Thingalu Mulugidavo Lyrics in Kannada ತಿಂಗಾಳು ಮುಳುಗಿದವೋ in kannada
Thingalu Mulugidavo Lyrics in Kannada
![Thingalu Mulugidavo Lyrics in Kannada](https://i0.wp.com/kannadanew.com/wp-content/uploads/2023/08/Thingalu-Mulugidavo-Lyrics-in-Kannada.jpg?resize=281%2C194&ssl=1)
ಈ ಲೇಖನಿಯಲ್ಲಿ ತಿಂಗಾಳು ಮುಳುಗಿದವೋ ಸಾಂಗ್ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.
ತಿಂಗಾಳು ಮುಳುಗಿದವೋ
ತಿಂಗಾಳು ಮುಳುಗಿದವೋ
ರಂಗೋಲಿ ಬೆಳಗಿದವೋ
ತಾಯಿ ಚಾಮುಂಡಿಯ ಪೂಜೆಗೆಂದು
ಬಾಳೆ ಬಾಗಿದವೋ ||
ಮಾಯ್ಕಾತಿಚಾಮುಂಡೀ
ಮಂಡೆಲ್ಲಿ ಒದರೀರಿ
ಮೈಸೂರಿಂದಾಚೆ ಬೆಟ್ಟದಲ್ಲಿ
ಬಾಳೆ ಬಾಗಿದವೋ |
ಮೈಸೂರಿಂದಾಚೆ ಚಾಮುಂಡಿಬೆಟ್ಟದಲಿ
ಹೂ ಕಂಡು ಮಂಡೆ ಅಲ್ಲೆ ಒದರಿದರು
ಬಾಳೆ ಬಾಗಿದವೋ ||
ಕರಿಯ ಕಡ್ಡಿಯ ಸೀರೆ
ನರಿಗೆ ಚಿನ್ನದ ಕುಣಿಕೆ
ನಡೆಮುಡಿಯ ಮೇಲೆ ಬರುವವಳೆ
ಬಾಳೆ ಬಾಗಿದವೋ |
ನಡೆಮಡಿಯ ಮೇಲೇ ಬರುವವಳೆ ಚಾಮುಂಡಿ
ದೊರೆಯೆದ್ದು ಕೈಯ ಮುಗಿದಾರೊ
ಬಾಳೆ ಬಾಗಿದವೋ ||
ಕನ್ನ ಕನ್ನಡಿ ಬಂದೊ
ಕಂಚಿನ ಹೆಬ್ಬರೆ ಬಂದೊ
ಸಣ್ಣೇರಿಮ್ಯಾಲೆ ಮಡೆ ಬಂದೊ
ಬಾಳೆ ಬಾಗಿದವೋ |
ಸಣ್ಣೇರಿ ಮ್ಯಾಲೆ ಮಡೆ ಬಂದೊ ಚಾಮುಂಡಿ
ನಿಮ್ಮಡೆಗೆ ತೋದಲು ಬೆಳಗಾದೊ
ಬಾಳೆ ಬಾಗಿದವೋ ||
ಇತರೆ ವಿಷಯಗಳು :