ದಕ್ಷಿಣ ಭಾರತದ ನದಿಗಳ ಬಗ್ಗೆ ಮಾಹಿತಿ | Information About South Indian Rivers in Kannada

0
673
ದಕ್ಷಿಣ ಭಾರತದ ನದಿಗಳ ಬಗ್ಗೆ ಮಾಹಿತಿ | Information About South Indian Rivers in Kannada
ದಕ್ಷಿಣ ಭಾರತದ ನದಿಗಳ ಬಗ್ಗೆ ಮಾಹಿತಿ | Information About South Indian Rivers in Kannada

ದಕ್ಷಿಣ ಭಾರತದ ನದಿಗಳ ಬಗ್ಗೆ ಮಾಹಿತಿ Information About South Indian Rivers Dakshina Bharatada Nadigala Bagge in Kannada


Contents

ದಕ್ಷಿಣ ಭಾರತದ ನದಿಗಳ ಬಗ್ಗೆ ಮಾಹಿತಿ

Information About South Indian Rivers in Kannada

ದಕ್ಷಿಣ ಭಾರತದ ನದಿಗಳನ್ನು ಪೂರ್ವಾಭಿಮುಖವಾಗಿ ಹರಿಯುವ ನದಿಗಳು ಮತ್ತು ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಎಂದು ವಿಂಗಡಿಸಲಾಗಿದೆ.

ಪೂರ್ವಾಭಿಮುಖವಾಗಿ ಹರಿಯುವ ನದಿಗಳು

ಪೂರ್ವಾಭಿಮುಖವಾಗಿ ಹರಿಯುವ ನದಿಗಳು ಬಂಗಾಳದ ಕೊಲ್ಲಿಯನ್ನು ಸೇರುತ್ತದೆ.

ಮಹಾನದಿ :

ಉಗಮ – ಮಧ್ಯ ಪ್ರದೇಶ ಬಸ್ತಾರ ಜಿಲ್ಲೆಯ ಸಿಂಹಾವಲ್ಲಿಯಲ್ಲಿ ಉಗಮವಾಗಿದೆ.

ಉದ್ದ – ೮೯೦ ಕಿ. ಮೀ

ಜಲಾನಯನ ಕ್ಷೇತ್ರ – ೧,೯೨,೩೦೦ ಚ. ಕಿ. ಮೀ

ಇದು ಓಡಿಸ್ಸಾದ ಕಟಕ ಬಳಿ ಬಂಗಾಳ ಕೊಲ್ಲಿಯನ್ನು ಸೇರುವುದು.

ಉಪನದಿಗಳು :

ಇಬ್‌, ಹಾಸೋ, ಇಂದ್ರ ಟೆಲ್‌, ಮಂಡ ಶಿಯಾನಾಥ್‌ ಮುಂತಾದವುಗಳು.

ಇದನ್ನು ಓಡಿಸ್ಸಾದ ಕಣ್ಣೀರಿನ ನದಿ ಎಂದು ಕರೆಯುವರು.

ಇದು ಛತ್ತೀಸ್‌ಗಢ ಓಡಿಸ್ಸಾದಲ್ಲಿ ವಿಸ್ತರಿಸಿದೆ.

ಗೋದಾವರಿ :

ಉಗಮ – ಮಹಾರಾಷ್ಟ್ರದ ತ್ರಯಂಬಕೇಶ್ವರ

ಉದ್ದ – ೧೪೬೫ ಕಿ. ಮೀ

ಜಲಾನಯನ ಕ್ಷೇತ್ರ – ೩,೨೩,೮೦೦ ಚ. ಕಿ. ಮೀ

ಉಪನದಿಗಳು :

ಮಂಜ್ರಾ, ಪೇನುಗಂಗಾ, ವಾರ್ದ, ಪ್ರಣಯ, ಇಂದ್ರವತಿ, ಸಬರಿ, ಬಿಂದುಸಾರ

ಈ ನದಿಯನ್ನು ವೃದ್ದಗಂಗ ಎಂದು ಕರೆಯುತ್ತಾರೆ.

ದಕ್ಷಿಣ ಭಾರತದ ಅತ್ಯಂತ ದೊಡ್ಡ ಮ್ತು ಉದ್ದವಾದ ನದಿಯಾಗಿದೆ.

ಇದು ಮಹಾರಾಷ್ಟ್ರ, ಛತ್ತೀಸ್‌ ಗಡ್‌, ಮಧ್ಯಪ್ರದೇಶ, ಕರ್ನಾಟಕ, ಒಡಿಸ್ಸಾದ ಮೂಲಕ ಹರಿದು ಆಂಧ್ರಪ್ರದೇಶದ ಕಾಕಿನಾಡ ಬಳಿ ಬಂಗಾಲಕೊಳ್ಳಿಯಲ್ಲಿ ಸೇರುವುದು.

ಕೃಷ್ಣಾ ನದಿ :

ಉಗಮ – ಮಹಾರಾಷ್ಟ್ರದ ನಾಸಿಕದ ಮಹಾಬಲೇಶ್ವರ ಎಂಬಲ್ಲಿ ಉಗಮವಾಗಿದೆ.

ಉದ್ದ ೧೪೦೦ ಕಿ. ಮೀ

ಕರ್ನಾಟಕದಲ್ಲಿ ಇದರ ಉದ್ದ೪೮೦ ಕಿ. ಮೀ

ಜಲಾನಯನ ಕ್ಷೇತ್ರ – ೨.೭೧, ೩೦೦ ಚ. ಕಿ. ಮೀ

ಆಂಧ್ರಪ್ರದೇಶದ ನಿಜಾಮ ಪಟ್ಟಣದ ದೂಬಿಬಿಂದು ಬಳಿ ಬಂಗಾಳ ಕೊಲ್ಲಿಯನ್ನು ಸೇರುವುದು.

ಉಪನದಿಗಳು :

ಕೋಯ್ನಾ, ಎರ್ಲ್ಲಾ, ದೂದಗಂಗಾ, ತುಂಗಾಭದ್ರಾ, ಪಂಚಗಂಗಾ,ಭೀಮಾ, ಘಟಪ್ರಭಾ, ಮಲಪ್ರಭಾ, ಡೋಣಿ, ಮೊನ್ನೇರು, ಮೂಸಿ ಮುಂತಾದವುಗಳು.

ಇದು ಕರ್ನಾಟಕದಲ್ಲಿ ಹರಿಯುವ, ಆಂಧ್ರಪ್ರದೇಶದಲ್ಲಿ ಹರಿಯುವುದು.

ಇದರ ಉಪನದಿಯಲ್ಲಿ ಅತ್ಯಂತ ದೊಡ್ಡದಾದ ಮತ್ತು ಉದ್ದವಾದ ನದಿ ತುಂಗಭದ್ರಾ

ದೋಣಿ ನದಿ ನೀರನ್ನು ಯಾವುದೇ ಪ್ರಾಣಿ ಪಕ್ಷಗಳು ಕುಡಿಯುವುದಿಲ್ಲ.

ಕಾವೇರಿ :

ಉಗಮ – ಕರ್ನಾಟಕದ ಕೊಡಗು ಜಿಲ್ಲೆಯ ಬ್ರಹ್ಮಗಿರಿ ಬೆಟ್ಟದ ತಲಕಾವೇರಿ ಎಂಬಲ್ಲಿ ಉಗಮವಾಯಿತು.

ಉದ್ದ – ೮೦೫ ಕಿ. ಮೀ

ಕರ್ನಾಟಕದಲ್ಲಿ ೩೮೦ ಕಿ. ಮೀ

ಕರ್ನಾಟಕದಲ್ಲಿ ಹುಟ್ಟಿ ಕರ್ನಾಟಕದಲ್ಲಿ ಉದ್ದವಾಗಿ ಹರಿಯುವ ನದಿಯಾಗಿದೆ.

ಜಲಾನಯನ ಕ್ಷೇತ್ರ – ೯೪, ೪೦೦ ಚ. ಕಿ. ಮೀ

ತಮಿಳುನಾಡಿನ ಕಾವೇರಿ ಪಟ್ಟಣದ ಬಳಿ ಬಂಗಾಳ ಕೊಲ್ಲಿಯನ್ನು ಸೇರುತ್ತದೆ.

ಇದು ಕರ್ನಾಟ, ತಮಿಳುನಾಡು, ಪಾಂಡಿಚೇರಿ, ಕೇರಳದಲ್ಲಿ ವಿಸ್ತರಿಸಿದೆ.

ಇದನ್ನು ದಕ್ಷಿಣ ಗಂಗೆ ಎಂದು ಕರೆಯುವರು.

ಉಪನದಿ :

ಹಾರಂಗಿ, ಹೇಮಾವತಿ, ಲಕ್ಷ್ಮಣ ತೀರ್ಥ, ಲೋಕಪಾವನಿ, ಸುವರ್ಣಾವತಿ, ಭವಾನಿ ಅಮರಾವತಿ ಮುಂತಾದವುಗಳು.

ಪೂರ್ವಾಭಿಮುಖವಾಗಿ ಹರಿಯುವ ಇತರೆ ನದಿಗಳು

ಭೂರ್ಹಾ ಬಾಲಂಗಾ, ನಾಗವಳಿ, ಪಾಲೇರು, ವೆಲ್ಗಾರಾ, ಶಾರದಾ, ಮುನೇರೋ, ವೇಗೈ, ವೈತರಣಿ, ಎಲೆರೋ, ಸುವರ್ಣವತಿ, ವರ್ಷಾಲಿ, ಋಷಿಕೇಶಿ, ಪಾಲಾರ ವೈಷ್ಲಾರಂ ಮುಂತಾದವುಗಳು. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು ಅರಬ್ಬಿ ಸಮುದ್ರವನ್ನು ಸೇರುತ್ತವೆ.

ನರ್ಮದಾ ನದಿ :

ಉಗಮ – ಮಧ್ಯಪ್ರದೇಶದ ಕೇಂದ್ರದ ಉನ್ನತ ಪ್ರದೇಶದ ಅಮರ ಕಂಟಕ ಪ್ರಸ್ತಭೂಮಿಯ ಮೈಕಲಾ ಶ್ರೇಣಿಯಲ್ಲಿ ಉಗಮವಾಗಯಿತು.

ಉದ್ದ – ೧೩೧೨ ಕಿ. ಮೀ

ಜಲಾನಯನ ಕ್ಷೇತ್ರ – ೯೪,೫೦೦ ಕಿ. ಮೀ

ಗುಜರಾತಿನ ಕ್ಯಾಂಬೆ ಆಕಾತದ ಬಳಿ ಬರೂಚವನ್ನು ಸೇರಿ ನಣತರ ಅರಬ್ಬಿ ಸಮುದ್ರವನ್ನು ಸೇರುವುದು.

ಇದು ವಿಂಧ್ಯ ಮತ್ತು ಸಾತ್ಪೂರಗಳ ಮಧ್ಯ ಹರಿಯುತ್ತದೆ. ಅತ್ಯಂತ ಉದ್ದವಾಗಿ ಹರಿಯುವ ಪಶ್ಚಿಮಮಾಭಿಮುಖವಾದ ನದಿ.

ಇದರ ಪ್ರಮುಖವಾದ ಉಪನದಿಗಳು ಭೂರ್ನ ಹೇರ, ಬಯರ, ಸೇಟಮಾದಿ, ಶಕರ ತವಾ, ಮುಂತಾದವುಗಳು.

ಇದು ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತದಲ್ಲಿ ವಿಸ್ತರಿಸಿದೆ.

ತಪತಿ ಅಥವಾ ತಾಪಿನದಿ :

ಉಗಮ – ಮಧ್ಯಪ್ರದೇಶದ ಬೆಟೂಲಿ ಜಿಲ್ಲೆಯ ಸಾತ್ಪೂರ ಬೆಟ್ಟಗಳ ಮುಲ್ತಾಯ ಕೆರೆಯಲ್ಲಿ ಉಗಮವಾಗಿದೆ.

ಉದ್ದ – ೭೨೪ ಕಿ. ಮೀ

ಜಲಾನಯನ ಕ್ಷೇತ್ರ – ೬೪೭೫೦ ಕಿ. ಮೀ

ಗುಜರಾತಿನ ಸೂರತ್‌ ಬಳ ಸುವಾಲಿ ಎಂಬಲ್ಲಿ ಅರಬ್ಬಿ ಸಮುದ್ರ ಸೇರುವುದು.

ಉಪನದಿಗಳು :

ಪೂರ್ಣ ಬೆಟೂಲ, ಎಲೆರಾ ಮುಂತಾದವುಗಳು.

ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಗುಜರಾತಿನಲ್ಲಿ ವಿಸ್ತರಿಸಿದೆ.

ಲೂನಿ ನದಿ :

ಉಗಮ – ಅರಾವಳಿ ಪರ್ವತಗಳ ಅನಾಸಾಗರದಲ್ಲಿ ಉಗಮವಾಯಿತು.

ಉದ್ದ – ೪೫೦ ಕಿ. ಮೀ

ಜಲಾನಯನ ಕ್ಷೇತ್ರ – ೩೭೨೫೦ ಚ. ಕಿ. ಮೀ

ಗುಜರಾತಿನ ಕಛ್‌ ಬಳಿ ಅರಬ್ಬಿ ಸಮುದ್ರ ಸೇರುವುದು.

ಈ ನದಿಗೆ ಅಂತರ್ಗತ ನದಿ ಎಂದು ಕರೆಯುವರು.

ಉಪನದಿಗಳು :

ಚೋಜ್ರಿ, ಸೂಕ್ರೆ

ರಾಜಸ್ಥಾನ, ಮಧ್ಯಪ್ರದೇಶ ಮತ್ತು ಗುಜರಾತಗಳ ಮೂಲಕ ಹರಿಯುತ್ತದೆ.

ಸಾಬರಮತಿ :

ಉಗಮ – ಅಅವಳಿ ಪರ್ವತಗಳ ಜೈಮುದ್ರ ಅಥವಾ ಜೈಸಮುದ್ರ ಎಂಬಲ್ಲಿ ಉಗಮವಾಯಿತು.

ಉದ್ದ – ೩೨೦ ಕಿ. ಮೀ

ಜಲಾನಯನ ಕ್ಷೇತ್ರ – ೧೮೭೫೦ ಚ. ಕಿ. ಮೀ

ಗುರಾತಿನ ಕ್ಯಾಂಬೆ ಅರ್ಕಾತದ ಬಳಿ ಅರಬ್ಬಿ ಸಮುದ್ರ ಸೇರುವುದು.

ಉಪನದಿಗಳು :

ಸಾಬರಹಾತಮತಿ, ವಾಥ್ರಾಕ್‌, ಮೇಶ್ವ ಮುಂತಾದವು.

ಇದು ರಾಜಸ್ಥಾನ ಮತ್ತು ಗುಜರಾತನಲ್ಲಿ ವಿಸ್ತರಿಸಿದೆ.

ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳು

ಶತೃಂಜಿ, ಬಾದಾರ, ದಾದರ, ಪೂರ್ಣ, ಅಂಬಿಕಾ, ವೈಟರಣ, ನೇತ್ರಾವತಿ ನರ್ಮದಾ, ಲೂನಿ, ಗಂಗಾವಳಿ ಬೇಡ್ತಿ, ಕಾಳಿ, ಶರಾವತಿ ಮುಂತಾದವುಗಳು.

FAQ

ಓರಿಸ್ಸಾದ ಕಣ್ಣೀರಿನ ನದಿ ಯಾವುದು ?

ಮಹಾನದಿ

ಇತರೆ ವಿಷಯಗಳು :

ಕುಟುಂಬದ ಬಗ್ಗೆ ಮಾಹಿತಿ

ನೈಸರ್ಗಿಕ ಸಂಪನ್ಮೂಲಗಳ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here