Yada Yada Hi Dharmasya Sloka in Kannada | ಯದಾ ಯದಾ ಹಿ ಧರ್ಮಸ್ಯ

0
2198
Yada Yada Hi Dharmasya Sloka in Kannada
Yada Yada Hi Dharmasya Sloka in Kannada

Contents


Yada Yada Hi Dharmasya Sloka in Kannada

yada yada hi dharmasya sloka in kannada lyrics 
yada yada hi dharmasya sloka in kannada text

ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ|
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಂ||

ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಂ|
ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ||

 

ಶ್ಲೋಕದ ಅರ್ಥ

ಯಾವಾಗ ಧರ್ಮದ ಅವನತಿಯಾಗುವುದೋ ಅಧರ್ಮದ ಉನ್ನತಿಯಾಗುವುದೋ ಆಗ ನಾನು ಅವತಾರ ಮಾಡುತ್ತೇನೆ. ಸಾಧುಗಳ ರಕ್ಷಣೆಗಾಗಿ, ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮದ ಸಂಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತೇನೆ.

– ಭಗವಾನ್ ಶ್ರೀಕೃಷ್ಣ, ಭಗವದ್ಗೀತೆ.    

Yada Yada Hi Dharmasya Sloka in Kannada
Yada Yada Hi Dharmasya Sloka in Kannada

ಇದು ಜಗನ್ನಿಯಾಮಕ ಶ್ರೀಕೃಷ್ಣ ಅರ್ಜುನನಿಗೆ ಗೀತೋಪದೇಶದಲ್ಲಿನ ಉವಾಚ …

ಸೃಷ್ಠಿಯಲ್ಲಿ ಯಾವಾಗ ಅನ್ಯಾಯ , ಅಧರ್ಮಗಳು ಮೇರೆ ಮೀರಿ ಹಿಂಸೆ ಹೆಚ್ಚಾಗುವುದೋ ಆಗ ನಾನು ಧರ್ಮ ರಕ್ಷಣೆಗೆ , ಶಿಷ್ಟರ ಉಳಿವಿಗೆ ಮತ್ತೆ ಅವತಾರ ಎತ್ತಿ ಬರುತ್ತೇನೆಂದು ಅಭಯ ನೀಡಿದ್ದಾನೆ .

ದ್ವಾಪರಯುಗದಲ್ಲಿ ಕಂಸ ರಾಜನ ಸ್ವಾರ್ಥ ಪ್ರವೃತ್ತಿಯ ಆಳ್ವಿಕೆ ಹಾಗೂ ಅಧರ್ಮದ ನೀತಿಯಿಂದ ಇಡಿಯ ಕಂಗೆಟ್ಟಯ ದಿಕ್ಕೆಟ್ಟ ವೇಳೆ ಶ್ರೀಹರಿ ಅವತಾರವೆತ್ತುತ್ತಾನೆ .

ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ 8 ನೆಯ ಅವತಾರವಾಗಿ ಶ್ರೀಕೃಷ್ಣನಾಗಿ ವಸುದೇವ ಪುತ್ರನಾಗಿ , ದೇವಕಿಯ ಗರ್ಭಾಂಶ ಸಂಭೂತನಾಗಿ ಅಳಿವಿನಂಚಿನಲ್ಲಿದ್ದ ಧರ್ಮ ರಕ್ಷಣೆಗಾಗಿ ಜೀವ ಸಂಕುಲದ ಒಳಿತಿಗಾಗಿ ಭುವಿಯಲ್ಲಿ ಆವಿರ್ಭವಿಸುತ್ತಾನೆ .

ಅದೂ ಎಲ್ಲಿ ? ಕಂಸ ಕೂಡಿಟ್ಟ ಮಥುರಾದ ಜೈಲಿನಲ್ಲಿ … ವಸುದೇವ ದೇವಕಿಯ ಕಂದನಿಂದ ತನ್ನ ಅಂತ್ಯವೆಂಬ ಅಶರೀರ ವಾಣಿಯಿಂದ ಮಾಹಿತಿ ಪಡೆದ ಕಂಸ ಮಗುವನ್ನು ಕೊಲ್ಲಲು ಅಣಿಯಾಗುತ್ತಾನೆ .

ಕಂಸನ ಮನಃಸ್ಥಿತಿ ಅರಿತ ವಸುದೇವ ಮಧ್ಯರಾತ್ರಿಯಲ್ಲಿ ಜನಿಸಿದ ತನ್ನ ಮಗುವನ್ನು ಎತ್ತಿಕೊಂಡು ಉಕ್ಕಿ ಹರಿಯುತ್ತಿದ್ದ ಯಮುನೆಯನ್ನು ದಾಟಿ ದ್ವಾರಕ ನಗರ ತಲುಪಿ ಯಶೋಧೆಯ ಮಡಿಲಿಗೆ ಕಂದನನ್ನು ನೀಡುತ್ತಾನೆ . ಅಲ್ಲಿಂದ ಶ್ರೀಕೃಷ್ಣನ ಬಾಲಲೀಲೆ ಜಗತ್ತಿಗೆ ತೋರಲಾರಂಭಿಸುತ್ತದೆ .

 

ಶ್ರೀಕೃಷ್ಣನ ಇರುವಿಕೆಯನ್ನರಿತ ಕಂಸ ಆತನನ್ನು ಕೊಲ್ಲಲು ಅನೇಕ ವಾಮಮಾರ್ಗಗಳನ್ನು ಬಳಸಿ ತನ್ನ ಶಕ್ತಿಯನ್ನೆಲ್ಲಾ ಪ್ರಯೋಗಿಸಿ ಕೊನೆಗೆ ವಿಫಲನಾಗುತ್ತಾನೆ . ನಂತರದ ಬೆಳವಣಿಗೆಗಳಲ್ಲಿ ಶ್ರೀಕೃಷ್ಣ ಸಂಬಂಧದಲ್ಲಿ ತನಗೆ ಸೋದರ ಮಾವನಾದರೂ ಧರ್ಮದ ಉಳಿವಿಗಾಗಿ ಕಂಸನನ್ನು ವಧಿಸುತ್ತಾನೆ .

ಮುಂದೆ ನಡೆದ ಪಾಂಡವ – ಕೌರವರ 18 ದಿನಗಳ ಮಹಾ ಯುದ್ಧದಲ್ಲೂ ಪಾಂಡವರ ಗೆಲುವಿಗೆ ಪ್ರಮುಖ ಕಾರಣನಾಗಿ ಧರ್ಮವನ್ನು ಎತ್ತಿ ಹಿಡಿಯುತ್ತಾನೆ ಈ ಜಗನ್ನಿಯಾಮಕ . ಇದಿಷ್ಟೂ ನೀವು ನಾವುಗಳು ಚಿಕ್ಕಂದಿನಿಂದಲೂ ಕೇಳಿಕೊಂಡು ಬಂದಿರುವ ಶ್ರೀಕೃಷ್ಣನ ಮಹಿಮೆ .

 

ಅಂದು ಕಂಸ ತಾನು ಸರ್ವಶಕ್ತ , ಅಂತ್ಯವನ್ನು ಕಾಣದವ , ಸಮಸ್ತ ಸೃಷ್ಠಿಯೇ ತನ್ನಿಂದ  ತನ್ನ ಅಧೀನ ಎಂಬ ಅಹಂಕಾರದಿಂದ ಮನುಕುಲ ಹಾಗೂ ಧರ್ಮ ಪೀಡಕನಾಗಿ ಬದುಕಿದ್ದ . ಆದರೆ ಇಂದು ಕಂಸನಿಲ್ಲ ಆದರೂ ಸಹ ಆತನ ಗುಣಗಳು ನಮ್ಮ ನಡುವೆ ಆಗಾಗ ಬೆಳಕಿಗೆ ಬರುತ್ತಿರುತ್ತವೆ . ಮಾನವ ಜನ್ಮ ಅನಿಶ್ಚಿತ .

ಯಾವ ಸಮಯದಲ್ಲಿ ಕಾಲನ ಕರೆ ಬರುವುದೋ ಆ ದೇವರೊಬ್ಬನೇ ಬಲ್ಲನೇ ಹೊರತು ಈ ಗುಟ್ಟನ್ನು ಮಾತ್ರ ಸೃಷ್ಟಿಕರ್ತ ಬಿಟ್ಟುಕೊಟ್ಟಿಲ್ಲ . ವೇಗವಾಗಿ ಬೆಳೆಯುತ್ತಿರುವ ಇತ್ತೀಚಿನ ಜೀವನ ಪದ್ದತಿಯಲ್ಲಿ ಸ್ಮಶಾನವನ್ನು ಪ್ರತಿದಿನ ನೋಡಿಕೊಂಡು ತಿರುಗಾಡುತ್ತೇವೆ . ಆದರೂ ಮನುಷ್ಯನಲ್ಲಿ ಹಿಂಸಾ ಅಹಂಕಾರ ಮನೋಭಾವ …

ಶ್ಲೋಕದ ಅರ್ಥ

ಇನ್ನು ದುರ್ಯೋಧನ ಈತ ಸಾಮ್ರಾಜ್ಯಕ್ಕಾಗಿ ತನ್ನ ಸೋದರರ ಜೊತೆ ಮೋಸ , ವಂಚನೆ , ಕುತಂತ್ರ ಬುದ್ದಿಯಿಂದ ಬದುಕಿದಾತ ಇಂದಿಗೆ ಇವನೂ ಸಹ ಇಲ್ಲ ಆಸರೂ ಸಹ ನಮ್ಮ ನಡುವೆ ಇನ್ನೂ ಜೀವಂತ.

ಮನುಷ್ಯ ತನ್ನ ಸಹೋದರರೊಂದಿಗೆ ಒಂದು ತಾಯಿ ಗರ್ಭ ಹಂಚಿಕೊಂಡು ಬಂದಿದ್ದನ್ನೂ ಸಹ ಮರೆತು ಅಡಿ ಅಂಗುಲ ಆಸ್ತಿಯ

ದುರಾಸೆಗೆ ಬಿದ್ದು ದಾಯಾದಿಗಳಾಗಿ ಅತೃಪ್ತ ಜೀವನವನ್ನು ನಡೆಸುತ್ತಿರುವುದು ನಮ್ಮ ನಡುವೆ ಎಷ್ಟೋ ಉದಾಹರಣೆಗಳಿವೆ

ಇಂತಹ ದರ್ಯೋಧನ ಗುಣಗಳಿಗೆ . ಅಂತ್ಯವಿಲ್ಲವೇ ….  ನೆಲ , ಜಲ , ಭಾಷೆ ,

ಆಹಾರಗಳನ್ನು ತಾಯಿಗೆ ಹೋಲಿಸಿ ಧನ್ಯತಾ ಭಾವದಿಂದ ಬದುಕುತ್ತಿರುವವರು ನಾವು ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಃ ಪದ್ದತಿಯನ್ನು ನಂಬಿರುವವರು ನಾವು .

ಆದರೂ ನಮ್ಮ ನಡುವೆ ದುಶ್ಯಾಸನ ಗುಣಗಳು ಇನ್ನೂ ಜೀವಂತ , ಕಾಮಾಂಧರ ಕಣ್ಣನ್ನು ಮೆಚ್ಚಿಸಲು ದೌಪದಿಯ ವಸ್ತ್ರಾಪಹರಣದಂತಹ ನೀಚ ಕೃತ್ಯಕ್ಕೆ ಕೈ ಹಾಕಿದಾತ .

ಈಗಲೂ ಕೆಲವು ನೀಚ ಪುರುಷರು ಸ್ತ್ರೀಯ ಮೇಲೆ ಬಲಾತ್ಕಾರ ಅತ್ಯಾಚಾರಗಳ ಮೂಲಕ ಕೀಳಾಗಿ ನಡೆಸಿಕೊಂಡು ದುಶ್ಯಾಸನನನ್ನು ನೆನಪಿಸುತ್ತಿರುವುದು ಶೋಚನೀಯ ..

ಮನುಷ್ಯ ತನ್ನ ಬುದ್ಧಿ ಶಕ್ತಿಯಲ್ಲಿ ಕಂಸ , ದುರ್ಯೋಧನ , ದುಶ್ಯಾಸನ , ಧೃತರಾಷ್ಟ್ರ ಗುಣಗಳಿಗೆ ಇರಲು ಅವಕಾಶ ಮಾಡಿಕೊಟ್ಟ ಆದರೆ ಶ್ರೀಕೃಷ್ಣನಿಗೆ , ಅವನ ವಿಚಾರಗಳಿಗೆ , ತತ್ವಕ್ಕೆ ಸಮಯ ತನ್ನ ಬುದ್ಧಿಯಲ್ಲಿ ಜಾಗ ಕೊಡುವ ವಿಚಾರದಲ್ಲಿ ಬಹುಪಾಲು ಎಡವಿದ .

ನೀವು ನಾವುಗಳು ಹೃದಯವೆಂಬ ಗರ್ಭಗುಡಿಯಲ್ಲಿ ಶ್ರೀಕೃಷ್ಣನನ್ನು ನೆಲೆ ಮಾಡಿಕೊಳ್ಳಬೇಕಾಗಿದೆ .

ಒಮ್ಮೆ ಹೃದಯದಿ ಶ್ರೀಕೃಷ್ಣ ನೆಲೆಯಾದನೆಂದರೆ ಬುದ್ಧಿಯನ್ನಾವರಿಸಿರುವ ಕಂಸ , ದುರ್ಯೋಧನ , ದುಶ್ಯಾಸನ , ರಾಕ್ಷಸಿ ಗುಣಗಳ ಜೊತೆಗೆ ಧೃತರಾಷ್ಟ್ರ ಕುರುಡು ಗುಣಗಳು ಸಂಹಾರವಾಗುವುದು ಖಂಡಿತ .

ಪ್ರತಿಯೊಬ್ಬರೂ ತಮ್ಮಲ್ಲಿ ಶ್ರೀಕೃಷ್ಣನನ್ನು ನೆಲೆ ಮಾಡಿಕೊಂಡು ಧರ್ಮವನ್ನು ಗೌರವಿಸಿ ಪಾಲಿಸಿದರೆ ನಮಗರಿವಿಲ್ಲದೆ ನಮ್ಮ ನಡುವೆ ಧರ್ಮದ ಉಳಿವಿಗೆ ಭಗವಂತ ನಮ್ಮ ಜೊತೆ ಕೈ ಜೋಡಿಸಲು ಅವತರಿಸಿರುತ್ತಾನೆ .

ಹಾಗೆಯೇ , ಇಡಿಯ ಜಗತ್ತು ಹೇಗೆ ನಡೆಯಬೇಕು , ಪ್ರತಿ ಮನುಷ್ಯ ತನ್ನ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು , ಕೌಟುಂಬಿಕ ಹಾಗೂ ಸಾಮಾಜಿಕ ಜೀವನ ಹೇಗಿದ್ದರೆ ಚೆಂದ ಎಂಬ ಕುರಿತಾಗಿನ ಸಮಸ್ತವನ್ನೂ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳಿದ್ದಾನೆ .

ಇದೊಂದನ್ನು ಪ್ರತಿಯೊಬ್ಬರೂ ಸರಿಯಾಗಿ ಪಠಣ ಮಾಡಿ , ಅರ್ಥೈಸಿಕೊಂಡು , ಅಳವಡಿಸಿಕೊಂಡರೆ ಜೀವನ ,

Yada Yada Hi Dharmasya Sloka in Kannada

yada yada hi dharmasya kannada song

ಇತರ ವಿಷಯಗಳು

ಸುಬ್ರಹ್ಮಣ್ಯನ ಅಷ್ಟೋತ್ತರ

ಜಗದೋದ್ಧಾರನ

kannadanew Telegram Channel

LEAVE A REPLY

Please enter your comment!
Please enter your name here