ಸ್ಥಳೀಯ ಸರ್ಕಾರಗಳ ಬಗ್ಗೆ ಮಾಹಿತಿ | Information About Local Governments in Kannada

0
1035
ಸ್ಥಳೀಯ ಸರ್ಕಾರಗಳ ಬಗ್ಗೆ ಮಾಹಿತಿ Information About Local Governments Staliya sarkarada Bagge Mahiti in Kannada
ಸ್ಥಳೀಯ ಸರ್ಕಾರಗಳ ಬಗ್ಗೆ ಮಾಹಿತಿ Information About Local Governments Staliya sarkarada Bagge Mahiti in Kannada

ಸ್ಥಳೀಯ ಸರ್ಕಾರಗಳ ಬಗ್ಗೆ ಮಾಹಿತಿ Information About Local Governments Staliya sarkarada Bagge Mahiti in Kannada


Contents

ಸಾರ್ವಜನಿಕ ಆಡಳಿತದ ಬಗ್ಗೆ ಮಾಹಿತಿ

Information About Local Governments in Kannada
Information About Public Administration in Kannada

ಈ ಲೇಖನಿಯಲ್ಲಿ ಸ್ಥಳೀಯ ಸರ್ಕಾರದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಸ್ಥಳೀಯ ಸರ್ಕಾರ

ಭಾರತದಲ್ಲಿ ಸ್ಥಳೀಯ ಸರ್ಕಾರಗಳ ಪರಿಕಲ್ಪನೆ ಬಹಳ ಪ್ರಾಚೀನವಾಗಿದ್ದು ವೇದಗಳ ಕಾಲದಿಂದಲೂ ಸ್ಥಳೀಯ ಸರ್ಕಾರದ ರಚನೆಗೆ ಮತ್ತು ಬೆಳವಣಿಗೆಗಳಿಗೆ ಪ್ರಾಮುಖ್ಯತೆ ನೀಡಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಸ್ಥಳೀಯ ಸರ್ಕಾರಗಳು ಸಮುದಾಯ ಮತ್ತು ಸರ್ಕಾರಗಳ ನಡುವೆ ಸಂಬಂಧ ಕಲ್ಪಿಸುವುದರ ಜೊತೆಗೆ ಸ್ಥಳೀಯರು ತಮ್ಮ ಸಮಸ್ಯೆಗಳನ್ನು ಅಲ್ಲಿನ ಜನರ ಸಹಕಾರದಿಂದ ಬಗೆಹರಿಸಿಕೊಳ್ಳುವಲ್ಲಿ ಸಹಕಾರಿಯಾಗುತ್ತದೆ. ಆಡಳಿತದಲ್ಲಿ ಸ್ಥಳೀಯ ಜನರ ಭಾಗವಹಿಸುವಿಕೆಯು ಪ್ರಜಾಪ್ರಭುತ್ವದಂತಹ ಸಂಸ್ಥೆಗಳನ್ನು ತಳಮಟ್ಟದಿಂದ ಸುಭದ್ರಗೊಳ್ಳಿಸುತ್ತದೆ. ಪ್ರಜೆಗಳು ಸ್ಥಳೀಯ ಆಡಳಿತ ಮಂಡಳಿಗಳಿಗೆ ತಮ್ಮ ಪ್ರತಿನಿಧಿಗಳನ್ನು ಚುನಾಯಿಸಿ ಅಧಿಕಾರ ಕೊಡಿಸುವಲ್ಲಿ ಹಕ್ಕನ್ನು ಹೊಂದಿರುತ್ತಾರೆ. ಹೀಗೆ ಸ್ವಯಂ ಆಡಳಿತ ನೀಡುವ ಮಂಡಳಿಗಳನ್ನು ಸ್ಥಳೀಯ ಸರ್ಕಾರ ಎನ್ನುವರು.

ಸ್ಥಳೀಯ ಸರ್ಕಾರದ ಇತಿಹಾಸ

ಸ್ಥಳೀಯ ಸರ್ಕಾರದ ಅಧಿಕಾರ ವಿಕೇಂದ್ರೀಕರಣದ ಮೂಲಕವಾಗಿದೆ. ೧೮೮೨ ರಲ್ಲಿ ಲಾರ್ಡ್‌ ರಿಪ್ಪನ್‌ ಸ್ಥಳೀಯ ಸರ್ಕಾರದ ಗೊತ್ತುವಳಿಯನ್ನು ರಚಿಸಿದನು. ಈ ಗೊತ್ತುವಳಿವಳಿಯು ಸ್ಥಳೀಯ ಸರ್ಕಾರದ ವ್ಯವಸ್ಥಿತ ರಚನೆಗೆ ಅವಕಾಶ ನೀಡಿತು. ಹಾಗಾಗಿ ಲಾರ್ಡ್‌ ರಿಪ್ಪನ್ ರನ್ನು ಭಾರತದ ಸ್ಥಳೀಯ ಸರ್ಕಾರದ ಪಿತಾಮಹ ಎಂದು ಕರೆಯುತ್ತಾರೆ. ೧೯೯೨ ರಲ್ಲಿ ಸಂವಿಧಾನದ ೭೩ ನೇ ಮತ್ತು ೭೪ ನೇ ತಿದ್ದುಪಡಿ ಕಾಯ್ದೆಗಳನ್ವಯ ಸ್ಥಳೀಯ ಸರ್ಕಾರಕ್ಕೆ ಸಂವಿಧಾನಾತ್ಮಕವಾದ ಸ್ಥಾನಮಾನವನ್ನು ನೀಡಲಾಗಿದೆ. ೭೩ನೇ ತಿದ್ದುಪಡಿ ಕಾಯ್ದೆಯು ೧೯೯೩ ಯು ಎಪ್ರಿಲ್‌ ೨೪ ರಂದು ಜಾರಿಗೆ ಬಂದಿತು.

ಸ್ಥಳೀಯ ಸರ್ಕಾರದ ಉದ್ದೇಶಗಳು

 • ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಸ್ಥಳೀಯರನ್ನೇ ಬಳಸಿಕೊಳ್ಳುವುದು.
 • ಜನ ಸಾಮಾನ್ಯರಿಗೆ ಆಡಳಿತಜ್ಞಾನ ಒದಗಿಸುವುದು.
 • ಅಧಿಕಾರವನ್ನು ವಿಕೇಂದ್ರಿಕರಿಸಿ ಆಡಳಿತವನ್ನು ಹೆಚ್ಚು ಪರಿಣಾಮಕಾರಿಯಾಗುವಂತೆ ಮಾಡುವುದು.
 • ತಳಮಟ್ಟದ ಹಂತದಲ್ಲಿ ಜನರಿಗೆ ನಾಯಕತ್ವದ ಗುಣಲಕ್ಷಣಗಳನ್ನು ಅಭಿವೃದ್ದಿಗೊಳಿಸುವುದು.

ಸ್ಥಳೀಯ ಸರ್ಕಾರದ ಕಾರ್ಯಗಳು

 • ಸ್ಥಳೀಯ ಸರ್ಕಾರ ಕೆಳಕಂಡ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ.
 • ಪಂಚಾಯತಿಯು ಆಸ್ತಿಯನ್ನು ರಕ್ಷಿಸಿ ಕಾಪಾಡಿಕೊಳ್ಳುವುದು.
 • ಸ್ಥಳೀಯ ಮಂಡಳಿಯ ವಾರ್ಷಿಕ ಆಯವ್ಯಯದ ಮುಂಗಡ ಪತ್ರ ತಯಾರಿಸುವುದು.
 • ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಯೋಜನೆಗಳನ್ನು ಕೈಗೊಳ್ಳುವುದು.
 • ರಸ್ತೆ ನಿರ್ಮಾಣ, ವಿದ್ಯುತ್ತೀಕರಣ, ಗೃಹನಿರ್ಮಾಣ ಮತ್ತು ಕುಡಿಯುವ ನೀರಿನ ಸರಬರಾಜು ಮುಂತಾದ ಅಭಿವೃದ್ದಿ ಕೆಲಸಗಳಿಗೆ ಕಾರ್ಯಯೋಜನೆ ರೂಪಿಸಿ ಅನುಷ್ಟಾನಗೊಳಿಸುವುದು.
 • ಪ್ರಾಥಮಿಕ, ಪ್ರೌಢ, ವಯಸ್ಕರ ಮತ್ತು ಅನೌಪಚಾರಿಕ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವುದು.
 • ತಮ್ಮ ಪ್ರದೇಶಗಳಿಗೆ ಸ್ವಚ್ಚತೆ ಮತ್ತು ನಿರ್ಮಲೀಕರಣವನ್ನು ಕಾಪಾಡುವುದು.
 • ಎಲ್ಲಾ ಪ್ರಕಾರದ ಮಾಲಿನ್ಯಗಳನ್ನು ತಡೆಗಟ್ಟಿ ಉತ್ತಮ ಆರೋಗ್ಯಕರ ಸವಲತ್ತುಗಳನ್ನು ಒದಗಿಸುವುದು.
 • ಅವಶ್ಯಕ ಪಡಿತರಗಳಾದ ಆಹಾರ ಧಾನ್ಯ, ಸೀಮೆ ಎಣ್ಣೆ ಇತ್ಯಾದಿಗಳ ವಿತರಣೆಗೆ ಸೂಕ್ತ ವ್ಯವಸ್ಥೆಯನ್ನು ನಿರ್ಮಿಸಿ ಸವಲತ್ತುಗಳನ್ನು ಒದಗಿಸುವುದು.
 • ಜನನ ಮತ್ತು ಮರಣಗಳ ನೋಂದಣಿ ಪ್ರಾಮಾಣಿಕವಾಗಿ ಆಗುತ್ತಿರುವುದನ್ನು ಖಾತ್ರಿ ಪಡಿಸಿಕೊಲ್ಳುವುದು.
 • ಕೃಷಿ, ಪಶುಸಂಗೋಪನೆ, ಖಾದಿ ಮತ್ತು ಕರಕುಶಲ ಉದ್ಯೋಗಗಳನ್ನು ಪ್ರೋತ್ಸಾಹಿಸುವು.
 • ಮಣ್ಣು, ನೀರು ಮತ್ತು ಅರಣ್ಯ ರಕ್ಷಣೆಗೆ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.
 • ರೈತರಿಗೆ ಸಹಾಯ ಮಾಡುವ ಸಲುವಾಗಿ ಕೃಷಿ ವಿಸ್ತರಣಾ ಕಾರ್ಯಕ್ರಮಗಳನ್ನು ಕೈಗೊಳ್ಳುವುದು.
 • ಶುಲ್ಕ, ದಂಡ ಮತ್ತು ತೆರಿಗೆಗಳನ್ನು ಸಂಗ್ರಹಿಸುವುದು.
 • ಸರ್ಕಾರ ಕಲ್ಯಾಣ ಯೋಜನೆಗಳಿಗೆ ಫಲಾನುಭವಿಗಳನ್ನು ಮುಕ್ತವಾಗಿ ಗುರುತಿಸುವುದು.

FAQ

ಸ್ಥಳೀಯ ಸರ್ಕಾರದ ಪಿತಾಮಹ ಯಾರು ?

ಲಾರ್ಡ್‌ ರಿಪ್ಪನ್

ಸ್ಥಳೀಯ ಸರ್ಕಾರದ ಕಾರ್ಯಗಳನ್ನು ತಿಳಿಸಿ ?

ಶುಲ್ಕ, ದಂಡ ಮತ್ತು ತೆರಿಗೆಗಳನ್ನು ಸಂಗ್ರಹಿಸುವುದು, ಸರ್ಕಾರ ಕಲ್ಯಾಣ ಯೋಜನೆಗಳಿಗೆ ಫಲಾನುಭವಿಗಳನ್ನು ಮುಕ್ತವಾಗಿ ಗುರುತಿಸುವುದು.

ಇತರೆ ವಿಷಯಗಳು :

ಜನಪದ ಕಲೆಗಳ ವೈಭವದ ಬಗ್ಗೆ ಮಾಹಿತಿ

ಸೋಂಪು ಕಾಳುಗಳ ಬಗ್ಗೆ ಮಾಹಿತಿ 

LEAVE A REPLY

Please enter your comment!
Please enter your name here