ಮಹಿಳಾ ದಿನಾಚರಣೆ ಪ್ರಬಂಧ|Mahila Dinacharane Prabandha in Kannada

0
1699
ಮಹಿಳಾ ದಿನಾಚರಣೆ ಪ್ರಬಂಧ|Mahila Dinacharane Prabandha
ಮಹಿಳಾ ದಿನಾಚರಣೆ ಪ್ರಬಂಧ|Mahila Dinacharane Prabandha

ಮಹಿಳಾ ದಿನಾಚರಣೆ ಪ್ರಬಂಧ, Mahila Dinacharane Prabandha international women’s day essay in kannada


Contents

ಮಹಿಳಾ ದಿನಾಚರಣೆ ಪ್ರಬಂಧ

ಮಹಿಳಾ ದಿನಾಚರಣೆ ಪ್ರಬಂಧ | Mahila Dinacharane Prabandha

ಮಹಿಳಾ ದಿನಾಚರಣೆ ಪ್ರಬಂಧ ,Mahila Dinacharane Prabandha in Kannada, mahila dinacharane Essay March 8

ಪೀಠಿಕೆ:

ಮಹಿಳಾ ದಿನಾಚರಣೆಯನ್ನು ಅಂತರಾಷ್ಟ್ರೀಯ ಮಹಿಳಾ ದಿನವನ್ನಾಗಿ ಪ್ರತಿ ವರ್ಷ ಮಾರ್ಚ್‌ 8 ರಂದು ಆಚರಿಸುತ್ತೇವೆ.ಈ ದಿನದ ವಿಶೇಷತೆ ಏನೆಂದರೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯು ಪ್ರಸ್ತುತ ಅವಧಿಯಲ್ಲಿ ಬಹಳಷ್ಟು ಮಹತ್ವವನ್ನು ಹೊಂದಿದೆ. ಆದಾಗ್ಯೂ, 1900 ರ ದಶಕದ ಆರಂಭದಿಂದಲೂ ಈ ದಿನವನ್ನು ಸಾಧನೆ ಮಾಡಿದ ಮಹಿಳಾಮಣಿಗಳ ಸವಿನೆನಪಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಮಹಿಳೆಯರು ತಮ್ಮ ಮನೆಯಿಂದ ದೇಶದ ಪ್ರಗತಿಗೆ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಶ್ರಮಪಟ್ಟು ಕೊಡುಗೆ ನೀಡಿದ್ದಾರೆ. ಅವರ ತ್ಯಾಗ, ಶ್ರಮಕ್ಕೆ 365 ದಿನ ತ್ಯಾಗ ಮಾಡಿದರೂ ಕಡಿಮೆಯೇ ಆದರೆ ಈ ದಿನ ಮಹಿಳೆಯರು ಮಾಡುವ ಪ್ರತಿ ಕಾರ್ಯಗಳಿಗೂ ಸಮಾಜ ಗೌರವಿಸುತ್ತದೆ. ಮಹಿಳೆಯರು ತಮ್ಮ ಕೈಗಳನ್ನು ಪ್ರಯತ್ನಿಸದ ಯಾವುದೇ ಕ್ಷೇತ್ರವಿಲ್ಲ.

ಪ್ರಬಂಧ ವಿಸ್ತರಣೆ:

ಮಹಿಳಾ ದಿನಾಚರಣೆಯನ್ನು ಆಚರಿಸಲು ಕಾರಣ:

ಮಹಿಳೆಯರು ಯಾವ ಪುರುಷರಿಗಿಂತ ನಾವೇನು ಕಮ್ಮಿ ಇಲ್ಲ ಎಂದು ನಿರೂಪಿಸಿದ್ದಾರೆ. , ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಸಾಧನೆಗಳನ್ನು ಗೌರವಿಸಲು ಈ ದಿನವು ಮುಖ್ಯವಾಗಿದೆ. ಮಹಿಳೆಯರು ತಮ್ಮ ಅಂತ್ಯವಿಲ್ಲದ ಶಕ್ತಿ, ಸಮರ್ಪಣೆ ಮತ್ತು ನಂಬಿಕೆಯಿಂದ ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡಿದ್ದಾರೆ, ಅವರು ಶಿಕ್ಷಕರು, ಗೃಹಿಣಿಯರು, ಅರ್ಥಶಾಸ್ತ್ರಜ್ಞರು, ಇಂಜಿನಿಯರ್‌ಗಳು ಅಥವಾ ಪ್ರವರ್ತಕರು. ಮಹಿಳೆಯರು ಪ್ರತಿದಿನ ಸಾಮಾಜಿಕ ತೊಂದರೆಗಳಿಂದ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಇವೆಲ್ಲವನ್ನು ತಡೆಯುವ ಸಲುವಾಗಿ ಈ ದಿನವನ್ನು ಕಾರ್ಯ ರೂಪಕ್ಕೆ ತಂದಿದ್ದಾರೆ.

1908 ರಲ್ಲಿ, ಒಟ್ಟು 15,000 ಮಹಿಳೆಯರು ನ್ಯೂಯಾರ್ಕ್ ನಗರದ ಮೂಲಕ ಮೆರವಣಿಗೆಯನ್ನು ನಡೆಸಿದರು, ಉತ್ತಮ ವೇತನ, ಕಡಿಮೆ ಕೆಲಸದ ಸಮಯ ಮತ್ತು ಮತದಾನದ ಹಕ್ಕುಗಳನ್ನು ಒತ್ತಾಯಿಸಿದರು. ಫೆಬ್ರವರಿ 28 ರಂದು, ಯುನೈಟೆಡ್ ಸ್ಟೇಟ್ಸ್ನಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. 1913 ರವರೆಗೆ, ಈ ದಿನವನ್ನು ಫೆಬ್ರವರಿ ಕೊನೆಯ ಭಾನುವಾರದಂದು ಆಚರಿಸಲಾಗುತ್ತಿತ್ತು.ಪ್ರಪಂಚದಾದ್ಯಂತ, ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲು ಚಳುವಳಿಗಳು ಅಥವಾ ಮೆರವಣಿಗೆ ಸೇರಿದಂತೆ ವಿವಿಧ ಘಟನೆಗಳು ನಡೆಯುತ್ತವೆ. ಮಹಿಳೆಯರನ್ನು ಸಮಾನವಾಗಿ ಪರಿಗಣಿಸದ ಕೆಲವು ದೇಶಗಳಿವೆ. ಈ ದೇಶಗಳಲ್ಲಿ ಮಹಿಳೆಯರ ವಿಮೋಚನೆಗಾಗಿ ಪ್ರತಿಭಟನೆಗಳನ್ನು ಆಚರಿಸಲಾಗುತ್ತದೆ. ಎಷ್ಟೋ ಜನರಿಗೆ ಹೆಣ್ಣಿನ ಪಾತ್ರ ಮನೆಕೆಲಸಕ್ಕೆ ಮಾತ್ರ ಸೀಮಿತವಾಗಿರುತ್ತದೆ ಎಂದು ಎಷ್ಟೋ ಜನರ ಕಲ್ಪನೆಯಲ್ಲಿ ಹಾಸುಹೊಕ್ಕಾಗಿದೆ.

ಮಹಿಳಾ ದಿನಾಚರಣೆಯ ಆರಂಭ:

ಅಂತರಾಷ್ಟ್ರೀಯ ಮಹಿಳಾ ದಿನವನ್ನು ಮೊದಲು 1909 ರಲ್ಲಿ ಅಮೆರಿಕಾದಲ್ಲಿ ಆಚರಿಸಲಾಯಿತು. ನಂತರ ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ ನಗರದಲ್ಲಿ ಮತದಾನದ ಹಕ್ಕು, ಕಡಿಮೆ ಕೆಲಸದ ಸಮಯವನ್ನು ಮತ್ತು ಉತ್ತಮ ವೇತನಕ್ಕಾಗಿ ಒತ್ತಾಯಿಸಿದರು.ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನ 1975 ರಲ್ಲಿ ವಿಶ್ವಸಂಸ್ಥೆಯು ಮಹಿಳಾ ದಿನಾಚರಣೆಯನ್ನು ಥೀಮ್‌ನೊಂದಿಗೆ ಆಚರಿಸಲು ಪ್ರಾರಂಭಿಸಿತು.

ಪ್ರಸಿದ್ಧ ಜರ್ಮನ್ ಕಾರ್ಯಕರ್ತ ಕ್ಲಾರಾ ಜೆಟ್ಕಿನ್ ಅವರ ಹುರುಪಿನ ಪ್ರಯತ್ನಗಳಿಗೆ ಧನ್ಯವಾದಗಳು, 1910 ರಲ್ಲಿ ಅಂತರರಾಷ್ಟ್ರೀಯ ಸಮಾಜವಾದಿ ಕಾಂಗ್ರೆಸ್ ಮಹಿಳಾ ದಿನಾಚರಣೆ ಮತ್ತು ಈ ದಿನದ ಸಾರ್ವಜನಿಕ ರಜಾದಿನದ ಅಂತರರಾಷ್ಟ್ರೀಯ ಪಾತ್ರವನ್ನು ಒಪ್ಪಿಕೊಂಡಿತು. ಇದರ ಪರಿಣಾಮವಾಗಿ, ಮಾರ್ಚ್ 19, 1911 ರಂದು, ಮೊದಲ IWD ಆಸ್ಟ್ರಿಯಾ, ಡೆನ್ಮಾರ್ಕ್ ಮತ್ತು ಜರ್ಮನಿಯಲ್ಲಿ ನಡೆಯಿತು.ಮಹಿಳಾ ದಿನದ ದಿನಾಂಕವನ್ನು 1921 ರಲ್ಲಿ ಮಾರ್ಚ್ 8 ಕ್ಕೆ ಬದಲಾಯಿಸಲಾಯಿತು. ಅಂದಿನಿಂದ, ಮಹಿಳಾ ದಿನವನ್ನು ಪ್ರಪಂಚದಾದ್ಯಂತ ಮಾರ್ಚ್ 8 ರಂದು ಮಾತ್ರ ಆಚರಿಸಲಾಗುತ್ತದೆ.

ಮಹಿಳೆಯರು ಸಾಧನೆಗೈದ ಕ್ಷೇತ್ರಗಳು:

ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕ, ಕ್ರೀಡೆಯ ಪ್ರತಿಯೊಂದು ಕ್ಷೇತ್ರವೂ ಮಹಿಳೆಯರ ಸಾಧನೆಗಳಿಂದ ಕೂಡಿದೆ.ಪ್ರತಿಭೆ, ಕಲೆ, ಸಾಹಿತ್ಯ, ಸಾಹಸ ಪ್ರವೃತ್ತಿಯಂತಹ ಸಾಧನೆಯಲ್ಲಿ ತೊಡಗಿ ವಿಶ್ವದ ಗೌರವಕ್ಕೆ ಪಾತ್ರಳಾಗಿದ್ದಾಳೆ. ತನ್ನ ಹಲವಾರು ಉತ್ತಮ ಗುಣ, ನಡತೆಗಳಿಂದ ಸರ್ವಸಂಪನ್ನಳೆನಿಸಿ ಪೂಜನೀಯಳು ಆಗಿದ್ದಾಳೆ ಅಂತರಾಷ್ಟ್ರೀಯ ಮಹಿಳಾ ದಿನದಂದು, ಮಹಿಳೆಯರು ಮತ್ತು ಅವರ ಸಾಧನೆಗಳಿಗೆ ಗೌರವವನ್ನು ತೋರಿಸುವ ಮೂಲಕ ಅವರನ್ನು ಪ್ರೋತ್ಸಾಹಿಸಲಾಗುತ್ತದೆ. ಇದರೊಂದಿಗೆ ತಾರತಮ್ಯವನ್ನು ಹೋಗಲಾಡಿಸಿ ಸಮಾನತೆಯ ಮಧ್ಯೆ ಅವರ ಹಕ್ಕುಗಳ ಬಗ್ಗೆ ಪರಿಚಯ ಮಾಡಿಕೊಡಲಾಗುತ್ತದೆ. ಶಾಲಾ-ಕಾಲೇಜುಗಳಲ್ಲೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳಿಗೆ ಜ್ಞಾನವನ್ನು ಅಭಿವೃಧ್ಧಿ ಪಡಿಸುವುದಾಗಿದೆ.

ಸ್ತ್ರೀ ನಾಲ್ಕು ಗೋಡೆಗಳ ನಡುವೆ ಕಾಲಕಳೆಯುವ ಕಾಲವೀಗ ಕಣ್ಮರೆಯಾಗಿ, ಪುರುಷಪ್ರಧಾನ ಸಮಾಜದಲ್ಲಿ ಪುರುಷರಷ್ಟೇ ಧೀಮಂತಿಕೆಯಿಂದ ಬದುಕಲು ಸಾಧ್ಯವಿದೆಯೆಂದು ಹಲವಾರು ರೀತಿಯ ಸಾಧನೆಗಳನ್ನು ಮಾಡುವುದರ ಮೂಲಕ ತೋರಿಸಿ ಕೊಟ್ಟಿದ್ದಾಳೆ. ಎಲ್ಲಾ ಕ್ಷೇತ್ರದಲ್ಲೂ ಮುನ್ನಡೆಯುತ್ತಾ ಜಗತ್ತಿನ ದೃಷ್ಟಿಯನ್ನು ತನ್ನೆಡೆ ಸೆಳೆದಿದ್ದಾಳೆ.

ಮಾರ್ಚ್ 8 ಈ ದಿನ ಹೆಣ್ಣು ಮಕ್ಕಳ ಸಾಧನೆಗಳಿಗೆ ನಮನ ಸಲ್ಲಿಸುವ ದಿನವಾಗಿದೆ. ಇದಲ್ಲದೇ ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯುವಂತಾಗಲು ಮತ್ತು ಪುರುಷರೊಂದಿಗೆ ಹೆಜ್ಜೆ ಹೆಜ್ಜೆಗೂ ಹೆಜ್ಜೆ ಇಡಲು ಮಹಿಳೆಯರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ಕೂಡ ಈ ದಿನದ ಉದ್ದೇಶವಾಗಿದೆ.
ಪ್ರತಿಯೊಂದು ಕ್ಷೇತ್ರದಲ್ಲೂ ಮಹಿಳೆಯರು ಸದ್ದು ಮಾಡುತ್ತಿದ್ದಾರೆ ನಿಜ. ಆದರೆ ಇಂದಿಗೂ ಹಲವೆಡೆ ಲಿಂಗ ಅಸಮಾನತೆ, ತಾರತಮ್ಯ ಎದುರಿಸಬೇಕಾಗಿ ಬಂದಿರುವುದು ಕಟು ಸತ್ಯ. ಹೆಣ್ಣು ಭ್ರೂಣ ಹತ್ಯೆ ಪ್ರಕರಣಗಳು ಇಂದಿಗೂ ಬರುತ್ತಿವೆ. ಮಹಿಳೆಯರ ಮೇಲಿನ ಅಪರಾಧಗಳು ಹೆಚ್ಚುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸಮಾಜದಲ್ಲಿ ಮಹಿಳೆಯರ ಸ್ಥಿತಿಗತಿ ಸುಧಾರಿಸುವ ನಿಟ್ಟಿನಲ್ಲಿ ಪಣ ತೊಡುವುದು ನಮ್ಮೆಲ್ಲರ ಕರ್ತವ್ಯ.

ಅಂತರಾಷ್ಟ್ರೀಯ ಮಹಿಳಾ ದಿನವನ್ನು ಮೊದಲು 1909 ರಲ್ಲಿ ಅಮೆರಿಕಾದಲ್ಲಿ ಆಚರಿಸಲಾಯಿತು. ನಂತರ ಸುಮಾರು 15,000 ಮಹಿಳೆಯರು ನ್ಯೂಯಾರ್ಕ್ ನಗರದಲ್ಲಿ ಮತದಾನದ ಹಕ್ಕು, ಕಡಿಮೆ ಕೆಲಸದ ಸಮಯವನ್ನು ಮತ್ತು ಉತ್ತಮ ವೇತನಕ್ಕಾಗಿ ಒತ್ತಾಯಿಸಿದರು. 1975 ರಲ್ಲಿ ವಿಶ್ವಸಂಸ್ಥೆಯು ಇದನ್ನು ಥೀಮ್‌ನೊಂದಿಗೆ ಆಚರಿಸಲು ಪ್ರಾರಂಭಿಸಿತು. ಸುಸ್ಥಿರ ನಾಳೆಗಾಗಿ ಇಂದು ಲಿಂಗ ಸಮಾನತೆ ಎಂಬುದು ಈ ವರ್ಷದ ವಿಷಯವಾಗಿದೆ.ಸದೃಢ ಭವಿಷ್ಯಕ್ಕಾಗಿ ಲಿಂಗ ಸಮಾನತೆ ಅತ್ಯಗತ್ಯ.

ಮಹಿಳೆಯರಿಗಾಗಿಯೇ ಸರ್ಕಾರವು ಕೆಲವು ಮಹಿಳಾ ಹಕ್ಕುಗಳನ್ನು ಜಾರಿಗೊಳಿಸಿದೆ.

ಮಹಿಳಾ ಹಕ್ಕುಗಳು:

೨೧ನೇ ಶತಮಾನದಲ್ಲಿ ಮೂಲಭೂತ ಹಕ್ಕು, ಸ್ವಾತಂತ್ರ್ಯದ ಹಕ್ಕು, ಶೋಷಣೆಯ ವಿರುದ್ಧದ ಹಕ್ಕು, ಅಭಿವ್ಯಕ್ತಿಯ ಹಕ್ಕು, ಶಿಕ್ಷಣದ ಹಕ್ಕು, ಸಮಾನತೆಯ ಹಕ್ಕುಗಳನ್ನು ಮಹಿಳೆಯರಿಗಾಗಿಯೇ ಮಾಡಲಾಗಿದೆ.ಎಲ್ಲಾ ಮಹಿಳೆಯರಿಗೂ ತಮ್ಮ ಹಕ್ಕುಗಳ ಬಗೆಗಿನ ಅರಿವು ಅತೀ ಅಗತ್ಯ. ಅಂತಹ ಅರಿವು ಮಹಿಳೆಯರಲ್ಲಿ ಆತ್ಮವಿಶ್ವಾಸವನ್ನು ಹುಟ್ಟು ಹಾಕುತ್ತದೆ.
ಈ ಹಿನ್ನೆಲೆಯಲ್ಲಿ ಮಹಿಳಾ ಹಕ್ಕುಗಳು ಮತ್ತು ಅಧಿಕಾರಗಳ ರಕ್ಷಣೆಯನ್ನು ಮಾಡುವ ಜವಾಬ್ದಾರಿ ನಾಗರಿಕ ಸಮಾಜದ ಮೇಲಿದೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿಗೆ ದತ್ತವಾಗಬೇಕಿರುವ ಹಕ್ಕು ಅಧಿಕಾರಗಳನ್ನು ಮೊಟಕುಗೊಳಿಸುವ ಪ್ರಯತ್ನ ನಡೆಯುತ್ತಲೇ ಇದೆ.
ಸ್ತ್ರೀ ಶಿಕ್ಷಣ, ಸ್ತ್ರೀ ಉದ್ಯೋಗ, ಮಹಿಳಾ ಸಂಘಟನೆ, ಮಹಿಳಾ ಕಾನೂನುಗಳು ಮಹಿಳೆಯರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿವೆ. 1888ರಲ್ಲಿ ಮೈಸೂರಿನಿಂದ ಹೊರಡುತ್ತಿದ್ದ ‘ಕರ್ನಾಟಕ ವಾಣಿ ವಿಲಾಸ ಪತ್ರಿಕೆ’ಯನ್ನು ಮಹಿಳಾ ಪತ್ರಿಕೆಯಾಗಿ ಗುರುತಿಸಲಾಗಿದೆ. ಅಲ್ಲಿಂದ ಮುಂದಕ್ಕೆ ಮಹಿಳೆಯರನ್ನು ಪತ್ರಿಕೆಯ ಓದುಗರಾಗಿ ಹಾಗೂ ಬರಹಗಾರರಾಗಿ ಗುರುತಿಸಿಕೊಂಡ ಕನ್ನಡ ಪತ್ರಿಕೋದ್ಯಮವು ಮಹಿಳಾ ಪತ್ರಿಕೋದ್ಯಮಕ್ಕೆ ಸಾಕಷ್ಟು ಅವಕಾಶ ಕಲ್ಪಿಸಿದೆ.
ತಮ್ಮ ಪತ್ರಿಕೆಗಳೇ ಮಹಿಳಾ ವಿಷಯಗಳ ಕುರಿತ ಬರಹಗಳಿಗೆ ವಿಶೇಷ ಸ್ಥಾನವನ್ನು ಕಲ್ಪಿಸುತ್ತ, ಮಹಿಳಾ ಅಂಕಣಗಳನ್ನು ಆರಂಭಿಸಿತು.

ಉಪಸಂಹಾರ:

ಮಹಿಳೆ ಕನಸೂ ಹೌದು, ವಾಸ್ತವವೂ ಹೌದು. ಪ್ರಕೃತಿಗೂ -ಹೆಣ್ಣಿಗೂ ಅವಿನಾಭಾವ ಸಂಬಂಧವಿದೆ. ಈಕೆ ಭೂಮಿಯಾಗಿ, ಮುಗಿಲಾಗಿ, ಮೇರುಪರ್ವತವಾಗಿ ಬೆಳೆದು ನಿಂತಿದ್ದಾಳೆ. ಹಾಗಾಗಿ ಸ್ತ್ರೀಯನ್ನು ಸಮೃದ್ದಿಯ ಸಂಕೇತವೆಂದು ಪರಿಭಾವಿಸಲಾಗಿದೆ. ಇಡಿ ವಿಶ್ವವೇ ಆರೋಗ್ಯಕರ ಮನೋಭಾವ ಹೊಂದಲು ಸಹಕಾರ ಶಕ್ತಿ ಸ್ತ್ರೀಯಾಗಿದ್ದಾಳೆ. ನಿಸರ್ಗದಲ್ಲಿ ಹಲವು ಬಗೆಯ ವೈವಿಧ್ಯತೆಗಳಿರುವಂತೆ ಸ್ತ್ರೀಯರಲ್ಲೂ ಹಲವು ವಿಧದ ಮಹಿಳೆಯರನ್ನು ಕಾಣಬಹುದು. ಚರಿತ್ರೆಯಲ್ಲಿ ಹಿಂದೆ ಮಾತೃಪ್ರಧಾನ ಕುಟುಂಬಗಳಿದ್ದುದನ್ನು ನಾವು ಸ್ಮರಿಸಬಹುದಾಗಿದೆ ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ತನ್ನದೇ ಆದ ಗೌರವ ಇದೆ.ಇದನ್ನು ಭಾರತೀಯರಾದ ನಾವುಗಳು ಮುಂದುವರೆಸಿಕೊಂಡು ಹೋಗುವ ಜವಬ್ಧಾರಿ ನಮ್ಮ ನಿಮ್ಮೆಲ್ಲರದ್ದಾಗಿದೆ.

ಇತರೆ ಪ್ರಬಂಧಗಳಿಗಾಗಿ:

ರೈತರ ಆತ್ಮಹತ್ಯೆ ಕುರಿತು ಪ್ರಬಂಧ
ಪ್ರಧಾನ ಮಂತ್ರಿ ಆವಾಸ್ ಯೋಜನೆ
ಸ್ವಚ್ಛ ಭಾರತ ಅಭಿಯಾನ ಪ್ರಬಂಧ
ಗ್ರಂಥಾಲಯ ಮಹತ್ವ ಕುರಿತು ಪ್ರಬಂಧ

LEAVE A REPLY

Please enter your comment!
Please enter your name here