ಭೂಮಿಯ ಬಗ್ಗೆ ಮಾಹಿತಿ | Information about Earth in Kannada

0
895
ಭೂಮಿಯ ಬಗ್ಗೆ ಮಾಹಿತಿ | Information about Earth in Kannada
ಭೂಮಿಯ ಬಗ್ಗೆ ಮಾಹಿತಿ | Information about Earth in Kannada

ಭೂಮಿಯ ಬಗ್ಗೆ ಮಾಹಿತಿ Information about Earth Bhumiya Bagge Mahiti in Kannada


Contents

ಭೂಮಿಯ ಬಗ್ಗೆ ಮಾಹಿತಿ

Information about Earth in Kannada
Information about Earth in Kannada

ಈ ಲೇಖನಿಯಲ್ಲಿ ಭೂಮಿಯ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಭೂಮಿ

ನಾವು ಭೂಮಿಯ ಮೇಲೆ ಜೀವಿಸುತ್ತಿದ್ದೇವೆ. ಇದು ಸೌರವ್ಯೂಹದಲ್ಲಿ ಸೂರ್ಯನಿಂದ ಮೂರನೇ ಗ್ರಹವಾಗಿದೆ. ಸೌರವ್ಯೂಹದಲ್ಲಿರುವ ಗ್ರಹಗಳಲ್ಲಿ ಭೂಮಿಯು ಮಾತ್ರ ಜೀವಿಗಳನ್ನು ಹೊಂದಿದೆ. ಭೂಮಿ ಎಲ್ಲ ಬಗೆಯ ಅಂದರೆ ಸಸ್ಯಗಳು, ಪ್ರಾಣಿ ಮತ್ತು ಮಾನವ ಜೀವಿಗಳಿಗೆ ವಾಸಸ್ಥಾನವಾಗಿದೆ. ಇದಕ್ಕೆ ಕಾರಣ ಸೂರ್ಯ ಮತ್ತು ಭೂಮಿಯ ನಡುವಿನ ದೂರ, ಜೀವಿಗಳಿಗೆ ಪೂರಕವಾದ ಉಷ್ಣಾಂಶ, ಅನಿಲಗಳು, ವಾಯುಗೋಳ ಮತ್ತು ಜಲಚಕ್ರ ಇತ್ಯಾದಿಗಳಾಗಿವೆ. ಹೀಗಾಗಿ ಭೂಮಿಯನ್ನು “ಜೀವಂತ ಗ್ರಹ”, “ವಿಶಿಷ್ಠ ಗ್ರಹ“, “ಜಲಾವೃತ್ತ ಗ್ರಹ” ಹಾಗೂ “ನೀಲಿಗ್ರಹ ” ಹೀಗೆ ವಿವಿಧ ಹೆಸರಿನಿಂದ ಕರೆಯಲಾಗಿದೆ.

ಭೂಮಿಯ ಗಾತ್ರ

ಸೂರ್ಯನ ಪರಿವಾರದಲ್ಲಿ ಭೂಮಿಯು ಐದನೆಯ ದೊಡ್ಡ ಗ್ರಹವಾಗಿದೆ. ಭೂಮಿಯ ವ್ಯಾಸವು ಚಂದ್ರನ ವ್ಯಾಸಕ್ಕಿಂತ ಸುಮಾರು ನಾಲ್ಕು ಪಟ್ಟು ದೊಡ್ಡದಾಗಿದೆ ಹಾಗೂ ಸೂರ್ಯನಿಂದ ಹಾಗೂ ಸೂರ್ಯನಿಂದ ೧೦೭ ಪಟ್ಟು ಚಿಕ್ಕದಾಗಿದೆ. ಭೂಮಿಯ ಒಟ್ಟು ಭೌಗೋಳಿಕ ಕ್ಷೇತ್ರವು ೫೧೦ ದಶಲಕ್ಷ ಚದರ ಕಿ. ಮೀ ಗಳಾಗಿದ್ದು ಅದರಲ್ಲಿ ೩೬೧ ದಶಲಕ್ಷ ಚದರ ಕೀ. ಮೀಗಳಷ್ಟು ( ೭೦. ೭೮ %) ಕ್ಷೇತ್ರವು ನೀರಿನಿಂದ ಆವರಿಸಲ್ಪಟ್ಟಿದೆ. ಉಳಿದ ೧೪೯ ದಶಲಕ್ಷ ಚದರ ಕೀ. ಮೀ. ನಷ್ಟು ಕ್ಷೇತ್ರವು (೨೯. ೨೨) ಭೂ ಭಾಗದಿಂದ ಕೂಡಿದೆ. ಹೀಗೆ ಭೂಮಿಯ ಜಲ ಹಾಗೂ ಭೂ ಭಾಗಗಳ ಹಂಚಿಕೆ ಅಸಮತೆಯಿಂದ ಕೂಡಿದೆ. ಭೂ ಮತ್ತು ಜಲರಾಶಿಗಳ ಕೇತ್ರ ೧:೨.೪೩ ರಷ್ಟು ಅನುಪಾತವನ್ನು ಹೊಂದಿವೆ.

ಭೂಮಿಯ ಆಕಾರ

ಭೂಮಿಯ ಆಕಾರವನ್ನು “ಭಮ್ಯಾಕಾರ” (ಜಯಾಡ್) ಅಥವಾ ಗೋಳಾಕಾರ ಎಂದು ಕರೆಯಲಾಗಿದೆ. ಏಕೆಂದರೆ ಭೂಮಿಯು ಧ್ರುವಗಳ ಬಳಿ ಸ್ವಲ್ಪ ಚಪ್ಪಟೆಯಾಗಿದ್ದು ಸಮಭಾಜಕವೃತ್ತದ ಬಳಿ ಉಬ್ಬಿದಂತಿದೆ. ಭೂಮಿಯ ಸಮಭಾಜಕವೃತ್ತದ ವ್ಯಾಸ ೧೨, ೭೫೬ ಕಿ. ಮೀ.ಗಳು ಮತ್ತು ಧ್ರುವೀಯ ವ್ಯಾಸದ ೧೨.೭೧೪ ಕೀ. ಮೀ ಆಗಿದೆ. ಇವೆರಡರ ವ್ಯಾಸದ ವ್ಯತ್ಯಾಸ ೪೨ ಕಿ. ಮೀ ಗಳಾಗಿದೆ. ಅದೇ ರೀತಿ ಸಮಭಾಜಕ ವೃತ್ತದ ಸುತ್ತಳತೆ ೪೦,೦೭೬ ಕಿ. ಮೀಗಳು ಮತ್ತು ಧ್ರುವೀಯ ಸುತ್ತಳತೆ ೪೦, ೦೦೮ ಕಿ. ಮೀ ಗಳಷ್ಟಿದೆ. ಇದರಲ್ಲಿ ೬೮ ಕಿ. ಮೀ ಗಳಷ್ಠಿದೆ. ಇದು ಭೂಮಿಯ ಗೋಳಾಕಾವಾಗಿರುವುದನ್ನು ಸ್ಟಷ್ಟಪಡಿಸುವುದು.

ನೆಲ ಮತ್ತು ಜಲಭಾಗಗಳ ಹಂಚಿಕೆ

ಭೂಮಿಯ ನೆಲ ಭಾಗಗಳನ್ನೂ ಭೂ ಖಂಡಗಳೆಂದು ಕರೆಯುತ್ತಾರೆ. ಭೂ ನೆಲ ಭಾಗವನ್ನು ಏಳು ಭೂ ಖಂಡಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಏಷ್ಯ, ಆಫ್ರಿಕ, ಉತ್ತರ ಅಮೇರಿಕ, ದಕ್ಷಿಣ ಅಮೇರಿಕ, ಅಂಟಾಕ್ಟಿಕ, ಯೂರೋಪ್‌ ಮತ್ತು ಆಸ್ಟ್ರೇಲಿಯ, ಈ ಭೂ ಖಂಡಗಳು ವಿಸ್ತಾರವಾದ ಭೂ ಭಾಗಗಳಾಗಿವೆ. ಏಷ್ಯಾವು ಅತಿ ದೊಡ್ಡ ಖಂಡವಾದರೆ, ಆಸ್ಟ್ರೇಲಿಯ ಅತಿ ಚಿಕ್ಕ ಖಂಡವಾಗಿದೆ. ಭೂಮಿಯ ಮೇಲಿನ ವಿಸ್ತಾರವಾದ ಜಲರಾಶಿಗಳನ್ನು ಮಹಾಸಾಗರವೆಂದು ಕರೆಯುತ್ತಾರೆ. ಅವುಗಳನ್ನು ನಾಲ್ಕು ಮಹಾಸಾಗರಗಳಾಗಿ ವಿಂಗಡಿಸಲಾಗಿದೆ. ಅವುಗಳನ್ನು ನಾಲ್ಕು ಮಹಾಸಾಗರಗಳಾಗಿ ವಿಂಗಡಿಸಲಾಗಿದೆ. ಅವುಗಳೆಂದರೆ ಪೆಸಿಪಿಕ್‌ ಸಾಗರ, ಅಟ್ಲಾಂಟಿಕ್‌ ಸಾಗರ, ಹಿಂದೂ ಮಹಾಸಾಗರ ಮತ್ತು ಆಕ್ಟಿಕ್‌ ಸಾಗರ. ಪೆಸಿಫಿಕ್‌ ಸಾಗರವು ಅತಿ ವಿಶಾಲವಾದ ಹಾಗೂ ಹೆಚ್ಚು ಆಳವಾದುದಾಗಿದೆ. ಆರ್ಕ್ಟಕ್‌ ಸಾಗರವು ಅತಿ ಚಿಕ್ಕದು ಮತ್ತು ಕಡಿಮೆ ಆಳ ಹೊಂದಿದೆ.

ನೆಲ ಮತ್ತು ಜಲರಾಶಿಗಳು ಉತ್ತರಗೋಳಾರ್ಧ ಮತ್ತು ದಕ್ಷಿಣಗೋಳಾರ್ಧದಲ್ಲಿ ಸಮನಾಗಿ ಹಂಚಿಕೆಯಾಗಿಲ್ಲ. ಉತ್ತರಗೋಳಾರ್ಧದಲ್ಲಿ ೬೦% ಭಾಗದಷ್ಟು ಭೂ ಭಾಗವಿದ್ದು, ೪೦% ಭಾಗದಷ್ಟು ಜಲರಾಶಿಯಿರುವುದು. ಆದ್ದರಿಂದ ಇದನ್ನು ಭೂಪ್ರಧಾನ ಗೋಳಾರ್ಧವೆಂದು ಕರೆಯಲಾಗಿದೆ. ಇದಕ್ಕೆ ವಿರುದ್ದವಾಗಿ ದಕ್ಷಿಣಗೋಳಾರ್ಧದಲ್ಲಿ ೮೧% ಭಾಗದಷ್ಟು ನೆಲ ಭಾಗವಿದೆ. ಇದರಿಂದ ಇದನ್ನು ಜಲಪ್ರಧಾನ ಗೋಳಾರ್ಧವೆಂದೂ ಕರೆಯುವರು.

ಅಕ್ಷಾಂಶ ಮತ್ತು ರೇಖಾಂಶಗಳು

ಭೂಮಿಯು ಗೋಳಾಕಾರವಾಗಿದೆ. ದ್ದರಿಂದ ಭೂಮಿಯ ಮೇಲಿನ ಎರಡು ಸ್ಥಳಗಳ ಸ್ಥಾನ ದಿಕ್ಕು ಹಾಗೂ ಅಂತರಗಳನ್ನು ಗುರುತಿಸುವುದು ಕಷ್ಟ. ಭೂಮಿಯ ಮೇಲಿನ ಒಂದು ಸ್ಥಳದ ನಿರ್ದಿಷ್ಟ ಸ್ಥಾನ, ಅಂತರ ಮತ್ತು ದಿಕ್ಕುಗಳನ್ನು ಅರಿಯಲು ಕಾಲ್ಪನಿಕ ರೇಖಾಜಾಲ ವ್ಯವಸ್ಥೆಯನ್ನು ನಕ್ಷೆ ಅಥವಾ ಗೋಳದ ಮೇಲೆ ಎಳೆಯಲಾಗಿದೆ. ಈ ಕಾಲ್ಪನಿಕ ರೇಖೆಗಳನ್ನು ಪೂರ್ವ ಪಶ್ಚಿಮವಾಗಿ ಮತ್ತು ಉತ್ತರ ದಕ್ಷಿಣವಾಗಿ ಎಳೆಯಲಾಗಿದ್ದು, ಇವುಗಳನ್ನು ಕ್ರಮಗಳಾಗಿ ಅಕ್ಷಾಂಶ ಮತ್ತು ರೇಖಾಂಶಗಳೆನ್ನುವರು. ಇವು ಪರಸ್ಪರ ಲಂಬಕೋನದಲ್ಲಿ ಛೇಧಿಸುವುದರಿಂದ ದೊರೆಯುವ ಛೇಧಕ ಬಿಂದುಗಳಿಗೆ ಭೌಗೋಳಿಕ ನಿರ್ದೇಶಾಂಕಗಳು ಎನ್ನುವರು. ಇವುಗಳಿಗೆ ಜಾಲ ವ್ಯವಸ್ಥೆ ಎಂದೂ ಕರೆಯಲಾಗಿದೆ.

ಅಕ್ಷಾಂಶಗಳು :

ಭೂಮಧ್ಯ ರೇಖೆಯಿಂದ ಉತ್ತರ ಅಥವಾ ದಕ್ಷಿಣಕ್ಕಿರುವ ಕೋನಾಂತರವೇ ಅಕ್ಷಾಂಶ. ಇವು ಕಾಲ್ಪನಿಕ ರೇಖೆಗಳಾಗಿದ್ದು, ಅವುಗಳನ್ನು ಡಿಗ್ರಿಗಳಲ್ಲಿ ಅಳೆಯಲಾಗುತ್ತದೆ. ಉತ್ತರ ಮತ್ತು ದಕ್ಷಿಣ ಧ್ರುವಗಳ ಮಧ್ಯದಲ್ಲಿ ಭೂ ಅಕ್ಷಕ್ಕೆ ಲಂಬವಾಗಿ ಎಳೆದ ಕಾಲ್ಪನಿಕ ರೇಖೆಗಳನ್ನೇ ಅಕ್ಷಾಂಶಗಳು ಎನ್ನುವರು. ಸಮಭಾಜಕವೃತ್ತವು ೦ ಡಿಗ್ರಿ ಮಹಾವೃತ್ತವಾಗಿದ್ದು ಅದು ಭೂಸುತ್ತಳತೆಗೆ ಸಮನಾಗಿದೆ. ಅಲ್ಲಿಂದ ಉತ್ತರ ಹಾಗೂ ದಕ್ಷಿಣಕ್ಕಿರುವ ಅಕ್ಷಾಂಶ ವೃತ್ತಗಳು ಉದ್ದದಲ್ಲಿ ಚಿಕ್ಕದಾಗಿರುತ್ತದೆ.

ಪ್ರಮುಖ ಅಕ್ಷಾಂಶಗಳು :

೦ ಡಿಗ್ರಿ ಅಕ್ಷಾಂಶ – ಸಮಭಾಜಕವೃತ್ತ.

೨೩ ೧/೨ ಡಿಗ್ರಿ ಉತ್ತರ ಅಕ್ಷಾಂಶ – ಕರ್ಕಾಟಕ ಸಂಕ್ರಾಂತಿ ವೃತ್ತ.

೨೩ ೧/೨ ಉತ್ತರ ಅಕ್ಷಾಂಶ – ಕರ್ಕಾಟಕ ಸಂಕ್ರಾಂತಿ ವೃತ್ತ ವೃತ್ತ.

೬೬ ೧/೨ ದಕ್ಷಿಣ ಅಕ್ಷಾಂಶ – ಉತ್ತರಧ್ರುವ ವೃತ್ತ.

೬೬ ೧/೨ ಡಿಗ್ರಿ ದಕ್ಷಣ ಅಕ್ಷಾಂಶ – ದಕ್ಷಿಣಧ್ರುವ ವೃತ್ತ.

೯೦ ಡಿಗ್ರಿ ಉತ್ತರ ಅಕ್ಷಾಂಶ – ಉತ್ತರಧ್ರುವ.

೯೦ ಡಿಗ್ರಿ ದಕ್ಕಿಣ ಅಕ್ಷಾಂಶ – ದಕ್ಷಿಣ ಧ್ರುವ.

ರೇಖಾಂಶಗಳು :

ಸಮಭಾಜಕ ವೃತ್ತವನ್ನು ಸಮಕೋನದಲ್ಲಿ ಛೇದಿಸಿ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸಂಧಿಸುವ ಕಾಲ್ಪನಿಕ ರೇಖೆಗಳನ್ನು ರೇಖಾಂಶಗಳು ಎನ್ನುವರು. ಗೋಳದ ಮೇಲೆ ರೇಖಾಂಶಗಳು ಅರ್ಧವೃತ್ತಗಳ ಸರಣಿಗಳಂತೆ ಕಂಡುಬರುತ್ತಾರೆ. ಇವು ಉತ್ತರ ಮತ್ತು ದಕ್ಷಿಣ ಧ್ರುವಗಳಲ್ಲಿ ಸಂಧಿಸುತ್ತವೆ. ಹಾಗೂ ಸಮಭಾಜಕವೃತ್ತದ ಮೂಲಕ ಹಾದು ಹೋಗುತ್ತದೆ. ಎಲ್ಲ ರೇಖಾಂಶಗಳ ಉದ್ದ ಒಂದೇ ಆಗಿದೆ. ರೇಖಾಂಶಗಳನ್ನು ಮಧ್ಯಾಹ್ನ ಅಥವಾ ಮೆರಿಡಿಯನ್‌ ರೇಖೆಗಳೆನ್ನುವರು. ಏಕೆಂದರೆ ಯಾವುದೇ ರೇಖಾಂಶದ ನೆತ್ತಿಯ ಮೇಲೆ ಸೂರ್ಯನು ಬಂದಾಗ ಆ ರೇಖಾಂಶದುದ್ದಕ್ಕೂ ಎಲ್ಲ ಸ್ಥಳಗಳಲ್ಲೂ ಒಂದೇ ಸಮಯದಲ್ಲಿ ಮಧ್ಯಾಹ್ನವಾಗುತ್ತದೆ.

FAQ

ವಿಶ್ವ ಭೂ ದಿನವನ್ನು ಯಾವಾಗ ಆಚರಿಸುತ್ತಾರೆ ?

ಎಪ್ರಿಲ್‌ ೨೨

ಜೀವಂತ ಗ್ರಹವೆಂದು ಯಾವ ಗ್ರಹವನ್ನು ಕರೆಯುತ್ತಾರೆ ?

ಭೂಮಿ

ಇತರೆ ವಿಷಯಗಳು :

ನಮ್ಮ ರಕ್ಷಣಾ ಪಡೆಗಳ ಬಗ್ಗೆ ಮಾಹಿತಿ

ಶಿಕ್ಷಕರ ಬಗ್ಗೆ ಪ್ರಬಂಧ

LEAVE A REPLY

Please enter your comment!
Please enter your name here