಿಂದ ಬಂದಿದೆ. ಕುಟುಂಬದ ಸದಸ್ಯರ ಬಳಗಿನ ಸಂಬಂಧವು ಒಂದೇ ರಕ್ತಸಂಬಂಧದ ಮೇಲೆ ನಿರ್ಧಾರವಾಗುತ್ತದೆ. ಇಲ್ಲಿ ವಿವಾಹ, ರಕ್ತಸಂಬಂಧ ಹಾಗೂ ದತ್ತು ಸ್ವೀಕಾರವನ್ನು ಒಳಗೊಂಡಿರುತ್ತದೆ. ಇದು ಗಂಡ-ಹೆಂಡತಿ, ತಂದೆ-ತಾಯಿ, ಮಗ-ಮಗಳು, ಸಹೋದರ-ಸಹೋದರಿ ಸಂಬಂಧವನ್ನು ಹೊಂದಿ, ತಮ್ಮ ಸ್ಥಾನಕ್ಕೆ ಪೂರಕವಾಗಿ ಪಾತ್ರಗಳನ್ನು ನಿರ್ವಹಿಸಿ, ಸಾಮಾನ್ಯ ಸಂಸ್ಕೃತಿಯನ್ನು ರೂಪಿಸಿಕೊಳ್ಳುವಲ್ಲಿ ನಿರತರಾಗಿರುತ್ತಾರೆ.

ಕುಟುಂಬದ ಲಕ್ಷಣಗಳು

ಕುಟುಂಬದ ಲಕ್ಷಣಗಳನ್ನುಅರ್ಥಮಾಡಿಕೊಳ್ಳುವ ಮೂಲಕ ಕುಟುಂಬದ ಮಹತ್ವವನ್ನು ನಾವು ತಿಳಿಯಬಹುದು.

೧. ಕುಟುಂಬ ಸರ್ವವ್ಯಾಪಕವಾದದ್ದು:

ಪ್ರಪಂಚದ ಎಲ್ಲಾ ಸಮಾಜಗಳಲ್ಲಿಯೂ ಆಯಾ ಕಾಲ-ಆಯಾ ಪ್ರದೇಶಕ್ಕೆ ತಕ್ಕಂತೆ ಸ್ಪಲ್ಪಮಟ್ಟಿನ ವ್ಯತ್ಯಾಸವಿದ್ದರೂ ನಾವು ಎಲ್ಲ ಸಮಾಜದಗಳಲ್ಲಿ ಕುಟುಂಬವನ್ನು ಕಾಣಬಹುದು. ವಿವಾಹ, ಪಾಲನೆ, ಪೋಷಣೆ, ಬಂಧುತ್ವ, ಆಸ್ತಿ, ವಿಷಯಗಳಲ್ಲಿ ಒಂದು ಗೊತ್ತುಪಡಿಸಿಕೊಂಡ ನಿಯಮವನ್ನು ಕುಟುಂಬಗಳು ಅನುಸರಿಸಲ್ಪಟ್ಟಿರುತ್ತವೆ. ಸಾಧಾರಣವಾಗಿ ಆಯಾ ಕುಟುಂಬಕ್ಕೆ ಸೇರಿದ ಸದಸ್ಯರೆಲ್ಲರೂ ಒಂದೇ ಸ್ಥಳದಲ್ಲಿ ಅಥವಾ ಸೂರಿನಡಿಯಲ್ಲಿ ವಾಸಿಸುತ್ತಾರೆ.

೨. ಸಮಾಜದ ಎಲ್ಲಾ ಚಟುವಟಿಕೆಗಳ ಮೂಲಘಟಕ:

ಯಾವುದೇ ಸಮಾಜದ ಸಾಮಾಜಿಕ ಸಂಸ್ಥೆಗಳ ಚಟುವಟಿಕೆಗಳು ಪ್ರಾರಂಭವಾಗುವುದೇ ಕುಟುಂಬದಿಂದ ಸಮಾಜದ ರಾಜಕೀಯ, ಆರ್ಥಿಕ, ಶೈಕ್ಷಣಿಕ, ಇನ್ನೂ ಮೊದಲಾದ ಚಟುವಟಿಕೆಗಳು ಪ್ರಾರಂಭವಾಗುವುದೇ ಕುಟುಂಬದಿಂದ. ಸಮಾಜದ ರಾಜಕೀಯ, ಆರ್ಥಿಕ, ಶೈಕ್ಷಣಿಕ, ಇನ್ನೂ ಮೊದಲಾದ ಚಟುವಟಿಕೆಗಳು ಮೊಳಕೆಯಾಗುವುದು ಕುಟುಂಬದಿಂದ. ಈ ಹಿಂದೆ ಸಾಮುದಾಯಿಕ ಪ್ರಮುಖ ಕೆಲಸಗಳಿಗೆ ಕುಟುಂಬವು ತನ್ನ ಸದಸ್ಯರನ್ನು ಕಳುಹಿಸುತ್ತಿತ್ತು. ಇಂದಿನ ಸಂಕೀರ್ಣ ಸಮಾಜದಲ್ಲಿ ತನ್ನ ಕೆಲವು ಕಾರ್ಯಗಳನ್ನು ಸಮಾಜದ ಇತರೆ ಸಂಸ್ಥೆಗಳಿಗೆ ಬಿಟ್ಟುಕೊಟ್ಟಿದೆ.

೩. ಜವಾಬ್ಧಾರಿ ಮತ್ತು ಸಾಮಾಜಿಕ ಹೊಣೆಗಾರಿಕೆ:

ಸಮಾಜದ ಇತರ ಸಂಸ್ಥೆಗಳ ಜೊತೆ ವಿವಿಧ ಸಂದರ್ಭಗಳಲ್ಲಿ ಯಾವ ರೀತಿ ನಡೆದುಕೊಳ್ಳಬೇಕು ಮತ್ತು ಯಾವ ಜವಾಬ್ಧಾರಿಯನ್ನು ನಿರ್ವಹಿಸಬೇಕು ಎಂದು ಕುಟುಂಬ ತನ್ನ ಸದಸ್ಯರಿಗೆ ಹೇಳಿ ಕೊಡುತ್ತದೆ. ಮಕ್ಕಳಿಗೆ, ನೆರೆಹೊರೆಯವರೊಂದಿಗೆ ಹೊಂದಿಕೊಂಡು ಹೇಗೆ ಜೀವಿಸಬೇಕು ಎಂದು ಹೇಳಿಕೊಡುತ್ತದೆ. ಅಷ್ಟು ಮಾತ್ರವಲ್ಲ,ಕೆಲವು ಸಾಮಾಜಿಕ ಜವಾಬ್ದಾರಿಗಳನ್ನು ಹೇಳಿ ಕೊಡುತ್ತದೆ.

೪. ಪಾಲನೆ ಮತ್ತು ಪೋಷಣೆ:

ಕುಟುಂಬವು ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಸಂಬಂಧಿಸಿದ ಹಕ್ಕು-ಬಾಧ್ಯತೆಗಳನ್ನು ಸೃಷ್ಟಿ ಮಾಡುತ್ತದೆ. ಅಲ್ಲದೇ ಅವುಗಳ ರಕ್ಷಣೆಗೆ ಕ್ರಮವಹಿಸುತ್ತದೆ. ಮಗುವಿನ ಲಾಲನೆ-ಪಾಲನೆ ಮತ್ತು ಅಕ್ಷರ ಕಡೆಗಿನ ದಾರಿಯನ್ನು ಸೃಷ್ಟಿಸುತ್ತದೆ. ವೃದ್ಯಾಪ್ಯದಲ್ಲಿ ಕುಟುಂಬದ ಹಿರಿಯರ (ಅಜ್ಜ-ಅಜ್ಜಿ, ತಂದೆ-ತಾಯಿ) ಆರೈಕೆ-ಪೋಷಣೆ-ಶುಶ್ರೂಷೆ ಮತ್ತು ಅವರ ರಕ್ಷಣೆಯನ್ನು ಮಾಡುವುದು ಆಯಾ ಕುಟುಂಬದ ಕರ್ತವ್ಯವಾಗಿದೆ.

೫. ಸಾಮಾಜಿಕ ವರ್ತನೆಗಳನ್ನು ಹೇಳಿ ಕೊಡುತ್ತದೆ:

ಸಾಮಾಜಿಕ ಬೆಳವಣಿಗೆಯ ಹಂತಗಳಲ್ಲಿ ಬಾಲ್ಯ-ಯೌವ್ವನ ಮುಖ್ಯ. ಮಗುವು ಕುಟುಂಬದೊಳಗೆ ಮಾತನಾಡುವ ಮಾತೃಭಾಷೆಯನ್ನು ಮೊದಲು ತಿಳಿಯುತ್ತದೆ. ಅದರ ಸಹಾಯದಿಂದ ಸಾಮಾಜಿಕ ವಿಚಾರಗಳನ್ನು ತಿಳಿದುಕೊಳ್ಳತ್ತದೆ. ಕುಟುಂಬದ ಸುತ್ತಮುತ್ತಲಿನ ಸಾಮಾಜಿಕ ಪರಿಸರದಲ್ಲಿ ಬೆಳೆಯುವ ಮಕ್ಕಳು ಅದಕ್ಕನುಗುಣವಾದ ಗುಣಲಕ್ಷಣಗಳನ್ನು ಬೆಳೆಸಿಕೊಳ್ಳುತ್ತಾರೆ. ಸಮ ವಯಸ್ಸಿನ ಮಕ್ಕಳೊಂದಿಗೆ, ಹಿರಿಯರೊಂದಿಗೆ ವಿವಿಧ ಸಂದರ್ಭಗಳಲ್ಲಿ ಹೇಗೆ ಬೆರೆಯಬೇಕು ಎಂಬುದನ್ನು ಕುಟುಂಬ ಹೇಳಿಕೊಡುತ್ತಿರುತ್ತದೆ.

೬. ತಲೆಮಾರುಗಳ ಪರಂಪರೆಯನ್ನು ತಿಳಿಸುತ್ತದೆ:

ಕುಟುಂಬ ಹಲವಾರು ತಲೆಮಾರುಗಳ ಪರಂಪರೆಯ ಮೇಲೆ ನಿಂತಿದೆ. ತಲೆಮಾರುಗಳು ರಕ್ತಸಂಬಂಧಿಗಳನ್ನು ಪರಿಚಯಿಸುತ್ತದೆ. ಅಜ್ಜ-ಅಜ್ಜಿ, ಅಪ್ಪ-ಅಮ್ಮ, ಮಕ್ಕಳ ಸಂಬಂಧಗಳನ್ನು ವಿವರಿಸುತ್ತದೆ. ಅಜ್ಜ,ಅಜ್ಜಿ ಹಿರಿಯ ಪೋಷಕರು. ಒಂದನೇ ತಲೆಮಾರಿಗೆ ಸೇರಿದವರು. ಅಪ್ಪ-ಅಮ್ಮ, ಪೋಷಕರು ಎರಡನೇ ತಲೆಮಾರಿಗೆ ಸೇರಿದವರು. ಮಕ್ಕಳು ಮೂರನೇ ತಲೆಮಾರಿಗೆ ಸೇರಿದವರು ಎಂದು ಹೇಳಿಕೊಡುತ್ತದೆ.

  • ಅಪ್ಪ-ಅಮ್ಮ ಮತ್ತು ಮಕ್ಕಳು ವಾಸಿಸುವ ಕುಟುಂಬವನ್ನು ಎರಡು ತಲೆಮಾರುಗಳ ಕುಟುಂಬ ಎಂದು ಕರೆಯುತ್ತಾರೆ.
  • ಅಜ್ಜ-ಅಜ್ಜಿ, ಅಪ್ಪ-ಅಮ್ಮ ಮತ್ತು ಮಕ್ಕಳಿಂದ ಕೂಡಿದ ಸಂಬಂಧವನ್ನು ಮೂರು ತಲೆಮಾರು ಕೂಡಿ ಕುಟುಂಬ ಎನ್ನುತ್ತಾರೆ.
  • ಅಜ್ಜ-ಅಜ್ಜಿ, ಅಪ್ಪ-ಅಮ್ಮ ಮತ್ತು ಮಕ್ಕಳು-ಮೊಮ್ಮಕ್ಕಳಿಂದ ಕೂಡಿದ ಕುಟುಂಬವನ್ನು ನಾಲ್ಕು ತಲೆಮಾರಿನ ವಿಸ್ತೃತ ಕುಟುಂಬ ಎನ್ನುತ್ತಾರೆ.

ಕುಟುಂಬದ ಪ್ರಕಾರಗಳು

ಕುಟುಂಬ ಆಯಾ ಸಮುದಾಯ ಮತ್ತು ಪ್ರದೇಶಗಳ ರೂಢಿ ಪದ್ಧಿತಿಗಳ ಆಧಾರದಲ್ಲಿ ರಚನೆಗೊಂಡಿದೆ. ಸಮಾಜಶಾಸ್ತ್ರಜ್ಞರು ಮತ್ತು ಮಾನವಶಾಸ್ತ್ರಜ್ಞರು ಕುಟುಂಬದ ಪ್ರಕಾರಗಳನ್ನು ನಿರೂಪಿಸಿದ್ದಾರೆ. ಈಗಾಗಲೇ ತಿಳಿಸಿದಂತೆ ತಲೆಮಾರಿನ ಆಧಾರದಲ್ಲಿ ಕುಟುಂಬವನ್ನು ಗುರುತಿಸಲಾಗಿದೆ. ಗಂಡ-ಹೆಂಡತಿ ಒಟ್ಟಿಗೆ ವಾಸಿಸುತ್ತಿರುವ ಕುಟುಂಬದಲ್ಲಿ ಹುಟ್ಟಿದ ಮಕ್ಕಳಿಗೆ ಅದು ಕೇಂದ್ರ ಕುಟುಂಬವಾಗುತ್ತದೆ. ಹೆಚ್ಚು ತಲೆಮಾರುಗಳ ರಕ್ತಸಂಬಂಧಿಗಳು ವಾಸಿಸುತ್ತಿದ್ದರೆ ಅದನ್ನು ಅವಿಭಕ್ತ ಕುಟುಂಬ ಎಂದು ಕರೆಯುತ್ತೇವೆ.

ಮಾತೃಪ್ರಧಾನ ಕುಟುಂಬ:

ಮಾತೃಪ್ರಧಾನ ಕುಟುಂಬದಲ್ಲಿ ಅಸ್ತಿಯ ಮೇಲಿನ ಹಕ್ಕು ಮತ್ತು ಉತ್ತರಾಧಿಕಾರಗಳು ಮಹಿಳೆಗೆ ಇರುತ್ತವೆ. ಆಸ್ತಿಯು ತಾಯಿಯಿಂದ ಮಗಳಿಗೆ ಹೋಗುತ್ತದೆ. ಸಾಧಾರಣವಾಗಿ ತಾಯಿಯೇ ಇಲ್ಲಿ ಕುಟುಂಬದ ಒಡತಿ, ಆಕೆಯ ಹೆಸರಿನಲ್ಲಿಯೇ ಆಸ್ತಿಯ ವಹಿವಾಟು ನಡೆಯುತ್ತದೆ. ಕರ್ನಾಟಕದ ಕರಾವಳಿ ಪ್ರದೇಶದ ಕೆಲವು ಸಮುದಾಯದಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯನ್ನು ಈಗಲೂ ನಾವು ಕಾಣುತ್ತೇವೆ. ಹಾಗೆಯೇ ಕೇರಳ ರಾಜ್ಯದ ಮಲಬಾರಿನ ನಾಯರ್‌ ಹಾಗೂ ಈಶಾನ್ಯ ಭಾರತದ ಕೆಲವು ಆದಿವಾಸಿ ಸಮುದಾಯದಲ್ಲಿ ಮಾತೃಪ್ರಧಾನ ಕುಟುಂಬಗಳು ಕಂಡು ಬರುತ್ತವೆ. ಒಟ್ಟಾರೆ ಮಾತೃಪ್ರಧಾನ ಕುಟುಂಬ ವ್ಯವಸ್ಥೆ ಎಂದರೆ ಮಹಿಳೆ ಒಡೆತನದ ವಹಿವಾಟು ಮತ್ತು ಮಹಿಳೆಯನ್ನು ಅನುಸರಿಸುವ ಅನುವಂಶಿಕ ಅಧಿಕಾರ ಮತ್ತು ಹಕ್ಕುಗಳು ತಾಯಿಯಿಂದ ಮಕ್ಕಳಿಗೆ ಲಭಿಸುವುದು.

ಪಿತೃಪ್ರಧಾನ ಕುಟುಂಬ:

ಪಿತೃಪ್ರಧಾನ ಕುಟುಂಬದಲ್ಲಿ ತಂದೆಯೇ ಕುಟುಂಬದ ಪ್ರಮುಖ. ಅಸ್ತಿಯ ಹಕ್ಕು ಮತ್ತು ಇತರೆ ಹಕ್ಕುಗಳು ಪುರುಷ ಕೇಂದ್ರಿತವಾಗಿವೆ. ಪಿತೃಪ್ರಧಾನ ಕುಟುಂಬದಲ್ಲಿ ವಿವಾಹಿತ ಹೆಣ್ಣುಮಕ್ಕಳು ಗಂಡನ ಮನೆಯಲ್ಲಿ ವಾಸಿಸುತ್ತಾರೆ. ಈ ಕುಟುಂಬ ವ್ಯವಸ್ಥೆಯಲ್ಲಿ ಕುಟುಂಬದ ಹಿರಿಯ ಮಗನಿಗೆ ಧಾರ್ಮಿಕ ಆಚರಣೆಯಲ್ಲಿ ಪ್ರಮುಖ ಸ್ಥಾನವಿದೆ. ಪಿತೃಪ್ರಧಾನ ಕುಟುಂಬ ವ್ಯವಸ್ಥೆಯು ಗ್ರೀಕ್‌, ರೋಮ್‌, ಭಾರತ ಮತ್ತು ನೆರೆಯ ಚೀನಾ ದೇಶಗಳಲ್ಲಿ ಬಹಳ ಹಿಂದಿನಿಂದಲೂ ಆಚರಣೆಯಲ್ಲಿ ಇದ್ದು, ಈಗಲೂ ಮುಂದುವರೆದಿದೆ.

ಆಧುನಿಕ ಕೇಂದ್ರ ಕುಟುಂಬ:

ಕುಟುಂಬದ ರಚನೆ ಮತ್ತು ಅದರಲ್ಲಿ ವಾಸಿಸುವ ಪೀಳಿಗೆಗಳ ಸಂಖ್ಯೆಯ ಆಧಾರದ ಮೇಲೆ ಕುಟುಂಬಗಳನ್ನು ʼಕೇಂದ್ರ ಕುಟುಂಬʼ, ʼಅವಿಭಕ್ತ ಕುಟುಂಬʼ ಮತ್ತು ʼವಿಸ್ತೃತ ಕುಟುಂಬʼ ಎಂಬುದಾಗಿ ವರ್ಗೀಕರಿಸುತ್ತೇವೆ. ತಂದೆ, ತಾಯಿ ಮತ್ತು ಅವರ ಅವಿವಾಹಿತ ಮಕ್ಕಳು ಮಾತ್ರ ಸದಸ್ಯರಾಗಿರುವ ಕುಟುಂಬವನ್ನು ʼಕೇಂದ್ರ ಕುಟುಂಬʼ ಎಂಬುದಾಗಿ ಕರೆಯುತ್ತೇವೆ. ಕೇಂದ್ರ ಕುಟುಂಬಗಳು ಆಧುನಿಕ ಸಮಾಜದಲ್ಲಿ ಹೆಚ್ಚಳವಾಗಿವೆ. ವೈಯಕ್ತಿಕತೆ, ವೈಯಕ್ತಿಕ ಸಂತೋಷ, ಸುಖ, ಆಸ್ತಿಯ ಹಕ್ಕು ಬದಲಾದ ಸಾಮಾಜಿಕ ಮೌಲ್ಯಗಳು, ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಆದ ಪ್ರಗತಿ, ನಗರೀಕರಣ, ಪ್ರಜಾಸತಾತ್ಮಕ ಹಾಗೂ ಸಮಾನತೆಯ ತತ್ವಗಳು ಇವೆ ಮುಂತಾದ ಅನೇಕ ಅಂಶಗಳು ಕೇಂದ್ರ ಕುಟುಂಬದ ಹೆಚ್ಚಳಕ್ಕೆ ಕಾರಣವಾಗಿವೆ.

ಅವಿಭಕ್ತ ಕುಟುಂಬ:

ಅವಿಭಕ್ತ ಕುಟುಂಬದಲ್ಲಿ ಅಜ್ಜ-ಅಜ್ಜಿ ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಕೆಲವು ಸಂದರ್ಭಗಳಲ್ಲಿ ಇನ್ನೂ ವಿಸ್ತೃತವಾಗಿ ಎರಡು ತಲೆಮಾರುಗಳಿಂತಲೂ ಹೆಚ್ಚಿನ ಜನರು ಇರುತ್ತಾರೆ. ಇಡೀ ಕುಟುಂಬ ಒಂದೇ ಬಗೆಯ ಧಾರ್ಮಿಕ ಆಚರಣೆಗಳನ್ನು ಹೊಂದಿರುತ್ತವೆ. ಅವಿಭಕ್ತಿ ಕುಟುಂಬವು ಸಾಮಾನ್ಯವಾಗಿ ರಕ್ತಸಂಬಂಧಿಗಳಿಂದ ಕೂಡಿರುವ ಗುಂಪಾಗಿರುತ್ತದೆ.

FAQ

ಒಂದು ವರ್ಷದ ಅವಧಿ ವರೆಗೂ ಆಹಾರವನ್ನು ಸೇವಿಸದೆ ಜೀವಿಸುವ ಪ್ರಾಣಿ ಯಾವುದು ?

ಚೇಳು.

ತಮ್ಮ ಆಯುಷ್ಯವೂ ಕೊನೆಗೊಳ್ಳುವವರೆಗೂ ಬೆಳೆಯುವ ಜೀವಿ ಯಾವುದು ?

ಮೀನು.

ಇತರೆ ವಿಷಯಗಳು :

ಕುಟುಂಬ ನಿರ್ವಹಣೆಯಲ್ಲಿ ಮಹಿಳೆಯರ ಪಾತ್ರ ಪ್ರಬಂಧ

ಮಹಿಳಾ ಶಿಕ್ಷಣದ ಮೇಲೆ ಪ್ರಬಂಧ

LEAVE A REPLY

Please enter your comment!
Please enter your name here