ಹಣದುಬ್ಬರದ ಬಗ್ಗೆ ಮಾಹಿತಿ | Information About Inflation in Kannada

0
219
ಹಣದುಬ್ಬರದ ಬಗ್ಗೆ ಮಾಹಿತಿ | Information About Inflation in Kannada
ಹಣದುಬ್ಬರದ ಬಗ್ಗೆ ಮಾಹಿತಿ | Information About Inflation in Kannada

ಹಣದುಬ್ಬರದ ಬಗ್ಗೆ ಮಾಹಿತಿ Information About Inflation hanadubbarada bagge mahiti in kannada


Contents

ಹಣದುಬ್ಬರದ ಬಗ್ಗೆ ಮಾಹಿತಿ

Information About Inflation in Kannada
Information About Inflation in Kannada

ಈ ಲೇಖನಿಯಲ್ಲಿ ಹಣದುಬ್ಬರದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

Information About Inflation in Kannada

ಪ್ರಸ್ತುತ ಹಣದುಬ್ಬರ ಅಥವಾ ಅತಿಪ್ರಸರಣವು ಒಂದು ಜಾಗತಿಕ ಸಮಸ್ಯೆಯಾಗಿ ಕಾಡುತ್ತಿದೆ. “ಸರಕು & ಸೇವೆ”ಗಳ ಬೆಲೆಗಳು ನಿರಂತರವಾಗಿ ಹೆಚ್ಚಳವಾಗುವ ಮತ್ತು ಹಣದ ಮೌಲ್ಯ ಕುಸಿತವಾಗುವ ಸನ್ನಿವೇಶವನ್ನು ಹಣದುಬ್ಬರ ಎಂದು ಕರೆಯುವರು. ರಾಷ್ಟ್ರದಲ್ಲಿ ಹಣದ ಪೂರೈಕೆಯ ಸರಕು ಮತ್ತು ಸೇವೆಗಳ ಉತ್ಪಾದನೆಗಿಂತ ಹೆಚ್ಚಳವಾದಾಗ ಹಣದುಬ್ಬರ ಸಂಭವಿಸುತ್ತದೆ.

ಹಣದುಬ್ಬರದ ವಿಧಗಳು

೧. ಬೇಡಿಕೆ ಸೆಳೆತದ ಹಣದುಬ್ಬರ :

ಸರಕು ಮತ್ತು ಸೇವೆಗಳ ಬೇಡಿಕೆಯು ಪೂರೈಕೆಗಿಂತ ಅಧಿಕವಾದಾ ಸರಕು & ಸೇವೆಗಳ ಬೆಲೆಗಳಲ್ಲಿ ಆಗುವ ಹೆಚ್ಚಳವನ್ನು ಬೇಡಿಕೆ ಸಳೆತದ ಹಣದುಬ್ಬರ ಎನ್ನುವರು. ಆದಾಯದಲ್ಲಾಗುವ ಹೆಚ್ಚಳ, ಹಣದ ಪೂರೈಕೆಯಲ್ಲಾಗುವ ಹೆಚ್ಚಳ, ಅನುಭೋಗಿ ಆಸೆ, ಅಭಿರುಚಿಗಳಲ್ಲಾಗುವ ಬದಲಾವಣೆ ಮೊದಲಾದ ಕಾರಣಗಳಿಂದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಳವಾಗುತ್ತಿದೆ.

೨. ವೆಚ್ಚ ತಳ್ಳಿಕೆಯ ಹಣದುಬ್ಬರ :

ವೆಚ್ಚ ತಳ್ಳಿಕೆಯ ಹಣದುಬ್ಬರವು ಪ್ರಮುಖವಾಗಿ ಪೂರೈಕೆಯ ಪ್ರಭಾವದಿಂದ ಉದ್ಬವಿಸುತ್ತಿದೆ. ಸರಕು & ಸೇವೆಗಳ ಬೆಲೆಗಳು, ಕಚ್ಚಾಸರಕುಗಳ ಬೆಲೆಯಲ್ಲಿ ಹೆಚ್ಚಳ ಕೂಲಿಯಲ್ಲಿ ಹೆಚ್ಚಳ, ಲಾಭದಲ್ಲಿ ಹೆಚ್ಚಳದ ಕಾರಣದಿಂದ ಹೆಚ್ಚಳವಾದರೆ ಅದನ್ನು ವೆಚ್ಚ ತಳ್ಳಿಕೆಯ ಹಣದುಬ್ಬರ ಎನ್ನುವರು. ಇದು ಪ್ರಮುಖವಾಗಿ ಉತ್ಪಾದನಾಂಗಗಳ ಕೊರತೆ, ಕೈಗಾರಿಕಾ ಬಿಕ್ಕಟ್ಟು, ವಿಕೋಪಗಳು, ರಫ್ತುಗಳಲ್ಲಿ ಹೆಚ್ಚಳ ಮೊದಲಾದ ಕಾರಣಗಳಿಂದ ಉದ್ಬವಿಸುತ್ತದೆ.

ಹಣದುಬ್ಬರದ ದರದ ಆಧಾರದ ಮೇಲೆ ಪ್ರಮುಖ ವಿಧಗಳು

೧. ತೆವಳುವ ಹಣದುಬ್ಬರ :

ಸರಕು ಮತ್ತು ಸೇವೆಗಳ ಬೆಲೆಗಳು ನಿಧಾನವಾಗಿ ತೆವಳುವ ರೂಪದಲ್ಲಿ ಹೆಚ್ಚಳವಾದರೆ ಅದನ್ನು ತೆವಳುವ ಹಣದುಬ್ಬರ ಎನ್ನುವರು. ಇದು ಸುರಕ್ಷಿತ ಮಟ್ಟದಲ್ಲಿರುತ್ತದೆ ಮತ್ತು ಆರ್ಥಿಕಾಭಿವೃದ್ಧಿಗೆ ಇದು ಅನಿವಾರ್ಯವಾಗಿರುತ್ತದೆ.

೨. ನಡೆದಾಡುವ ಹಣದುಬ್ಬರ :

ಸರಕು ಮತ್ತು ಸೇವೆಗಳ ಬೆಲೆಗಳು ಶೇ ೩ ರಿಂದ ೧೦ರ ದರದಲ್ಲಿ ಹೆಚ್ಚಳವಾದರೆ ಅದನ್ನು ನಡೆದಾಡುವ ಹಣದುಬ್ಬರ ಎನ್ನುವರು. ಈ ಹಣದುಬ್ಬರವನ್ನು ನಿಯಂತ್ರಣ ಮಾಡುವ ಸಲುವಾಗಿ ಸರ್ಕಾರಕ್ಕೆ ಪ್ರಮುಖವಾಗಿ ಎಚ್ಚರಿಕೆಯನ್ನು ನೀಡುತ್ತದೆ. ಈ ಹಂತವನ್ನು ತಲುಪಿದ ನಂತರ ಹಣದುಬ್ಬರವು ಆರ್ಥಿಕ ಅಭಿವೃದ್ದಿಯನ್ನು ಕುಂಠಿತಗೊಳಿಸುತ್ತದೆ.

೪. ಓಡುವ ಹಣದುಬ್ಬರ :

ಸರಕು ಮತ್ತು ಸೇವೆಗಳ ಬೆಲೆಗಳು ತೀವ್ರಗತಿಯಲ್ಲಿ ಹೆಚ್ಚಳವಾದರೆ ಅದನ್ನು ಓಡುವ ಹಣದುಬ್ಬರ ಎನ್ನುವರು. ಇಲ್ಲಿ ಬೆಲೆಗಳು ಶೇ ೧೦ ರಿಂದ ಶೇ ೨೦ ರ ದರದಲ್ಲಿ ಹೆಚ್ಚಳವಾಗುತ್ತವೆ. ಇದು ಆರ್ಥಿಕ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಮತ್ತು ಅಭಿವೃದ್ದಿಯನ್ನು ಕುಂಠಿತಗೊಳಿಸುತ್ತದೆ.

ಹಣದುಬ್ಬರದ ಪರಿಣಾಮಗಳು

೧. ಸಾಲಿಗರು & ಸಾಲಗಾರರು :

ಹಣದುಬ್ಬರವು ಸಂಪತ್ತನ್ನು ಸಾಲಿಗರಿಂದ ಸಾಲಗಾರರಿಗೆ ಮರುಹಂಚಿಕೆ ಮಾಡುತ್ತದೆ. ಹಣದುಬ್ಬರ ಕಡಿಮೆಯಾದರೆ ಇದಕ್ಕೆ ವಿರುದ್ಧವಾದ ಸನ್ನಿವೇಶ ಉದ್ಬವವಾಗುತ್ತದೆ.

೨. ಸಮಗ್ರ ಬೇಡಿಕೆಯ ಮೇಲೆ :

ಹೆಚ್ಚಳವಾಗುವ ಹಣದುಬ್ಬರವು ಸಮಗ್ರ ಬೇಡಿಕೆಯಲ್ಲಿನ ಹೆಚ್ಚಳವನ್ನು ಮತ್ತು ಸಾಪೇಕ್ಷವಾಗುವ ಕಡಿಮೆ ಪೂರೈಕೆಯನ್ನು ಸೂಚಿಸುತ್ತದೆ ಹಾಗೂ ಕೊಳ್ಳುವ ಸಾಮರ್ಥ್ಯದಲ್ಲಿನ ಹೆಚ್ಚಳವನ್ನು ಸೂಚಿಸುತ್ತದೆ.

೩. ಹೂಡಿಕೆಯ ಮೇಲೆ :

ಹಣದುಬ್ಬರದ ಕಾರಣದಿಂದ ಹೂಡಿಕೆಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತದೆ. ಅಧಿಕ ಹಣದುಬ್ಬರದ ಅಧಿಕ ಬೇಡಿಕೆ ಉದ್ಬವವಾಗಿ ಉತ್ಪಾದನೆ ಮಟ್ಟ ಹೆಚ್ಚಳವಾಗುತ್ತದೆ. ಹಣದುಬ್ಬರ ಕಾಎಣದಿಂದ ಸಾಲದ ದರಗಳು ಸುಲಭವಾಗುತ್ತದೆ.

೪. ಉಳಿತಾಯದ ಮೇಲೆ :

ಹಣದುಬ್ಬರವು ದೀರ್ಘಾವಧಿಯಲ್ಲಿ ಉಳಿತಾಯದಲ್ಲಿ ಕಡಿಮೆಯಾಗಲು ಕಾರಣವಾಗುತ್ತದೆ. ಕಾರಣ ಅನುಭೋಗಿಗಳು ನೈಜ ಆದಾಯದಲ್ಲಿ ಕಡಿಮೆಯಾಗಿ ಅವರ ಉಳಿತಾಯ ಸಾಮರ್ಥ್ಯ ಕುಸಿಯಲು ಕಾರಣವಾಗುತ್ತದೆ.

೫. ವಿನಿಮಯ ದರದ ಮೇಲೆ :

ಬದಲಾಗುವ ವಿನಿಮಯ ದರ ವ್ಯವಸ್ಥೆಯಲ್ಲಿ ಹಣದುಬ್ಬರ ಕಾರಣದಿಂದ ವಿನಿಮಯ ದರವು ಕುಸಿತವಾಗುತ್ತದೆ. ಇದು ಸಾಪೇಕ್ಷ ಬದಲಾವಣೆಯಾಗಿರುತ್ತದೆ.

೬. ರಫ್ತುಗಳ ಮೇಲೆ :

ಹಣದುಬ್ಬರದ ಕಾರಣದಿಂದ ಅಂತರಿಕವಾಗಿ ಸರಕು ಮತ್ತು ಸೇವೆಗಳ ಬೆಲೆಗಳು ಹೆಚ್ಚಳವಾಗುವುದರಿಂದ ರಫ್ತುಗಳ ಪ್ರಮಾಣವು ಕಡಿಮೆಯಾಗುತ್ತದೆ ಹಣದುಬ್ಬರದ ಕಾರಣದಿಂದ ರಫ್ತುಗಳ ಸಾಪೇಕ್ಷ ಬೆಲೆಗಳು ಹೆಚ್ಚಳವಾಗುತ್ತವೆ.

೭. ಆಮದುಗಳ ಮೇಲೆ :

ಹಣದುಬ್ಬರದ ಕಾರಣದಿಂದ ಅಂತರಿಕವಾಗಿ ಅಧಿಕ ಬೇಡಿಕೆ ಇರುವ ಕಾರಣದಿಂದ ಅಧಿಕ ಪ್ರಮಾಣದ ಸರಕುಗಳು ಆಮದು ಮಾಡಿಕೊಳ್ಳಲಾಗುತ್ತದೆ. ಈ ಕಾರಣದಿಂದ ಅಮದುಗಳ ಪ್ರಮಾಣ ಹೆಚ್ಚಳವಾಗುತ್ತದೆ.

೮. ಉದ್ಯೋಗದ ಮೇಲೆ :

ಅಲ್ಪಾವಧಿಯಲ್ಲಿ ಹಣದುಬ್ಬರವು ಉದ್ಯೋಗಾವಕಾಶಗಳನ್ನು ನಿರ್ಮಾಣ ಮಾಡುತ್ತದೆ. ಆದರೆ ದೀರ್ಘಾವಧಿಯಲ್ಲಿ ಹಣದುಬ್ಬರವು ಉದ್ಯೋಗವಕಾಶಗಳ ಕುಸಿತಕ್ಕೆ ಕಾರಣವಾಗುತ್ತದೆ.

೯. ಕೂಲಿ ದರದ ಮೇಲೆ :

ಹಣದದುಬ್ಬರದ ಸಂದರ್ಭದಲ್ಲಿ ನಾಮಮಾತ್ರ ಕೂಲಿ ದರಗಳು ಹೆಚ್ಚಳವಾಗುತ್ತವೆ. ಆದರೆ ನೈಜ ಕೂಲಿಯ ದರಗಳು ಕಡಿಮೆಯಾಗುತ್ತದೆ. ಇದರಿಂದ ಕೊಳ್ಳುವ ಸಾಮರ್ಥ್ಯದಲ್ಲಿ ಕುಸಿತ ಉಂಟಾಗುತ್ತದೆ.

೧೦. ಸ್ವ-ಉದ್ಯೋಗಿಗಳ ಮೇಲೆ :

ಹಣದುಬ್ಬರವು ಅಲ್ಪಾವಧಿಯಲ್ಲಿ ಸ್ವ-ಉದ್ಯೋಗಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ ದೀರ್ಘಾವಧಿಯಲ್ಲಿ ಇತರರ ಮೇಲೆ ಆದಂತೆ ಹಲವಾರು ಋಣಾತ್ಮಕ ಪರಿಣಾಮ ಬೀರುತ್ತದೆ.

FAQ

ಮೆದಳು ಹೊಂದಿರುವ ಜೀವಿ ಯಾವುದು?

ಜಿಗಣೆ.

ಯಾವ ಪ್ರಾಣಿಯು ಕೆಂಪುಬಣ್ಣದ ರಕ್ತ ಹೊಂದಿಲ್ಲ?

ಐಸ್‌ ಫಿಶ್.

ಇತರೆ ವಿಷಯಗಳು :

ಬ್ಯಾಂಕು ವ್ಯವಹಾರಗಳ ಬಗ್ಗೆ ಮಾಹಿತಿ

ವಿಮೆ ಬಗ್ಗೆ ಮಾಹತಿ

LEAVE A REPLY

Please enter your comment!
Please enter your name here