ಅಭಿವೃದ್ಧಿ ಬಗ್ಗೆ ಮಾಹಿತಿ | Information About Development in Kannada

0
450
ಅಭಿವೃದ್ಧಿ ಬಗ್ಗೆ ಮಾಹಿತಿ | Information About Development in Kannada
ಅಭಿವೃದ್ಧಿ ಬಗ್ಗೆ ಮಾಹಿತಿ | Information About Development in Kannada

ಅಭಿವೃದ್ಧಿ ಬಗ್ಗೆ ಮಾಹಿತಿ Information About Development abhiruddi bagge mahiti in kannada


Contents

ಅಭಿವೃದ್ಧಿ ಬಗ್ಗೆ ಮಾಹಿತಿ

Information About Development in Kannada
Information About Development in Kannada

ಈ ಲೇಖನಿಯಲ್ಲಿ ಅಭಿವೃದ್ಧಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

Information About Development in Kannada

ಪ್ರತಿಯೊಬ್ಬ ವಿವೇಕಯುತ ವ್ಯಕ್ತಿಯು ತನ್ನ ಜೀವನಮಟ್ಟವನ್ನು ಉತ್ತಮಪಡಿಸಲು ನಿರಂತರವಾಗಿ ಪ್ರಯತ್ನಿಸುತ್ತಿರುತ್ತಾನೆ. ಅದೇ ರೀತಿಯಲ್ಲಿ ಪ್ರತಿಯೊಂದು ಅರ್ಥವ್ಯವಸ್ಥೆಯು ನಿಂತ ನೀರಿನಂತೆ ಸ್ಥಿರವಾಗಿರುವುದಿಲ್ಲ. ಬದಲಾಗಿ ಅದು ಹರಿವ ನೀರಿನಂತೆ ನಿರಂತರ ಪರಿವರ್ತನೆಗೊಳ್ಳುತ್ತಾ ಅಧುನಿಕತೆಯುತ್ತ ಪ್ರಗತಿಹೊಂದಲು ಪ್ರಯತ್ನಿಸುತ್ತದೆ. ಈ ಅಧ್ಯಾಯದಲ್ಲಿ ಆರ್ಥಿಕ ಅಭಿವೃದ್ಧಿಯ ಪರಿಕಲ್ಪನೆ ಹಾಗೂ ಅಭಿವೃದ್ಧಿಯನ್ನು ಅಳೆಯುವ ಮಾನದಂಡಗಳನ್ನು ಕುರಿತು ತಿಳಿಯೋಣ.

ಅಭಿವೃದ್ಧಿ ಮತ್ತು ಅನಾಭಿವೃದ್ಧಿ

ಅಭಿವೃದ್ಧಿ :

ಅಭಿವೃದ್ಧಿ ಎಂಬ ಪದವನ್ನು ನಮ್ಮ ದಿನನಿತ್ಯದ ಬದುಕಿನಲ್ಲಿ ಅನೇಕ ಬಾರಿ ಬಳಸುತ್ತೇವೆ. ಯಾವುದೇ ಒಂದು ಕ್ಷೇತ್ರ ಇಲ್ಲವೇ ವ್ಯಕ್ತಿಗಳ ಪ್ರಗತಿಯನ್ನು ಸೂಚಿಸಲು ನಾವು ಸಾಮಾನ್ಯವಾಗಿ ʼಅಭಿವೃದ್ಧಿʼ ಪದವನ್ನು ಬಳಸುತ್ತೇವೆ. ಉದಾ: ಗ್ರಾಮೀಣ ಅಭಿವೃದ್ಧಿ, ಸಾಮಾಜಿಕ ಅಭಿವೃದ್ಧಿ, ಶೈಕ್ಷಣಿಕ ಅಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇತ್ಯಾದಿ. ಹಾಗೆಯೇ ಒಂದು ದೇಶದ ಆರ್ಥಿಕ ಪ್ರಗತಿಯನ್ನು ನಾವು ಆರ್ಥಿಕ ಅಭಿವೃದ್ಧಿ ಎಂದು ಗುರುತಿಸುತ್ತೇವೆ. ಆರ್ಥಿಕ ಅಭಿವೃದ್ಧಿ ವ್ಯಾಖ್ಯಾನವು ಕಾಲದಿಂದ ಕಾಲಕ್ಕೆ ಬದಲಾಗುತ್ತಿದ್ದು, ಅದರ ಅರ್ಥವ್ಯಾಪ್ತಿಯು ಇನ್ನೂ ಹೆಚ್ಚು ವಿಸ್ತಾರಗೊಳ್ಳುತ್ತಿದೆ.

ಸಾಮಾನ್ಯವಾಗಿ ರಾಷ್ಟ್ರದಲ್ಲಿ ಒಂದು ವರ್ಷದ ಅವಧಿಯಲ್ಲಿ ಉತ್ಪಾದನೆಯಾಗುವ ಎಲ್ಲ ಸರಕು-ಸೇವೆಗಳ ಒಟ್ಟು ಮಾರುಕಟ್ಟೆ ಮೌಲ್ಯವನ್ನು ರಾಷ್ಟ್ರೀಯ ಆದಾಯ ಎನ್ನುತ್ತೇವೆ. ಬಹು ಹಿಂದಿನಿಂದ, ರಾಷ್ಟ್ರೀಯ ಆದಾಯ ಎನ್ನುತ್ತೇವೆ. ಬಹು ಹಿಂದಿನಿಂದ, ರಾಷ್ಟ್ರೀಯ ಆದಾಯದ ನಿರಂತರ ಹೆಚ್ಚಳವನ್ನು ಆರ್ಥಿಕ ಅಭಿವೃದ್ಧಿ ಎಂದು ಗುರುತಿಸಲಾಗುತ್ತಿತ್ತು.

ರಾಷ್ಟ್ರೀಯ ಆದಾಯವು ಹೆಚ್ಚಳವಾದಂತೆ, ರಾಷ್ಟ್ರದ ಜನರ ಆದಾಯವು ಹೆಚ್ಚಳವಾಗಿ ಉತ್ತಮ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳನ್ನು ಕುಟುಂಬದ ಸದಸ್ಯರು ಪಡೆಯಲು ಸಾಧ್ಯವಾಗುತ್ತದೆ. ಅಗತ್ಯ ಸರಕು ಸೇವೆಗಳನ್ನು ಕೊಳ್ಳುವುದರ ಜೊತೆಗೆ, ಭವಿಷ್ಯಕ್ಕಾಗಿ ಉಳಿತಾಯ ಮಾಡಿ, ಉತ್ತಮ ಜೀವನ ನಡೆಸಲು ಸಾಧ್ಯವಾಗುತ್ತದೆ.

ಜನರ ಜೀವನ ಮಟ್ಟ ಸುಧಾರಿಸಿದಂತೆ ಜನರು ಇನ್ನೂ ಉತ್ತಮ ಸರಕು-ಸೇವೆಗಳನ್ನು ಅಪೇಕ್ಷಿಸುತ್ತಾರೆ. ಹಾಗಾಗಿ ಕೈಗಾರಿಕೆ ಹಾಗೂ ಸೇವಾ ವಲಯಗಳಲ್ಲಿ ಉದ್ಯೋಗ ಅವಕಾಶಗಳು ಹೆಚ್ಚಾಗುತ್ತದೆ. ಅದು ಕೃಷಿಯಲ್ಲಿನ ಹೆಚ್ಚುವರಿ ಶ್ರಮಿಕರಿಗೂ ಸೂಕ್ತ ತರಬೇತಿ ನೀಡಿ ಉದ್ಯೋಗ ನೀಡುತ್ತದೆ. ಇದರಿಂದ ಕೈಗಾರಿಕೆ ಮತ್ತು ಸೇವಾ ವಲಯಗಳಲ್ಲಿ ದುಡಿಯುತ್ತಿರುವ ಸಂಖ್ಯೆ ಹೆಚ್ಚಳವಾಗಿ ರಾಷ್ಟ್ರೀಯ ಅದಾಯಕ್ಕೆ ಈ ವಲಯಗಳ ಕೊಡುಗೆ ಹೆಚ್ಚಳವಾಗುತ್ತದೆ. ಹೀಗೆ ಅರ್ಥವ್ಯವಸ್ಥೆಯಲ್ಲಿ ಕೃಷಿ ವಲಯದಿಂದ ಕೃಷಿಯೇತರ ವಲಯಗಳಲ್ಲಿ ಹೆಚ್ಚಿನ ಜನರು ಕೆಲಸ ಮಾಡಿ, ರಾಷ್ಟ್ರೀಯ ಅದಾಯಕ್ಕೆ ಹೆಚ್ಚಿನ ಕೊಡುಗೆ ನೀಡುವುದನ್ನು ʼರಚನಾತ್ಮಕ ಬದಲಾವಣೆʼ ಎಂದು ಕರೆಯುತ್ತಾರೆ. ಈ ಪ್ರಕ್ರಿಯೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನವನ್ನು ಬಳಸಿದಂತೆ ಉತ್ಪಾದನಾ ಸಾಮರ್ಥ್ಯವು ಹೆಚ್ಚಾಗಿ ಆರ್ಥಿಕ ಅಭಿವೃದ್ಧಿ ಇನ್ನೂ ತೀವ್ರಗೊಳ್ಳುತ್ತದೆ.

ಅನಾಭಿವೃದ್ಧಿ

ʼಅನಾಭಿವೃದ್ಧಿʼ ಎಂಬ ಶಬ್ದವು ಹಿಂದುಳಿದ, ಅಭಿವೃದ್ಧಿ ಹೊಂದದೇ ಇರುವ ನಿಶ್ಚಲ ಸ್ಥಿತಿಯನ್ನು ಸೂಚಿಸುತ್ತದೆ. ಅನಾಭಿವೃದ್ಧಿ ದೇಶದಲ್ಲಿ ಒಟ್ಟಾರೆ ಉತ್ಪಾದನೆ ಕಡಿಮೆಯಿದ್ದು, ಜನರ ಆದಾಯವು ಅತ್ಯಂತ ಕಡಿಮೆ ಇರುತ್ತದೆ. ಬಹುತೇಕ ಜನರಿಗೆ ಕನಿಷ್ಠ ಮೂಲಭೂತ ಅವಶ್ಯಕತೆಗಳಾದ ಊಟ, ಬಟ್ಟೆ, ವಸತಿಯನ್ನು ಪಡೆಯುವುದೂ ಕಷ್ಟವಾಗಿರುತ್ತದೆ. ಬಹುಸಂಖ್ಯಾತ ಜನರು ಅನಕ್ಷರಸ್ಥರಾಗಿದ್ದು, ಮೂಢನಂಬಿಕೆಗಳಲ್ಲಿ ಮುಳುಗಿರುತ್ತಾರೆ. ಆರೋಗ್ಯ ಮತ್ತು ನೈರ್ಮಲ್ಯದ ಸೌಲಭ್ಯಗಳಿಲ್ಲದೆ ಅನಾರೋಗ್ಯದಿಂದ ಬಳಲುತ್ತಿರುತ್ತಾರೆ. ಯಾವುದೇ ನಾಗರಿಕ ಸೌಲಭ್ಯಗಳಿರುವುದಿಲ್ಲ. ಸ್ವಚ್ಛಂದವಾಗಿ ಬದುಕುವ ಸ್ವಾತಂತ್ರ್ಯವೂ ಇಲ್ಲಿರುವುದಿಲ್ಲ. ಉದಾಹರಣೆಯಾಗಿ ಸ್ವಾತಂತ್ರ್ಯ ಪೂರ್ವ ಭಾರತವು ಬ್ರಿಟಿಷರ ದೀರ್ಘಕಾಲದ ಆಡಳಿತ ಹಾಗೂ ಆರ್ಥಿಕ ಶೋಷಣೆಯ ಪರಿಣಾಮವಾಗಿ ಒಂದು ಬಡ ರಾಷ್ಟ್ರವಾಗಿ ಮಾರ್ಪಟ್ಟಿತ್ತು. ಹಾಗಾಗಿ ಭಾರತವನ್ನು ಆರ್ಥಿಕವಾಗಿ ಬಡರಾಷ್ಟ್ರ, ಅನಾಭಿವೃದ್ಧಿ ರಾಷ್ಟ್ರ ಎಂದು ಕರೆಯಲಾಗುತ್ತಿತ್ತು.

ಎರಡನೆಯ ಮಹಾಯುದ್ಧದ ನಂತರ ಯುರೋಪಿಯನ್ನರಿಂದ ಬಿಡುಗಡೆ ಪಡೆದ ಬಹುತೇಕ ಎಲ್ಲ ದೇಶಗಳಲ್ಲಿ ಪರಿಸ್ಥಿತಿಯು ಭಾರತಕ್ಕಿಂತ ಭಿನ್ನವಾಗಿಯೇನೂ ಇರಲಿಲ್ಲ. ಈ ಎಲ್ಲ ದೇಶಗಳನ್ನು ಬಡ ದೇಶಗಳು, ಹಿಂದುಳಿದ ದೇಶಗಳು, ಅನಾಭಿವೃದ್ಧಿ ದೇಶಗಳು ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುತ್ತಿತ್ತು. ಈಗ ಈ ಎಲ್ಲ ದೇಶಗಳಲ್ಲಿ ಪರಿಸ್ಥಿತಿ ಬದಲಾಗುತ್ತಿದೆ. ಅಭಿವೃದ್ಧಿ ಚಟುವಟಿಕೆಗಳು ಚುರುಕುಗೊಂಡಿವೆ. ಇವು ಅಭಿವೃದ್ಧಿಯ ಪಥದಲ್ಲಿ ಬೇರೆ-ಬೇರೆ ಹಂತಗಳಲ್ಲಿ ಮುನ್ನಡೆಯುತ್ತಿವೆ. ಹಾಗಾಗಿ ಅಂದಿನ ಅನಾಭಿವೃದ್ಧಿ ದೇಶಗಳನ್ನು ಈಗ ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಎಂದು ಕರೆಯಲಾಗುತ್ತಿದೆ.

ಆದಾಯ ಅಭಿವೃದ್ಧಿಯ ಸೂಚಕಗಳು

ಒಂದು ದೇಶದ ಅಭಿವೃದ್ಧಿಯು ಹಲವಾರು ಅಂಶಗಳನ್ನು ಅವಲಂಬಿಸಿದೆ. ಅವುಗಳಲ್ಲಿ ಅತ್ಯಂತ ಪ್ರಮುಖವಾದ ಅಂಶ ಅಲ್ಲಿನ ಆದಾಯ. ಒಂದು ದೇಶದ ಆದಾಯವೆಂದರೆ, ಆ ದೇಶದಲ್ಲಿ ವಾಸಿಸುತ್ತಿರುವ ಜನರೆಲ್ಲರ ಒಟ್ಟು ಆದಾಯ. ಇದನ್ನು ರಾಷ್ಟ್ರೀಯ ಆದಾಯ ಎನ್ನುತ್ತೇವೆ. ಬಹುಹಿಂದಿನಿಂದ ದೇಶದ ಆರ್ಥಿಕ ಅಭಿವೃದ್ಧಯನ್ನು ಗುರುತಿಸುವಾಗ ಹಾಗೂ ಒಂದು ದೇಶದ ಅಭಿವೃದ್ಧಿಯನ್ನು ಇತರೆ ದೇಶಗಳ ಅಭಿವೃದ್ಧಿಯೊಂದಿಗೆ ಹೋಲಿಸುವಾಗ ಅಲ್ಲಿನ ರಾಷ್ಟ್ರೀಯ ಆದಾಯವನ್ನು ಅಭಿವೃದ್ಧಿಯ ಸೂಚಕವಾಗಿ ಬಳಸಲಾಗುತ್ತಿದೆ. ಇದರ ಪ್ರಕಾರ ಹೆಚ್ಚಿನ ಆದಾಯ ಹೊಂದಿದ ದೇಶಗಳು ಮುಂದುವರಿದ ದೇಶಗಳೆನಿಸುತ್ತವೆ. ಇತರೆ ದೇಶಗಳು ಹಿಂದುಳಿದ ದೇಶಗಳೆನಿಸುತ್ತವೆ.

ಆದರೆ ಒಂದು ದೇಶದಲ್ಲಿ ಬದಲಾಗಿ ತಲಾದಾಯವನ್ನು ಅಭಿವೃದ್ಧಿಯ ಸೂಚಕವಾಗಿ ಬಳಕೆಗೆ ತರಲಾಯಿತು. ದೇಶದ ರಾಷ್ಟ್ರೀಯ ಆದಾಯವನ್ನು ಅಲ್ಲಿನ ಒಟ್ಟು ಜನಸಂಖ್ಯೆಯಿಂದ ಭಾಗಿಸುವ ಮೂಲಕ ತಲಾದಾಯವನ್ನು ಕಂಡುಹಿಡಿಯಲಾಗುತ್ತದೆ. ಇದು ದೇಶದ ಪ್ರತಿಯೊಬ್ಬ ವ್ಯಕ್ತಿಯ ಸರಾಸರಿ ಆದಾಯವಾಗಿದೆ. ತಲಾದಾಯ ಹೆಚ್ಚಾದಂತೆ ಜನರ ಜೀವನ ಮಟ್ಟದಲ್ಲಿ ಹೆಚ್ಚಳವಾಗಿ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಭಾವಿಸಲಾಗಿದೆ. ಆದರೆ ಅದೂ ಕೂಡ ನೈಜವಾದ ಅಭಿವೃದ್ಧಿಯ ಮಾಪಕವಾಗುವುದಿಲ್ಲ. ಏಕೆಂದರೆ ಅದು ಅದಾಯವು ಜನರ ನಡುವೆ ಹೇಗೆ ಹಂಚಿಕೆಯಾಗಿದೆ ಎಂಬುದನ್ನು ತಿಳಿಸುವುದಿಲ್ಲ.

ಆದಾಯ ಎಲ್ಲ ಜನರಲ್ಲಿ ಸಮಾನವಾಗಿ ಹಂಚಿಕೆಯಾಗದೆ, ಕೇವಲ ತಲಾದಾಯ ಹೆಚ್ಚಳವಾದ ಮಾತ್ರಕ್ಕೆ ಅಲ್ಲಿನ ಜನರ ಜೀವನಮಟ್ಟ ಸುಧಾರಿಸಲಾರದು. ತಲಾದಾಯವು ಶಿಕ್ಷಣ, ಆರೋಗ್ಯ ಮುಂತಾದ ಸಾಮಾಜಿಕ ಅಂಶಗಳನ್ನು ಪರಿಗಣನೆ ಮಾಡುವುದಿಲ್ಲ. ಹಾಗಾಗಿ ಅಭಿವೃದ್ಧಿಯನ್ನು ಅಳೆಯುಲು ಅನೇಕ ಪರ್ಯಾಯ ಮಾನದಂಡಗಳನ್ನು ಹುಡುಕಲಾಗಿದೆ.

ಮಾನವ ಅಭಿವೃದ್ಧಿ ಸೂಚಕಗಳು

ಆರ್ಥಿಕ ಅಭಿವೃದ್ಧಿಯ ಮುಖ್ಯ ಗುರಿ ಮಾನವ ಅಭಿವೃದ್ಧಿ, ಜನರು ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬೇಕಾದರೆ ಉತ್ತಮ ಆಹಾರ, ಬಟ್ಟೆ, ವಸತಿ, ಶಿಕ್ಷಣ, ಆರೋಗ್ಯ, ಕಾನೂನಿನ ನೆರವು, ಸಾಮಾಜಿಕ ಭದ್ರತೆ ಮುಂತಾದ ಸೌಲಭ್ಯಗಳ ಜೊತೆಗೆ ಶುದ್ಧವಾದ ನೀರು, ಶುದ್ಧವಾದ ಗಾಳಿ, ಸ್ವಚ್ಛವಾದ ಪರಿಸರ ಬೇಕಾಗುತ್ತದೆ.

ಮಾನವನ ಜೀವನದ ಗುಣಮಟ್ಟವನ್ನು ಅಳೆಯುವುದಕ್ಕಾಗಿ ʼವಿಶ್ವಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮʼವು ʼಮಾನವ ಅಭಿವೃದ್ಧಿ ಸೂಚಿʼ ಎಂಬ ಮಾನದಂಡವನ್ನು ರೂಪಿಸಿದೆ. ಮಾನವ ಅಭಿವೃದ್ಧಿ ಸೂಚಿಯಲ್ಲಿ ಆರೋಗ್ಯ, ಜ್ಞಾನ ಹಾಗೂ ಜೀವನಮಟ್ಟವನ್ನು ಅಳೆಯಲು ಮೂರು ಸೂಚಕಗಳನ್ನು ರೂಪಿಸಲಾಗಿದೆ.

ದೇಶದ ಜನರು ಬದುಕುಳಿಯಬಹುದಾದ ಸರಾಸರಿ ವಯಸ್ಸನ್ನು ನಿರೀಕ್ಷಿತ ಜೀವಿತಾವಧಿ ಎನ್ನುತ್ತೇವೆ. ಹಾಗಾದರೆ ಮನುಷ್ಯ ದೀರ್ಘಕಾಲದವರೆಗೂ ಬದುಕಲು ಸಹಾಯಕವಾಗುವ ಅಂಶಗಳಾವುವು? ಪೌಷ್ಠಿಕ ಆಹಾರದ ಲಭ್ಯತೆ, ಉತ್ತಮ ಆರೋಗ್ಯ ಮತ್ತು ನೈರ್ಮಲ್ಯದ ಸೌಲಭ್ಯಗಳು, ಶುದ್ಧವಾದ ಪರಿಸರ ಮುಂತಾದುವು ಮನುಷ್ಯನ ಆಯಸ್ಸನ್ನು ಹೆಚ್ಚಿಸಲು ಸಹಾಯಕವಾಗಿವೆ. ಈ ಎಲ್ಲ ಅಂಶಗಳನ್ನು ನಿರೀಕ್ಷಿತ ಜೀವಿತಾವಧಿ ಪ್ರತಿನಿಧಿಸುತ್ತದೆ.

ಶಿಕ್ಷಣದ ಮಟ್ಟ ಹೆಚ್ಚಾದಂತೆ ದೇಶದ ಆರ್ಥಿಕ ಪ್ರಗತಿ ಹೆಚ್ಚಾಗುತ್ತದೆ. ಒಂದು ದೇಶದ ಶೈಕ್ಷಣಿಕ ಸಾಧನೆಯನ್ನು ಅಳೆಯುವುದಾದರೂ ಹೇಗೆ?. ದೇಶದಲ್ಲಿನ ೨೫ ವರ್ಷಗಳ ಮೇಲ್ಪಟ್ಟ ಜನರು ಪೊರೈಸಿರುವ ʼಸರಾಸರಿ ಶಾಲಾ ಶಿಕ್ಷಣದ ವರ್ಷಗಳುʼ ಮತ್ತು ೫ ವರ್ಷದ ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಪಡೆಯಲಿರುವ ʼನಿರೀಕ್ಷಿತ ಶಾಲಾ ಶಿಕ್ಷಣದ ವರ್ಷಗಳುʼ, ಈ ಎರಡು ಅಂಶಗಳ ಆಧಾರದ ಮೇಲೆ ಒಂದು ದೇಶದ ಶೈಕ್ಷಣಿಕ ಸಾಧನೆಯನ್ನು ಅಳೆಯಲಾಗುತ್ತದೆ.

ಲಿಂಗ ಸಂಬಂಧಿ ಅಭಿವೃದ್ಧಿ

ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಮಹಿಳೆಯ ಪಾತ್ರ ಅತ್ಯಂತ ಮಹತ್ವವಾದುದು. ಜನಸಂಖ್ಯೆಯಲ್ಲಿ ಅರ್ಧದಷ್ಟಿರುವ ಮಹಿಳೆಯರು ಅರ್ಥವ್ಯವಸ್ಥೆಯ ಎಲ್ಲ ಕ್ಷೇತ್ರಗಳಲ್ಲಿ ದುಡಿಯುವ ಸಾಮರ್ಥ್ಯವನ್ನು ಪಡೆದಿದ್ದಾರೆ. ಅವರಿಗೆ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ರಾಜಕೀಯ ಸಮಾನತೆಯನ್ನು ಒದಗಿಸಿಕೊಡಬೇಕಾದುದು ನಾಗರಿಕ ಸಮಾಜದ ಕರ್ತವ್ಯವಾಗಿದೆ.

ಸ್ವತಂತ್ರ ಭಾರತದಲ್ಲಿ ನಮ್ಮ ಸಂವಿಧಾನವು ಮಹಿಳೆಯರಿಗೆ ಪುರುಷರಷ್ಟೇ ಸಮಾನ ಸ್ವಾತಂತ್ರ್ಯ, ಸಮಾನತೆ ಮತ್ತು ಅವಕಾಶಗಳನ್ನು ನೀಡಿದೆ. ಹಾಗಾಗಿ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರು ಭಾಗಿದಾರರಾಗಿದ್ದಾರೆ. ಲಿಂಗ ತಾರತಮ್ಯವನ್ನು ಹೋಗಲಾಡಿಸಲು ಪ್ರಯತ್ನಸಲಾಗುತ್ತಿದೆ.

ಗರ್ಭಿಣಿ ಮತ್ತು ಬಾಣಂತಿ ತಾಯಂದಿರ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗಿದೆ. ತಾಯಂದಿರು ಮತ್ತು ಮಕ್ಕಳ ಅಪೌಷ್ಠಿಕತೆಯನ್ನು ನಿವಾರಣೆ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಇದರಿಂದ ತಾಯಂದಿರ ಮರಣದರ ಕಡಿಮೆಯಾಗುತ್ತಿದೆ. ತಾಯಿಯ ಗರ್ಭದಲ್ಲಿರುವಾಗಲೇ ಹೆಣ್ಣು ಭ್ರೂಣಗಳನ್ನು ಪತ್ತೆಹಚ್ಚಿ, ಹತ್ಯೆಮಾಡುವ ಕೆಟ್ಟ ಪರಂಪರೆ ಬೆಳೆಯುತ್ತಿದೆ. ಇದರಿಂದ ಲಿಂಗಾನುಪಾತ ಕುಸಿಯುತ್ತದೆ. ಇದನ್ನು ಸಮರ್ಥವಾಗಿ ತಡೆಯಲು ಶಿಕ್ಷಣ ಹಾಗೂ ಕಾನೂನಿನ ಮೂಲಕ ಪ್ರಯತ್ನಿಸಲಾಗುತ್ತಿದೆ.

FAQ

ಭಾರತದ ಯೋಜನೆಗಳ ಪಿತಾಮಹ ಯಾರು ?

ವಿಶ್ವೇಶ್ವರಯ್ಯ.

ರೋಗನಿರೋಧಕ ಶಕ್ತಿಯನ್ನು ಯಾವ ಹಣ್ಣು ಹೆಚ್ಚು ಹೊಂದಿದೆ?

ನೆಲ್ಲಿಕಾಯಿ.

ವಿಶ್ವದ ಅತ್ಯಂತ ಮೌಲ್ಯಯುತ ಕರೆಸ್ಸಿ ಯಾವುದು ?

ಕುವೈಟ್‌ ದಿನಾರ್‌.

ಇತರೆ ವಿಷಯಗಳು :

ಭಾರತದ ಭೂ ಬಳಕೆ ಹಾಗೂ ವ್ಯವಸಾಯ

ಪೌರತ್ವದ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here