ಅತಿಯಾಸೆ ಗತಿ ಕೇಡು | Athiyase Gathi Gedu Essay in Kannada

0
1363
ಅತಿಯಾಸೆ ಗತಿ ಕೇಡು | Athiyase Gathi Gedu Essay in Kannada
ಅತಿಯಾಸೆ ಗತಿ ಕೇಡು | Athiyase Gathi Gedu Essay in Kannada

ಅತಿಯಾಸೆ ಗತಿ ಕೇಡು, Athiyase Gathi Gedu Essay in Kannada, athi ase gathi kedu prabandha in kannada, athi ase gathi kedu gade in kannada


Contents

ಅತಿಯಾಸೆ ಗತಿ ಕೇಡು

ಅತಿಯಾಸೆ ಗತಿ ಕೇಡು Athiyase Gathi Gedu Essay in Kannada

ಈ ಲೇಖನಿಯಲ್ಲಿ ಅತಿಯಾಸೆ ಗತಿ ಕೇಡು ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನ ಮೂಲಕ ತಿಳಿಸಿದ್ದೇವೆ.

ಪೀಠಿಕೆ

ಗಾದೆಗಳು ವೇದಕ್ಕೆ ಸಮಾನ. ವೇದ ಸುಳ್ಳಾದರೂ, ಗಾದೆ ಸುಳ್ಳಾಗದೂ ಎಂಬ ಮಾತು ಸತ್ಯ. ಮನುಷ್ಯನಿಗೆ ಸಹಜವಾಗಿ ಆಸೆ ಇರುತ್ತದೆ. ಆಸೆಗೂ ಒಂದು ಮಿತಿ ಇರಬೇಕು ಅದು ಅತಿಯಾದರೆ ಅವರೆ ತುಂಬಾ ತೊಂದರೆಯನ್ನು ಅನುಭವಿಸಬೇಕಾಗುತ್ತದೆ. ಮನುಷ್ಯನಿಗೆ ದೊಡ್ಡ-ದೊಡ್ಡ ಆಸೆಗಳು ಅವರ ಆರ್ಥಿಕ ಪರಿಸ್ಥಿಯು ತುಂಬಾ ಚೆನ್ನಾಗಿರುತ್ತದೆ ಅದರೂ ಇನ್ನು ಹೆಚ್ಚು ಗಳಿಸುವ ಹಂಬಲವನ್ನು ಬೆಳಸಿಕೊಂಡಿರುತ್ತಾರೆ, ಇದರ ಪರಿಣಾಮ ಒಂದು ದಿನ ಅನುಭವಿಸಬೇಕಾಗುತ್ತದೆ.

ವಿಷಯ ವಿವರಣೆ

ಜೀವನದಲ್ಲಿ ಮುಖ್ಯವಾಗಿರುವುದು ಈಗೀನ ಪರಿಸ್ಥತಿಯಲ್ಲಿ ಹಣ. ಹಣವನ್ನು ಸಂಪಾದನೆ ಮಾಡಲು ಹಲವು ದಾರಿಗಳಿವೆ ಆದರೆ ಆಯ್ಕೆ ನಮ್ಮ ಕೈಯಲ್ಲಿದೆ. ಆಯ್ಕೆ ಸರಿಯಾಗಿದ್ದರೆ ದಾರಿಯು ಸುಂದರವಾಗಿರುತ್ತದೆ. ಆಯ್ಕೆಯ ದಾರಿ ತಪ್ಪಾಗಿದ್ದರೆ, ಎಡವುತ್ತಾರೆ. ಮನುಷ್ಯ ಎಷ್ಟು ಸ್ವಾರ್ಥಿ ಎಂದರೆ ಅವನ ಬಳಿ ಎಲ್ಲವು ಇದ್ದರೂ ಬೇರೆಯವರಿಗೆ ಏನು ನೀಡುವುದಿಲ್ಲ, ಅವನು ಬೇರೆಯವರಿಂದ ಇನ್ನು ಗಳಿಸುತ್ತಾನೆ.

ಅತಿಯಾದ ಆಸೆಯು ಮನುಷ್ಯನನ್ನು ಹಾಳುಮಾಡುತ್ತಿದೆ. ಎಲ್ಲವು ಇದ್ದರು ಇನ್ನು ಪಡೆಯುವ ಹಂಬಲದಿಂದ ಓಡುತ್ತಿದ್ದಾನೆ, ಈ ರೀತಿಯ ಅತಿಯಾಸೆಯಿಂದ ಜೀವನದ ಅಮೂಲ್ಯವಾದ ಕ್ಷಣಗಳನ್ನು ಕಳೆದುಕೊಳುತ್ತಾನೆ. ಅತಿಯಾಗಿ ಗಳಿಸುವ ಯೋಚನೆಯಲ್ಲಿ ಕುಟುಂಬದ ಖುಷಿ, ಕುಟುಂಬದ ಜೊತೆಗಿನ ಸಂಬಂಧ ಎಲ್ಲವನ್ನು ಮರೆತು ಹೋಗುತ್ತಿದ್ದಾನೆ. ಸಮಯ ಬೇಗ ಹೋಗುತ್ತದೆ ಇರುವ ಕ್ಷಣಗಳಲ್ಲಿ ಎಲ್ಲವನ್ನು ಅನುಭವಿಸಬೇಕು, ಹಣದ ಒಂದೇ ಜೀವನ ಆಗಬಾರದು.

ನಮ್ಮ ದೇಶ ಹೇಗಾಗಿದೆ ಎಂದರೆ ಕುಳಿತರು ಹಣ, ನಿಂತರು ಹಣ, ಸತ್ತರು ಹಣ, ಹುಟ್ಟಿದರು ಹಣ, ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ತಿಂಗಳ ಸಂಬಳ ಜೊತೆಗೆ ಅವರಿಗೆ ಗಿಂಬಳನು ಬೇಕು. ಇಲ್ಲ ಅದರೆ ಆ ರೋಗಿಗೆ ಚಿಕಿತ್ಸೆ ನೀಡುವುದಿಲ್ಲ. ರಾಜಕರಣಿಗಳು ಇರುವುದೇ ಲಂಚದಲ್ಲಿ, ಇನ್ನು ಸರ್ಕಾರಿ ಕೆಲಸ ಸಿಕ್ಕರು ಲಂಚಕೊಟ್ಟು ಕೆಲಸಕ್ಕೆ ಹೋಗುವ ಪರಿಸ್ಥಿತಿ ಇದೆ. ಮನುಷ್ಯ ಬೆಳೆದಂತೆ ಅವನ ಕಪಟ ಬುದ್ದಿಯು ಬೆಳೆಯುತ್ತದೆ.

ಮನುಷ್ಯನ ಆಸೆಗೆ ಮಿತಿಯಲ್ಲ ಎಷ್ಟು ಪಡೆದರು, ಇನ್ನು ಪಡೆಯುವ ಅತಿಯಾದ ಆಸೆ ಮನುಷ್ಯರಿಗೆ. ಅತಿಯಾದ ಆಸೆ ದುಃಖವನ್ನು ಉಂಟುಮಾಡುತ್ತದೆ. ಜೀವನದ ನೆಮ್ಮದಿಯನ್ನು ಹಾಳುಮಾಡುತ್ತದೆ. ಅತಿಯಾದ ಆಸೆಯಿಂದ ಎಲ್ಲವನ್ನು ಕಳೆದುಕೊಂಡು ಕೊನೆಗೆ ಬೀದಿಗೆ ಬರಬಹುದು. ಅತಿಯಾದ ಆಸೆ ಮನುಷ್ಯನನ್ನು ಹಾಳುಮಾಡುತ್ತದೆ.

ಉಪಸಂಹಾರ

ನಮ್ಮ ಅವಶ್ಯಕತೆಗಿಂತ ಹೆಚ್ಚಾಗಿ ಪಡೆಯುವುದರಿಂದ ಆ ಕ್ಷಣಕ್ಕೆ ಖುಷಿ ಸಿಗುತ್ತದೆ. ಮನುಷ್ಯರು ಪ್ರಾಣಿಗಳಿಗಿಂತ, ಕ್ರೂರ ಪ್ರಾಣಿ ಮನುಷ್ಯ ಪ್ರಾಣಿ. ಈ ಜಗತ್ತಿನಲ್ಲಿ ಹುಟ್ಟಿದ ಪ್ರತಿಯೊಬ್ಬರಿಗೂ ಆಸೆ ಪಡುತ್ತಾರೆ, ಆದರೆ ಅದೂ ಅತಿಯಾದರೆ ತೊಂದರೆಗೆ ಸಿಲುಕುತ್ತಾನೆ. ಆಸೆ ಒಳ್ಳೆಯದು ಅತಿಯಾಸೆ ತಪ್ಪು. ಅತಿಯಾದ ಆಸೆಯಿಂದ ತೊಂದರೆ ಸಿಲುಕಿ ಜೀವನ ಹಾಳುಮಾಡಿಕೊಂಡ ಹಲವಾರು ಉದಾಹರಣೆಗಳಿವೆ, ಅತಿಯಾಸೆ ಗತಿ ಕೇಡು.

ಇತರೆ ಪ್ರಬಂಧಗಳು:

ಗಾದೆ ಮಾತುಗಳು

ತಾಳಿದವನು ಬಾಳಿಯಾನು ಗಾದೆ ಮಾತು ವಿವರಣೆ

ಆರೋಗ್ಯವೇ ಭಾಗ್ಯ ಗಾದೆ ಮಾತಿನ ವಿಸ್ತರಣೆ

LEAVE A REPLY

Please enter your comment!
Please enter your name here