ಬಕ್ಸಾರ್‌ ಕದನದ ಬಗ್ಗೆ ಮಾಹಿತಿ | Information About the Battle of Buxar in Kannada

0
645
ಬಕ್ಸಾರ್‌ ಕದನದ ಬಗ್ಗೆ ಮಾಹಿತಿ | Information About the Battle of Buxar in Kannada
ಬಕ್ಸಾರ್‌ ಕದನದ ಬಗ್ಗೆ ಮಾಹಿತಿ | Information About the Battle of Buxar in Kannada

ಬಕ್ಸಾರ್‌ ಕದನದ ಬಗ್ಗೆ ಮಾಹಿತಿ Information About the Battle of Buxar Bhaksar Kadanada Bagge Mahiti in Kannada


Contents

ಬಕ್ಸಾರ್‌ ಕದನದ ಬಗ್ಗೆ ಮಾಹಿತಿ

Information About the Battle of Buxar in Kannada
Information About the Battle of Buxar in Kannada

ಬಕ್ಸಾರ್‌ ಕದನ

ಪ್ಲಾಸಿ ಕದನದ ನಂತರ ಮೀರ್‌ ಜಾಫರ್‌ ಬಂಗಾಳದ ನವಾಬನಾದನು ಸಿರಾಜ್‌ ಉದ್‌ ದೌಲ್‌ ನನ್ನು ವಂಚಿಸಿ ಬಂಗಾಳದ ನವಾಬನಾಗಿದ್ದರಿಂದ ಬ್ರಿಟಿಷರ ಗುಲಾಮನಾಗಬೇಕಾಯಿತು. ಅಲ್ಲದೆ ಬ್ರಿಟಿಷ್‌ ಕಂಪನಿಗೆ, ಬ್ರಿಟಿಷ್‌ ನೌಕರರಿಗೆ ಅಪಾರ ಹಣ ಕೊಟ್ಟನು. ಇದರಿಂದಾಗಿ ಶ್ರೀಮಂತ ಬಂಗಾಳ ಬರಡು ಬಂಗಾಳವಾಯಿತು. ರಾಬರ್ಟ ಕ್ಲೈವನ ನಂತರ ೧೭೬೦ ರಲ್ಲಿ ವ್ಯಾನ್ಸಿಟಾರ್ಟ್‌ ಬಂಗಾಳದ ಗವರ್ನರ್‌ ಆಗಿ ಬಂದನು. ಕಂಪನಿಗೆ ಹಣ ಕಟ್ಟಲಿಲ್ಲ ಎಂಬ ಕಾರಣದಿಂದ ಮೀರ್‌ಜಾಫರ್‌ನನ್ನು ಕೆಳಗಿಳಿಸಿ ಅವನ ಅಳಿಯ ಮೀರ್‌ ಕಾಸಿಂನನ್ನು ಬಂಗಾಳದ ನವಾಬನ್ನಾಗಿ ಮಾಡಿದನು. ಈತನೂ ಆರಂಭದಲ್ಲಿ ಕಂಪನಿಗೆ, ಬ್ರಿಟಿಷ ಅಧಿಕಾರಿಗಳಿಗೆ ಅಪಾರ ಹಣ ಕೊಟ್ಟನು. ಅಲ್ಲದೆ ಮಿಡ್ನಾಪುರ್‌ ಚಿತ್ತಗಂಗಾ, ಬರ್ದ್ವಾನ ಜಲ್ಲೆಗಳ ಜಮೀನ್ದಾರಿಕೆಯ ಹಕ್ಕನ್ನು ಕೊಟ್ಟನು. ಅನಂತರ ಬ್ರಿಟಿಷರ ನಿರ್ಬಂದಗಳಿಂದ ದೂರ ಇರಲು ಬಯಸಿ, ತನ್ನ ರಾಜಧಾನಿಯನ್ನು ಮುರ್ಸಿದಾಬಾದ್‌ ನಿಂದ ಮೋಂಗಿರ್‌ಗೆ ವರ್ಗಾಯಿಸಿದನು. ಅಲ್ಲದೆ, ತನ್ನ ರಾಜದಯದಲ್ಲಿ ನಡೆಯುವ ಭ್ರಷ್ಟಾಚಾರವನ್ನು ತಡೆಗಟ್ಟಿದ ಅಪಾರವಾದ ಹಣವನ್ನು ಸಂಗ್ರಹಿಸಿ ಬ್ರಿಟಿಷರಿಗೆ ಕೊಡಬೇಕಾದ ಕಂದಾಯ ಕಟ್ಟಿದನು. ತನ್ನ ಸೈನಿಕರಿಗೆ ಐರೋಪ್ಯ ಮಾದರಿಯಲ್ಲಿ ತರಬೇತಿಗೊಳಿಸಿದರು. ಮೋಂಗಿರನಲ್ಲಿ ಮದ್ದು ಗುಂಡುಗಳ ತಯಾರಿಕಾ ಕೇಂದ್ರವನ್ನು ಸ್ಥಾಪಿಸಿದರು. ಈ ಎಲ್ಲ ಅಂಶಗಳು ಬ್ರಿಟಿಷರು ಅವನನ್ನು ಸಂಶಯದಿಂದ ನೋಡುವಂತೆ ಮಾಡಿದವು.

ಬಕ್ಸಾರ ಕದನಕ್ಕೆ ಕಾರಣಗಳು

ರಾಜಕೀಯ ಕಾರಣಗಳು :

ಬ್ರಿಟಿಷರು ಮತ್ತು ಮೀರ್‌ಕಾಸಿಂ ಇಬ್ಬರು ಬಂಗಾಳದ ಮೇಲೆ ಪರಮಾಧಿಕಾರ ಸ್ಥಾಪಿಸಲು ಮುಂದಾದರು.

ಸ್ವಾತಂತ್ರ ಪ್ರಿಯನಾದ ಮೀರ್‌ಕಾಸಿಂ ತಮ್ಮ ಕೈಗೊಂಬೆಯಾಗಿರಲು ಬ್ರಿಟಿಷರು ಕೇವಲ ವ್ಯಾಪಾರಿಗಳಾಗಿ ಇರಬೇಕೆಂದು ಮೀರ್‌ ಕಾಸಿಂ ಬಯಸಿದನು.

ಇದು ಸಂಘರ್ಷಕ್ಕೆ ದಾರಿ ಮಾಡಿಕೊಟ್ಟಿತು.

೨ ನೇ ಆಲಂನ ಪ್ರಕರಣ :

ಮೊಗಲ್‌ ದೊರೆ ೨ ನೇ ಆಲಿಂಗರನ ಮರಣಾ ನಂತರ ಅವನ ಮಗ ಷಹಜಾದ್‌ ೨ ನೇ ಷಾ ಆಲಂ ಎಂಬ ಹೆಸರಿನೊಂದಿಗೆ ಮೊಗಲ್‌ ದೊರೆಯಾಗಿ ಅಧಿಕಾರ ಸ್ವೀಕರಿಸಿದನು.

ಆದರೆ ಮೀರಕಾಸಿಂ ಇವನ ಅಧಿಕಾರವನ್ನು ಒಪ್ಪಲಿಲ್ಲ. ಇದು ಬ್ರಿಟಿಷರ ಕೋಪಕ್ಕೆ ಕಾರಣವಾಯಿತು.

ರಾಮನಾರಾಯಣನ ಪ್ರಕರಣ :

ಮೀರ ಕಾಸಿಂನ ಉಚ್ಚಾಟಿತ ದಿವಾನ ರಾಮನಾರಾಯಣನಿಗೆ ಬ್ರಿಟಿಷರು ಆಶ್ರಯ ನೀಡಿದ್ದರು.

ಅವನನ್ನು ತನಗೆ ಒಪ್ಪಿಸುವಂತೆ ಮೀರ್‌ಖಾಸಿಂ ಬ್ರಿಟಿಷರನ್ನು ಎದುರಿಸುವ ಧೈರ್ಯ ತಂದುಕೊಂಡನು.

ಆರ್ಥಿಕ ಕಾರಣ :

ಫರಿಕ್ಸಿಯಾರ್‌ ಬಂಗಾಳದಲ್ಲಿ ಸುಂಕರಹಿತ ವ್ಯಾಪಾರ ಮಾಡಲು ದಸ್ತಕಗಳನ್ನು ಕೊಟ್ಟಿದ್ದನು.

ಆದರೆ ಈ ರಿಯಾಯಿತಿ ಭಾರತೀಯ ವರ್ತಕರಿಗೆ ಇರಲಿಲ್ಲ.

ಇದನ್ನು ಗಮನಿಸಿ ನವಾಬನು ದಸ್ತಕಗಳನ್ನು ರದ್ದು ಮಾಡಿದನು.

ಆಗ ಮೀರ್‌ಖಾಸಿಂನನ್ನು ಕೆಳಗಿಳಿಸಿ ಮೀರ್‌ ಜಾಫರ್‌ ನನ್ನು ಬಂಗಾಳದ ನವಾಬನನ್ನಾಗಿಸಲಾಯಿತು.

ಇದರಿಂದ ಕೋಪಗೊಂಡ ಮೀರ್‌ ಖಾಸಿಂ ಪಾಟ್ನಾದ ಮೇಲೆ ದಾಳಿ ಮಾಡಿದಾಗ ಬ್ರಿಟಿಷರ ಅಧಿಕಾರಿ ಎಲ್ಲಿಸ್‌ ಪಾಟ್ನಾವನ್ನು ವಶಪಡಿಸಿಕೊಂಡನು.

ಕೆರಳಿದ ಮೀರ್‌ ಕಾಸಿಂ ಮರಳಿ ಪಾಟ್ನಾವನ್ನು ವಶಪಡಿಸಿಕೊಂಡು ೧೪೮ ಜನ ಯೂರೋಪಿಯನ್ನರನ್ನು ಕೊಂದು ಹಾಕಿದನು.

ಕೊನೆಗೆ ಮೇಜರ್‌ ಆಡಮ್ಸ್‌ ನನ್ನು ಎದುರಿಸಲಾಗದೆ ಸೋತು ಔದ್‌ ಗೆ ಓಡಿ ಹೋದನು.

ಬಕ್ಸಾರ್‌ ಕದನ ( ೧೭೬೪ ಅಕ್ಟೋಬರ್‌ ೨೨ )

ಔದ್‌ನ ನವಾಬ ಶುಜ್‌ – ಉದ್‌ – ದೌಲ್‌ ಮೊಘಲ್‌ ದೊರೆ ೨ನೇ ಷಾ ಅಲಂ ಮತ್ತು ಮೀರ್‌ಕಾಸಿಂರು ಒಂದು ತ್ರಿಕೋಟವನ್ನು ರಚಿಸಿಕೊಂಡು, ಕ್ರಿ. ಶಕ ೧೭೬೪ ಅಕ್ಟೋಬರ್‌ ೨೨ ರಂದು ಬಿಹಾರದ ಬಕ್ಸಾರ್‌ ಎಂಬಲ್ಲಿ ಬ್ರಿಟಿಷರ ಮೇಜರ್‌ ಹೆಕ್ಟೇರ್‌ ಮನ್ರೋನನ್ನು ಎದುರಿಸಿದರು. ಇದೇ ಬಕ್ಸಾರ್‌ ಕದನ. ಈ ಯುದ್ದದಲ್ಲಿ ಸೋತ ಶುಜ್‌ – ಉದ್-‌ ದೌಲ್‌ ರೋಹಿಲ್‌ ಖಂಡಕ್ಕೆ ಓಡಿ ಹೋದನು. ಸೋತ ಮೀರ್‌ ಖಾಸಿಂ ದೆಹಲಿಗೆ ಓಡಿ ಹೋದನು.

ಒಪ್ಪಂದದ ಕರಾರುಗಳು

ಬಂಗಾಳದ ರಾಬರ್ಟ್‌ ಕ್ಲೈವ್‌ ದ್ವಿಮುಖ ಸರ್ಕಾರ ಪದ್ದತಿ ಜಾರಿಗೆ ಬಂದಿತು.

ಔದ್‌ ನ ಅಲಹಾಬಾದ್‌ ಮತ್ತು ಕಾರಾ ಪ್ರದೇಶಗಳನ್ನು ಮೊಘಲ್‌ ದೊರೆಗೆ ಬಿಟ್ಟುಕೊಡಲಾಯಿತು.

ಉಳಿದ ಔದ್‌ ನ್ನು ಔದ್‌ ನ ನವಾಬನಿಗೆ ೫೦ ಲಕ್ಷಕ್ಕೆ ಮಾರಲಾಯಿತು.

ರಾಬರ್ಟ್‌ ಕ್ಲೈವ್‌ ಎರಡನೇ ಷಾ ಆಲಂನಿಂದ ಬಂಗಾಳದಲ್ಲಿ ದಿವಾನಿ ಹಕ್ಕನ್ನು ಪಡೆದನು.

FAQ

ಬಕ್ಸಾರ್‌ ಕದನವು ಯಾವಾಗ ನಡೆಯಿತು ?

ಅಕ್ಟೋಬರ್‌ ೨೨

ಪ್ಲಾಸಿ ಕದನವು ಯಾವಾಗ ನಡೆಯಿತು ?

೧೭೫೭

ಇತರೆ ವಿಷಯಗಳು :

ಭಾರತದ ಭೂ ಬಳಕೆ ಹಾಗೂ ವ್ಯವಸಾಯ

ರಾಷ್ಟ್ರೀಯ ಆದಾಯದ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here