ದಿಕ್ಕುಗಳ ಬಗ್ಗೆ ಪ್ರಬಂಧ | Dikkugala Bagge Prabandha In Kannada

0
1015
ದಿಕ್ಕುಗಳ ಬಗ್ಗೆ ಪ್ರಬಂಧ | Dikkugala Bagge Prabandha In Kannada
ದಿಕ್ಕುಗಳ ಬಗ್ಗೆ ಪ್ರಬಂಧ | Dikkugala Bagge Prabandha In Kannada

ದಿಕ್ಕುಗಳ ಬಗ್ಗೆ ಪ್ರಬಂಧ, ದಿಕ್ಕುಗಳು in kannada, Dikkugala Bagge Prabandha, directions, dikkugalu essay in kannada, directions essay in kannada dikkugalu essay in kannada


ದಿಕ್ಕುಗಳ ಬಗ್ಗೆ ಪ್ರಬಂಧ | Dikkugala Bagge Prabandha In Kannada

Contents

ದಿಕ್ಕುಗಳ ಬಗ್ಗೆ ಪ್ರಬಂಧ

ಮುನ್ನುಡಿ:

ನಮಗೆಲ್ಲರಿಗೂ ಸಾಮಾನ್ಯವಾಗಿ ಪ್ರಮುಖವಾದ ನಾಲ್ಕು ದಿಕ್ಕುಗಳ ಬಗ್ಗೆ ಅರಿವಿರುತ್ತದೆ. ಉಳಿದ ನಾಲ್ಕು ದಿಕ್ಕುಗಳ ಬಗ್ಗೆ ಅಷ್ಟಾಗಿ ತಿಳಿದಿರುವುದು ಕಡಿಮೆ. ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ದಿಕ್ಕುಗಳಿಗೆ ಮಹತ್ವವಿರುವಂತೆಯೇ, ಉಳಿದ ಉಪ ದಿಕ್ಕುಗಳಾದ ವಾಯುವ್ಯ, ಈಶಾನ್ಯ, ನೈಋತ್ಯ ಮತ್ತು ಆಗ್ನೇಯ ದಿಕ್ಕುಗಳಿಗೂ ಸಹ ವಿಶೇಷ ಮಹತ್ವವನ್ನು ನೀಡಲಾಗಿದೆ.

ವಿಷಯ ನಿರೂಪಣೆ:

ಹಿಂದಿನ ಕಾಲದಲ್ಲಿ ದಿಕ್ಕುಗಳ ಆಧಾರದ ಮೇಲೆ ಮಳೆ ಮತ್ತು ಗಾಳಿಗೆ ಹೆಸರುಗಳನ್ನು ಸೂಚಿಸುತ್ತಿದ್ದರು.ದಿಕ್ಕುಗಳಿಗೆ ತನ್ನದೇ ಆದ ಮಹತ್ವವಿದೆ. ಯಾವ ದಿಕ್ಕಿನಲ್ಲಿ ಏನಿರಬೇಕು. ಹಾಗೆ ಈ ದಿಕ್ಕುಗಳು ವಾಸ್ತುಶಾಸ್ತ್ರದಲ್ಲಿ ಹೆಚ್ಚಾಗಿ ನಾವು ಕಾಣಬಹುದು. ಮನೆ ಕಟ್ಟಲು ದಿಕ್ಕುಗಳನುಸಾರ ಮನೆ ಕಟ್ಟುತ್ತಾರೆ.

ದಿಕ್ಕುಗಳು ಭೂಗೋಳಶಾಸ್ತ್ರದಲ್ಲಿ ಭೂಮಿಯ ಅಕ್ಷದ ಆಧಾರದ ಮೇಲೆ ಸ್ಥಳಗಳನ್ನು ಗುರುತಿಸುವ ಒಂದು ವಿಧಾನವಾಗಿದೆ. ನಾಲ್ಕು ಪ್ರಧಾನ ದಿಕ್ಕುಗಳು ಹಾಗೂ ನಾಲ್ಕು ಉಪ ದಿಕ್ಕುಗಳಿವೆ.

ಪ್ರಧಾನ ದಿಕ್ಕುಗಳು:

ಪೂರ್ವ (ಮೂಡಣ)
ಪಶ್ಚಿಮ (ಪಡುವಣ)
ಉತ್ತರ (ಬಡಗಣ)
ದಕ್ಷಿಣ (ತೆಂಕಣ)

ಉಪ ದಿಕ್ಕುಗಳು:

ವಾಯವ್ಯ
ನೈರುತ್ಯ
ಆಗ್ನೇಯ
ಈಶಾನ್ಯ

ಪೂರ್ವ:

ಪೂರ್ವ ದಿಕ್ಕನ್ನು ಪಿತೃ ಸ್ಥಾನವೆಂದು ಸಹ ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ ಈ ದಿಕ್ಕಿನಲ್ಲಿ ಮೆಟ್ಟಿಲು ಮತ್ತು ಹಿರಿಯರ ಕೋಣೆಯನ್ನು ನಿರ್ಮಿಸಬಾರದೆಂದು ಹೇಳಲಾಗುತ್ತದೆ. ಈ ದಿಕ್ಕು ಆದಷ್ಟು ವಿಶಾಲವಾಗಿದ್ದರೆ ಒಳ್ಳೆಯದು ಎಂದು ಹೇಳಲಾಗುತ್ತದೆ. ಪೂರ್ವ ದಿಕ್ಕಿನ ಅಧಿಪತಿ ದೇವರು ಇಂದ್ರದೇವನಾಗಿದ್ದಾನೆ. ಪೂರ್ವ ದಿಕ್ಕನ್ನು ಮೂಡಣ ಎಂದು ಕರೆಯುತ್ತಾರೆ.

ಪಶ್ಚಿಮ:

ಪಶ್ಚಿಮ ದಿಕ್ಕಿನ ಅಧಿಪತಿ ದೇವರು ವರುಣ ದೇವ. ಪಶ್ಚಿಮ ದಿಕ್ಕಿಗೆ ಪಡುವಣ ಎಂತಲೂ ಕರೆಯುತ್ತಾರೆ. ದಿಕ್ಕಿನಲ್ಲಿರುವ ಕಿಟಕಿ ಬಾಗಿಲುಗಳನ್ನು ಆದಷ್ಟು ತೆರೆದಿಡುವುದು ಉತ್ತಮ. ಹೆಚ್ಚು ಭಾರವಾದ ವಸ್ತುಗಳನ್ನು ಈ ದಿಕ್ಕಿನಲ್ಲಿ ಇಡಲಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ದೋಷವಿದ್ದರೆ ಅದು ಗೃಹಸ್ಥ ಜೀವನ ಮತ್ತು ವ್ಯಾಪಾರ-ವ್ಯವಹಾರದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರುತ್ತದೆ ಎಂದು ಹೇಳಲಾಗುತ್ತದೆ.

ಉತ್ತರ:

ಉತ್ತರ ದಿಕ್ಕಿನ ಅಧಿಪತಿ ದೇವರು ಕುಬೇರ ದೇವ. ಧನ ಸಂಪತ್ತನ್ನು ನೀಡುವ ದಿಕ್ಕು ಇದಾಗಿದೆ. ಈ ದಿಕ್ಕಿನಲ್ಲಿ ದೋಷವಿದ್ದರೆ ಆರ್ಥಿಕ ಸಮಸ್ಯೆಯು ಉಂಟಾಗುತ್ತದೆ. ಅನಾವಶ್ಯಕ ಖರ್ಚು ಹೆಚ್ಚುವುದಲ್ಲದೆ, ಹಣದ ಕೊರೆತೆಯ ಸಮಸ್ಯೆ ಉಂಟಾಗುತ್ತದೆ. ಉತ್ತರ ದಿಕ್ಕಿಗೆ ಬಡಗಣ ಎಂದು ಕರೆಯುತ್ತಾರೆ.

ದಕ್ಷಿಣ:

ದಕ್ಷಿಣ ದಿಕ್ಕಿನ ಅಧಿಪತಿ ಯಮ ಆಗಿದ್ದಾನೆ. ದಕ್ಷಿಣ ದಿಕ್ಕಿಗೆ ತೆಂಕಣ ಎಂದು ಕರೆಯುತ್ತಾರೆ. ಈ ದಿಕ್ಕಿನಲ್ಲಿ ಕಟ್ಟಡಗಳನ್ನು ನಿರ್ಮಾಣ ಮತ್ತು ಭಾರವಾದ ವಸ್ತುಗಳನ್ನು ಇಡಬಹುದಾಗಿದೆ. ವಸ್ತುಗಳಿಂದ ತುಂಬಿ ಇಡುವುದು ಉತ್ತಮ. ಈ ದಿಕ್ಕಿನಲ್ಲಿ ಖಾಲಿ ಜಾಗವನ್ನು ಬಿಡುವುದು ಒಳ್ಳೆಯದಲ್ಲ. ಮುಖ್ಯ ದ್ವಾರವು ದಕ್ಷಿಣ ದಿಕ್ಕಿಗೆ ಇರುವುದು ಒಳ್ಳೆಯದಲ್ಲವೆಂದು ಹೇಳಲಾಗುತ್ತದೆ.

ಪ್ರಧಾನ ದಿಕ್ಕುಗಳು ಯಾವುವು?

ಪೂರ್ವ (ಮೂಡಣ)
ಪಶ್ಚಿಮ (ಪಡುವಣ)
ಉತ್ತರ (ಬಡಗಣ)
ದಕ್ಷಿಣ (ತೆಂಕಣ)

ಉಪ ದಿಕ್ಕುಗಳು ಯಾವುವು?

ವಾಯವ್ಯ
ನೈರುತ್ಯ
ಆಗ್ನೇಯ
ಈಶಾನ್ಯ

ಇತರೆ ವಿಷಯಗಳು:

ಪರಿಸರ ಮಹತ್ವ ಪ್ರಬಂಧ

James Kannada Full Movie Download

ರಾಷ್ಟ್ರೀಯ ಭಾವೈಕ್ಯತೆ ಪ್ರಬಂಧ

ಯೋಗ ಅಭ್ಯಾಸ ಪ್ರಬಂಧ

LEAVE A REPLY

Please enter your comment!
Please enter your name here