ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ | Information about rural development programmes in Kannada

0
708
ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ | Information about rural development programmes in Kannada
ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ | Information about rural development programmes in Kannada

ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ Information about rural development programmes gramina abiruddi karyagala bagge mahiti in kannada


Contents

ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ

Information about rural development programmes in Kannada
ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಗ್ರಾಮೀಣಾಭಿವೃದ್ದಿ ಕಾರ್ಯಕ್ರಮಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ :

ಕೇಂದ್ರ ಸರ್ಕಾರವು 2016-2017ನೇ ಸಾಲಿನ ಸಾಲಿನಿಂದ ರಾಷ್ಟ್ರೀಯ ಕೃಷಿ ವಿಮಾ ಯೋಜನೆ ಹಾಗೂ ಮಾರ್ಪಡಿಸಿದ ರಾಷ್ಟ್ರೀಯ ಕೃಷಿ ವಿಮಾ ಯೋಜನೆಗಳನ್ನು ಹಿಂಪಡೆದು ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆಯನ್ನು ಜಾರಿಗೆ ತಂದಿದ್ದು ರಾಜ್ಯದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್‌ ಬಿಮಾ ಯೋಜನೆ ಎಂಬ ಹೆಸರಿನಿಂದ ಅನುಷ್ಠಾನಗೊಳಿಸಲಾಗಿದೆ. ಈ ಯೋಜನೆಯು ಬೆಳೆ ಸಾಲ ಪಡೆದ ರೈತರಿಗೆ ಕಡ್ಡಾಯ ಹಾಗೂ ಬೆಳೆ ಸಾಲ ಪಡೆಯದ ರೈತರಿಗೆ ಐಚ್ಛಿಕ. ಬೆಳೆ ವಿಮಾ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸುವುದು ವಿಮಾ ಸಂಸ್ಥೆಗಳ ಜವಬ್ದಾರಿಯಾಗಿರುತ್ತದೆ. ಈ ಯೋನೆಯಡಿ ವಿಮಾ ಸಂಸ್ಥೆಗಳು ವಾಣಿಜ್ಯ ವಿಮಾ ಕಂತಿನ ದರಗಳನ್ನು ಸಂಸ್ಥೆಗಳ ಜವಬ್ದಾರಿಯಾಗಿರುತ್ತದೆ. ಈ ಯೋಜನೆಯಡಿ ವಿಮಾ ಸಂಸ್ಥೆಗಳು ವಾಣಿಜ್ಯ ವಿಮಾ ಕಂತಿನ ದರಗಳನ್ನು ನಿಗದಿಪಡಿಸುತ್ತವೆ ಆದರೆ ರೈತರು ಈ ಕೆಳಗಿನಂತೆ ವಿಮಾ ಕಂತಿನ ದರಗಳನ್ನು ಪಾವತಿಸಬೇಕು ಹಾಗೂ ಉಳಿದ ವಿಮಾ ಕಂತನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಸಮನಾಗಿ ಭರಿಸುತ್ತದೆ.

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆ – ಜಲಾನಯನ ಅಭಿವೃದ್ದಿ :

2015-2016ನೇ ಸಾಲಿನಿಂದ ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮವನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಯಿ ಯೋಜನೆಯನ್ನು ಜಲಾನಯನ ಅಭಿವೃದ್ದಿ ಎಂದು ನಾಮಕರಣ ಮಾಡಲಾಗಿದೆ ಮತ್ತು ಪ್ರಸ್ತುತ ಸಾಲಿನಿಂದ ಸಮಗ್ರ ಜಲಾನಯನ ನಿರ್ವಹಣಾ ಕಾರ್ಯಕ್ರಮದ ಚಟುವಟಿಕೆಗಳನ್ನು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯನ್ನು ಜಲಾನಯನ ಅಭಿವೃದ್ದಿಯಡಿ ಅನುಷ್ಠಾನ ಮಾಡಲಾಗುತ್ತಿದೆ. ಈ ಯೋಜನೆಗೆ 60:40 ರ ಅನುಪಾತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವೆಚ್ಚವನ್ನು ಭರಿಸಲಾಗುತ್ತಿದೆ.

ಈ ಯೋಜನೆಯ ಮುಖ್ಯ ಉದ್ದೇಶಗಳು :

 • ಮಣ್ಣು, ತೇವಾಂಶ ಮತ್ತು ಪೋಷಕಾಂಶಗಳನ್ನು ಸಂರಕ್ಷಿಸುವುದು.
 • ಅಂತರ್ಜಲವನ್ನು ಅಭಿವೃದ್ದಿಗೊಳಿಸುವುದು ಮತ್ತು ಕೃಷಿ ಉತ್ಪಾದಕತೆಯನ್ನು ಹೆಚ್ಚಿಸುವುದು.
 • ಕೃಷಿ, ಅರಣ್ಯ ಮತ್ತು ಖುಷ್ಕಿ ತೋಟಗಾರಿಕೆ ಮೂಲಕ “ಹಸಿರು ಹೊದಿಕೆ” ಯನ್ನು ವೃದ್ದಿಗೊಳಿಸುವುದು.
 • ಮೇವು ಮತ್ತು ಉರುವಲು ಪೂರೈಕೆಯನ್ನು ಉತ್ತಮಗೊಳಿಸುವುದು.
 • ಸಮುದಾಯ ಸಂಘಟನೆ ಮತ್ತು ಸಾಮರ್ಥ್ಯ ಬಲವರ್ಧನೆ ಹಾಗೂ ಭೂರಹಿತರಿಗೆ ಜೀವನಾಧಾರಿತ ಬೆಂಬಲ ಚಟುವಟಿಕೆಗಳನ್ನು ಒದಗಿಸುವುದು.
 • ಪಶು ಸಂಪತ್ತಿನ ಅಭಿವೃದ್ದಿಯನ್ನು ಉತ್ತೇಜಿಸುವುದು, ಉತ್ಪಾದನಾ ವ್ಯವಸ್ಥೆ ಮತ್ತು ಆದಾಯ ಉತ್ಪನ್ನ ಚಟುವಟಿಕೆಗಳು ಮತ್ತು ಕಿರು ಉದ್ದಿಮೆಗಳನ್ನು ಪ್ರೋತ್ಸಾಹಿಸುವುದು.

ದೀನದ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆ :

 • ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತು ಕೃಷಿಯೇತರ ಗ್ರಾಹಕರಿಗೆ ನ್ಯಾಯಯುತವಾಗಿ ವಿದ್ಯುತ್‌ ಅನ್ನು ಪೂರೈಸಲು ಕೃಷಿ ಮತ್ತು ಕೃಷಿಯೇತರ ಫೀಡರಗಳಾಗಿ ಪ್ರತ್ಯೇಕಿಸಲಾಗಿದೆ.
 • ವಿತರಣೆಯ ಟ್ರಾನ್ಸಫಾರ್ಮಗಳು/ಫೀಡರಗಳು/ಗ್ರಾಹಕರುಗಳ ಲೆಕ್ಕ ಹಾಕುವುದೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿ ಉಪಕ್ರಮ ಹಾಗೂ ವಿತರಣೆಯ ಮೂಲ ಸೌಕರ್ಯಗಳನ್ನು ಬಲಪಡಿಸುವುದು ಮತ್ತು ವೃದ್ದಿಪಡಿಸುವುದು.
 • ಗ್ರಾಮೀಣ ವಿದ್ಯುದ್ದೀಕರಣ 11 ಮತ್ತು 12ನೇ ಪಂಚವಾರ್ಷಿಕ ಯೋಜನೆಗಳಲ್ಲಿ ಗುರಿಗಳನ್ನು ಪೂರ್ಣಗೊಳಿಸಲು ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯ ಅನುಮೋದನೆ ದಿನಾಂಕ 1/8/2013ರಲ್ಲಿ ರಾಜೀವಾ ಗಾಂಧೀ ಗ್ರಾಮೀಣ ವಿದ್ಯುತ್‌ ಯೋಜನೆಗಾಗಿ ಇರುವ ಅನುಮೋದಿತ ಹಣವನ್ನು ದೀನ ದಯಾಳ್‌ ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಯಲ್ಲಿ ಮುಂದುವರೆಸಲಾಗಿರುತ್ತದೆ.
 • ವಿದ್ಯುತ್‌ ಸಚಿವಾಲಯದ ಮೇಲ್ವಿಚಾರಣಾ ಸಮಿತಿಯು ದಿನಾಂಕ 6/8/2015ರಂದು ದೀನ ದಯಾಳು ಉಪಾಧ್ಯಾಯ ಗ್ರಾಮ ಜ್ಯೋತಿ ಯೋಜನೆಗಳಿಗೆ ಅನುಮೋದನೆಯನ್ನು ನೀಡಿರುತ್ತದೆ.
 • ಈ ಯೋಜನೆಗಾಗಿ 2021-2022ನೇ ಸಾಲಿನಲ್ಲಿ 3600 ಕೋಟಿಗಳನ್ನು ಘೋಷಿಸಲಾಗಿದೆ. ಇದರ ಅಡಿಯಲ್ಲಿ 2019 ಮಾರ್ಚ್‌ ಅಂತ್ಯದ ವೇಳೆಗೆ ಎಲ್ಲಾ ಕುಟುಂಬಗಳು ವಿದ್ಯುತ್‌ ಸಂಪರ್ಕವನ್ನು ಪಡೆಯಲಿವೆ.

ಶ್ಯಾಮ್‌ ಪ್ರಸಾದ್‌ ಮುಖರ್ಜಿ ರುರ್ಬನ್‌ ಮಿಷನ್‌ :

 • ಈ ಯೋಜನೆಯಡಿಯಲ್ಲಿ ಆಯ್ಕೆಯಾದ ಗ್ರಾಮೀಣ ಕ್ಲಸ್ಟರ್‌ ಗಳು ಸಾಮಾನ್ಯ ಪ್ರದೇಶದಲ್ಲಿ 25000ದಿಂದ 50000 ಜನಸಂಖ್ಯೆ ಹೊಂದಿರಬೇಕು. ಹಾಗೆಯೇ ಗುಡ್ಡಗಾಡು ಪ್ರದೇಶದಲ್ಲಿ 5000 ದಿಂದ 15000 ಜನಸಂಖ್ಯೆ ಹೊಂದಿರಬೇಕು.
 • ಈ ಕ್ಲಸ್ಟರಗಳಿಗೆ ನಿಧಿಯನ್ನು ವಿವಿಧ ಯೋಜನೆಗಳ ಮೂಲಕ ಪೂರೈಕೆ ಮಾಡಲಾಗುತ್ತದೆ.
 • ಕ್ಲಸ್ಟರ್ಗಳಲ್ಲಿ 4 ರೀತಿಯ ಸೌಲಭ್ಯಗಳ ಕೈಗೊಳ್ಳಲಾಗುತ್ತದೆ.
 • ಕೌಶಲ್ಯಾಭಿವೃದ್ದಿ ತರಬೇತಿ.
 • ನೈರ್ಮಲ್ಯ
 • ಕೃಷಿ ಸಂಸ್ಕರಣೆ ಮತ್ತು ಸೇವೆಗಳು
 • ಡಿಜಿಟಲ್‌ ಸಾಕ್ಷರತೆ
 • ಈ ಯೋಜನೆಗಾಗಿ 2020-2021ನೇ ಸಾಲಿನಲ್ಲಿ 372 ಕೋಟಿಗಳನ್ನು ಘೋಷಿಸಲಾಗಿತ್ತು. 2020-2021ನೇ ಸಾಲನ್ನು 600 ಕೋಟಿಗಳನ್ನು ಘೋಷಿಸಲಾಗಿದೆ.

ರಾಷ್ಟ್ರೀಯ ಗ್ರಾಮ ಸ್ವರಾಜ್‌ ಅಭಿಯಾನ :

 • ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ರಾಷ್ಟ್ರಾದ್ಯಂತ ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಮ ಸ್ವರಾಜ್‌ ಅಭಿಯಾನವನ್ನು ಪ್ರಾರಂಭಿಸಲಾಗಿದೆ.
 • ಪಂಚಾಯಿತಿ ಮತ್ತು ಗ್ರಾಮಸಭಾಗಳ ಸಾಮರ್ಥ್ಯ ಮತ್ತು ದಕ್ಷತೆಯನ್ನು ಹೆಚ್ಚಿಸುವುದು.
 • ಪಂಚಾಯತ್‌ ರಾಜ್‌ ವ್ಯವಸ್ಥೆಯಲ್ಲಿ ಜನರ ಸಹಭಾಗಿತ್ವ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುವುದು.
 • ಪಂಚಾಯಿತಿಗಳಿಗೆ ಅಧಿಕಾರ ವಿಕೇಂಧ್ರೀಕರಿಸುವುದು ಮತ್ತು ಜವಬ್ದಾರಿಗಳನ್ನು ಹೆಚ್ಚಿಸುವುದು.
 • ಗ್ರಾಮಸಭಾದ ಕಾರ್ಯ ದಕ್ಷತೆಯನ್ನು ಹೆಚ್ಚಿಸುವುದು.
 • ಪ್ರಜಾಪ್ರಭುತ್ವ ತಳಹದಿಯ ಮೇಲೆ ಸ್ಥಳೀಯ ಸ್ವ ಸರ್ಕಾರಗಳನ್ನು ಪ್ರಾರಂಭಿಸುವುದು.
 • ಈ ಯೋಜನೆಗೆ 2020-2021ನೇ ಸಾಲಿನಲ್ಲಿ 505 ಕೋಟಿಗಳನ್ನು ಘೋಷಿಸಲಾಗಿತ್ತು. 2021-2022ನೇ ಸಾಲಿಗೆ 661 ಕೋಟಿ ಹೆಚ್ಚಿಸಲಾಗಿದೆ.

ರಾಷ್ಟ್ರೀಯ ಗೋಕುಲ್‌ ಅಭಿಯಾನ :

ರಾಷ್ಟ್ರೀಯ ಗೋಕುಲ್‌ ಅಭಿಯಾನವನ್ನು ಡಿಸೆಂಬರ್‌ 16, 2014ರಂದು ಜಾರಿಗೆ ತರಲಾಯಿತು. ಇದರ ಪ್ರಮುಖ ಉದ್ದೇಶ ದೇಶೀಯ ಗೋತಳಿಗಳನ್ನು ಅಭಿವೃದ್ದಿಪಡಿಸುವುದು. ಈ ಯೋಜನೆಯಲ್ಲಿ ದೇಶೀಯ ತಳಿಗಳಿಗೆ ಆದ್ಯತೆ ನೀಡಿದ್ದು 12ನೇ ಪಂಚವಾರ್ಷಿಕ ಯೋಜನೆಯ ಅವಧಿಯಲ್ಲಿ 500ಕೋಟಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. 2019-2020ರ ಮುಂಗಡ ಪತ್ರದಲ್ಲಿ 750ಕೋಟಿಯನ್ನು ಈ ಯೋಜನೆಗಾಗಿ ಘೋಷಿಸಲಾಗಿದೆ. ಇದರ ಜೊತೆಗೆ ರಾಷ್ಟ್ರೀಯ ಕಾಮಧೇನು ಆಯೋಗವನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಗ್ರಾಮ್‌ ಉದಯ್‌ ಸೇ ಭಾರತ್‌ ಉದಯ್‌ ಅಭಿಯಾನ :

ಡಾ.ಬಿ.ಆರ್.‌ ಅಂಬೇಡ್ಕರವರ 125ನೇ ಜನ್ಮದಿನೋತ್ಸವ ನೆನಪಿಗಾಗಿ ಈ ಕಾರ್ಯಕ್ರಮವನ್ನು ಜಾರಿಗೊಳಿಸಲಾಯಿತು. ಇದರ ಉದ್ದೇಶ ಹಳ್ಳಿಗಳಲ್ಲಿ ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ಬಲಪಡಿಸುವುದ ಮತ್ತು ಸಾಮಾಜಿಕ ಸಾಮರಸ್ಯ ಮೂಡಿಸುವುದು.

ಪ್ರಧಾನಮಂತ್ರಿ ಉಜ್ಜಲ ಯೋಜನೆ :

ಕೇಂದ್ರ ಸರ್ಕಾರವು ಬಡತನ ರೇಖೆಯಿಂದ ಕೆಳಗಿರುವ ಕುಟುಂಬದ ಮಹಿಳೆಯರನ್ನು ಹೊಣೆಯಿಂದ ಮುಕ್ತಗೊಳಿಸಿ ಎಲ್ ಪಿ ಜಿ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೊಳಿಸಲಾಯಿತು. ಈ ಯೋಜನೆಯು 2018 ಫೆಬ್ರವರಿ 9ರಂದು ಜಾರಿಗೊಳಿಸಲಾಯಿತು. 2018 ಮತ್ತು 2019ನೇ ಸಾಲಿನಲ್ಲಿ 5 ಕೋಟಿ ಕುಟುಂಬಗಳಿಗೆ ಎಲ್‌ ಪಿ ಜಿ ಸಂಪರ್ಕ ಕಲ್ಪಿಸಲು ಉದ್ದೇಶ ಹೊಂದಿತ್ತು. ಇದರ ಜನಪ್ರಿಯತೆಯನ್ನು ಮನಗಂಡು 2019-2020ನೇ ಸಾಲಿನಲ್ಲಿ 8 ಕೋಟಿ ಕುಟುಂಬಗಳಿಗೆ ವಿಸ್ತರಿಸುವುದಾಗಿ ಘೋಷಿಸಲಾಗಿದೆ. ಪ್ರಸ್ತುತ ವೇಳೆಗಾಗಲೇ 5.89 ಕೋಟಿ ಕುಟುಂಬಗಳಿಗೆ ಈ ಯೋಜನೆಯಡಿ ಎಲ್‌ ಪಿ ಜಿ ಸಂಪರ್ಕ ಕಲ್ಪಿಸಲಾಗಿದೆ. 2020-2021ನೇ ಸಾಲಿನ ಹೆಚ್ಚುವರಿಯಾಗಿ 1 ಕೋಟಿ ಕುಟುಂಬಗಳಿಗೆ ವಿಸ್ತರಿಸಲಾಗಿದೆ.

ಪ್ರಧಾನ ಮಂತ್ರಿ ಸೌಭಾಗ್ಯ ಯೋಜನೆ :

ಈ ಯೋಜನೆಯನ್ನು 2018-2019ನೇ ಸಾಲಿನಲ್ಲಿ ಘೋಷಿಸಲಾಯಿತು. ಇದರ ಉದ್ದೇಶ ರಾಷ್ಟ್ರದ ಎಲ್ಲಾ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸುವುದು. ಇದರಡಿಯಲ್ಲಿ 4 ಕೋಟಿ ಬಡ ಕುಟುಂಬಗಳಿಗೆ ಉಚಿತವಾಗಿ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಲಾಗಿದೆ. ಈ ಯೋಜನೆಗಾಗಿ 16000 ಕೋಟಿಯನ್ನು ವೆಚ್ಚ ಮಾಡಲಾಗುತ್ತಿದೆ. 2018ರ ಡಿಸೆಂಬರ್‌ ವೇಳೆಗೆ 2.3 ಕೋಟಿ ಕುಟುಂಬಗಳಿಗೆ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಲಾಗಿದೆ.

ಆಯುಷ್ಮಾನ್‌ ಭಾರತ್‌ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ :

ಈ ಯೋಜನೆಯನ್ನು ಏಪ್ರಿಲ್‌ 21, 2018ರಲ್ಲಿ ಸಚಿವ ಸಂಪುಟದ ಅನುಮೋದನೆಯ ನಂತರ ಸೆಪ್ಟೆಂಬರ್‌ 23, 2018ರಲ್ಲಿ ಜಾರಿಗೊಳಿಸಲಾಯಿತು. ಇದರ ಉದ್ದೇಶ ಬಡ ರಾಷ್ಟ್ರದ ಹತ್ತು ಕೋಟಿ ಕುಟುಂಬಗಳಿಗೆ ಅಂದರೆ ಸುಮಾರು 50 ಕೋಟಿ ಜನರಿಗೆ ವಾರ್ಷಿಕ 5 ಲಕ್ಷದವರೆಗೆ ಉಚಿತ ಆರೋಗ್ಯ ಸೌಲಭ್ಯ ಕಲ್ಪಿಸುವುದಾಗಿದೆ.

FAQ :

ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯ ಒಂದು ಉದ್ದೇಶ ಏನು?

ಮಣ್ಣು, ತೇವಾಂಶ ಮತ್ತು ಪೋಷಕಾಂಶಗಳನ್ನು ಸಂರಕ್ಷಿಸುವುದು.

ರಾಷ್ಟ್ರೀಯ ಗ್ರಾಮ ಸ್ವರಾಜ್‌ ಅಭಿಯಾನವನ್ನು ಏಕೆ ಜಾರಿಗೆ ತರಲಾಯಿತು?

ಪಂಚಾಯತ್‌ ರಾಜ್‌ ವ್ಯವಸ್ಥೆಯನ್ನು ರಾಷ್ಟ್ರಾದ್ಯಂತ ಬಲಪಡಿಸುವ ಉದ್ದೇಶದಿಂದ ರಾಷ್ಟ್ರೀಯ ಗ್ರಾಮ ಸ್ವರಾಜ್‌ ಅಭಿಯಾನವನ್ನು ಪ್ರಾರಂಭಿಸಲಾಗಿದೆ.

ಇತರೆ ವಿಷಯಗಳು :

ಉದ್ಯೋಗ ನಿರ್ಮಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿ

ಆರ್ಥಿಕ ವಲಯಗಳ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here