Gadegalu in Kannada | ಗಾದೆ ಮಾತುಗಳು

0
1758
100+Gadegalu in Kannada | ಗಾದೆ ಮಾತುಗಳು
100+Gadegalu in Kannada | ಗಾದೆ ಮಾತುಗಳು

100+Gadegalu in Kannada, ಗಾದೆ ಮಾತುಗಳು, gadegalu information in kannada, 100 kannada gadegalu, proverbs in kannada


100+Gadegalu in Kannada

100+Gadegalu in Kannada ಗಾದೆ ಮಾತುಗಳು

ಈ ಲೇಖನಿಯಲ್ಲಿ 100ಕ್ಕೂ ಹೆಚ್ಚು ಗಾದೆ ಮಾತುಗಳನ್ನು ನಿಮಗೆ ನೀಡಿದ್ದೇವೆ. ನಮ್ಮ post ನಲ್ಲಿ ನಿಮಗೆ ಅನುಕೂಲವಾಗುವಂತೆ ಗಾದೆ ಮಾತುಗಳನ್ನು ತಿಳಿಸಿದ್ದೇವೆ. ಇದರ ಸಹಾಯವನ್ನು ಪಡೆದುಕೊಳ್ಳಿ.

ಗಾದೆ ಮಾತುಗಳು

  1. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು
  2. ಕುಣಿಯಲಾರದವಳು ನೆಲ ಡೊಂಕೆಂದಳಂತೆ
  3. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕು
  4. ಕೈ ಕೆಸರಾದರೆ ಬಾಯಿ ಮೊಸರು.
  5. ಹೆಣ್ಣಿಂದ ರಾವಣ ಕೆಟ್ಟ , ಮಣ್ಣಿಂದ ಕೌರವ ಕೆಟ್ಟ
  6. ಬೆಂಕಿ ಬಿದ್ದ ಮೇಲೆ ಬಾವಿ ತೋಡಿದಂತೆ
  7. ಗಾಳಿ ಬಂದಾಗ ತೂರಿಕೋ
  8. ನೀರಿದ್ದರೆ ಊರು ನಾರಿ ಇದ್ದರೆ ಮನೆ
  9. ಆನೆ ಸತ್ತರೂ ಸಾವಿರ ಇದ್ದರೂ ಸಾವಿರ
  10. ಹಾಸಿಗೆ ಇದ್ದಷ್ಟು ಕಾಲು ಚಾಚು
  11. ಗಾಳಿಯಲ್ಲಿ ಗೋಪುರ ಕಟ್ಟಿದಂತೆ
  12. ಅಂಗೈ ಹುಣ್ಣಿಗೆ ಕನ್ನಡಿ ಬೇಕೆ?
  13. ಓದಿ ಓದಿ ಮರುಳಾದ ಕೂಚು ಭಟ್ಟ
  14. ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ
  15. ತರುಬು ಇದ್ದರೆ ಹರುಬು ನಿಂತೀತೇ
  16. ಹಳೆ ಚಪ್ಪಲಿ, ಹೊಸಾ ಹೆಂಡತಿ ಕಚ್ಚೊಲ್ಲ
  17. ಹತ್ತು ಮಂದಿ ಹುಲ್ಲು ಕಡ್ಡಿ ಒಬ್ಬನ ತಲೆ ಭಾರ
  18. ಭಂಗಿ ದೇವರಿಗೆ ಹೆಂಡಗುಡುಕ ಪೂಜಾರಿ
  19. ತಮ್ಮ ಸಂಗಡ ತಂಗಿಯ ಗಂಡ ದೂರು ಹೇಳಿದರೆ ನಿನಗೇನಪ್ಪ
  20. ತಾ ಕಾಣದ ದೇವರು ಪೂಜಾರಿಗೆ ವರ ಕೊಟ್ಟೀತೇ?
  21. ವಿನಯದಿಂದ ವಿಶ್ವವನ್ನು ಗೆಲ್ಲು, ಪರನಿಂದೆ ಮಹಾಪಾಪ.
  22. ಅಳಿಯನ ಕುರುಡು ಬೆಳಗಾದರೆ ಗೊತ್ತಾಗತ್ತೆ
  23. ಕದ್ದ ರೊಟ್ಟಿ ಬೇರೆ ದೇವರ ಪ್ರಸಾದ ಬೇರೆ.
  24. ಹಾರ‍್ಸೋನೋ ತೀರ‍್ಸೋನೋ.
  25. ಒಂಡಂಬಡಿಕೆ ಇಂದ ಆಗದು ದಡಂಬಡಿಕೆ ಇಂದ ಆದೀತೇ
  26. ಬೆರಳು ತೋರಿಸಿದರೆ ಹಸ್ತ ನು೦ಗಿದನ೦ತೆ.
  27. ಸಮತೆ ತೊಟ್ಟು ಪದವಿ ಮುಟ್ಟು
  28. ಸಾಯೋ ಮುಂದೆ ಸಕ್ಕರೆ ತುಪ್ಪ ತಿನಿಸಿದರಂತೆ
  29. ಖೀರು ಕುಡಿದವ ಓಡಿಹೋದ, ನೀರು ಕುಡಿದವ ಸಿಕ್ಕಿಬಿದ್ದ.
  30. ಕ೦ತೆಗೆ ತಕ್ಕ ಬೊ೦ತೆ.
  31. ಆಕಳು ದಾನಕ್ಕೆ ಕೊಟ್ರೆ, ಹಲ್ಲು ಹಿಡಿದು ನೊಡಿದ್ರಂತೆ.
  32. ತಾಯಿಯ ಪ್ರೀತಿ ಸುಖವಾದದ್ದು, ತಂದೆಯ ಪ್ರೀತಿ ಮಧುರವಾದದ್ದು.
  33. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಂಡ
  34. ಉಪದೇಶಕ್ಕಿಂತ ಉದಾಹರಣೆ ಲೇಸು
  35. ಮನಸ್ಸಿದ್ದರೆ ಮಾರ್ಗವಿದೆ
  36. ತೊಟ್ಟಿಲ ತೂಗುವ ಕೈ ದೇಶವನ್ನು ಆಳಬಲ್ಲದು
  37. ಕೊಡಲಿ ಕಾವು ಕುಲಕ್ಕೆ ಮೂಲ
  38. ಹಳೆ ಗಂಡನ ಪಾದವೇ ಗತಿ
  39. ಹಲ್ಲು ಕಿತ್ತ ಹಾವು
  40. ತಾನುಂಟು ಮೂರು ಲೋಕವುಂಟು
  41. ಜಟ್ಟಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
  42. ಹಂಗಿನ ಅರಮನೆಗಿಂತಾ ಗುಡಿಸಿಲೇ ಮೇಲು
  43. ತಾ ಕಳ್ಳೆ ಪರರ ನಂಬಳು, ಹಾದರಗಿತ್ತಿ ಗಂಡನ ನಂಬಳು
  44. ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.
  45. ಕಾಲಕ್ಕೆ ತಕ್ಕಂತೆ ನಡಿಯಬೇಕು, ತಾಳಕ್ಕೆ ತಕ್ಕಂತೆ ಕುಣಿಯಬೇಕು
  46. ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ
  47. ಉಂಬಾಗ ಉಡುವಾಗ ಊರೆಲ್ಲ ನೆಂಟರು
  48. ಹಾರೋ ಹಕ್ಕಿಗೆ ಹಾದರ ಕಟ್ಟಿದರು.
  49. ಪ್ರಸ್ತಕ್ಕಿಲ್ಲದ ಮಾತು ಹತ್ತುಸಾವಿರವಿದ್ದೇನು
  50. ತುತ್ತು ತೂಕ ಕೆಡಿಸಿತು, ಕುತ್ತು ಜೀವ ಕೆಡಿಸಿತು
  51. ಹೊಟ್ಟೆ ತುಂಬಿದ ಮೇಲೆ ಹುಗ್ಗಿ ಮುಳ್ಳು ಮುಳ್ಳು
  52. ಅತ್ತೆಗೊಂದು ಕಾಲ; ಸೊಸೆಗೊಂದು ಕಾಲ
  53. ಹಲ್ಲಿದ್ದವನಿಗೆ ಕಡಲೆ ಇಲ್ಲ, ಕಡಲೆಯಿದ್ದವನಿಗೆ ಹಲ್ಲಿಲ್ಲ.
  54. ಭಲೆ ಜಟ್ಟಿ ಅಂದ್ರೆ ಕೆಮ್ಮಣ್ಣು ಮುಕ್ಕಿದ
  55. ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?
  56. ಕದ್ದು ತಿಂದ ಹಣ್ಣು, ಪಕ್ಕದ ಮನೆ ಊಟ ಎಂದೂ ಹೆಚ್ಚು ರುಚಿ
  57. ಹಂಗಿನ ಅರಮನೆಗಿಂತಾ ಗುಡಿಸಿಲೇ ಮೇಲು
  58. ಅಳಿವುದೇ ಕಾಯ ಉಳಿವುದೇ ಕೀರ್ತಿ
  59. ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡರು
  60. ಒಲ್ಲದ ಗ೦ಡನಿಗೆ ಮೊಸರಲ್ಲೂ ಕಲ್ಲು.
  61. ಬಳ್ಳಿಗೆ ಕಾಯಿ ಭಾರವೇ
  62. ನೀಡುವವ ಉತ್ತಮ ಬೇಡಿದರೂ ನೀಡದವ ಅಧಮ
  63. ಹತ್ತರೊಟ್ಟಿಗೆ ಹನ್ನೊಂದು ಜಾತ್ರೆಯೊಟ್ಟಿಗೆ ಗೋವಿಂದು
  64. ಕೃತಿ ಇಲ್ಲದ ಮಾತು ಕಸ ಬೆಳೆದ ತೋಟವಿದ್ದಂತೆ.
  65. ನಾಯಿಯನ್ನು ಹೊಡೆಯಲು ಬಣ್ಣದ ಕೋಲೇ ?
  66. ದೊಡ್ಡವರು ಹೇಳಿದ ಹಾಗೆ ಮಾಡು; ಮಾಡಿದ ಹಾಗೆ ಮಾಡಬೇಡ
  67. ಓಲೆ ಆಸೆಗೆ ಬೆಕ್ಕು ಮೂಗುತಿ ಕಳಕೊಂಡಿತು
  68. ಅಕ್ಕಿ ಉಂಡವ ಹಕ್ಕಿ, ಜೋಳ ಉಂಡವ ತೋಳ
  69. ಒಕ್ಕಣ್ಣನ ರಾಜ್ಯದಲ್ಲಿ ಒಂದು ಕಣ್ಣು ಮುಚ್ಚಿಕೊಂಡು ನಡಿ
  70. ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ
  71. ಯಾವ ದೇವರು ವರ ಕೊಟ್ಟರೂ ಗ೦ಡನಿಲ್ಲದೆ ಮಕ್ಕಳಾಗದು.
  72. ತಾ ಕಳ್ಳೆ ಪರರ ನಂಬಳು,
  73. ಬೆಕ್ಕು ಕಣ್ಮುಚ್ಚಿ ಹಾಳು ಕುಡಿದರೆ ಜಗತ್ತಿಗೆ ಗೊತ್ತಾಗಲ್ವಾ?
  74. ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ
  75. ತನ್ನೂರಲಿ ರಂಗ, ಪರೂರಲಿ ಮಂಗ
  76. ತಾಮ್ರದ ಕಾಸು ತಾಯಿ ಮಕ್ಕಳನ್ನು ಬೇರೆ ಮಾಡ್‌ತಂತೆ
  77. ಕಂಡವರ ಕಂಡು ಕೈಕೊಂಡ ಧರ್ಮ ದಂಗು ಬಡಿಸಿತು
  78. ಕಾಲಿದ್ದವನಿಗೆ ಆಟ, ಕಣ್ಣಿದ್ದವನಿಗೆ ನೋಟ.
  79. ಜ್ಞಾನಿ ಬಂದರೆ ಗೌರವಿಸು, ಹೀನ ಬಂದರೆ ತ್ಯಜಿಸು.
  80. ಮೂಗು ಹಿಡಿದರೆ ಬಾಯಿ ತಾನೇ ತೆರೆಯುವುದು
  81. ಭಾಷೆ ತಿಳಿಯದಿದ್ದರೂ ಹಾಸ್ಯಕ್ಕೆ ಕಡಿಮೆಯಿಲ್ಲ.
  82. ಬೆಕ್ಕಿಗೆ ಚೆಲ್ಲಾಟ: ಇಲಿಗೆ ಪ್ರಾಣಸಂಕಟ
  83. ಹಳ್ಳೀ ದೇವರ ತಲೆ ಒಡೆದು, ದಿಲ್ಲೀ ದೇವರ ಹೊಟ್ಟೆ ಹೊರೆದ ಹಾಗೆ
  84. ತಾಯಂತೆ ಕರು ನಾಯಂತೆ ಬಾಲ ತಾಯಂತೆ ಮಕ್ಕಳು ನೂಲಂತೆ ಸ್ಯಾಲೆ
  85. ಊರೆಲ್ಲ ಸೂರೆ ಆದ ಮೇಲೆ ಬಾಗಿಲ ಮುಚ್ಚಿದರು
  86. ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದರು
  87. ಬಿದ್ದಲ್ಲಿ ಸೋತಲ್ಲಿ ಹೊದಿದ್ದ ಬುದ್ಧಿ ತಪ್ಪಿತು
  88. ನಮಸ್ಕಾರ ಮಾಡಲು ಹೋಗಿ ದೇವಸ್ಥಾನದ ಗೋಪುರ ತಲೇ ಮೇಲೆ ಬಿತ್ತು
  89. ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ
  90. ಅರಗಿನಂತೆ ತಾಯಿ, ಮರದಂತೆ ಮಕ್ಕಳು
  91. ಹೊತ್ತು ಮೀರಿದ ಮಾತು ತನಗೇ ಕುತ್ತು ತಂತು
  92. ಅತಿ ಆಸೆ ಗತಿಗೇಡು
  93. ಇದ್ದೋರು ಮೂರು ಜನರಲ್ಲಿ ಕದ್ದೋರು ಯಾರು ?
  94. ತನಗಿಲ್ಲದ್ದು ಎಲ್ಲಿದ್ದರೇನು
  95. ಅಕ್ಕಿಯ ಮೇಗಳ ಆಸೆ, ನೆಂಟರ ಮೇಗಳ ಬಯಕೆ
  96. ತೂತು ಗತ್ತಲೇಲಿ ತಾತನ ಮದುವೆ
  97. ಮಾತು ಬೆಳ್ಳಿ, ಮೌನ ಬಂಗಾರ.
  98. ಸಜ್ಜನರ ಸಂಗ ಹೆಜ್ಜೇನು ಸವಿದಂತೆ
  99. ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.
  100. ಅ೦ಗ ತೋರಿಸಿ ಅರ್ಧಾ೦ಗಿಯಾದಳು.
  101. ಮುಳ್ಳಿನಿಂದ ಮುಳ್ಳು ತೆಗೆ, ಹಗೆಯಿಂದ ಹಗೆ ತೆಗೆ
  102. ಗಾಳಿಯಿಂದ ಹಾರುವುದೋ ತಿರೋಕಲ್ಲು ಮಳೇಲಿ ಬಿದ್ದರೆ ಮರಕ್ಕಿಂತಾ ಕಡೆಯಾದೀತೇ
  103. ಓಡಿ ಹೋಗೊಳು ಮೊಸರಿಗೆ ಹೆಪ್ಪು ಹಾಕ್ತಾಳ
  104. ಚರ್ಮ ಸುಕ್ಕಾದ್ರೆ ಮುಪ್ಪು, ಕರ್ಮ ಮುಕ್ಕಾದ್ರೆ ಮುಕ್ತಿ
  105. ಯಾರನ್ನ ನಂಬಿದರು ಆರೈದು ನಂಬಬೇಕು
  106. ಒಲಿದರೆ ನಾರಿ ಮುನಿದರೆ ಮಾರಿ
  107. ಮುತ್ತು ಒಡೆದರೆ ಹೋಯ್ತು, ಮಾತು ಆಡಿದರೆ ಹೋಯ್ತು
  108. ಬರಗಾಲದಲ್ಲಿ ಅಧಿಕ ಮಾಸ.
  109. ಆಕಳ ಹೊಟ್ಟೆಯಲ್ಲಿ ಅಚ್ಚೇರು ಬ೦ಗಾರ.
  110. ನಾಯಿನ ಕರೆದುಕೊಂಡು ಹೋಗಿ ಸಿಂಹಾಸಾನದ ಮೇಲೆ ಕೂರಿಸಿದ ಹಾಗಯ್ತು

ಇತರೆ ವಿಷಯಗಳು:

ಮೂಢನಂಬಿಕೆ ಪ್ರಬಂಧ ಕನ್ನಡ

ಸಾಮಾಜಿಕ ಪಿಡುಗುಗಳು ಪ್ರಬಂಧ ಕನ್ನಡ

LEAVE A REPLY

Please enter your comment!
Please enter your name here