ಪ್ರಾಸ ಪದಗಳು, Rhyming Words In Kannada, rhyming words 50 example in kannada, ಪ್ರಾಸ ಪದಗಳು 20 ಉದಾಹರಣೆ, Prasa padagalu udaharane in kannada
Contents
ಪ್ರಾಸ ಪದಗಳು
ನಾವು ಈ ಪ್ರಾಸ ಪದಗಳ ಪಟ್ಟಿಯನ್ನು ನೀಡಿದ್ದೇವೆ. ಪದ್ಯವು ಕೇಳುವುದಕ್ಕೆ ಹಿತವಾಗಿರುವಂತೆ ಮಾಡಲು ಪದ್ಯದ ಪ್ರತಿ ಪಾದದ ನಿಯತವಾದ ಸ್ಥಾನವೊಂದರಲ್ಲಿ ಒಂದೇ ರೀತಿಯ ವರ್ಣವನ್ನಿಟ್ಟು ಬರೆಯುವುದಕ್ಕೆ ಪ್ರಾಸ ಎನ್ನುವರು.ಪ್ರಾಸವು ಶಬ್ದಾಲಂಕಾರದ ಒಂದು ವಿಧ. ಪ್ರಾಸಗಳಲ್ಲಿ ಹಲವು ಪ್ರಕಾರಗಳಿದ್ದರೂ ಸಹ ಮುಖ್ಯವಾಗಿ ಬಳಕೆಯಾಗಿರುವುದು ಆದಿ ಪ್ರಾಸ , ಅಂತ್ಯ ಪ್ರಾಸ ಮತ್ತು ಮಧ್ಯ ಪ್ರಾಸ ಮಾತ್ರ. ಹಳಗನ್ನಡದಲ್ಲಿ ವಿಶೇಷವಾಗಿ ಆದಿಪ್ರಾಸವನ್ನು ಬಳಕೆ ಮಾಡಲಾಗಿದ್ದು ಸಡುಗನ್ನಡ ಮತ್ತು ಹೊಸಗನ್ನಡದಲ್ಲಿ ಅಂತ್ಯಪ್ರಾಸ ಹೆಚ್ಚಾಗಿ ಬಳಕೆಯಾಗಿದೆ. ಒಂದು ಅಥವಾ ಹೆಚ್ಚು ಪದಗಳ ಅಂತ್ಯ ಒಂದೇ ಉಚ್ಚಾರಣೆ ಆಗಿದ್ದರೆ ಅದನ್ನು ಪ್ರಾಸ ಪದ ಎಂದು ಹೇಳುತ್ತಾರೆ.
ಉದಾಹರಣೆ:
ಉರಗ-ಕರಗ, ರಥ-ಪಥ, ರಚನ-ವಚನ, ಉದಯ-ಹೃದಯ
ಪ್ರಾಸ ಪದಗಳ ಪಟ್ಟಿ:
ಸಲಗ-ಓಲಗ | ಅರಳು-ಮರಳು | ಅಗಸ- ಆಗಸ |
ಗುಡುಗು-ನಡುಗು | ತಣ್ಣೀರು-ಕಣ್ಣೀರು | ರಜಾ-ಸಜಾ |
ಶುಚಿ-ರುಚಿ | ಉತ್ತರ-ಎತ್ತರ | ಬೆಟ್ಟ-ದಟ್ಟ |
ಹಂಸ-ಕಂಸ | ಶುಭ-ಲಾಭ | ರವಿ-ಕವಿ |
ಹಳ್ಳಿ-ಬಳ್ಳಿ | ಬಂದು-ತಂದು | ರಮ್ಯ-ಸೌಮ್ಯ |
ಕುಡಿ-ಮುಡಿ | ನಮನ-ಗಮನ | ಆಟ-ಕಾಟ |
ಉದರ-ಚದರ | ರೀತಿ-ನೀತಿ | ಸಿಡಿ-ಮಿಡಿ |
ಸಪ್ಪೆ- ಕಪ್ಪೆ | ಸಂದಿ-ಹಂದಿ | ನಯ-ಲಯ |
ಗೊಂಬೆ-ಕೊಂಬೆ | ಮಡಿ-ಕಡಿ | ಚಲನ-ವಲನ |
ನಲಿ-ಕಲಿ | ಚರಕ-ನರಕ | ಜಲ-ಬಲ |
ಸದರ-ಚದರ | ಧರ್ಮ-ಕರ್ಮ | ಇಷ್ಟ-ಕಷ್ಡ |
ಚಿಟ್ಟೆ-ಬಟ್ಟೆ | ಲಾಗ-ಜಾಗ | ಅಜ್ಜಿ-ಬಜ್ಜಿ |
ಕಾಟ-ಮಾಟ | ಕರಗ- ಉರಗ | ಸೀನ-ಮೀನ |
ಅರ-ಕರ | ಕಲಿಯೋಣ-ನಲಿಯೋಣ | ಎಂಟು-ದಂಟು |
ಸಕ್ಕರೆ-ಕೊಕ್ಕರೆ | ಹಾಡು-ಪಾಡು | ಎಂಟು-ದಂಟು |
ಕುಡಿ-ಪುಡಿ | ಲಯ-ನಯ | ಗಣಿ-ಮಣಿ |
ರಾಗ-ಜಾಗ | ಅಂದ-ಚಂದ | ಪಾಮರ-ಮಾಮರ |
ಆಡೋಣ-ಹಾಡೋಣ | ಲಡ್ಡು-ದುಡ್ಡು | ಹಣ-ಹೆಣ |
ನೇಗಿಲು-ಬಾಗಿಲು | ಎರಡು-ಹರಡು | ಒಣ-ಕಣ |