Yesu Kayangala Kaledu Lyrics in Kannada | ಏಸು ಕಾಯಂಗಳ ಕಳೆದು ಸಾಂಗ್‌ ಕನ್ನಡ

0
382
Yesu Kayangala Kaledu Lyrics in Kannada | ಏಸು ಕಾಯಂಗಳ ಕಳೆದು ಸಾಂಗ್‌ ಕನ್ನಡ
Yesu Kayangala Kaledu Lyrics in Kannada | ಏಸು ಕಾಯಂಗಳ ಕಳೆದು ಸಾಂಗ್‌ ಕನ್ನಡ

Yesu Kayangala Kaledu Lyrics in Kannada ಏಸು ಕಾಯಂಗಳ ಕಳೆದು ಸಾಂಗ್‌ ಕನ್ನಡ in kannada


Contents

Yesu Kayangala Kaledu Lyrics in Kannada

Yesu Kayangala Kaledu Lyrics in Kannada
Yesu Kayangala Kaledu Lyrics in Kannada | ಏಸು ಕಾಯಂಗಳ ಕಳೆದು ಸಾಂಗ್‌ ಕನ್ನಡ

ಈ ಲೇಖನಿಯಲ್ಲಿ ಏಸು ಕಾಯಂಗಳ ಕಳೆದು ಸಾಂಗ್‌ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

ಏಸು ಕಾಯಂಗಳ ಕಳೆದು ಸಾಂಗ್‌ ಕನ್ನಡ

ಏಸು ಕಾಯಂಗಳ ಕಳೆದು ಎಂಬತ್ನಾಲ್ಕು ಲಕ್ಷ ಜೀವರಾಶಿಯನ್ನು ದಾಟಿ ಬಂದ ಈ ಶರೀರ |
ತಾನಲ್ಲ ತನ್ನದಲ್ಲ ಆಸೆ ಥರವಲ್ಲ ಮುಂದೆ ಬಾಹೋದಲ್ಲ
ದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು || ಪ ||

ಆಶ ಕ್ಲೇಶ ದೋಷವೆಂಬ ಅಬ್ಧಿಯೊಳು ಮುಳುಗಿ
ಯಮನ ಪಾಶಕ್ಕೊಳಗಾಗದೆ ನಿರ್ದೋಷಿಯಾಗು ಸಂತೋಷಿಯಾಗು |

ಕಾಶಿ ವಾರಣಾಸಿ ಕಂಚಿ ಕಾಳಹಸ್ತಿ ರಾಮೇಶ್ವರ
ಏಸು ದೇಶ ತಿರುಗಿದರೆ ಬಾಹೋದೇನೋ ಅಲ್ಲಿ ಹೋದೇನೋ |
ದೋಷ ನಾಶಿ ಕೃಷ್ಣೆ ಗಂಗೆ ಗೋದಾವರಿ ಭವನಾಶಿ |
ತುಂಗಭದ್ರೆ ಯಮುನೆ ವಾಸದಲ್ಲಿ ಉಪವಾಸದಲ್ಲಿ |
ಮೀಸಲಾಗಿ ಮಿಂದು ಜಪ ತಪ ಹೋಮ ನೇಮಗಳ |
ಏಸು ಬಾರಿ ಮಾಡಿದರು ಫಲವೇನು ಈ ಛಲವೇನು || 1 ||
ದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು

ಅಂದಿಗೋ ಇಂದಿಗೋ ಒಮ್ಮೆ ಸಿರಿಕಮಲೇಶನನ್ನು
ಒಂದು ಬಾರಿ ಯಾರೂ ಹಿಂದ ನೆನೆಯಲಿಲ್ಲ ಮನದಣಿಯಲಿಲ್ಲ |
ಬಂದು ಬಂದು ಭ್ರಮೆಗೊಂಡು ಮಾಯಾಮೋಹಕ್ಕೆ ಸಿಕ್ಕಿ
ನೊಂದು ಬೆಂದು ಒಂದರಿಂದ ಉಳಿಯಲಿಲ್ಲ ಬಂಧ ಕಳೆಯಲಿಲ್ಲ |
ಸಂದೇಹವ ಮಾಡದಿರು ಅರಿವು ಎಂಬ ದೀಪವಿಟ್ಟು
ಇಂದು ಕಂಡ್ಯ ದೇಹದಲ್ಲಿ ಪಿಂಡಾಂಡ ಹಾಗೆ ಬ್ರಹ್ಮಾಂಡ |
ಇಂದು ಹರಿಯ ಧ್ಯಾನವನ್ನು ಮಾಡಿ ವಿವೇಕದಿ
ಮುಕುಂದನಿಂದ ಮುಕ್ತಿ ಬೇಡು ಕಂಡ್ಯ ನೀ ನೋಡು ಕಂಡ್ಯ || 2 ||
ದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು

ನೂರು ಬಾರಿ ಶರಣು ಮಾಡಿ ನೀರ ಮುಳುಗಲ್ಯಾಕೆ
ಪರ ನಾರಿಯರ ನೋಟಕೆ ಗುರಿಯ ಮಾಡಿದಿ ಮನ ಸೆರೆಯ ಮಾಡಿದಿ |
ಸೂರೆಯೊಳು ಸೂರೆ ತುಂಬಿ ಮೇಲೆ ಹೂವಿನ ಹಾರ
ಗೀರು ಗಂಧ ಅಕ್ಷತೆಯ ಧರಿಸಿದಂತೆ ನೀ ಮೆರೆಸಿದಂತೆ |
ಗಾರುಢಿಯ ಮಾತ ಬಿಟ್ಟು ನಾದಬ್ರಹ್ಮನ ಪಿಡಿದು
ಸಾರಿ ಸೂರಿ ಮುಕ್ತಿಯನ್ನು ಶಮನದಿಂದ ಮತ್ತೆ ಸುಮನದಿಂದ |
ನಾರಾಯಣ ಅಚ್ಯುತ ಅನಂತಾದಿ ಕೇಶವನ
ಸಾರಾಮೃತವನ್ನುಂಡು ಸುಖಿಸೋ ಲಂಡ ಜೀವವೇ ಎಲೇ ಭಂಡ ಜೀವವೇ || 3 ||
ದಾಸನಾಗು ವಿಶೇಷನಾಗು ದಾಸನಾಗು ಭವಪಾಶ ನೀಗು

Yesu Kayangala Kaledu Lyrics in English

Esu kayangala kaledu embhatnalku laksha jiva rashiyannu dati banda ee sharira ||
Tanalla tannadalla ase taravalla, munde bahodalla dasanagu visheshanagu ||

Asha klesha doshavembha arthiyolu mulugi
yamana pashakkolagagade nirdoshiyagu santoshiyagu ||

Kashi varanasi kan̄chi kalahasti rameshvara |
esu desha tirugidaru bahudenu allig hodenu ||
Dosha nashi  krishna gange godavari bhava nashi |
tungabhadre yamune vasadalli upavasadalli ||
Misalagi mindu japa tapa homa nemagala |
esu bari madidare phalavenu ee chalavenu  ||dasanag||

Andigu indigu omme siri kamaleshanannu
ondu bari yaru hinda nenayalilla mana daniyalilla |
Bandu bandu bhramegondu maya mohakke sikki
nondu bendu ondarinda uliyalilla dvandva kaliyallilla ||
Sandehava madidaru arivu embha deepavittu
indu kandya dehadalli pindanda hage brahmanda ||
Indu hariya dhyanavannu madi vivekadi
mukundhaninda mukti bedukandya ni nodukandya || daasanaagu ||

Murubari sharanu madi nera mulugallyake
para nariyara notakke guriya madidi mana seleya madidi |
Sureyolu sure tumbi mele hoovina hara
giru gandha aksateya dharisidante ni maresidante ||
Garudiya mata bittu nada brahmana pididu
sari suri muktiyannu shamanadante matte samanadinda ||
Narayana achyuta anantadi keshavana
saramrathavannu undu sukhiso landa jivave ele bhanda jivave ||daasanaagu ||

ಇತರೆ ವಿಷಯಗಳು :

ನಗುವ ನಯನ ಮಧುರ ಮೌನ lyrics

ಶಂಕರಾಚಾರ್ಯ ಅಷ್ಟೋತ್ತರ ಶತನಾಮಾವಳಿ

LEAVE A REPLY

Please enter your comment!
Please enter your name here