ಮೈಸೂರು ಒಡೆಯರ ಬಗ್ಗೆ ಮಾಹಿತಿ | Information About Mysore Lords in Kannada

0
571
ಮೈಸೂರು ಒಡೆಯರ ಬಗ್ಗೆ ಮಾಹಿತಿ Information About Mysore Lords Mysore Wdeyargala Bagge Mahiti in Kannada
ಮೈಸೂರು ಒಡೆಯರ ಬಗ್ಗೆ ಮಾಹಿತಿ Information About Mysore Lords Mysore Wdeyargala Bagge Mahiti in Kannada

ಮೈಸೂರು ಒಡೆಯರ ಬಗ್ಗೆ ಮಾಹಿತಿ Information About Mysore Lords Mysore Wdeyargala Bagge Mahiti in Kannada


Contents

ಮೈಸೂರು ಒಡೆಯರ ಬಗ್ಗೆ ಮಾಹಿತಿ

Information About Mysore Lords in Kannada
Information about Mysore lords in Kannada

ಈ ಲೇಖನಿಯಲ್ಲಿ ಮೈಸೂರು ಒಡೆಯರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಮೈಸೂರು ಒಡೆಯರ ಬಗ್ಗೆ ಮಾಹಿತಿ

೧೩೯೯ ರಲ್ಲಿ ಶ್ರೀರಂಗ ಪಟ್ಟಣ ಎಂಬ ಸ್ಥಳವನ್ನು ಶ್ರೀರಂಗ ಎಂಬ ವ್ಯಕ್ತಿ ಆಳುತ್ತಿದ್ದ. ಈತನ ಹೆಂಡತಿ ದೇವರಸಿ ಈ ಇಬ್ಬರು ದಂಪತಿಗಳಿಗೆ ಚಿಕ್ಕ ದೇವರಸಿ ಎಂಬ ಮಗಳಿದ್ದಳು. ಸುಂದರ ಸಂಸಾರ ಮತ್ತು ಚಿಕ್ಕ ಸಂಸಾರವಾಗಿತ್ತು. ಒಂದು ದಿನ ಶ್ರೀರಂಗನಿಗೆ ಹೃದಯಘಾತವಾಯಿತು. ಕುಟುಂಬದ ಸಂಪೂರ್ಣ ಜವಬ್ದಾರಿಯನ್ನು ವಹಿಸಿಕೊಂಡಳು. ಒಂದು ದಿನ ಮಾರನಾಯಕ ಎಂಬ ರಾಕ್ಷಸನ ಕಣ್ಣು ಚಿಕ್ಕ ದೇವರಸಿಯ ಮೇಲೆ ಬಿದ್ದಿತು.ಮಾರನಾಯಕನು ಚಿಕ್ಕ ದೇವರಸಿಯನ್ನು ಮದುವೆಯಾಗಲು ಆಸೆ ವ್ಯಕ್ತಪಡಿಸಿದ.

ಅಯೋಧ್ಯಯ ಯದುವಂಶದ ಯದುರಾಯ ಮತ್ತು ಕೃಷ್ಣರಾಯ ಮೇಲುಕೋಟೆ ಚೆಲುವ ನಾರಾಯಣ ದರ್ಶನ ಪಡೆಯಲು ಶ್ರೀರಂಗ ಪಟ್ಟಣ ಮಾರ್ಗವಾಗಿ ಹೋಗುವ ಸಂಧರ್ಬದಲ್ಲಿ ಮಾರನಾಯಕನೆಂಬ ರಾಕ್ಷಸನನ್ನು ಸಂಹಾರ ಮಾಡಿ ಒಡೆಯ ಎಂದು ಬಿರುದನ್ನು ಪಡೆದುಕೊಂಡು ಹದಿನಾಡು ಎಂಬ ಸ್ಥಳದಲ್ಲಿ ಒಡೆಯ ಸಂತತಿಯನ್ನು ಸ್ಥಾಪಿಸಿದರು.

ಪ್ರಮುಖ ಮೈಸೂರು ಒಡೆಯರು

೧. ರಾಜ ಒಡೆಯರು ( ೧೫೭೭ – ೧೬೧೭ ) :

ಮೊದಲ ಸ್ವತಂತ್ರ ಒಡೆಯರಾಗಿದ್ದರು. ಇವರು ಸ್ವತಂತ್ರ ಒಡೆಯ ಸಂತತಿಯನ್ನು ಪ್ರಾರಂಭಿಸಿದಾಗ ಅವರ ಹತ್ತಿರ ೩೩ ಹಳ್ಳಿ ೩೦೦ ಜನ ಸೈನಿಕರು, ೨೫,೦೦೦ ಚಿನ್ನದ ವರಹ ಆದಾಯವಿತ್ತು. ರಾಜ ಒಡೆಯರ ಅವಧಿಯಲ್ಲಿ ಚಾಮಯ್ಯ ಎಂಬ ವ್ಯಕ್ತಿ ಇದ್ದ. ಇವನಿಗೆ ಅಲಮೇಲಮ್ಮೆ ಎಂಬ ಹೆಂಡತಿ ಇದ್ದಳು. ಆಕೆ ಮೈತುಂಬ ಒಡವೆಯನ್ನು ಧರಿಸಿ ಕಂಗೊಳಿಸುತ್ತಿದ್ದಳು. ಅದನ್ನು ಗಮನಿಸಿದ ರಾಜ ಒಡೆಯರು ಆಭರಣಗಳನ್ನು ಪಡೆದುಕಂಡು ಬರುವಂತೆ ಸೈನಿಕರಿಗೆ ಆಜ್ಞೆ ಮಾಡಲಾಯಿತು. ಸೈನಿಕರು ಅಲಮೇಲಮ್ಮನನ್ನ ಬೆನ್ನಟ್ಟಿದಾಗ ತಲಕಾಡಿನಲ್ಲಿ ಸಿಕ್ಕಿ ಬಿದ್ದಳು. ಆಭರಣ ಕಸಿದುಕೊಳ್ಳವ ಸಂಧರ್ಭದಲ್ಲಿ ತಲಕಾಡು ಮರಳಾಗಲಿ ಮಾಲಂಗಿ ಮಡುವಾಗಲಿ ಒಡೆಯರಿಗೆ ಗಂಡು ಸಂತಾನವಾಗದಿರಲಿ ಎಂದು ಶಾಪ ನೀಡಿದಳು.

೧೬೧೦ ರಲ್ಲಿ ದಸರಾ ಉತ್ಸವವನ್ನು ಪ್ರಾರಂಭಿಸಿದನು.

೧೬೧೦ ರಲ್ಲಿ ಶ್ರೀರಂಗ ಪಟ್ಟಣಕ್ಕೆ ರಾಜಧಾನಿಯನ್ನು ವರ್ಗಾಯಿಸಿದನು.

೨. ೫ನೇ ಚಾಮರಾಜ ಅಥವಾ ೬ನೇ ಚಾಮರಾಜ ಒಡೆಯರು ( ೧೬೧೭ – ೧೬೩೮ ) :

ಈತ ಸಿಂಹಾಸನ ಅಲಂಕರಿಸುವ ಸಂಧರ್ಭದಲ್ಲಿ ಕೇವಲ ೧೪ ವರ್ಷ ವಯಸ್ಸಾಗಿತ್ತು. ಇದರಿಂದ ದಳವಾಯಿ ಹುದ್ದೆ ಸೃಷ್ಟಿಯಾಯಿತು. ಮೊದಲ ದಳವಾಯಿ ಬೆಟ್ಟದ ಅರಸು ಈ ಬೆಟ್ಟದರಸು ಒಡೆಯರ ಸಿಂಹಾಸನಕ್ಕೆ ಕಣ್ಣು ಹಾಕಿದನು. ವಿಷಯ ತಿಳಿದ ೫ ನೇ ಚಾಮರಾಜ ಒಡೆಯರು ಬೆಟ್ಟದ ಅರಸುವಿನ ಕಣ್ಣನ್ನು ಕೀಳಿಸಿದರು.

೫ ನೇ ಚಾಮರಾಜ ಒಡೆಯರು ಶ್ರೀರಂಗ ಪಟ್ಟಣದಲ್ಲಿ ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕೇಂದ್ರಗಳನ್ನು ಪ್ರಾರಂಭಿಸಿದರು.

೩. ಕಂಠೀರವ ನರಸರಾಜ ಒಡೆಯರು ( ೧೬೩೮ – ೧೬೫೯ ) :

ಇವರಿಗೆ ೧೮೨ ಜನ ಪತ್ನಿರಿದ್ದರು.

ರಣಧೀರ ಎಂಬ ಬಿರುದನ್ನು ಪಡೆದು ಕೊಂಡಿದ್ದನು.

ಇವರು ಕುಸ್ತಿಪಟುವಾಗಿದ್ದರು. ಜಗತ್‌ ಜಟ್ಟಿ ಎಂಬ ಬಿರುದನ್ನು ಹೊಂದಿದ್ದರು.

ಬಿಜಾಪುರದ ಆದಿಲ್‌ ಷಾಹಿ ಕೈಕೆಳಗೆ ಕೆಲಸ ನಿರ್ವಹಿಸುವ ರಣದುಲ್ಲಾ ಖಾನ್‌ ನನ್ನ ೮ ಬಾರಿ ಸೋಲಿಸಿದರು.

ಕಂಠಿರವ ಪಣ ಎಂಬ ಬಂಗಾರದ ನಾಣ್ಯವನ್ನು ಜಾರಿಗೆ ತಂದರು.

ರಣಧೀರ ಕಂಠಿರವ ಎಂಬುದು ಕನ್ನಡದ ಮೊದಲ ಐತಿಹಾಸಿಕ ಚಿತ್ತರವಾಗಿದೆ.

೪. ದೊಡ್ಡ ದೇವರಾಜ ಒಡೆಯರು ( ೧೬೫೯ – ೧೬೭೨ ) :

ಇವರು ಚಾಮುಂಡಿ ಬೆಟ್ಟಕ್ಕೆ ೧೦೦೦ ಮೆಟ್ಟಿಲುಗಳನ್ನು ನಿರ್ಮಿಸಿದ್ದರು.

ರಣದುಲ್ಲಾ ಖಾನ್‌ ನನ್ನ ಸೋಲಿಸಿ ಆತನಿಂದ ಬಂಗಾರವನ್ನು ಪಡೆದುಕೊಂಡು ಬಂಗಾರದಿಂದ ಪಾದರಕ್ಷೆಯನ್ನು ತಯಾರಿಸಿ ಪಾದರಕ್ಷೆಗಳ ಸಹಾಯದಿಂದ ಚಾಮುಂಡಿ ದೇವಿಯ ದರ್ಶನವನ್ನು ಪಡೆದುಕೊಂಡನು.

ಚಿಕ್ಕ ದೇವರಾಜ ಒಡೆಯರು ( ೧೬೭೨ – ೧೭೦೪ ) :

ಅಪ್ರತಿಮ ವೀರ, ನವಕೋಟಿ ನಾರಾಯಣ, ರಾಜಜಗದೇವ, ಮಹರಾಷ್ಟ್ರ ಭೂಪಾಲ, ಕರ್ನಾಟಕದ ಚಕ್ರವರ್ತಿ ಎಂದು ಕರೆಯಲಾಗಿತ್ತು.

ಚಿಕ್ಕ ದೇವ ರಾಜ ಒಡೆಯರು ಶ್ರೇಷ್ಟ ಸಾಹಿತಿಗಳಾಗಿದ್ದರು. ಚಿಕ್ಕ ದೇವರಾಜ ಭಿನ್ನಪ ಎಂಬ ಗ್ರಂಥ ಬರೆದರು. ಈ ಗ್ರಂಥದಲ್ಲಿ ಮೇಲುಕೋಟೆ ಚೆಲುವ ನಾರಾಯಣನನ್ನು ಹಾಡಿ ಹೊಗಳಲಾಗಿದೆ. ತಿರುಮಲಾರ್ಯ ಚಿಕ್ಕ ದೇವರಾಜ ಶತಕ. ಚಿಕ್ಕ ದೇವರಾಜ ವಿಜಯ ಎಂಬ ಗ್ರಂಥಗಳನ್ನು ಬರೆದರು.

ಸಿಂಗರಾರ್ಯ ಮಿತ್ರಾಮಿಂದ ಗೋವಿಂದ ಎಂಬ ಮೊದಲ ಕನ್ನಡದ ನಾಟಕವನ್ನು ಬರೆದರು.

ಸಂಚಿ ಹೊನ್ನಮ್ಮ ಹದಿಬದೆಯ ಧರ್ಮ ಎಂಬ ಸಾಂಗತ್ಯ ಗ್ರಂಥವನ್ನು ಬರೆದಳು. ಈ ಗ್ರಂಥದಲ್ಲಿ ಹೆಣ್ಣಿನ ಸ್ಥಾನಮಾನವನ್ನು ಅತಿ ಉನನತಕ್ಕೆ ತೆಗೆದುಕೊಂಡು ಹೋಗಲಾಗಿದೆ.

FAQ

ದಸರಾ ಉತ್ಸವವನ್ನುಯಾವಾಗ ಪ್ರಾರಂಭಿಸಿದರು ?

೧೬೧೦

ಚಾಮುಂಡಿ ಬೆಟ್ಟಕ್ಕೆ ೧೦೦೦ ಮೆಟ್ಟಿಲುಗಳನ್ನು ನಿರ್ಮಿಸಿದ ಒಡೆಯರು ಯಾರು ?

ದೊಡ್ಡ ದೇವರಾಜ ಒಡೆಯರು

ರಣಧೀರ ಎಂಬುದು ಯಾವ ಒಡೆಯರ ಬಿರುದಾಗಿದೆ ?

ಕಂಠೀರವ ನರಸರಾಜ ಒಡೆಯರು

ಇತರೆ ವಿಷಯಗಳು :

ಕನ್ನಡದ ಕವಿ ನುಡಿಗಳ ಬಗ್ಗೆ ಮಾಹಿತಿ

ಕರ್ನಾಟಕದ ಸಮಾಜಮುಖಿ ಚಳುವಳಿಗಳ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here