ಸಾರ್ವಜನಿಕ ಆಡಳಿತದ ಬಗ್ಗೆ ಮಾಹಿತಿ | Information About Public Administration in Kannada

0
666
ಸಾರ್ವಜನಿಕ ಆಡಳಿತದ ಬಗ್ಗೆ ಮಾಹಿತಿ | Information About Public Administration in Kannada
ಸಾರ್ವಜನಿಕ ಆಡಳಿತದ ಬಗ್ಗೆ ಮಾಹಿತಿ | Information About Public Administration in Kannada

ಸಾರ್ವಜನಿಕ ಆಡಳಿತದ ಬಗ್ಗೆ ಮಾಹಿತಿ Information About Public Administration Sarvajanika Awlithada Bagge Mahiti in Kannada


Contents

ಸಾರ್ವಜನಿಕ ಆಡಳಿತದ ಬಗ್ಗೆ ಮಾಹಿತಿ

Information About Public Administration in Kannada
Information About Public Administration in Kannada

ಈ ಲೇಖನಿಯಲ್ಲಿ ಸಾರ್ವಜನಿಕ ಆಡಳಿತದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಸಾರ್ವಜನಿಕ ಆಡಳಿತ

ಆಧುನಿಕ ಸಮಾಜವು ಸಂಕೀರ್ಣ ಮತ್ತು ಶ್ರೀಘತಿಯ ಬದಲಾವಣೆಗಳಿಗೆ ಒಳಗಾಗುತ್ತಿರುವುದರಿಂದ ಸಾರ್ವಜನಿಕ ಆಡಳಿತವು ಪ್ರಮುಖ ಸ್ಥಾನವನ್ನು ಹೊಂದಿದೆ. ಸಾರ್ವಜನಿಕ ಆಡಳಿತದಿಂದ ಸಮಾಜಕ್ಕೆ ಆಗುವ ಪ್ರಯೋಜನಗಳ ಅರಿವು ಮತ್ತು ಮಹತ್ವವು ದಿನೇ ದಿನೇ ಹೆಚ್ಚುತ್ತಿದೆ. ಹಾಗಾಗಿ ಸಾರ್ವಜನಿಕ ಆಡಳಿತವು ಮಾನವನ ಸಮಾಜವನ್ನು ನಾಗರಿಕ ಸಮಾಜವನ್ನಾಗಿ ರೂಪಿಸುವಲ್ಲಿ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ. ಈ ಬಗೆಯ ಆಡಳಿತಾತ್ಮಕ ಪ್ರಯೋಗಗಳು ಮಾನವ ಸಮಾಜಕ್ಕೆ ಪುರಾತನವಾದವು. ಆದರೆ ಸಾರ್ವಜನಿಕ ಆಡಳಿತದ ಅದ್ಯಯನದ ಬೆಳವಣಿಗೆ ವಿಶೇಷವಾಗಿ ಅಮೇರಿಕದಲ್ಲಿ ಪ್ರಾರಂಭವಾಯಿತು. ಅಮೇರಿಕಾದ ಮಾಜಿ ಅಧ್ಯಕ್ಷರಾದ ವುಡ್ರೋವಿಲ್ಸನ್‌ರನ್ನು ಸಾರ್ವಜನಿಕ ಆಡಳಿತದ ಪಿತಾಮಹ ಎಂದು ಕರೆಯಲಾಗಿದೆ. ಪ್ರಸ್ತುತ ಸಾರ್ವಜನಿಕ ಆಡಳಿತವು ಎಲ್ಲಾ ರಾಷ್ಟ್ರಗಳಲ್ಲಿ ಒಂದು ಪ್ರಮುಖ ಅಧ್ಯಯನ ವಿಷಯವಾಗಿ ಬೆಳವಣಿಗೆ ಹೊಂದುತ್ತಿದೆ.

ಸಾರ್ವಜನಿಕ ಆಡಳಿತ ಎಂದರೇನು

ಸಾರ್ವಜನಿಕ ಆಡಳಿತ ಎಂಬುದು ಆಡಳಿತ ಎಂಬ ವ್ಯಾಪಕ ವ್ಯಾಪ್ತಿಯ ಕ್ಷೇತ್ರದ ಒಂದು ನಿರ್ಧಿಷ್ಟ ಭಾಗವಾಗಿದೆ. ಸಾರ್ವಜನಿಕ ಎನ್ನುವ ಪದ ಸರ್ಕಾರಿ ಎನ್ನುವ ಅರ್ಥವನ್ನು ಸೂಚಿಉತ್ತದೆ. ಸಾರ್ವಜನಿಕ ಆಡಳಿತ ಎಂಬ ಪದವನ್ನು ೧೮೧೨ ರಲ್ಲಿ ಮೊಟ್ಟಮೊದಲ ಬಾರಿಗೆ ಅಲೆಗ್ಸ್ಯಾಂಡರ್‌ ಹ್ಯಾಮಿಲ್ಟ್ ನ್‌ರು ಬಳಸಿದರು. ಅನಂತರ ಹಲವು ಲೇಖಕರು ತಮ್ಮ ಪರಿಭಾಷೆಯ ಅರ್ಥಗಳಲ್ಲಿ ತಿಳಿಸಿದ್ದಾರೆ.

  • ವುಡ್ರೋವಿಲ್ಸನ್‌ ಅವರ ಪ್ರಕಾರ “ಕಾನೂನಿನ ಸಮಗ್ರ ಮತ್ತು ಕ್ರಮಬದ್ದವಾಗಿ ಜಾರಿಗೊಳಿಸುವಿಕೆಯೇ ಸಾರ್ವಜನಿಕ ಆಡಳಿತ”ವೆಂದು ತಿಳಿಸಿದ್ದಾರೆ.
  • ಲೂಥರ್‌ ಗುಲಿಕ್‌ರವರ ಪ್ರಕಾರ “ಸಾರ್ವಜನಿಕ ಆಡಳಿಳಿತವು ಸರ್ಕಾರ ಕಾರ್ಯಗಳನ್ನು ನಿರ್ವಹಿಸುವ ಕಾರ್ಯಾಂಗ ಶಾಖೆಗೆ ಸಂಬಂಧಿಸಿದೆ.

ಒಟ್ಟಿನಲ್ಲಿ ಸರ್ಕಾರ ಇಡೀ ವ್ಯವಸ್ಥೆಯ ಸಮಸ್ತ ಕಾರ್ಯಾಚರಣೆಗೆ ಸಂಬಂದಿಸಿರುತ್ತದೆ. ರಾಜ್ಯದ ದೈನಂದಿನ ವ್ಯವಹಾರಗಳನ್ನು ನಡೆಸಿಕೊಂಡು ಹೋಗುವ ಸರ್ಕಾರದ ಅಂಗವೇ ಸಾರ್ವಜನಿಕ ಆಡಳಿತವಾಗಿರುತ್ತದೆ.

ಸಾರ್ವಜನಿಕ ಆಡಳಿತದ ಮಹತ್ವ

ರಕ್ಷಣಾ ರಾಜ್ಯದಿಂದ ಕಲ್ಯಾಣ ರಾಜ್ಯವಾಗಿ, ಬದಲಾಗುತ್ತಿರುವ ರಾಜ್ಯದ ಸ್ವರೂಪಕ್ಕೆ ತಕ್ಕಂತೆ ಸಾರ್ವಜನಿಕ ಆಡಳಿತದ ಪ್ರಾಮುಖ್ಯತೆಯು ಹೆಚ್ಚುತ್ತಿದೆ. ಇದರಿಂದಾಗಿ ಸಾರ್ವಜನಿಕ ಆಡಳಿತ ಕ್ಷೇತ್ರವೂ ವಿಸ್ತಾರವಾಗುತ್ತದೆ. ಮಾನವನ ಸರ್ವಾಂಗೀಣ ಅಭಿವೃದ್ದಿ ಹಾಗೂ ಮಾನವ ಸಮಾಜದ ಅಳಿವು ಮತ್ತು ಉಳಿವು ಸಾರ್ವಜನಿಕ ಆಡಳಿತವನ್ನು ಅವಲಂಬಿಸಿದೆ. ವ್ಯಕ್ತಿಯು ಹುಟ್ಟಿನಿಂದ ಮರಣದವರೆಗೆ ಸಾರ್ವಜನಿಕ ಆಡಳಿತ ವ್ಯವಸ್ಥೆಗೆ ಒಳಪಟ್ಟಿರುತ್ತಾನೆ. ಇದು ರಾಜ್ಯ ವ್ಯವಸ್ಥೆಯ ಹೃದಯವಾಗಿದೆ. ಸಾರ್ವಜನಿಕ ಆಡಳಿತ ಇಲ್ಲದ ರಾಜ್ಯದ ಕಲ್ಪನೆಯೇ ಅಸಾದ್ಯವಾಗಿದೆ. ಆದ್ದರಿಂದ ಆಧುನಿಕ ರಾಜ್ಯವನ್ನು ಆಡಳಿತಾತ್ಮಕ ರಾಜ್ಯ ಎಂದು ಪರಿಗಣಿಸಲಾಗಿದೆ.

ಸಾರ್ವಜನಿಕ ಆಡಳಿತವು ಸರ್ಕಾರದ ಆಧಾರ ಸ್ತಂಭವಾಗಿದೆ :

ರಾಜ್ಯದಲ್ಲಿ ಶಾಸಕಾಂಗ ಹಾಗೂ ನ್ಯಾಯಾಂಗವಿಲ್ಲದೆ ಸರ್ಕಾವಿರಬಹುದು. ಆದರೆ ಆಡಳಿತಾಂಗವಿಲ್ಲದೆ ಸರ್ಕಾರ ಅಥವಾ ರಾಜ್ಯ ಅಸ್ತಿತ್ವದಲ್ಲಿ ಇರಲು ಸಾಧ್ಯವಿಲ್ಲ. ಸಾರ್ವಜನಿಕ ಅಥವಾ ಸರ್ಕಾರದ ನೀತಿಗಳನ್ನು ಕಾರ್ಯಗತಗೊಳಿಸಲು ಆಡಳಿತಾತ್ಮಕ ಯಂತ್ರ ಎಲ್ಲ ರಾಷ್ಟ್ರಗಳಲ್ಲಿಯೂ ಅತ್ಯವಶ್ಯಕವಾಗಿರುತ್ತದೆ. ಹಾಗಾಗಿ ಪಾಲ್‌ ಅಪಾಲ್ ಬಿಯವರು ಆಡಳಿವಿಲ್ಲದೆ ಸರ್ಕಾರ ಒಣ ಹರಟೆಯ ಕೂಟವಾಗುವುದೆಂದು ಅಭಿಪ್ರಾಯ ಪಟ್ಟಿದ್ದಾರೆ.

ಸಾರ್ವಜನಿಕ ಹಿತಾಸಕ್ತಿಗಾಗಿ ವಿವಿಧ ಸೇವೆ ಸಲ್ಲಿಸುತ್ತಿದೆ :

ಸಾರ್ವಜನಿಕ ಆಡಳಿತ ವ್ಯವಸ್ಥೆಯು ವ್ಯಕ್ತಿಯ ಗರ್ಭದಲ್ಲಿರುವಾಗಿನಿಂದ ಹಿಡಿದು ಅವನ ಮರಣದವರೆಗೂ ಅಗತ್ಯವಾದ ಸೇವೆಗಳನ್ನು ಒದಗಿಸುತ್ತದೆ. ಶಾಂತಿ ಹಾಗೂ ಸಮೃದ್ದತೆಯನ್ನು ಕಾಪಾಡಿ ಜನರ ಪ್ರಾಣ ಹಾಗೂ ಆಸ್ತಿ ರಕ್ಷಣೆ, ನ್ಯಾಯ ಒದಗಿಸುವುದು, ಶಿಕ್ಷಣ ನೀಡುವುದು, ಉದ್ಯೋಗಾವಕಾಶ ಕಲ್ಪಿಸುವುದು, ಅವಶ್ಯಕ ವಸ್ತುಗಳ ಪೂರೈಸುವುದು, ದೇಶ ಸಂರಕ್ಷಣೆ, ಆರ್ಥಿಕ ಸಮಾನತೆಯನ್ನು ಉಂಟುಮಾಡುವುದು. ಹೀಗೆ ಹಲವು ರೀತಿಯ ಸೇವೆಗಳನ್ನು ಒದಗಿಸುತ್ತದೆ.

ಕಾನೂನು ಮತ್ತು ನೀತಿಗಳ ಅನುಷ್ಟಾನ :

ಕಾನೂನು ಮತ್ತು ನೀತಿಗಳನ್ನು ಜಾರಿಗೊಳಿಸುವುದರ ಮೂಲಕ ಸಾರ್ವಜನಿಕ ಆಡಳಿತವು ಸಮಾಜದಲ್ಲಿ ಜನರ ಚಟುವಟಿಕೆಗಳನ್ನು ನಿಯಂತ್ರಿಸಿ ಕಾನೂನು ಹಾಗೂ ವ್ಯವಸ್ಥೆಯನ್ನು ಕಾಪಾಡುತ್ತದೆ. ಸಾರ್ವಜನಿಕ ಆಡಳಿತವು ನಿಷ್ಟೆ ಹಾಗೂ ದಕ್ಷತೆಯಿಂದ ಕಾರ್ಯನಿರ್ವಹಿಸದಿದ್ದರೆ ಉತ್ತಮ ನೀತಿಗಳ ಗುರಿಗಳು ಕೇವಲ ಕಾಗದದ ಘೋಷಣೆಗಳಾಗಿ ಉಳಿಯುತ್ತದೆ.

ಸಾಮಾಜಿಕ ಭದ್ರತೆಯನ್ನು ಕಾಪಾಡಲು ಅಗತ್ಯ :

ಸಾರ್ವಜನಿಕ ಆಡಳಿತವು ಸಾಮಾಜಿಕ ಭದ್ರತೆಯ ಒಂದು ಸಾಧನವಾಗಿ ಕಾರ್ಯನಿರ್ವಹಿಸುತ್ತದೆ. ಸರ್ಕಾರಗಳು ಬದಲಾವಣೆಯಾದರೂ ಸಾರ್ವಜನಿಕ ಆಡಳಿತದ ಶಾಶ್ವತ ವ್ಯವಸ್ಥೆಯಾಗಿರುವುದರಿಂದ ಇದು ಆಡಳಿತಕ್ಕೆ ಸ್ಥಿರತೆಯನ್ನು ಒದಗಿಸುತ್ತಾರೆ. ಇದರಿಂದಾಗಿ ಆಡಳಿತದ ಕಾರ್ಯಗಳು ಸುಗಮವಾಗಿ ನಿರ್ವಹಣೆಯಾಗಲೂ ಸಾಧ್ಯವಾಗುತ್ತದೆ. ಉತ್ತಮ ಆಡಳಿತ ವ್ಯವಸ್ಥೆ ಇಲ್ಲವಾದಲ್ಲಿ ಅತ್ಯಂತ ಪ್ರಬಲ ರಾಷ್ಟ್ರವು ಕುಸಿದು ಬೀಳುತ್ತದೆ.

ಶಾಸಕಾಂಗ ಮತ್ತು ಕಾರ್ಯಾಂಗಕ್ಕೂ ಸಹಾಯ ಮಾಡುತ್ತದೆ :

ಸಾರ್ವಜನಿಕ ಆಡಳಿತವು ಶಾಸಕಾಂಗ ರೂಪಿಸಿದ ಸಾರ್ವಜನಿಕ ನೀತಿಗಳನ್ನು ಕಾರ್ಯರೂಪಕ್ಕೆ ತರಲು ಸಹಾಯ ಮಾಡುತ್ತದೆ. ಜೊತೆಗೆ ಸರ್ಕಾರಗಳು ತಮ್ಮ ನೀತಿಗಳನ್ನು ರೂಪಿಸಲು ಅಗತ್ಯವಾದ ಅಂಕಿ ಅಂಶಗಳನ್ನು ಹಾಗೂ ಸಲಹೆಗಳನ್ನು ನೀಡುತ್ತದೆ. ಈ ಮೂಲಕ ಆಡಳಿತಾಂಗ ಕೇವಲ ನೀತಿ ಅನುಷ್ಟಾನದ ಜೊತೆಗೆ ನೀತಿ ರಚನಾ ಕಾರ್ಯದಲ್ಲೂ ಪ್ರಮುಖ ಪಾತ್ರವಹಿಸುತ್ತದೆ. ನಿಯೋಜಿತ ಶಾಸನದಲ್ಲಿ ಆಡಳಿತಾಂಗವು ಶಾಸಗಳಿಗೆ ಅಗತ್ಯ ವಿವರಗಳನ್ನು ತುಂಬುವ ಮೂಲಕ ಕಾರ್ಯಾಂಗಕ್ಕೆ ಸಹಾಯ ಮಾಡುತ್ತದೆ.

FAQ

ಸಾರ್ವಜನಿಕ ಆಡಳಿತ ಎಂಬ ಪದವನ್ನು ಯಾವಾಗ ಬಳಸಿದರು ?

ಸಾರ್ವಜನಿಕ ಆಡಳಿತ ಎಂಬ ಪದವನ್ನು ೧೮೧೨ ರಲ್ಲಿ ಮೊಟ್ಟಮೊದಲ ಬಾರಿಗೆ ಅಲೆಗ್ಸ್ಯಾಂಡರ್‌ ಹ್ಯಾಮಿಲ್ಟ್ ನ್‌ರು ಬಳಸಿದರು.

ಸಾರ್ವಜನಿಕ ಆಡಳಿತ ಎಂಬ ಪದವನ್ನು ಯಾರು ಬಳಸಿದರು ?

ಸಾರ್ವಜನಿಕ ಆಡಳಿತ ಎಂಬ ಪದವನ್ನು ಅಲೆಗ್ಸ್ಯಾಂಡರ್‌ ಹ್ಯಾಮಿಲ್ಟ್ ನ್‌ರು ಬಳಸಿದರು.

ಇತರೆ ವಿಷಯಗಳು :

ಸೋಂಪು ಕಾಳುಗಳ ಬಗ್ಗೆ ಮಾಹಿತಿ

ಲ್ಯಾಪ್‌ಟಾಪ್‌ನಲ್ಲಿ PDF ಅನ್ನು ಹೇಗೆ ರಚಿಸುವುದು 

LEAVE A REPLY

Please enter your comment!
Please enter your name here