ಭಾರತದ ಬಗ್ಗೆ ಮಾಹಿತಿ | Information About India in Kannada

0
721
ಭಾರತದ ಬಗ್ಗೆ ಮಾಹಿತಿ | Information About India in Kannada
ಭಾರತದ ಬಗ್ಗೆ ಮಾಹಿತಿ | Information About India in Kannada

ಭಾರತದ ಬಗ್ಗೆ ಮಾಹಿತಿ Information About India Bharathada Bagge Mahiti in Kannada


Contents

ಭಾರತದ ಬಗ್ಗೆ ಮಾಹಿತಿ

Information About India in Kannada
Information About India in Kannada

ಈ ಲೇಖನಿಯಲ್ಲಿ ಭಾರತದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭಾರತದ ಬಗ್ಗೆ ಮಾಹಿತಿ

ಭಾರತ ೩೨,೮೭,೨೬೩ ಚದರ ಕಿ. ಮೀ ವಿಸ್ತೀರ್ಣವುಳ್ಳ ವಿಶಾಲವಾದ ದೇಶವಾಗಿದೆ. ವಿಶ್ವದ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲೇ ದೊಡ್ಡ ರಾಷ್ಟ್ರವಾಗಿದೆ. ಈ ದೇಶವು ಉತ್ತರ ಅಕ್ಷಾಂಶ ೮ ಡಿಗ್ರಿ ೪ ದಿಂದ ೩೭ ಡಿಗ್ರಿ ೬ ಹಾಗೂ ಪೂರ್ವ ರೇಖಾಂಶ ೬೮ ಡಿಗ್ರಿ ದಿಂದ ೯೭ ಡಿಗ್ರಿ ೨೫ ಗಳ ನಡವೆ ವಿಸ್ತರಿಸಿದೆ. ೨೦೧೧ ರ ಜನಗಣತಿಯ ಪ್ರಕಾರ ಭಾರತದ ಜನಸಂಖ್ಯೆಯು ೧,೨೧,೦೫,೬೯,೫೭೩ ಭಾರತ ಸುಮಾರು ೧೫,೨೦೦ ಕಿ. ಮೀ ಉದ್ದದ ಗಡಿಯನ್ನು ಹೊಂದಿರುತ್ತದೆ. ಇಲ್ಲಿಯ ಕರಾವಳಿಯ ಉದ್ದ ಸುಮಾರು ೭,೫೧೬.೬ ಕಿ. ಮೀ ಗಳು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ದಕ್ಷಿಣೋತ್ತರವಾಗಿ ಹಾಗೂ ಪೂರ್ವ ಪಂಜಾಬಿನಿಂದ ಪಶ್ಚಿಮ ಬಂಗಾಳದವರೆಗೆ ಪೂರ್ವಪಶ್ಚಿಮವಾಗಿ ಭಾರತ ವಿಸ್ತರಿಸಿದೆ. ಪ್ರಾಚೀನ ಭಾರತ ಈಗಿನ ಪಾಕಿಸ್ತಾನ, ಬಲೂಚಿಸ್ಥಾನ, ಅಫ್ಘಾನಿಸ್ಥಾನ, ಮಯನ್ಮಾರ್‌ ಹಾಗೂ ಶ್ರೀಲಂಕಾಗಳನ್ನು ಒಳಗೊಂಡಿತ್ತೆಂದು ತಿಳಿದು ಬರುತ್ತದೆ. ಕಾಲಾಂತರಗಳಲ್ಲಿ ಕಾರಾಣಾಂತರದಿಂದ ಆ ಪ್ರದೇಶಗಳು ಭಾರತದಿಂದ ಬೇರೆಯಾಗಿವೆ.

ಭಾರತದ ಇತಿಹಾಸ ಸುಧೀರ್ಘವಾಗಿದ್ದು ಈ ಇತಿಹಾಸದ ಗತಿಯು ಏಕರೂಪ ಕಾಣದಿರುವುದು ಸ್ಪಷ್ಟ. ಸ್ವಾತಂತ್ರ್ಯ ಕಾಣುವರೆಗೂ ಇದು ಒಂದು ರಾಷ್ಟ್ರವಾಗಿರಲಿಲ್ಲ. ಮೌರ್ಯರು, ಶಾತವಾಹನರು, ಗುಲಾಮಿ ಸಂತತಿಯವರು, ಕದಂಬರು, ಹೊಯ್ಸಳರು, ಪಲ್ಲವರು, ಕಳಿಂಗರು, ವಿಜಯನಗರದ ಅರಸರು, ಮೊಗಲರೇ ಮೊದಲಾದ ರಾಜವಂಶಗಳು ಈ ದೇಶವನ್ನು ಆಳಿವೆ. ವ್ಯಾಪಾರದ ಉದ್ದೇಶವಿರಿಸಿ ಬಂದ ಬ್ರಿಟಿಷರು ಇಲ್ಲಿ ೨೦೦ ವರ್ಷಗಳ ಕಾಲ ಆಳ್ವಿಕೆಯನ್ನು ನಡೆಸಿದರು. ಭಾರತ ಪರಕೀಯದ ಆಳ್ವಿಕೆಯಿಂದ ಮುಕ್ತಗೊಂಡು ೧೯೪೭ ರ ಆಗಸ್ಟ್‌ ೧೫ ರಂದು ಸ್ವತಂತ್ರವಾಯಿತು.೧೯೫೦ ರ ಜನವರಿ ೨೬ ರಂದು ಗಣರಾಜ್ಯವಾಗಿ ತನ್ನದೇ ಆದ ಸಂವಿಧಾನವನ್ನು ರಚಿಸಕೊಂಡಿವೆ.

ಭಾರತದಲ್ಲಿ ಭತ್ತ, ರಾಗಿ, ದ್ವಿದಳ ಧಾನ್ಯಗಳು, ಗೋಧಿ, ಕಬ್ಬು, ಸಣಬು, ಹತ್ತಿ, ತೈಲ ಬೀಜಗಳು ಮೊದಲಾದವು ಭಾರತದ ಮುಖ್ಯ ಬೆಳೆಗಳು. ಚಿನ್ನ, ಕಬ್ಬಿಣದ ಅದಿರು, ಕಲ್ಲಿದ್ದಲು, ತಾಮ್ರ, ಅಲ್ಯೂಮಿನಿಯಂ, ಪೆಟ್ರೋಲಿಯಂ, ಕೋಬಾಲ್ಟ್‌, ಅಮೃತಶಿಲೆ, ಮ್ಯಾಂಗನೀಸ್‌, ಗ್ರಾಫೈಟ್‌, ವಜ್ರ, ಲಭ್ಯವುಳ್ಳ ಮುಖ್ಯ ಖನಿಜಗಳು. ವಿಮಾನ, ಯಂತ್ರೋಪಕರಣಗಳು, ರೈಲುಗಾಡಿಗಳು, ಉಕ್ಕು, ಸಿಮೆಂಟ್‌, ವಸ್ತ್ರೋಧ್ಯಮ, ಕಾಗದ, ವಿದ್ಯುತ್‌, ಭಾರಿ ವಿದ್ಯುತ್‌ ಉಪಕರಣಗಳು ರೇಷ್ಮೇ ಮುಖ್ಯ ಉದ್ದಿಮೆಗಳು ದೇಶದಲ್ಲಿ ಜಲವಿದ್ಯುತ್‌, ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳೇ ಅಲ್ಲದೇ ಆರು ಅಣುಶಕ್ತಿ ಸ್ಥಾವರಗಳಿವೆ. ಪರಮಾಣು ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ, ಬಾಹ್ಯಕಾಶ ವಿಜ್ಞಾನ ಕ್ಷೇತ್ರಗಳಲ್ಲಿ ಭಾರತ ಮುಂಚೂಣಿಯಲ್ಲಿದೆ.

ದೇಶ – ವಿದೇಶಗಳಿಂದ ಭಾರತ ಪ್ರತಿವರ್ಷ ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆಗ್ರ, ಜಯಪುರ, ದೆಹಲಿ, ಮೈಸೂರು, ಖಜುರಹೋ, ಕಾಶಿ, ರಾಮೇಶ್ವರ ಮೊದಲಾದ ನೂರಾರು ಪ್ರೇಕ್ಷಣೀಯ ಸ್ಥಳಗಳು ಭಾರತದಲ್ಲಿವೆ. ಏಷ್ಯಾದಲ್ಲಿ ಭಾರತ ಗಮನಾರ್ಹ ಸ್ಥಾನವನ್ನು ಹೊಂದಿರುತ್ತದೆ. ಏಳು ಸಾರ್ಕ್‌ ರಾಷ್ಟ್ರಗಳಲ್ಲಿ ಭಾರತವೂ ಒಂದು. ವಿಶ್ವದ ಹತ್ತು ಪ್ರಮುಖ ಕೈಗಾರಿಕೆಗಳಿಂದ ಅಭಿವೃದ್ದಿ ಹೊಂದಿರುವ ದೇಶಗಳಲ್ಲಿ ಭಾರತ ಸಹ ಒಂದು. ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ರಾಷ್ಟ್ರ ಭಾರತವಾಗಿದೆ.

ಭಾರತದ ಬಗ್ಗೆ ಮಾಹಿತಿ

ರಾಜ್ಯರಾಜಧಾನಿಭಾಷೆಗಳು
ಅರುಣಾಚಲ ಪ್ರದೇಶಇಟಾನಗರಮಿಜಿ, ಅಕಾ, ಆದಿ, ಖಮ್ತಿ
ಅಸ್ಸಾಂ ದಿಸ್ಪೂರಅಸ್ಸಾಮಿ
ಆಂಧ್ರಪ್ರದೇಶಹೈದರಾಬಾದ್ತೆಲಗು, ಉರ್ದು
ಉತ್ತರಾಖಂಡ್ಡೆಹರಾಡ್ಯೂನ್ಹಿಂದಿ, ಗರ್ವಾಲಿ, ಕಮೈನಿ
ಒಡಿಸ್ಸಾಭುವನೇಶ್ವರಒಡಿಯಾ
ಕರ್ನಾಟಕಬೆಂಗಳೂರುಕನ್ನಡ
ಕೇರಳತಿರುವಂತಪುರಮಲಯಾಳಂ
ಗುಜರಾತ್ಗಾಂಧಿನಗರಗುಜರಾತಿ
ಗೋವಾಪಣಜಿ ಕೊಂಕಣಿ ಮತ್ತು ಮರಾಠಿ
ಛತ್ತೀಸ್ ಗಡ್ರಾಯಪುರಹಿಂದಿ
ಜಮ್ಮು ಮತ್ತು ಕಾಶ್ಮೀರ್‌ ಶ್ರೀನಗರಉರ್ದು, ಕಾಶ್ಮೀರ, ಪಹಾರಿ, ಬಾಲ್ಜಿ, ಲಡಾಖಿ, ಪಂಜಾಬಿ, ಗುಜ್ರಿ, ದಾದ್ರಿ
ಜಾರ್ಖಾಂಡ್ರಾಂಚಿಹಿಂದಿ
ತಮಿಳುನಾಡುಚೆನ್ನೈತಮಿಳು
ತ್ರಿಪುರಾ ಅಗರ್ತಲಾಬಂಗಾಳಿ, ಕೊಕ್ಬೋರ
ತೆಲಂಗಾಣಹೈದರಾಬಾದ್ತೆಲುಗು, ಉರ್ದು
ನಾಗಲ್ಯಾಂಡ್ಕೋಹಿಮಾಅಂಗಾಮಿ, ಚಾಂಗ್‌, ಕೋನ್ಯಾಕ್‌, ಲೋತಾ, ಸಂಗ್ತಮ್‌, ಸೇಮಾ, ಚಾಕೇಸಂಗ್
ಪಂಜಾಬ್ಚಂಡಿಗಢಪಂಜಾಬಿ
ಪಶ್ಚಿಮ ಬಂಗಾಳಕೊಲ್ಕತ್ತಾಬಂಗಾಳಿ
ಬಿಹಾರಪಾಟ್ನಾಹಿಂದಿ
ಮಣಿಪುರ ಇಂಫಾಲ್ಮಣಿಪುರಿ
ಮಧ್ಯಪ್ರದೇಶಭೂಪಾಲ್ಹಿಂದಿ
ಮಹಾರಾಷ್ಟ್ರಮುಂಬೈಮರಾಠಿ
ಮೇಘಾಲಯ ಶಿಲ್ಲಾಂಗ್ಖಾಸಿ, ಗಾರೋ, ಇಂಗ್ಲಿಷ್
ಮಿಜೋರಾಂಐಜ್ವಾಲ್ಮಿಜೋ, ಇಂಗ್ಲಿಷ್
ರಾಜಸ್ಥಾನಜೈಪುರಹಿಂದಿ, ರಾಜಸ್ಥಾನಿ
ಸಿಕ್ಕಿಂಗಾಂಗ್ಟೋಕ್ಲೆಪ್ಟಾ, ಭೂತಿಯಾ, ನೇಪಾಳಿ, ಲಿಂಬು
ಹರ್ಯಾಣಚಂಡೀಗಡಹಿಂದಿ
ಹಿಮಾಚಲ ಪ್ರದೇಶಶಿಮ್ಲಾಹಿಂದಿ, ಪಹಾರಿ
ಉತ್ತರ ಪ್ರದೇಶಲಕ್ನೋಹಿಂದಿ, ಉರ್ದು
ಭಾರತದ ಬಗ್ಗೆ ಮಾಹಿತಿ

FAQ

ಕರ್ನಾಟಕದ ರಾಜಧಾನಿ ಯಾವುದು ?

ಬೆಂಗಳೂರು

ಗೋವಾದ ರಾಜಧಾನಿ ಯಾವುದು ?

ಪಣಜಿ

ಇತರೆ ವಿಷಯಗಳು :

ಹೋಳಿ ಹಬ್ಬದ ಶುಭಾಶಯಗಳು

ಭಕ್ತಿ ಪಂಥದ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here