Krishna Janmashtami Arghya Mantra in Kannada | ಶ್ರೀ ಕೃಷ್ಣ ಅರ್ಘ್ಯ ಮಂತ್ರ

0
166
Krishna Janmashtami Arghya Mantra in Kannada | ಶ್ರೀ ಕೃಷ್ಣ ಅರ್ಘ್ಯ ಮಂತ್ರ
Krishna Janmashtami Arghya Mantra in Kannada | ಶ್ರೀ ಕೃಷ್ಣ ಅರ್ಘ್ಯ ಮಂತ್ರ

Krishna Janmashtami Arghya Mantra in Kannada ಶ್ರೀ ಕೃಷ್ಣ ಅರ್ಘ್ಯ ಮಂತ್ರ ಶ್ರೀ ಕೃಷ್ಣ ಜನ್ಮಾಷ್ಟಮಿ ಶ್ಲೋಕಗಳು ಮಂತ್ರಗಳು lyrics in kannada


Contents

Krishna Janmashtami Arghya Mantra in Kannada

Krishna Janmashtami Arghya Mantra in Kannada
Krishna Janmashtami Arghya Mantra in Kannada | ಶ್ರೀ ಕೃಷ್ಣ ಅರ್ಘ್ಯ ಮಂತ್ರ

ಈ ಲೇಖನಿಯಲ್ಲಿ ನಿಮಗೆ ಶ್ರೀ ಕೃಷ್ಣ ಅರ್ಘ್ಯ ಮಂತ್ರದ ಬಗ್ಗೆ ನಿಮಗೆ ಒಂದಿಷ್ಟು ಮಾಹಿತಿಯನ್ನು ನೀಡಲಾಗಿದೆ.

ಶ್ರೀ ಕೃಷ್ಣ ಅರ್ಘ್ಯ ಮಂತ್ರ

ನಿಮಗೂ ಹಾಗೂ ನಿಮ್ಮ ಕುಟುಂಬದವರೆಲ್ಲರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ ಶುಭಾಶಯಗಳು. ಕೃಷ್ಣ ಜನ್ಮಾಷ್ಟಮಿ ಭಾರತದಲ್ಲಿ ಆಚರಿಸಲ್ಪಡುವ ಒಂದು ಪ್ರಮುಖವಾದ ಹಬ್ಬ. ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಕೃಷ್ಣ ಹುಟ್ಟಿದ ದಿನವನ್ನು ಕೃಷ್ಣ ಜನ್ಮಾಷ್ಟಮಿ ಅಥವಾ ಗೋಕುಲಾಷ್ಟಮಿ ಎಂದು ವೈಭವದಿಂದ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಜನ್ಮದಿನವನ್ನು ಚಾಂದ್ರಮಾನ ರೀತಿಯಲ್ಲಿ ಶ್ರಾವಣ ಕೃಷ್ಣ ಅಷ್ಟಮಿಯಂದು, ಸೌರಮಾನ ರೀತಿಯಲ್ಲಿ ಸಿಂಹಮಾಸದ ರೋಹಿಣಿ ನಕ್ಷತ್ರದ ದಿನ ಆಚರಿಸುತ್ತಾರೆ.

ಧರೆಯಲ್ಲಿ ಮನುಕುಲದ ಉದ್ದಾರಕ್ಕಾಗಿ ಜನ್ಮ ತಾಳಿದವನೇ ಶ್ರೀಕೃಷ್ಣ. ಕೃಷ್ಣನ ಅವತಾರದ ಕ್ಷಣವನ್ನು ನೆನಪಿಸುವುದೇ ಜನ್ಮಾಷ್ಟಮಿ ಉತ್ಸವ. ಧರೆಗಿಳಿದ ಭಗವಂತ ಎನ್ನುವ ಖುಷಿಯಲ್ಲಿ ಬಾಲಕೃಷ್ಣನ ಅರ್ಚನೆ, ಸಂಕೀರ್ತನೆ ನಡೆಯುತ್ತದೆ.

ಕೆಲವರು ಕೃಷ್ಣ ಜನ್ಮಾಷ್ಟಮಿಯಂದು ಹಗಲಿಡೀ ನೀರೂ ಕುಡಿಯದೆ ಉಪವಾಸವಿದ್ದು ರಾತ್ರಿ ಕೃಷ್ಣನಿಗೆ ಅಘ್ರ್ಯ ಕೊಟ್ಟ ನಂತರ ಫಲಾಹಾರವನ್ನು ಸೇವಿಸುತ್ತಾರೆ. (ನಿರ್ಜಲ ಉಪವಾಸ) ಭಜನೆ, ಸಂಕೀರ್ತನೆಗಳನ್ನು ಮಾಡುವುದರಿಂದ ಮನೆಯೊಳಗೆ ಸಕಾರಾತ್ಮಕ ಶಕ್ತಿಯ ಹರಿವು ಹೆಚ್ಚುತ್ತದೆ ಎಂಬ ನಂಬಿಕೆಯೂ ಇದೆ.

ಜನ್ಮಾಷ್ಟಮಿಯ ದಿನದಂದು ಮಧ್ಯರಾತ್ರಿ 12 ಗಂಟೆಗೆ ಕೃಷ್ಣನಿಗೆ ಅಘ್ರ್ಯ ಕೊಡುವುದನ್ನು ಮಾತ್ರ ಮರೆಯಬೇಡಿ. ಸಾಧ್ಯವಾದರೆ ಕೃಷ್ಣನ ಪ್ರೀತ್ಯರ್ಥ ಐದು ಬಗೆಯ ಭಕ್ಷ್ಯಗಳನ್ನು ನೈವೇದ್ಯಕ್ಕೆ ಇಡಿ.

Krishna Arghya Mantra Kannada

ಶ್ರೀ ಕೃಷ್ಣ ಅರ್ಘ್ಯ ಮಂತ್ರ

ಜಾತಃ ಕಂಸವಧಾರ್ಥಾಯ ಭೂಭಾರೋತ್ತಾರಣಾಯ ಚ |
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ ||
ಪಾಂಡವಾನಾಂ ಹಿತಾರ್ಥಾಯ ಧರ್ಮಸಂಸ್ಥಾಪನಾಯ ಚ |
ಗೃಹಾಣಾರ್ಘ್ಯಂ ಮಯಾದತ್ತಂ ದೇವಕ್ಯಾ ಸಹಿತೋ ಹರೇ ||

ಚಂದ್ರ ಅರ್ಘ್ಯ ಮಂತ್ರ

ಕ್ಷೀರೋದಾರ್ಣವಸಂಭೂತ ಅತ್ರಿಗೋತ್ರಸಮುದ್ಭವ |
ಗೃಹಾಣಾರ್ಘ್ಯಂ ಮಯಾದತ್ತಂ ರೋಹಿಣ್ಯಾ ಸಹಿತಃ ಶಶಿನ್ ||

ಇತರೆ ವಿಷಯಗಳು :

ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು

ಕೃಷ್ಣ ಜನ್ಮಾಷ್ಟಮಿ 2022 ಮಾಹತ್ವ

LEAVE A REPLY

Please enter your comment!
Please enter your name here