ವಿಶ್ವ ಭೂ ದಿನದ ಬಗ್ಗೆ ಮಾಹಿತಿ | Information about World Earth Day in Kannada

0
514
ವಿಶ್ವ ಭೂ ದಿನದ ಬಗ್ಗೆ ಮಾಹಿತಿ | Information about World Earth Day in Kannada
ವಿಶ್ವ ಭೂ ದಿನದ ಬಗ್ಗೆ ಮಾಹಿತಿ | Information about World Earth Day in Kannada

ವಿಶ್ವ ಭೂ ದಿನದ ಬಗ್ಗೆ ಮಾಹಿತಿ Information about World Earth Day Vishva Bhu Dinada Bagge Mahiti in Kannada


Contents

ವಿಶ್ವ ಭೂ ದಿನದ ಬಗ್ಗೆ ಮಾಹಿತಿ

Information about World Earth Day in Kannada
Information about World Earth Day in Kannada

ಈ ಲೇಖನಿಯಲ್ಲಿ ವಿಶ್ವ ಭೂ ದಿನದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ವಿಶ್ವ ಭೂ ದಿನ

ಪ್ರತಿವರ್ಷ ಎಪ್ರಿಲ್‌ ೨೨ ರಂದು ವಿಶ್ವ ಭೂಮಿ ದಿನವನ್ನು ಆಚರಣೆ ಮಾಡಲಾಗುತ್ತದೆ. ನಮ್ಮ ಬದುಕಿಗೆ ಅಗತ್ಯವಿರುವ ಗಾಳಿ, ನೀರು, ಆಹಾರವನ್ನು ನಮ್ಮ ಭೂಮಿ ನಮಗೆ ನೀಡಿದೆ. ಕೋಟ್ಯಾನು ಕೋಟಿ ಜೀವರಾಶಿಗಳಿಗೆಭೂಮಿ ಆಸರೆಯಾಗಿದೆ.ಮಾನವ ತನ್ನ ಐಶಾರಾಮಿ ಜೀವನಕ್ಕಾಗಿ ಅರಣ್ಯನಾಶಮಾಡಿ ಅಗತ್ಯ ಗಾಳಿ, ನೀರು, ಬೆಳಕು, ಆಹಾರಕ್ಕೆ ಅಡ್ಡಿಯಾಗುತ್ತಿದ್ದಾನೆ. ಮಾನವನು ಮಾಡುತ್ತಿರುವ ಅರಣ್ಯ ನಾಶದಿಂದ ಪ್ರಾಣಿಗಳು ಆಹಾರ ಅರಸಿ ನಾಡಿಗೆ ಬರುತ್ತಿವೆ. ಅರಣ್ಯ ನಾಶದಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಮಳೆಯ ಪ್ರಮಾಣ ಕಡಿಮೆಯಾಗುತ್ತಿರುವುದರಿಂದ ಜಲಚರ ಪ್ರಾಣಿಗಳು, ನಶಿಸುತ್ತಿವೆ. ಮಳೆಯ ನೀರನ್ನು ಸಂಗ್ರಹಿಸಲು ಇಂಗು ಗುಂಡಿಗಳ ವ್ಯವಸ್ಥೆ ಮಾಡಬೇಕು. ಗಿಡ ಮರಗಳು ವಾತವರಣದಲ್ಲಿರುವ ಕಾರ್ಬನ್‌ – ಡೈ ಆಕ್ಸೈಡ್‌ನ್ನು ತೆಗೆದುಕೊಂಡು ಆಮ್ಲಜನಕವನ್ನು ಕೊಡುತ್ತವೆ. ಆದರೆ ಅರಣ್ಯ ನಾಶದಿಂದಾಗಿ ವಾತವರಣದಲ್ಲಿ ಕಾರ್ಬನ್‌ – ಡೈ – ಆಕ್ಸೈಡ್‌ ಹೆಚ್ಚಾಗುತ್ತದೆ. ಅತಿಯಾದ ಕಾರ್ಬನ್‌ ಡೈ ಆಕ್ಸೈಡ್‌ನಿಂದಾಗಿ ಓಜೋನ್‌ ಪದರ ನಾಶವಾಗುತ್ತದೆ. ಶುದ್ದ ಗಾಳಿಗೆ ಕೊರತೆ ಉಂಟಾಗುತ್ತದೆ. ಆದ್ದರಿಂದ ಪರಿಸರ ಮಾಲಿನ್ಯವು ತಡೆಯಬೇಕು.

೨೦೨೨ ರ ಥೀಮ್‌

ನಮ್ಮ ಗ್ರಹದಲ್ಲಿ ಹೂಡಿಕೆ ಮಾಡಿ ಇದು ೨೦೨೨ ರ ಭೂ ದಿನದ ಥೀಮ್‌ ಆಗಿದೆ. ಇಂತಹ ಥೀಮ್‌ ನೊಂದಿಗೆ ವಿಶ್ವ ಭೂ ದಿನವನ್ನು ಆಚರಿಸಲಾಗುತ್ತದೆ.

ವಿಶ್ವ ಭೂ ದಿನದ ಆಚರಣೆಯ ಉದ್ದೇಶ

ಪ್ರಕೃತಿಯನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಪ್ರಕೃತಿ ನಾಶವಾದರೆ ನಾವು ನಾಶವಾಗುತ್ತೇವೆ. ಭೂಮಿಯಿಂದಾಗುವ ಉಪಯೋಗಗಳನ್ನು ತಿಳಿದು ಪ್ರತಿಯೊಬ್ಬರೂ ಜಾಗೃತಗೊಳ್ಳಬೇಕು. ಪ್ರತಿಯೊಬ್ಬರು ಮನೆಯ ಸುತ್ತಮುತ್ತ ಗಿಡ – ಮರಗಳನ್ನು ಬೆಳೆಸಬೇಕು. ಪ್ಲಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಬೇಕು. ಗಿಡ – ಮರಗಳನ್ನು ಕಡಿಯಬಾರದಂತೆ ಜಾಗೃತಿ ವಹಿಸಬೇಕು.

ವಿಶ್ವ ಭೂ ದಿನದ ಹಿನ್ನೆಲೆ

೨೨ ನೇ ಎಪ್ರಿಲ್‌ ೨೦೦೯ ರಂದು ಯುನೈಟೆಡ್‌ ನೇಷನ್ಸ್‌ ಜನರಲ್‌ ಅಸೆಂಬ್ಲಿಯು ೨೨ ನೇ ಏಪ್ರಿಲ್‌ ಅನ್ನು ಅಂತರಾಷ್ಟ್ರೀಯ ಮಾತೃಭೂಮಿ ದಿನವೆಂದೂ ಘೋಷಿಸುವ ನಿರ್ಣಯವನ್ನು ಅಂಗೀಕರಿಸಿತು. ಮೊದಲಿಗೆ ಎಪ್ರಿಲ್‌ ೨೨ ೧೯೭೦ ರಲ್ಲಿ ವಿಶ್ವ ಭೂ ದಿನವನ್ನು ಆಚರಿಸಲಾಯಿತು. ಗೆಲಾರ್ಡ್‌ ನೆಲ್ಸನ್‌ ಭೂ ದಿನದ ಸಂಸ್ಥಾಪಕರಾಗಿದ್ದಾರೆ.

ವಿಶ್ವ ಭೂ ದಿನದ ಮಹತ್ವ

ಮನುಷ್ಯರು ಸೇರಿದಂತೆ ಪ್ರಾಣಿ, ಪಕ್ಷಿ ಮತ್ತು ಇನ್ನಿತರ ಜೀವ ಸಂಕುಲಗಳನ್ನು ಕೂಡ ಭೂಮಿ ಸಲಹುತ್ತದೆ.

ಭೂಮಿಯ ಮೇಲಿರುವ ಕೋಟ್ಯಾಂತರ ಜನರ ಮೂಲಭೂತ ಅವಶ್ಯಕತೆಗಳನ್ನು ಪೂರೈಸುವ ಶಕ್ತಿ ಈ ಭೂಮಿಗಿದೆ.

ನಮ್ಮ ಬದುಕಿಗೆ ಅಗತ್ಯವಿರುವ ಗಾಳಿ, ನೀರು, ಆಹಾರಗಳೆಲ್ಲ ನಮ್ಮ ಭೂಮಿ ನಮಗೆ ನೀಡಿದೆ.

ನಾವುಗಳೆಲ್ಲರೂ ಈ ಭೂಮಿಗೆ ಚಿರರುಣಿಗಳಾಗಿದ್ದೇವೆ.

ಭೂಮಿಯ ಮಹತ್ವ ಮತ್ತು ಅದರ ಸಂರಕ್ಷಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ದಿನ ಇದಾಗಿದೆ.

ಗೇಲಾರ್ಡ್ ನೆಲ್ಸನ್‌ ರವರನ್ನು ಭೂ ದಿನದ ಪಿತಾಮಹ ಎಂದು ಕರೆಯುತ್ತಾರೆ.

FAQ

ವಿಶ್ವ ಭೂ ದಿನವನ್ನು ಯಾವಾಗ ಆಚರಿಸುತ್ತಾರೆ ?

ಎಪ್ರಿಲ್‌ ೨೨

ಮಾತೃ ಭಾಷಾ ದಿನವನ್ನು ಯಾವಾಗ ಆಚರಿಸುತ್ತಾರೆ ?

ಫೆಬ್ರವರಿ ೨೧

ಇತರೆ ವಿಷಯಗಳು :

ವಿಶ್ವ ಕ್ಷಯ ರೋಗದ ದಿನದ ಬಗ್ಗೆ ಮಾಹಿತಿ 

ಎಲ್ಲೆಲ್ಲೂ ಹಬ್ಬ ಹಬ್ಬ 

LEAVE A REPLY

Please enter your comment!
Please enter your name here