ಭಾರತದ ಭೂ ಬಳಕೆ ಹಾಗೂ ವ್ಯವಸಾಯ | Land Use And Agriculture India in Kannada

0
628
ಭಾರತದ ಭೂ ಬಳಕೆ ಹಾಗೂ ವ್ಯವಸಾಯ | Land Use And Agriculture India in Kannada
ಭಾರತದ ಭೂ ಬಳಕೆ ಹಾಗೂ ವ್ಯವಸಾಯ | Land Use And Agriculture India in Kannada

Contents


ಭಾರತದ ಭೂ ಬಳಕೆ ಹಾಗೂ ವ್ಯವಸಾಯ

Land Use And Agriculture India in Kannada
Land Use And Agriculture India in Kannada

ಈ ಲೇಖನಿಯಲ್ಲಿ ಭಾರತದ ಭೂ ಬಳಕೆ ಹಾಗೂ ವ್ಯವಸಾಯದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಲಾಗಿದೆ.

Land Use And Agriculture India in Kannada

ಭೂಮಿ ಪ್ರಾಕೃತಿಕ ಸಂಪನ್ಮೂಲಗಳಲ್ಲಿ ಅತಿ ಮುಖ್ಯವಾದುದು. ಇದನ್ನು ಸಾಗುವಳಿ, ಅರಣ್ಯ, ಹಲ್ಲುಗಾಲು, ಬೀಳುಭೂಮಿ, ವ್ಯವಸಾಯೇತರ ಬಳಕೆ, ಹೀಗೆ ವಿವಿಧ ಉದ್ದೇಶಗಳಿಗೆ ಬಳಸುವದನ್ನೇ ʼಭೂ ಬಳಕೆʼ ಎನ್ನುವರು.

ಭೂ ಬಳಕೆಯ ಪ್ರಕಾರಗಳು

೧. ನಿವ್ವಳ ಸಾಗುವಳಿ ಕ್ಷೇತ್ರ :

ಇದು ಭಾರತದ ಭೂ ಬಳಕೆಯ ವಿಧಗಳಲ್ಲಿ ಅತ್ಯಂತ ಪ್ರಮುಖವಾಗಿದೆ. ಭಾರತದ ವ್ಯವಸಾಯ ಪ್ರಧಾನ ಅರ್ಥಿಕತೆಗೆ ಅನುಗುಣವಾಗಿ ಅತಿಹೆಚ್ಚು ಭೂಮಿಯನ್ನು ಸಾಗುವಳಿಗೆ ಬಳಸಲಾಗುತ್ತಿದೆ. ಭಾರತವು ಪ್ರಪಂಚದಲ್ಲಿ ಸಾಗುವಳಿ ಕ್ಷೇತ್ರದ ವಿಸ್ತೀರ್ಣದಲ್ಲಿ ಅಮೆರಿಕಾ ಸಂಯುಕ್ತ ಸಂಸ್ಥಾನದ ನಂತರ ಎರಡನೇ ಸ್ಥಾನದಲ್ಲಿದೆ. ಹರಿಯಾಣ, ಪಂಜಾಬ, ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರಗಳಲ್ಲಿ ನಿವ್ವಳ ಸಾಗುವಳಿ ಕ್ಷೇತ್ರವು ಪ್ರತಿಶತ ೬೦ಕ್ಕಿಂತ ಹೆಚ್ಚಾಗಿದೆ.

೨. ಅರಣ್ಯ ಭೂಮಿ :

ಭಾರತದಲ್ಲಿ ಸಮೀಕ್ಷೆಗೊಳಪಟ್ಟ ಒಟ್ಟು ಭೂ ಪ್ರದೇಶ ಪ್ರತಿಶತ ೨೧.೩ ರಷ್ಟು ಮಾತ್ರ ಅರಣ್ಯಗಳಿಂದ ಕೂಡಿದೆ. ಅದು ೧೯೫೦-೫೧ ರಲ್ಲಿ ಪ್ರತಿಶತ ೧೬.೨ ರಷ್ಟಿತ್ತು. ರಾಷ್ಟ್ರೀಯ ಅರಣ್ಯ ಯೋಜನೆ ಪ್ರಕಾರ ಪ್ರತಿಶತ ೩೩ ರಷ್ಟು ಅರಣ್ಯವಿರಬೇಕು. ಆದ್ದರಿಂದ ಅರಣ್ಯ ಭೂಮಿಯನ್ನು ಹೆಚ್ಚುಸಲು ಸಾಕಷ್ಟು ಪ್ರಯತ್ನಸಲಾಗುತ್ತಿದೆ.

೩. ವ್ಯವಸಾಯೇತರ ಭೂ ಬಳಕೆ :

ಸಾಗುವಳಿ ಹಾಗೂ ಅರಣ್ಯ ಕ್ಷೇತ್ರದ ವಿಸ್ತಾರವನ್ನು ಹೊರತುಪಡಿಸಿ ವ್ಯವಸಾಯೇತರ ಬಳಕೆಗಾಗಿ ಹೆಚ್ಚು ಭೂಮಿಯನ್ನು ಬಳಸಲಾಗಿದೆ. ಕಟ್ಟಡ ನಿರ್ಮಾಣ, ಜಲಾಶಯ, ಕೈಗಾರಿಕೆ, ರಸ್ತೆ ಮೊದಲಾದವುಗಳ ನಿರ್ಮಾಣಕ್ಕಾಗಿ ಹೆಚ್ಚು ಭೂಮಿಯನ್ನು ಬಳಸಲಾಗುತ್ತಿದೆ.

೪. ಬೀಳು ಭೂಮಿ :

ಜನಸಂಖ್ಯೆ ಅಧಿಕಗೊಂಡಂತೆ ವ್ಯವಸಾಯೋತ್ಪನ್ನಗಳ ಮೇಲೆ ಹೆಚ್ಚು ಒತ್ತಡವಾಗಿದ್ದು, ಅದಕ್ಕೆ ಅನುಗುಣವಾಗಿ ಹೆಚ್ಚು ಕ್ಷೇತ್ರವನ್ನು ಸಾಗುವಳಿಗೆ ಬಳಸಲಾಗಿದೆ. ಅಲ್ಲದೆ ಅನುಗುಣವಾಗಿ ಹೆಚ್ಚು ಕ್ಷೇತ್ರವನ್ನು ಸಾಗುವಳಿಗೆ ಬಳಸಲಾಗಿದೆ. ಅಲ್ಲದೆ ಬೀಳು ಬಿದ್ದದ್ದ ಹಾಗೂ ವ್ಯವಸಾಯಕ್ಕೆ ಬಳಸಲಾಗಿದೆ.

೫. ಹುಲ್ಲುಗಾವಲು :

ವ್ಯವಸಾಯ ಪ್ರದೇಶದ ವಿಸ್ತರಣೆಯೊಂದಿಗೆ ಹುಲ್ಲುಗಾವಲುಗಳ ಕ್ಷೇತ್ರ ನಿರಂತರವಾಗಿ ಕಡಿಮೆಯಾಗಿದೆ. ಹಿಮಾಚಲ ಪ್ರದೇಶ ರಾಜ್ಯವು ಹೆಚ್ಚು ಹುಲ್ಲುಗಾವಲು ಪ್ರದೇಶವನ್ನು ಹೊಂದಿದ್ದು, ಪಂಜಾಬ, ಹರಿಯಾಣ ರಾಜ್ಯಗಳು ಅತ್ಯಂತ ಕಡಿಮೆ ಹುಲ್ಲುಗಾವಲುಗಳನ್ನು ಹೊಂದಿವೆ.

೬. ಬಳಕೆಯಾಗದ ವ್ಯವಸಾಯ ಯೋಗ್ಯ ಭೂಮಿ :

ಭಾರತದ ವಿವಿಧ ಭಾಗಗಳಲ್ಲಿ ಹಿಂದೆ ಬೇಸಾಯಕ್ಕೆ ಬಳಸಲಾಗುತ್ತಿದ್ದ ಕೆಲವು ಭಾಗಗಳು ಇಂದು ಮಣ್ಣಿನ ರಾಸಾಯನಿಕ ಸಂಯೋಜನೆಯ ಬದಲಾವಣೆಗಳಿಂದಾಗಿ ಅನುಪಯುಕ್ತವಾಗಿ ಪರಿಣಮಿಸಿವೆ.

ವ್ಯವಸಾಯ

ವ್ಯವಸಾಯವು ಮಾನವನ ಪುರಾತನ ವೃತ್ತಿಗಳಲ್ಲಿ ಒಂದಾಗಿದ್ದು, ನಾಗರಿಕತೆಯ ಆರಂಭದಿಂದಲೂ ಮಾನವನು ಈ ವೃತ್ತಿಯಲ್ಲಿ ತೊಡಗಿರುವನು. ವ್ಯವಸಾಯ ʼಭೂಮಿಯನ್ನು ಉಳುವೆ ಮಾಡುವ ಕಲೆʼ ಎಂದು ವ್ಯಾಖ್ಯಾನಿಸಲಾಗಿದೆ. ಭೂಮಿಯನ್ನು ಉಳುಮೆ ಮಾಡಿ ಸಸ್ಯಗಳನ್ನು ಪೋಷಿಸಿ ಅದರಿಂದ ಮಾನವ ಮತ್ತು ಪ್ರಾಣಿಗಳಿಗೆ ಉಪಯೋಗವನ್ನು ಪಡೆಯುವುದನ್ನೇ ವ್ಯವಸಾಯ ಅಥವಾ ಕೃಷಿ ಎಂದು ಕರೆಯುವರು. ವ್ಯಾಪಕ ಅರ್ಥದಲ್ಲಿ ಇದು ಮೀನುಗಾರಿಕೆ, ಪಶುಪಾಲನೆ ಮತ್ತು ಅರಣ್ಯಗಾರಿಕೆಯನ್ನೂ ಸಹ ಒಳಗೊಂಡಿದೆ.

ವ್ಯವಸಾಯದ ಪ್ರಾಮುಖ್ಯತೆ :

ವ್ಯವಸಾಯವು ಭಾರತೀಯರ ಮುಖ್ಯ ಉದ್ಯೋಗವಾಗಿದೆ. ಇದು ದೇಶದ ಎಲ್ಲ ಭಾಗಗಳಲ್ಲಿಯೂ ವಿವಿಧ ರೂಪ ಹಾಗೂ ವಿವಿಧ ಉತ್ಪಾದನೆಗಳಲ್ಲಿ ತೊಡಗಿರುವುದನ್ನು ಕಾಣಬಹುದು. ದೇಶದ ಅಗಾಧ ಜನಸಂಖ್ಯೆಗೆ ವ್ಯವಸಾಯವು ಆಹಾರ ಧಾನ್ಯಗಳನ್ನು ಪೂರೈಸುತ್ತದೆ. ವ್ಯವಸಾಯವು ಜೀವನಾಧಾರ ಉದ್ಯೋಗವಾಗಿದ್ದು, ಉಳಿದ ಎಲ್ಲ ಕ್ಷೇತ್ರಗಳಿಗಿಂತಲೂ ಹೆಚ್ಚು ಜನರಿಗೆ ಉದ್ಯೋಗಾವಕಾಶಗಳನ್ನು ನೀಡಿದೆ. ಭಾರತವು ಉತ್ಪಾದಿಸುವ ಹಲವಾರು ಬಗೆಯ ವ್ಯವಸಾಯೋತ್ಪನ್ನಗಳನ್ನು, ಕಚ್ಚಾ ವಸ್ತುವನ್ನಾಗಿ ಆಧರಿಸಿದ ಅಸಂಖ್ಯಾ ಕೈಗಾರಿಕೆಗಳನ್ನು ಹೊಂದಿದೆ. ವ್ಯವಸಾಯವು ಪರೋಕ್ಷವಾಗಿಯೂ ಹಲವಾರು ಕೈಗಾರಿಕೆಗಳನ್ನು ಪೋಷಿಸುತ್ತದೆ.

ವ್ಯವಸಾಯದ ವಿಧಗಳು :

೧. ಸಾಂದ್ರ ಬೇಸಾಯ :

ಒಂದು ವರ್ಷದಲ್ಲಿ ಒಂದೇ ವ್ಯವಸಾಯ ಕ್ಷೇತ್ರದಿಂದ ೨-೩ ಬೆಳೆಗಳನ್ನು ಬೆಳೆಯುವುದಕ್ಕೆ ಸಾಂದ್ರ ಬೇಸಾಯ ಎಂದು ಕರೆಯುವರು. ಅಧಿಕ ಜನಸಂಖ್ಯೆ ಇರುವ ಫಲವತ್ತಾದ ಪ್ರದೇಶಗಳಲ್ಲಿ ಇಂತಹ ಬೇಸಾಯವು ರೂಢಿಯಲ್ಲಿದೆ.

೨. ಜೀವನಾಧಾರದ ಬೇಸಾಯ :

ರೈತರು ತಮ್ಮ ಜೀವನಕ್ಕೆ ಅವಶ್ಯಕವಿರುವ ಹುಟ್ಟುವಳಿಗಳನ್ನು ಬೆಳೆಯುವದಕ್ಕೆ ಜೀವನಾಧಾರದ ಬೇಸಾಯ ಎಂದು ಕರೆಯುವರು. ಈ ಬೇಸಾಯ ಪದ್ಧತಿಯಲ್ಲಿ ರೈತರು ಆಹಾರ ಧಾನ್ಯ, ಎಣ್ಣೆಕಾಳು, ತರಕಾರಿ ಮುಂತಾದವುಗಳನ್ನು ಬೆಳೆಯುವರು.

a) ಸ್ಥಿರ ಬೇಸಾಯ :

ಯಾವುದೇ ಒಂದು ಪ್ರದೇಶದಲ್ಲಿ ಜನರು ಶಾಶ್ವತವಾಗಿ ನೆಲೆಸಿ ಬೇಸಾಯವನ್ನು ಮಾಡುವುದಕ್ಕೆ ಸ್ಥಿರ ಬೇಸಾಯ ಎಂದು ಕರೆಯುವರು. ಈ ಬೇಸಾಯವು ಸಾಂಪ್ರದಾಯಿಕವಾಗಿದ್ದು, ಚಿಕ್ಕ ಹಿಡುವಳಿಯನ್ನು ಹೊಂದಿರುತ್ತದೆ.

b) ಸ್ಥಳಾಂತರ ಬೇಸಾಯ :

ಯಾವುದೇ ಒಂದು ಪ್ರದೇಶದಲ್ಲಿ ಜನರು ಸ್ಥಿರವಾಗಿ ನೆಲೆಸದೆ ಅಲ್ಲಿರುವ ಅರಣ್ಯಗಳನ್ನು ಕಡಿದು ಬೇಸಾಯ ಮಾಡುವರು. ಒಂದೆರಡು ವರ್ಷ ಬೇಸಾಯ ಮಾಡಿ ಅಲ್ಲಿನ ಮಣ್ಣಿನ ಫಲವತ್ತತೆ ಕಡಿಮೆಯಾದ ನಂತರ ಬೇರೆ ಪ್ರದೇಶಗಳಿಗೆ ಹೋಗಿ ಬೇಸಾಯ ಮಾಡುವರು. ಇಂತಹ ಬೇಸಾಯವನ್ನು ಸ್ಥಳಾಂತರ ಬೇಸಾಯ ಎಂದು ಕರೆಯುವರು. ಇಂದು ಇದನ್ನು ನಿಷೇಧಿಸಲಾಗಿದೆ.

೩. ವಾಣಿಜ್ಯ ಬೇಸಾಯ :

ವ್ಯಾಪಾರದ ಉದ್ದೇಶದ ಸಲುವಾಗಿ ಕೈಗೊಳ್ಳುವ ಬೇಸಾಯವನ್ನು ವಾಣಿಜ್ಯ ಬೇಸಾಯ ಎಂದು ಕರೆಯುವರು. ಹೊಗೆಸೊಪ್ಪು, ಅಡಿಕೆ, ತೆಂಗು, ಕಬ್ಬು, ಹತ್ತಿ, ಚಹ, ಕಾಫಿ, ರಬ್ಬರ್‌ ಇತ್ಯಾದಿ ವಾಣಿಜ್ಯ ಬೇಸಾಯದ ಬೆಳೆಗಳಾಗಿವೆ.

೪. ಮಿಶ್ರ ಬೇಸಾಯ :

ಕೃಷಿ ಭೂಮಿಯನ್ನು ಬೆಳೆಗಳನ್ನು ಬೆಳೆಯುವುದಕ್ಕೆಷ್ಟೇ ಅಲ್ಲದೆ ದನಕರು ಸಾಕಾಣಿಕೆ, ಕೋಳಿ ಸಾಕಾಣಿಕೆ, ಜೇನು ಸಾಕಾಣಿಕೆ, ಹಂದಿ ಸಾಕಾಣಿಕೆ, ರೇಷ್ಮೆ ಕೃಷಿ ಮುಂತಾದ ಉದ್ದೇಶಗಳಿಗಾಗಿಯೂ ಬಳಸಲಾಗುವದು. ಇದಕ್ಕೆ ʼಮಿಶ್ರಬೇಸಾಯʼ ಎಂದು ಕರೆಯುವರು.

೫. ತೋಟಗಾರಿಕಾ ಬೇಸಾಯ :

ಭಾರತದ ಮುಖ್ಯ ಬೇಸಾಯ ಪದ್ದತಿಗಳಲ್ಲಿ ತೋಟಗಾರಿಕೆ ಬೇಸಾಯವು ಸಹ ಒಂದು. ಕಾಫಿ, ಚಹ ಮತ್ತು ರಬ್ಬರ್‌ ತೋಟಗಾರಿಕೆ ಬೆಳೆಗಳಲ್ಲಿ ಮುಖ್ಯವಾದವು. ಒಂದೇ ಬೆಳೆಯನ್ನು ವಿಸ್ತಾರವಾದ ತೋಟಗಳಲ್ಲಿ ಬೆಳೆಯಲಾಗುವುದು.

ಬೆಳಗಳ ಮಾದರಿ

ಯಾವುದೇ ಒಂದು ಪ್ರದೇಶವು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಹಲವಾರು ಬೆಳೆಗಳಿಂದ ಆವರಿಸಿದ್ದು, ಇವುಗಳ ಅನುಪಾತವನ್ನು ಬೆಳೆ ಮಾದರಿ ಎಂದು ಕರೆಯುವರು. ಬೆಳೆ ಮಾದರಿಯಲ್ಲಿ ಮುಖ್ಯವಾಗಿ ಆಹಾರ ಧಾನ್ಯಗಳು ಮತ್ತು ಆಹಾರೇತರ ಅಥವಾ ವಾಣಿಜ್ಯ ಬೆಳೆ ಮಾದರಿಯಲ್ಲಿ ಮುಖ್ಯವಾಗಿ ಆಹಾರ ಧಾನ್ಯಗಳು ಮತ್ತು ಆಹಾರೇತರ ಅಥವಾ ವಾಣಿಜ್ಯ ಬೆಳೆಗಳೆಂದು ಎರಡು ಬೆಳೆಗಳ ಅನುಪಾತವನ್ನು ಕಾಣಬಹುದು. ಭಾರತದ ಯಾವುದೇ ಒಂದು ಪ್ರದೇಶದ ಬೆಳೆ ಮಾದರಿಯು ಮುಖ್ಯವಾಗಿ ಭೂಸ್ವರೂಪ, ವಾಯುಗುಣ, ಮಣ್ಣು, ನೀರಿನ ಪೂರೈಕೆ, ಆರ್ಥಿಕ ಅಂಶಗಳು, ಸಾಮಾಜಿಕ ಅಂಶಗಳು ಮತ್ತು ತಂತ್ರಜ್ಞಾನವನ್ನು ಅವಲಂಬಿಸಿದೆ.

ಬೆಳೆಯ ಮಾದರಿಯನ್ನು ನಿರ್ಧರಿಸುವ ಅಂಶಗಳು :

ಯಾವುದೇ ಒಂದು ಪ್ರದೇಶದ ಬೆಳೆಯು ಅಲ್ಲಿರುವ ನೈಸರ್ಗಿಕ, ಅರ್ಥಿಕ, ಸಾಮಾಜಿಕ ಮತ್ತು ರೈತರ ಮನೋಭಾವ ಮುಂತಾದ ಅಂಶಗಳಿಂದ ನಿರ್ಧರಿಸಲ್ಪಡುತ್ತದೆ.

೧. ನೈಸರ್ಗಿಕ ಅಂಶಗಳು :

ನೈಸರ್ಗಿಕ ಅಂಶಗಳಲ್ಲಿ ಭೂಸ್ವರೂಪ, ವಾಯುಗುಣ ಮತ್ತು ಮಳೆ ಪ್ರಮುಖವಾಗಿದ್ದು, ಬೆಳೆಯ ಮಾದರಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

೨. ಆರ್ಥಿಕ ಅಂಶಗಳು :

ಭಾರತದ ಕೆಲವು ವಿಶಾಲ ಹಿಡುವಳಿ ಹೊಂದಿರುವ ಪ್ರದೇಶಗಳಲ್ಲಿ ಮುಖ್ಯವಾಗಿ ಹೆಚ್ಚು ಬೆಲೆಕೊಡುವ ವಾಣಿಜ್ಯ ಉತ್ಪನ್ನಗಳನ್ನು ಬೆಳೆಯಲಾಗುತ್ತದೆ. ಇದರ ಮುಖ್ಯ ಉದ್ದೇಶ ಹೆಚ್ಚು ಆರ್ಥಿಕ ಲಾಭ ಪಡೆಯುವುದಾಗಿದೆ.

೩. ಸಾಮಾಜಿಕ ಅಂಶಗಳು :

ಪ್ರಮುಖವಾಗಿ ಸಾಮಾಜಿಕ ಅಂಶಗಳಾದ ಸಂಪ್ರದಾಯ, ಮೂಢನಂಬಿಕೆ, ಅನಕ್ಷರತೆ, ಮುಂತಾದ ಅಂಶಗಳು ಸಹ ಬೆಳೆಯ ಮಾದರಿಯನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

೪. ರೈತರ ಮನೋಭಾವ :

ಯಾವುದೇ ಒಂದು ಪ್ರದೇಶದ ಬೆಳೆ ಮಾದರಿಯಲ್ಲಿ ರೈತ ಧೋರಣೆಯು ಪ್ರಮುಖ ಪ್ರಭಾವ ಬೀರುತ್ತದೆ. ಉದಾ: ಉತ್ತರ ಕರ್ನಾಟಕದಲ್ಲಿ ರೈತರು ಮೊದಲು ಜೋಳ, ಗೋಧಿಯನ್ನು ಹೆಚ್ಚಾಗಿ ಬೆಳೆಯುತ್ತಲಿದ್ದರು. ಆದರೆ ಇತ್ತೀಚೆಗೆ ಆರ್ಥಿಕ ಲಾಭ ಕೊಡುವ ಸೂರ್ಯಕಾಂತಿ ಮತ್ತು ಶೇಂಗಾ, ತೊಗರಿ, ಈರುಳ್ಳಿ ಬೆಳೆಯನ್ನು ಬೆಳೆಯುತ್ತಿದ್ದಾರೆ.

ಮೇಲಿನ ಅಂಶಗಳಲ್ಲದೆ ನೀರಿನ ಪೂರೈಕೆ, ಸಾರಿಗೆ ಸಂಪರ್ಕ, ಮಾರುಕಟ್ಟೆ, ಸುಧಾರಿತ ತಳಿಗಳು ರಾಸಾಯಿನಿಕ ಗೊಬ್ಬರ, ಭೂಸುಧಾರಣೆ ಮುಂತಾದವುಗಳು ಸಹ ಬೆಳೆ ಮಾದರಿಯ ಮೇಲೆ ಪ್ರಭಾವ ಬೀರುತ್ತವೆ.

ವ್ಯವಸಾಯದ ಅವಧಿ

ಭಾರತದಲ್ಲಿ ವರ್ಷದ ಎಲ್ಲ ಅವಧಿಯಲ್ಲೂ ವಿವಿಧ ಪ್ರದೇಶಗಳಲ್ಲಿ ಬೆಳೆಗಳನ್ನು ಬೆಳೆಯಲಾಗುವುದು. ಹೀಗೆ ದೇಶದಾದ್ಯಂತ ವರ್ಷದಲ್ಲಿ ಒಂದಿಲ್ಲ ಒಂದು ಭಾಗದಲ್ಲಿ ಬೆಳೆಗಳನ್ನು ಬೆಳೆಯುವುದನ್ನು ಕಾಣಬಹುದು.

೧. ಮುಂಗಾರು ಅಥವಾ ಖರೀಫ್‌ ಬೇಸಾಯ :

ನೈಋತ್ಯ ಮನ್ಸೂನ್‌ ಮಾರುತಗಳ ಅವಧಿಯ ಬೇಸಾಯವನ್ನೇ ʼಮುಂಗಾರು ಬೇಸಾಯʼ ಅಥವಾ ʼಖರೀಫ್‌ ಬೇಸಾಯʼ ವೆಂದು ಕರೆಯುವರು. ಜೂನ್‌ ಅಥವಾ ಜುಲೈ ತಿಂಗಳಿನಲ್ಲಿ ಬಿತ್ತನೆ ಮಾಡಿ ಸೆಪ್ಟಂಬರ್‌ ಮತ್ತು ಅಕ್ಟೋಬರ್‌ ತಿಂಗಳಲ್ಲಿ ಕಟಾವು ಮಾಡುವರು. ದೇಶದ ಹೆಚ್ಚು ಭಾಗವು ಈ ಅವಧಿಯಲ್ಲಿ ಸಾಗುವಳಿಗೆ ಒಳಪಟ್ಟಿರುವುದು. ಭತ್ತ, ರಾಗಿ, ಹತ್ತಿ, ಜೋಳ, ಮಕ್ಕೆಜೋಳ, ಎಣ್ಣೆಕಾಳುಗಳು ಈ ಅವಧಿಯ ಮುಖ್ಯ ಬೆಳಗಳಾಗಿವೆ.

೨. ಹಿಂಗಾರು ಅಥವಾ ಚಳಿಗಾಲ :

ಇದು ಚಳಿಗಾಲದಲ್ಲಿ ಮಳೆ ಪಡೆಯುವ ಪ್ರದೇಶಗಳ ಮುಖ್ಯ ಸಾಗುವಳಿಯ ಅವಧಿಯಾಗಿದೆ. ವಾಯುವ್ಯ ಭಾರತದ ಪಂಜಾಬ್‌, ಹರಿಯಾಣ, ಜಮ್ಮ ಮತ್ತು ಕಾಶ್ಮೀರ, ಉತ್ತರ ಪ್ರದೇಶ ಹಾಗೂ ದಕ್ಷಿಣದಲ್ಲಿ ಆಂಧ್ರಪ್ರದೇಶ ಮತ್ತು ತಮಿಳುನಾಡುಗಳು ಈ ಅವಧಿಯ ಬೇಸಾಯಕ್ಕೆ ಒಳಪಟ್ಟಿವೆ. ವಾಯವ್ಯ ಭಾರತದಲ್ಲಿ ಗೋಧಿ ಅತಿ ಮುಖ್ಯ ರಬಿಬೆಳೆಯಾಗಿದೆ. ಚಳಿಗಾಲದಲ್ಲಿ ತಂಪಾದ ಸಮಶೀತೋಷ್ಣವಾದ ತುಂತುರು ಮಳೆಯಿಂದ ಕೂಡಿರುವ ವಾಯುಗುಣವಿರುವುದು. ಇದು ಗೋಧಿ ಬೇಸಾಯಕ್ಕೆ ಅತ್ಯಂತ ಸೂಕ್ತವಾಗಿದೆ. ಅಕ್ಟೋಬರ್-ನವೆಂಬರ್ ನಲ್ಲಿ ಬಿತ್ತನೆ ಮಾಡಿ ಫೆಬ್ರುವರಿ-ಮಾರ್ಚ ಅವಧಿಯಲ್ಲಿ ಕಟಾವು ಮಾಡುವರು.

೩. ಬೇಸಿಗೆಯ ಅಥವಾ ಜೇಡ್ ಬೇಸಾಯ :

ರಬಿ ಹಾಗೂ ಖರೀಪ್‌ ಬೇಸಾಯದ ನಡುವಿನ ಅವಧಿಯಲ್ಲಿಯೂ ಭಾರತದ ಹಲವು ಕಡೆಗಳಲ್ಲಿ ಬೇಸಾಯ ಕಂಡು ಬರುವುದು. ಬೇಸಿಗೆಯ ಈ ಬೇಸಾಯವನ್ನೇ ʼಜೇಡ್‌ ಬೇಸಾಯʼ ವೆಂದು ಕರೆಯುವರು. ದ್ವಿದಳ ಧಾನ್ಯಗಳಾದ ಉದ್ದು, ಹೆಸರು, ಎಣ್ಣೆಕಾಳುಗಳು ಮತ್ತು ತರಕಾರಿಗಳನ್ನು ಈ ಅವಧಿಯಲ್ಲಿ ಬೆಳೆಯುವರು.

ವಾಣಿಜ್ಯ ಬೆಳೆಗಳು

೧. ಕಬ್ಬು :

ಇದು ಭಾರತದ ಅತಿಮುಖ್ಯ ವಾಣಿಜ್ಯ ಬೆಳೆಯಾಗಿದೆ. ಭಾರತದಲ್ಲಿ ಕಬ್ಬಿನ ಬೇಸಾಯವು ಅತೀ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿದೆ. ಭಾರತವು ಇದರ ಮೂಲವಾಗಿದ್ದು, ಪ್ರಪಂಚದಲ್ಲಿ ಎರಡನೆಯ ಸ್ಥಾನವನ್ನು ಹೊಂದಿರುವುದು. ಇದು ವಾರ್ಷಿಕ ಬೆಳೆಯಾಗಿದ್ದು ನೀರಾವರಿ ಪ್ರದೇಶದಲ್ಲಿ ಬೆಳೆಯುವ ಬೆಳೆಯಾಗಿದೆ. ಈ ಬೆಳೆಗೆ ಹೆಚ್ಚು ಉಷ್ಣಾಂಶ ಮತ್ತು ತೇವಾಂಶ ಹೊಂದಿರುವ ವಾಯುಗುಣ ಅವಶ್ಯಕ. ಇದಕ್ಕೆ ೨೧ʻ ರಿಂದ ೨೬ʻ ಸೆಲ್ಸಿಯಸ್‌ ಉಷ್ಣಾಂಶ, ೧೦೦ ರಿಂದ ೧೫೦ ಸೆಂ.ಮೀ ವಾರ್ಷಿಕ ಮಳೆ ಬೇಕಾಗುವುದು. ಮೆಕ್ಕಲು ಮತ್ತು ಕಪ್ಪು ಮಣ್ಣಿನಲ್ಲಿ ಕಬ್ಬು ಚೆನ್ನಾಗಿ ಬೆಳೆಯುತ್ತದೆ. ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ಗುಜರಾತ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಕಬ್ಬು ಮುಖ್ಯ ವಾಣಿಜ್ಯ ಬೆಳೆ. ಭಾರತದ ಬಹುತೇಕ ರಾಜ್ಯಗಳಲ್ಲಿ ಇದನ್ನು ಬೆಳೆಯುತ್ತಾರೆ.

೨. ಹೊಗೆಸೊಪ್ಪು :

ಭಾರತವು ಇದರ ಉತ್ಪಾದನೆಯಲ್ಲಿ ಜಗತ್ತಿನಲ್ಲಿಯೇ ಮೂರನೇ ಸ್ಥಾನವನ್ನು ಪಡೆದಿದೆ. ಹೊಗೆಸೊಪ್ಪನ್ನು ಬೀಡಿ, ಸಿಗರೇಟು, ಹುಕ್ಕಾ, ನಸ್ಯಗಳ ತಯಾರಿಕೆ ಹಾಗೂ ತಿನ್ನಲು ಬಳಸುತ್ತಾರೆ. ಹೊಗೆಸೊಪ್ಪು ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂಬುದು ಗೊತ್ತಿದ್ದರೂ ಇಂದು ಪ್ರಪಂಚದ ಮಾರುಕಟ್ಟೆಯಲ್ಲಿ ಹೊಗೆಸೊಪ್ಪಿಗೆ ಮತ್ತು ಅದರಿಂದ ತಯಾರಿಸಿದ ವಸ್ತುಗಳಿಗೆ ಬೇಡಿಕೆಯು ದಿನೇ ದಿನೇ ಹೆಚ್ಚಾಗುತ್ತಿದೆ. ಇದು ಉಷ್ಣವಲಯದ ಬೆಳೆಯಾಗಿದ್ದು, ೨೧ʼ ರಿಂದ ೨೭ʼ ಸೆಲ್ಸಿಯಸ್‌ ಉಷ್ಣಾಂಶ ಅವಶ್ಯಕ. ಸಾಧಾರಣ ಮಳೆ ಬೀಳುವ ಪ್ರದೇಶ ಅವಶ್ಯವಿದ್ದು, ಸರಾಸರಿ ೫೦ ಸೆಂ. ಮೀ. ಮಳೆ ಬೇಕು. ಮರಳು ಮಿಶ್ರಿತ ಮಣ್ಣು, ರಾಸಾಯಮಿಕ ಗೊಬ್ಬರ ಅವಶ್ಯಕ. ಆಂಧ್ರಪ್ರದೇಶ, ಗುಜರಾತ, ಉತ್ತರಪ್ರದೇಶ, ಕರ್ನಾಟಕದ ನಿಪ್ಪಾಣಿ ಬೆಳಗಾವಿ ಜಿಲ್ಲೆ ನಗರವು ಹೊಗೆಸೊಪ್ಪು ಮಾರುಕಟ್ಟೆ ಕೇಂದ್ರವಾಗಿದೆ.̳

೩. ನಾರಿನ ಬೆಳೆ :

ಹತ್ತಿ ಮತ್ತು ಸೆಣಬು ಭಾರತವು ಉತ್ಪಾದಿಸುತ್ತಿರುವ ಅತಿ ಮುಖ್ಯ ನಾರಿನ ಬೆಳೆಗಳಾಗಿದ್ದು ಇವು ಹತ್ತಿ ಬಟ್ಟೆ ಕೈಗಾರಿಕೆ ಹಾಗೂ ಸೆಣಬಿನ ಕೈಗಾರಿಕೆಗಳನ್ನು ಪೋಷಿಸಿವೆ.

೧) ಹತ್ತಿ :

ಭಾರತವು ಉತ್ಪಾದಿಸುವ ನಾರಿನ ಬೆಳೆಗಳಲ್ಲಿ ಹತ್ತಿ ಪ್ರಮುಖವಾದುದು. ಕಚ್ಚಾ ಹತ್ತಿಯನ್ನು ಹತ್ತಿ ಗಿರಣಿಗಳಲ್ಲಿ ಕಚ್ಚಾ ವಸ್ತುವಾಗಿ ಬಳಸುವುದಲ್ಲದೆ, ಅಧಿಕ ಪ್ರಮಾಣದ ಹತ್ತಿಯನ್ನು ರಫ್ತುಮಾಡಿ ವಿದೇಶಿ ವಿನಿಮಯವನ್ನು ಗಳಿಸುತ್ತದೆ. ಭಾರತವು ಹತ್ತಿ ಬೆಳೆಯುವ ಪ್ರದೇಶದಲ್ಲಿ ಪ್ರಪಂಚದಲ್ಲಿ ಮೊದಲ ಹಾಗೂ ಉತ್ಪಾದನೆಯಲ್ಲಿ ಎರಡನೆ ಸ್ಥಾನದಲ್ಲಿದೆ. ಹತ್ತಿಯು ಉಷ್ಣ ವಲಯ ಮತ್ತು ಉಪ ಉಷ್ಣವಲಯದ ಬೆಳೆ.

೨) ಪಾನೀಯ ಬೆಳೆ :

ಭಾರತವು ಉತ್ಪಾದಿಸುವ ಮುಖ್ಯ ತೋಟಗಾರಿಕಾ ಬೆಳೆಗಳಾದ ಚಹಾ ಮತ್ತು ಕಾಫಿ ಮುಖ್ಯ ಪಾನೀಯ ಬೆಳೆಗಳಾಗಿವೆ. ಭಾರತವು ಪ್ರಪಂಚದಲ್ಲಿ ಈ ಬೆಳೆಗಳನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ಪ್ರಮುಖ ರಾಷ್ಟ್ರವಾಗಿದೆ.

೪.ಚಹ :

ಚಹ ಭಾರತದಲ್ಲಿ ಮಾತ್ರವಲ್ಲದೇ ಪ್ರಪಂಚದಲ್ಲಿಯೇ ಅತಿ ಮುಖ್ಯವಾದ ಪಾನೀಯವಾಗಿದೆ. ಭಾರತವು ಚಹದ ಉತ್ಪಾದನೆಯಲ್ಲಿ ಪ್ರಪಂಚದಲ್ಲಿ ಮೊದಲ ಸ್ಥಾನವನ್ನು ಪಡೆದಿದೆ. ಬಹುಕಾಲದವರೆಗೆ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತವು ರಫ್ತಿನ ಏಕಸ್ವಾಮ್ಯತೆಯನ್ನು ಹೊಂದಿತ್ತು. ಚಹವು ಅಪಾರ ಉದ್ಯೋಗ ಅವಕಾಶಗಳನ್ನು ಒದಗಿಸುವುದರಿಂದ ಪ್ರಾಮುಖ್ಯತೆಯನ್ನು ಗಳಿಸಿದೆ. ಚಹವು ಉಷ್ಣವಲಯ ಮತ್ತು ಉಪ ಉಷ್ಣವಲಯಗಳಲ್ಲಿ ಬೆಳೆಯುವ ನಿತ್ಯ ಹರಿದ್ವರ್ಣದ ಬಹುವಾರ್ಷಿಕ ಬೆಳೆಯಾಗಿದ್ದು, ಸರಾಸರಿ ಉಷ್ಣಾಂಶ ೨೧ʼ ಸೆಲ್ಸಿಯಸ್‌ ಉಪಯುಕ್ತ.

FAQ

ಪ್ರಪಂಚದಲ್ಲೆ ಸೋಮಾರಿ ಜನರನ್ನು ಹೆಚ್ಚು ಹೊಂದಿರುವ ದೇಶ ಯಾವುದು?

ಕುವೈಟ್.

ಕಿಂಗ್‌ ಕೋಬ್ರಾ ಹಾವಿನ ಒಂದು ಚುಕ್ಕೆ ವಿಷ ಎಷ್ಟು ಮಂದಿಯನ್ನು ಕೊಳ್ಳಬಹುದು?

೩೦ ಮಂದಿ.

ಇತರೆ ವಿಷಯಗಳು :

ಪ್ರಕೃತಿ ವಿಕೋಪ ಬಗ್ಗೆ ಪ್ರಬಂಧ

ಪರಿಸರ ಸಂರಕ್ಷಣೆ ಕುರಿತು ಪ್ರಬಂಧ ಬರೆಯಿರಿ

LEAVE A REPLY

Please enter your comment!
Please enter your name here