ಸರ್ಕಾರ ಮತ್ತು ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿ | Information About Government and the Economy in Kannada

0
318
ಸರ್ಕಾರ ಮತ್ತು ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿ | Information About Government and the Economy Sarkara Mattu Arta Vyavsteya Bagge Mahiti in Kannada
ಸರ್ಕಾರ ಮತ್ತು ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿ | Information About Government and the Economy Sarkara Mattu Arta Vyavsteya Bagge Mahiti in Kannada

ಸರ್ಕಾರ ಮತ್ತು ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿ Information About Government and the Economy Sarkara Mattu Arta Vyavsteya Bagge Mahiti in Kannada


Contents

ಸರ್ಕಾರ ಮತ್ತು ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿ

Information About Government and the Economy in Kannada
Information About Government and the Economy in Kannada

ರಾಷ್ಟದ ಆರ್ಥಿಕ ಅಭಿವೃದ್ದಿಯಲ್ಲಿ ಮತ್ತು ಜನರ ಯೋಗಕ್ಷೇಮ ಹೆಚ್ಚಿಸುವಲ್ಲಿ ಸರ್ಕಾರ ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ. ಆರ್ಥಿಕ ಬೆಳವಣಿಗೆ, ಸ್ಥಿರತೆ, ಸಮಾನತೆ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಹಲವು ಕರಮಗಳನ್ನು ಸರ್ಕಾರ ಕೈಗೊಳ್ಳುತ್ತದೆ. ಅಲ್ಲದೇ ಆರ್ಥಿಕ ಪಿಡುಗುಗಳಾದ ಬಡತನ, ನಿರುದ್ಯೋಗ, ಹಣದುಬ್ಬರ, ಮೂಲಸೌಕರ್ಯಗಳ ಕೊರತೆ ಮತ್ತು ಅಸಮಾನತೆಗಳನ್ನು ತೊಡೆದುಹಾಕಲು ಯೋಜನೆಗಳನ್ನು ರೂಪಿಸುತ್ತದೆ.

೧೯೪೭ ರಲ್ಲಿ ದೇಶ ಸ್ವಾತಂತ್ರ್ಯ ಪಡೆದಾಗ ಆರ್ಥಿಕ ಪರಿಸ್ಥಿತಿಯು ತುಂಬಾ ಗಂಭೀರವಾಗಿತ್ತು. ತಲಾ ಆದಾಯ ಅಲ್ಪವಾಗಿದ್ದಿತು, ಆಹಾರೋತ್ಪಾದನೆಯು ಅಗತ್ಯಕ್ಕಿಂತ ಕಡಿಮೆ ಇದ್ದಿತು. ತುಂಬಾ ಕಡಿಮೆ ಸಂಖ್ಯೆಯ ಉದ್ದಿಮೆಗಳಿದ್ದವು. ಯಂತ್ರೋಪಕರಣಗಳನ್ನು ನಾವು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತಿದ್ದೇವು. ಸಾರಿಗೆ, ಶಕ್ತಿ, ಸಂಪರ್ಕ ಸಾಧನಗಳು ಅಸಮರ್ಪಕವಾಗಿದ್ದವು, ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು ಸ್ವಲ್ಪ ಜನರಿಗೆ ಮಾತ್ರ ದಕ್ಕುತ್ತಿದ್ದವು, ಮತ್ತು ಎಲ್ಲೆಡೆ ಹಿಂದುಳಿದ ವಾತವರಣವೇ ಇದ್ದಿತು. ಆದ್ದರಿಂದ ಅಭಿವೃದ್ದಿಗೆ ಇರುವ ಅಡೆತಡೆಗಳನ್ನು ನಿವಾರಿಸಿ ಹಿಂದುಳಿದಿರುವಿಕೆಯನ್ನು ನಿವಾರಿಸಲು ಸರ್ಕಾರವು ಆದ್ಯ ಗಮನ ನೀಡಬೇಕಿತ್ತು. ಈ ಪರಿಸ್ಥಿತಿಯಲ್ಲಿ ಆಗಿನ ಮುಖಂಡರು ಸಕಾರಾತ್ಮಕವಾಗಿ ಸ್ಪಂದಿಸಿ ದೇಶದ ಒಟ್ಟಾರೆ ಸಾಮಾಜಿಕ – ಆರ್ಥಿಕ ಅಭಿವೃದ್ದಿಗಾಗಿ ಬಹಳಷ್ಟು ಕ್ರಮಗಳನ್ನು ಆರಂಭಿಸಿದರು.

ಭಾರತದಲ್ಲಿ ಯೋಜನೆ :

ಸರ್ವರ ಹಿತಾಸಕ್ತಿ ವೃದ್ದಿಗೋಸ್ಕರ ಲಭ್ಯವಿರುವ ಸಂಪನ್ಮೂಲಗಳ ವ್ಯವಸ್ಥಿತ ವಿನಿಯೋಜನೆ ಮತ್ತು ಇತರ ಉದ್ದೇಶ ಪೂರ್ವಕ ಕ್ರಮಗಳನ್ನು ಅಳವಡಿಸಿಕೊಂಡು ಪೂರ್ವ ನಿಗದಿತ ಗುರಿಗಳ ಸಾಧನೆಯೆಡೆಗೆ ಸಾಗುವುದೇ ಯೋಜನೆ. ಅಗತ್ಯತೆಗಳನ್ನು ಗುರುತಿಸುವುದು, ಗುರಿಗಳನ್ನು ನಿರ್ಧರಿಸುವುದು, ಸಂಪನ್ಮೂಲಗಳನ್ನು ಸಂಗ್ರಹಿಸುವುದು. ಸಂಪನ್ಮೂಲಗಳ ಬಳಕೆಗೆ ಕ್ರಿಯಾಯೋಜನೆಗಳನ್ನು ರೂಪಿಸಿ ಮೇಲುಸ್ತುವಾರಿ ಮಾಡುವುದು, ಮತ್ತು ಉದ್ದೇಶಗಳ ಈಡೇರಿಕೆಯನ್ನು ಮೌಲ್ಯಮಾಪನ ಮಾಡುವ ಕಾರ್ಯಗಳನ್ನು ಒಳಗೊಂಡ ಪ್ರಕ್ರಿಯೆಯನ್ನು ಯೋಜನಾ ವಿಧಾನ ಎಂದು ಕರೆಯುವರು.

ಈ ಚಟುವಟಿಕೆಗಳನ್ನು ಕಾರ್ಯಗತಗೊಳಿಸಲು ಭಾರತದಲ್ಲಿ ೧೯೫೦ ರಲ್ಲಿ ಯೋಜನಾ ಆಯೋಗವನ್ನು ರಚಿಸಲಾಯಿತು. ೨೦೧೫ ರಲ್ಲಿ ಯೋಜನಾ ಆಯೋಗದ ಜಾಗದಲ್ಲಿ ನೀತಿ ಆಯೋಗವನ್ನು ಸ್ಥಾಪಿಸಲಾಯಿತು. ಯೋಜನಾ ಆಯೋಗವು ಮಿಶ್ರ ಆರ್ಥಿಕ ವ್ಯವಸ್ಥೆಯ ಚೌಕಟ್ಟಿನಲ್ಲಿ ರಾಷ್ಟ್ರದ ಪ್ರಗತಿಗೆ ನಿರ್ದಿಷ್ಟ ದಿಶೆ ನೀಡಲು ಪಂಚವಾರ್ಷಿಕ ಯೋಜನೆಗಳನ್ನು ರೂಪಿಸಿ ಅನುಷ್ಟಾನಗೊಳಿಸಿದರೆ, ನೀತಿ ಆಯೋಗವು ಅರ್ಥವ್ಯವಸ್ಥೆಯನ್ನು ಅಪೇಕ್ಷಿತ ಗುರಿಗಳನ್ನು ಸಾಧಿಸಲು ದೀರ್ಘಾವಧಿ ಮುನ್ನೋಟ ತಂತ್ರಗಳನ್ನು ರೂಪಿಸುವತ್ತ ಒತ್ತು ನೀಡಿದೆ.

ಭಾರತದಲ್ಲಿ ಯೋಜನೆಗಳ ಉದ್ದೇಶಗಳು

ಆರ್ಥಿಕ ಬೆಳವಣಿಗೆಯನ್ನು ವೃದ್ದಿಸುವುದು :

ಬಡತನವನ್ನು ಕಡಿಮೆಗೊಳಿಸಲು ರಾಷ್ಟ್ರೀಯ ಆದಾಯದ ಬೆಳವಣಿಗೆಯನ್ನು ಅತ್ಯವಶ್ಯಕ ಗುರಿ ಎಂದು ಪಾಲಿಸಲಾಯಿತು.

ಅರ್ಥವ್ಯವಸ್ಥೆಯನ್ನು ಆಧುನೀಕರಣಗೊಳಿಸುವುದು :

ಅಧಿಕ ಪ್ರಮಾಣದ ಸರಕು ಹಾಗೂ ಸೇವೆಗಳನ್ನು ಉತ್ಪಾದಿಸುವ ಸಾಮರ್ಥ್ಯ ಹೆಚ್ಚಿಸಲು ಆಧುನಿಕ ತಂತ್ರಜ್ಞಾನ ಬಳಕೆಯನ್ನು ವಿಸ್ತರಿಸುವುದು ಯೋಜನೆಗಳ ಮತ್ತೊಂದು ಉದ್ದೇಶವಾಗಿದ್ದಿತು.

ಸ್ವಾವಲಂಬನೆ ಸಾಧಿಸುವುದು :

ನಮ್ಮ ಹಲವಾರು ಅವಶ್ಯಕತೆಗಳನ್ನು, ಮುಖ್ಯವಾಗಿ ತಂತ್ರಜ್ಞಾನ, ಆಹಾರ ಮತ್ತು ಇಂಧನಗಳನ್ನು ನಾವು ಇತರ ರಾಷ್ಟ್ರಗಳಿಂದ ಆಮದಿನ ಮೂಲಕ ಪೂರೈಸಿಕೊಳ್ಳುತ್ತಿದ್ದೆವು. ನಮ್ಮ ಆಂತರಿಕ ವಿಷಯಗಳಲ್ಲಿ ವಿದೇಶಿ ಹಸ್ತಕ್ಷೇಪಗಳನ್ನು ಕಡಿಮೆಗೊಳಿಸಲು ಯೋಜನಾ ನಿರೂಪಕರು ಆಮದನ್ನು ಕಡಿಮೆ ಮಾಡುವಂತಹ ದೇಶಿ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸುವ ಕ್ರಮ ಕೈಗೊಂಡರು.

ಆದಾಯ ಹಾಗೂ ಸಂಪತ್ತಿನ ಅಸಮಾನತೆ ಕಡಿಮೆ ಮಾಡುವುದು :

ರಾಷ್ಟ್ರದಲ್ಲಿನ ಸಂಪತ್ತಿನ ಮರುಹಂಚಿಕೆಗೂ ಯೋಜನಾ ನಿರುಪಕರು ಒತ್ತು ನೀಡಿದರು. ಆರ್ಥಿಕ ಬೆಳವಣಿಗೆಯ ಫಲಗಳು ಬಡಜನರಿಗೆ ತಲುಪಿ ಸರ್ವರಿಗೂ ಮೂಲ ಅವಶ್ಯಕತೆಗಳಾದ ಆಹಾರ, ವಸತಿ, ಶಿಕ್ಷಣ ಮತ್ತು ಆರೋಗ್ಯ ದೊರಕಿಸುವ ಕ್ರಮಗಳಿಗೆ ಹೆಚ್ಚಿನ ಮಹತ್ವ ನೀಡಲಾಯಿತು.

ಮೂಲ ಸೌಕರ್ಯದ ವೃದ್ದಿ :

ಸಾರಿಗೆ, ಸಂಪರ್ಕ, ಶಕ್ತಿ, ನೀರಾವರಿ, ಶಾಲೆಗಳು, ಆಸ್ಪತ್ರೆಗಳು, ಸಂಶೋಧನೆ ಹಾಗೂ ವಿಸ್ತರಣೆಗಳಂತಹ ಮೂಲ ಸೌಕರ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಿ ರಾಷ್ಟ್ರವು ತೀವ್ರಗತಿಯಲ್ಲಿ ಬೆಳೆಯಲು ಅನುವು ಮಾಡಲಾಯಿತು.

ಹಣಕಾಸು ಸಂಸ್ಥೆಗಳ ಅಭಿವೃದ್ದಿ :

ವಿಶಾಲ ತಳಹದಿಯ ಹಣಕಾಸು ಮೂಲಸೌಕರ್ಯವನ್ನು ಅಭಿವೃದ್ದಿ ಪಡಿಸಿಸಂಪನ್ಮೂಲ ಸಂಗ್ರಹಣೆ ಹಾಗೂ ಆ ಸಂಪನ್ಮೂಲಗಳನ್ನು ಆದ್ಯತಾ ವಲಯಗಳಿಗೆ ಒದಗಿಸುವ ಹಣಕಾಸು ಸಂಸ್ಥೆಗಳ ಸ್ಥಾಪನೆ ಮಾಡಿ ತನ್ಮೂಲಕ ಆರ್ಥಿಕ ಅಭಿವೃದ್ದಿಗೆ ಪೂರಕ ವಾತವರಣ ಕಲ್ಪಿಸಲಾಯಿತು.

ಸಮತೋಲಿಕ ಪ್ರಾದೇಶಿಕ ಅಭಿವೃದ್ದಿ :

ಹಲವಾರು ಕಾರಣಗಳಿಂದ ಕೆಲವು ಪ್ರದೇಶಗಳು ಅಭಿವೃದ್ದಿ ಪ್ರಕ್ರಿಯೆಯಲ್ಲಿ ಹಿಂದುಳಿಯುತ್ತವೆ. ಅಥವಾ ನಿಧಾನಗತಿಯಲ್ಲಿ ಬೆಳೆಯುತ್ತವೆ. ಅಂಥ ಪ್ರದೇಶಗಳ ಬೆಳವಣಿಗೆಯನ್ನು ವೃದ್ದಿಸಿ ಮುಂದುವರೆದ ಪ್ರದೇಶಗಳ ಜೊತೆಗೆ ಸಾಗುವ ನಿಟ್ಟಿನಲ್ಲಿ ಸಮತೋಲಿತ ಪ್ರಾದೇಶಿಕ ಅಭಿವೃದ್ದಿಯ ಉದ್ದೇಶವನ್ನೂ ಹೊಂದಲಾಯಿತು.

FAQ

ಅರ್ಥಶಾಸ್ತ್ರದ ಪಿತಾಮಹಾ ಯಾರು ?

ಆಡಂ ಸ್ಮಿತ್

ಭಾರತದಲ್ಲಿ ಯೋಜನೆಗಳ ಉದ್ದೇಶಗಳನ್ನು ತಿಳಿಸಿ ?

ಮೂಲ ಸೌಕರ್ಯದ ಅಭಿವೃದ್ದಿ, ಹಣಕಾಸು ಸಂಸ್ಥೇಗಳ ಅಭಿವೃದ್ದಿ ಇನ್ನು ಮುಂತಾದವುಗಳು.

ಇತರೆ ವಿಷಯಗಳು :

ಗುಣವಾಚಕಗಳು ಕನ್ನಡ

ಭಾರತದ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here