ಕೈ ಕೆಸರಾದರೆ ಬಾಯಿ ಮೊಸರು ಗಾದೆ | Kai Kesaradare Bayi Mosaru Gade In Kannada

0
2088
ಕೈ ಕೆಸರಾದರೆ ಬಾಯಿ ಮೊಸರು ಗಾದೆ | Kai Kesaradare Bayi Mosaru Gade In Kannada
ಕೈ ಕೆಸರಾದರೆ ಬಾಯಿ ಮೊಸರು ಗಾದೆ | Kai Kesaradare Bayi Mosaru Gade In Kannada

ಕೈ ಕೆಸರಾದರೆ ಬಾಯಿ ಮೊಸರು ಗಾದೆ, Kai Kesaradare Bayi Mosaru Gade In Kannada, kai kesaradare bai mosaru gade matu vistarane information in kannada


ಕೈ ಕೆಸರಾದರೆ ಬಾಯಿ ಮೊಸರು ಗಾದೆ

Kai Kesaradare Bayi Mosaru Gade In Kannada
ಕೈ ಕೆಸರಾದರೆ ಬಾಯಿ ಮೊಸರು ಗಾದೆ Kai Kesaradare Bayi Mosaru Gade In Kannada

ಈ ಲೇಖನಿಯಲ್ಲಿ ಕೈ ಕೆಸರಾದರೆ ಬಾಯಿ ಮೊಸರು ಗಾದೆಯ ವಿವರಣೆಯನ್ನು ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಿದ್ದೇವೆ.

Kai Kesaradare Bayi Mosaru

ಗಾದೆ ವೇದಕ್ಕೆ ಸಮಾನ, ವೇದ ಸುಳ್ಳಾದರೂ ಗಾದೆ ಸುಳ್ಳಾಗದು ಎಂಬ ಮಾತಿದೆ. ಇದು ಹಿರಿಯರ ಜೀವನದ ಅನುಭವದ ಮಾತುಗಳು ಕೈ ಕೆಸರದರೆ ಬಾಯಿ ಮೊಸರು ಎಂಬುದು ಕನ್ನಡದ ಜನಪ್ರಿಯ ಮಾತು. ಮಾತಿನ ಅಕ್ಷರಶಃ ಅನುವಾದವೆಂದರೆ – ನಿಮ್ಮ ಕೈಗಳನ್ನು ನೀವು ಮಣ್ಣಾಗಿಸಿದರೆ, ನೀವು ಮೊಸರು ಹೊಂದುವ ಲಾಭವನ್ನು ಪಡೆಯಬಹುದು.

ದುಡಿಯುವವನಿಗೆ ಭೂಮಿ ತಾಯಿಯೇ ಆಸರೆ, ರೈತರು ಬಿಸಿಲು, ಮಳೆ, ಗಾಳಿ ಎನ್ನದೇ ಹೊಲದಲ್ಲಿ ದುಡಿಯುತ್ತಾರೆ. ಇದರ ಫಲವನ್ನು ಬೆಳೆಗಳಲ್ಲಿ ನೋಡುತ್ತರೆ. ಕಷ್ಟಪಟ್ಟು ಮಾಡುವ ಯಾವುದೇ ಕೆಲಸಕ್ಕೂ ಫಲ ಸಿಗುತ್ತದೆ. ಸೋಮಾರಿತನದಿಂದ ಇದ್ದರೆ ಏನು ಪ್ರಯೋಜನವಿಲ್ಲ.

ದುಡುಮೆ ಬಹಳ ಮುಖ್ಯ, ಕಷ್ಟಪಟ್ಟು ಕೆಲಸ ಮಾಡಿದರೆ ಹೊಟ್ಟೆ ತುಂಬುತ್ತದೆ. ಸೋಮಾರಿತನವನ್ನು ಬಿಡಬೇಕು ಬದುಕಿನ ಅಮೂಲ್ಯವಾದ ಕ್ಷಣವನ್ನು ಬಾಳುಮಾಡಬಾರದು. ಕಷ್ಟಪಟ್ಟು ದುಡಿಯುವುದರಿಂದ ಜೀವನ ಮುಂದೆ ಸುಗಮವಾಗಿರುತ್ತದೆ.

ಹೊರಗೆ ಹೋಗಿ ಗಂಡಸ್ಸು ದಡಿದರೆ ಅವನ ಮನೆಯಲ್ಲಿರುವ ಹೆಂಡತಿ, ಮಕ್ಕಳಿಗೆ ಹೊಟ್ಟೆ ತುಂಬಾ ಊಟ ದೊರೆಯುವುದು. ದುಡಿಯವ ರೈತರು ಹಗಲು, ರಾತ್ರಿ, ಎನ್ನದೇ ದುಡಿಯುವುದು ಅವರ ಮಕ್ಕಳಿಗೆ, ಮಕ್ಕಳು ದೊಡ್ಡವಾದ ನಂತರ ಹೆತ್ತವರನ್ನು ನೋಡಿಕೊಳ್ಳಬೇಕು.

ಇದು ಹಳೆಯ ಕಾಲದ ಮಾತು, ಇದು ತಲೆಮಾರುಗಳಿಂದಲೂ ಹರಡುತ್ತದೆ. ಗಳಿಕೆಗಾಗಿ ಕಷ್ಟಪಟ್ಟು ದುಡಿಯಲು ಜನರನ್ನು ಉತ್ತೇಜಿಸಲು ಇದು ಹೇಳಲ್ಪಟ್ಟಿದೆ. ಜನರು ಜೂಜು ಅಥವಾ ಕಳ್ಳತನದ ಮೂಲಕ ಸುಲಭವಾದ ಜೀವನಶೈಲಿಯನ್ನು ಸಂಪಾದಿಸುವ ಬದಲು ನೈತಿಕ ಉದ್ಯೋಗಗಳನ್ನು ತೆಗೆದುಕೊಳ್ಳಬೇಕೆಂದು ಹಿರಿಯರು ನಂಬಿದ್ದರು. ಹೀಗಾಗಿ ಅವರು ಈ ಮಾತನ್ನು ಒಳ್ಳೆಯ ಕಾರ್ಯಗಳನ್ನು ಉತ್ತೇಜಿಸುವ ಸಾಧನವಾಗಿ ಬಳಸಿದರು. ನೀವು ಸರಿಯಾದ ರೀತಿಯಲ್ಲಿ ಜೀವನವನ್ನು ಗಳಿಸಿದಾಗ ನೀವು ಪಡೆಯುವ ಸೌಕರ್ಯವು ನಿಜವಾಗಿಯೂ ಶಾಂತಿಯುತವಾಗಿರುತ್ತದೆ.

ಇತರೆ ವಿಷಯಗಳು:

ಅತಿಯಾಸೆ ಗತಿ ಕೇಡು

ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ

ಆರೋಗ್ಯವೇ ಭಾಗ್ಯ ಗಾದೆ ಮಾತಿನ ವಿಸ್ತರಣೆ

ಗಾದೆ ಮಾತುಗಳು

LEAVE A REPLY

Please enter your comment!
Please enter your name here