ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳ ಬಗ್ಗೆ ಮಾಹಿತಿ | Information about multi-purpose river valley projects in Kannada

0
721
ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳ ಬಗ್ಗೆ ಮಾಹಿತಿ | Information about multi-purpose river valley projects in Kannada
ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳ ಬಗ್ಗೆ ಮಾಹಿತಿ | Information about multi-purpose river valley projects in Kannada

ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳ ಬಗ್ಗೆ ಮಾಹಿತಿ Information about multi-purpose river valley projects Vividhoddesha Nadhi Kanive Yojanegala Bagge Mahithi in Kannada


Contents

ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳ ಬಗ್ಗೆ ಮಾಹಿತಿ

Information about multi-purpose river valley projects in Kannada
ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ವಿವಿಧೋದ್ದೇಶ ನದಿ ಕಣಿವೆ ಯೋಜನೆಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ನೀಡಲಾಗಿದೆ.

ದಾಮೋದರ್‌ ನದಿ ಕಣಿವೆ ಯೋಜನೆ :

 • ದಾಮೋದರ ಯೋಜನೆಯು ಸ್ವತಂತ್ರ್ಯ ಭಾರತದ ಮೊದಲನೆಯ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಾಗಿದೆ. ಇದು ಬಿಹಾರ ಹಾಗೂ ಪಶ್ಚಿಮ ಬಂಗಾಳರಾಜ್ಯಗಳು ಜೊತೆಗೂಡಿ ಕೈಗೊಂಡ ಯೋಜನೆಯಾಗಿದೆ. ದಾಮೋದರ ನದಿಯು ಪಶ್ಚಿಮ ಬಂಗಾಳದಲ್ಲಿ ಪ್ರವಾಹ ಉಂಟುಮಾಡಿ ಅಪಾರ ಹಾನಿಯುಂಟು ಮಾಡುತ್ತಿದ್ದು, ಇದನ್ನು ಪಶ್ಚಿಮ ಬಂಗಾಳದ ಕಣ್ಣೀರಿನ ನದಿ ಎಂದು ಕರೆಯುತ್ತಿದ್ದರು. ಈ ನದಿ ಸೃಷ್ಟಿಸುವ ಹಾನಿಯನ್ನು ತಡೆಗಟ್ಟುವ ಉದ್ದೇಶದಿಂದ ಈ ಯೋಜನೆಯನ್ನು ಕೈಗೊಳ್ಳಲಾಯಿತು. ಈ ಯೋಜನೆಯಿಂದ ಜಾರ್ಖಾಂಡ್‌ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳು ಉಪಯೋಗ ಪಡೆದುಕೊಳ್ಳುತ್ತಿವೆ.
 • ಈ ಯೋಜನೆಯ ಸುಮಾರು 2495 ಕಿ.ಮೀ. ಉದ್ದವಾದ ಕಾಲುವೆಗಳ ಜಾಲವನ್ನು ಹೊಂದಿದ್ದು ಸುಮಾರು 4.5 ಲಕ್ಷ ಹೆಕ್ಟೇರ್‌ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದೆ ತಿಲೈಯಾ, ಮೈಥಾನ್‌, ಕೊನಾರ್‌ ಮತ್ತು ಪಂಚೆತ್‌ ಹಿಲಗಳಲ್ಲಿ ದಾಮೋದರ ಹಾಗೂ ಅದರ ಉಪನದಿಗಳಿಗೆ ಆಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಈ ಯೋಜನೆಯನ್ನು ಸ್ವಾತಂತ್ರ್ಯ ಭಾರತದ ಮೊದಲ ನದಿ ಕಣಿವೆ ಯೋಜನೆಯಾಗಿದೆ. ಜುಲೈ 7, 1948ರಲ್ಲಿ ಸಂವಿಧಾನ ರಚನಾ ಸಭೆಯು ಕಾಯ್ದೆ ಮೂಲಕ ಸ್ಥಾಪಿಸಿತು. ಈ ಯೋಜನೆಯನ್ನು ಅಮೇರಿಕಾದ ಟೆನೆಸ್ಸಿ ಕಣಿವೆ ಯೋಜನೆ ಮಾದರಿಯಲ್ಲಿ ರಚಿಸಲಾಗಿದೆ.

ಭಾಕ್ರಾ ನಂಗಲ್‌ ಯೋಜನೆ :

 • ಇದು ಭಾರತದಲ್ಲಿಯೇ ಅತ್ಯಂತ ದೊಡ್ಡ ಎರಡನೇ ಎತ್ತರವಾದ ನದಿ ಕಣಿವೆ ಯೋಜನೆಯಾಗಿದ್ದು, ಪಂಜಾಬ್‌, ಹರಿಯಾಣ ಮತ್ತು ರಾಜಸ್ತಾನ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ. ಹಿಮಾಚಲ ಪ್ರದೇಶದ ಭಾಕ್ರಾ ಮತ್ತು ನಂಗಲ್‌ ಎಂಬಲ್ಲಿ ಸಟ್ಲೇಜ್‌ ನದಿಗೆ ಅಡ್ಡಲಾಗಿ ಎರಡು ಆಣೆಕಟ್ಟುಗಳನ್ನು ಹಾಕಿದರು. ಅಕ್ಟೋಬರ್‌ 22, 1963ರಂದು ಈ ಯೋಜನೆ ನಿರ್ಮಾಣ ಪೂರ್ಣಗೊಂಡಿತು. ಇದು ಸುಮಾರು 226ಮೀ ಎತ್ತರ ಹೊಂದಿದ್ದು, ಇದು 3402 ಕಿ.ಮೀ. ಉದ್ದವಾದ ಕಾಲುವೆಗಳ ಜಾಲವನ್ನು ಹೊಂದಿದ್ದು 14.6 ಲಕ್ಷ ಹೆಕ್ಟೇರ್‌ ಭೂಮಿಗೆ ನೀರಾವರಿ ಸೌಲಭ್ಯವನ್ನು ಪಡೆದಿದೆ. ಈ ಜಲಾಶಯವನ್ನು ಗೋವಿಂದ ಸಾಗರ ಜಲಾಶಯ ಎಂದು ಕರೆಯುತ್ತಾರೆ.

ಕೋಸಿ ನದಿ ಯೋಜನೆ :

 • ಈ ನದಿ ಯೋಜನೆಯ ಪ್ರಮುಖ ಉದ್ದೇಶ ಪ್ರವಾಹ ನಿಯಂತ್ರಣ, ಕೋಸಿ ನದಿಯನ್ನು ಬಿಹಾರದ ಕಣ್ಣೀರಿನ ನದಿ ಎಂದು ಕರೆಯುತ್ತೇವೆ. ಇದು ಭಾರತ ಮತ್ತು ನೇಪಾಳ ರಾಷ್ಟ್ರಗಳ ಜಂಟಿ ಯೋಜನೆಯಾಗಿದೆ. ಭಾರತ ಮತ್ತು ನೇಪಾಳ ಗಡಿಯಲ್ಲಿ ಬರುವ ಹನುಮಾನ್‌ ನಗರ ಎಂಬಲ್ಲಿ ಕೋಸಿ ನದಿಗೆ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಈ ಯೋಜನೆ 1955ರಲ್ಲಿ ಜಾರಿಗೊಳಿಸಲಾಯಿತು. ಈ ಯೋಜನೆಯಿಂದ ಸುಮಾರು ಸುಮಾರು 8.75 ಲಕ್ಷ ಹೆಕ್ಟೇರ್‌ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಲಾಗುತ್ತಿದೆ. ಇದರಿಂದ ಉತ್ಪಾದಿಸಲಾಗುವ ವಿದ್ಯುಚ್ಛಕ್ತಿಯಲ್ಲಿ ಶೇ.50 ರಷ್ಟನ್ನು ನೇಪಾಳಕ್ಕೆ ಒದಗಿಸಲಾಗುತ್ತಿದೆ.

ಹಿರಾಕುಡ್‌ ಯೋಜನೆ :

 • ಒರಿಸ್ಸಾದ ಸಂಬಾಲಪುರ ಜಿಲ್ಲೆಯಿಂದ 10ಕಿ.ಮೀ. ದೂರದಲ್ಲಿ ಮಹಾನದಿಗೆ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ಈ ನದಿಯನ್ನು ಒರಿಸ್ಸಾದ ಕಣ್ಣೀರಿನ ನದಿ ಎಂದು ಕರೆಯಲಾಗಿದೆ. ಹಿರಾಕುಡ್‌ 4801ಮೀ ಉದ್ದವಾಗಿದ್ದು, ಭಾರತದಲ್ಲಿಯೇ ಅತ್ಯಂತ ಉದ್ದವಾದ ಆಣೆಕಟ್ಟೆಯಾಗಿದೆ. ಇದು ಒಟ್ಟು 2.54 ಲಕ್ಷ ಹೆಕ್ಟೇರ್‌ ಭೂಮಿಗೆ ನೀರಾವರಿ ಸೌಲಭ್ಯ ಒದಗಿಸಿದೆ. ಈ ಯೋಜನೆಯಿಂದ ಬಿಹಾರ ಮತ್ತು ಛತ್ತೀಸಗಢ ರಾಜ್ಯಗಳು ನೀರಾವರಿ ಮತ್ತು ಜಲ ವಿದ್ಯುತ್‌ ಸೌಲಭ್ಯವನ್ನು ಪಡೆದಿವೆ.

ತುಂಗಭದ್ರಾ ಯೋಜನೆ :

 • ಈ ಯೋಜನೆಯ ಮುಖ್ಯ ಉದ್ದೇಶ ನೀರಾವರಿ ಮತ್ತು ಜಲವುದ್ಯುತ್‌ ಉತ್ಪಾದನೆ. ಕರ್ನಾಟಕ ಮತ್ತು ಆಂಧ್ರಪ್ರದೇಶ ರಾಜ್ಯಗಳ ಸಂಯುಕ್ತ ಯೋಜನೆಯಾಗಿದೆ. ಈ ಆಣೆಕಟ್ಟನ್ನು ಬಳ್ಳಾರಿ ಜಿಲ್ಲೆಯ ಹೊಸಪೇಟೆ ಬಳಿ ಯಲ್ಲಾಪುರ ಎಂಬಲ್ಲಿ ನಿರ್ಮಿಸಲಾಗಿದೆ. ಈ ಜಲಾಶಯವನ್ನು ಪಂಪಸಾಗರ ಎಂದು ಕರೆಯುತ್ತೇವೆ. ಇದು ಕರ್ನಾಟಕ ಮತ್ತು ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ 5.5. ಲಕ್ಷ ಹೆಕ್ಟೇರ್‌ ಭೂಮಿಗೆ ನೀರಾವರಿ ಹಾಗೂ ವಿದ್ಯುಚ್ಛಕ್ತಿ ಒದಗಿಸಿದೆ.

ಕೃಷ್ಣಾಮೇಲ್ದಂಡೆ ಯೋಜನೆ :

 • ಬಿಜಾಪುರ, ಬಾಗಲಕೋಟೆ, ರಾಯಚೂರು, ಗುಲ್ಬರ್ಗಾ ಜಿಲ್ಲೆಗಳಿಗೆ ನೀರಾವರಿ ಸೌಲಭ್ಯ ಹಾಗೂ ಕುಡಿಯುವ ನೀರಿನ ಯೋಜನೆಯಾಗಿದೆ. ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಲಾದ ಯೋಜನೆಯಾಗಿದ್ದು ಮೂರು ಆಣೆಕಟ್ಟನ್ನು ನಿರ್ಮಿಸಲಾಗಿದೆ.

ಆಲಮಟ್ಟಿ ಆಣೆಕಟ್ಟು :

 • ಈ ಆಣೆಕಟ್ಟನ್ನು ಕೃಷ್ಣಾ ನದಿಗೆ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಆಲಮಟ್ಟಿ ಬಳಿ ಕಟ್ಟಲಾಗಿದೆ. ಈ ಆಣೆಕಟ್ಟಿಗೆ ಮೇ 22, 1964 ರಂದು ಲಾಲ್‌ ಬಹದ್ದೂರ್‌ ಶಾಸ್ತ್ರಿ ಅಡಿಪಾಯ ಹಾಕಿದರು. ಆದ್ದರಿಂದೀ ಆಣೆಕಟ್ಟನ್ನು ಲಾಲ್‌ ಬಹದ್ದೂರ್‌ ಶಾಸ್ತ್ರಿ ಆಣೆಕಟ್ಟು ಎಂದು ಕರೆಯುತ್ತಾರೆ. ಬಿಜಾಪುರ, ಬಾಗಲಕೋಟೆ ಜಿಲ್ಲೆಗಳ ನಡುವೆ ಕಂಡುಬರುತ್ತದೆ. 2005ರಲ್ಲಿ ನಿರ್ಮಾಣ ಕಾರ್ಯ ಪೂರ್ಣಗೊಂಡಿತು.

ನಾರಾಯಣಪುರ ಆಣೆಕಟ್ಟು :

 • ಯಾದಗಿರಿ ಜಿಲ್ಲೆಯ ಷಹಾಪುರ ತಾಲ್ಲೂಕಿನ ನಾರಾಯಣಪುರ ತಾಲ್ಲೂಕಿನಲ್ಲಿ ಕೃಷ್ಣಾ ನದಿಗೆ ಆಣೆಕಟ್ಟು ಕಟ್ಟಲಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಸೇರಿದ ಈ ಆಣೆಕಟ್ಟಯಿಂದ ರಾಯಚೂರು, ಬಿಜಾಪುರ, ಮತ್ತು ಕಲ್ಬುರ್ಗಿ ಜಿಲ್ಲೆಯ ಕೆಲವು ಭಾಗಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಈ ಜಲಾಶಯವನ್ನು ಬಸವಸಾಗರ ಜಲಾಶಯ ಎನ್ನುವರು.

ನಾಗಾರ್ಜುನ ಸಾಗರ ಯೋಜನೆ :

 • ಆಂದ್ರಪ್ರದೇಶದ ನಂದಿಕೊಂಡ ಗ್ರಾಮದ ಬಳಿ ಕೃಷ್ಣಾ ನದಿಗೆ ಈ ಆಣೆಕಟ್ಟನ್ನು ನಿರ್ಮಿಸಲಾಗಿದೆ. ನೀರಾವರಿ ಮತ್ತು ಜಲವಿದ್ಯುತ್‌ ಶಕ್ತಿ ಉತ್ಪಾದನೆ ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ. ಇದು ಸುಮಾರು 8.30 ಲಕ್ಷ ಹೆಕ್ಟೇರ್‌ ಭೂಮಿಗೆ ನೀರಾವರಿ

ನರ್ಮದಾ ನದಿ ಕಣಿವೆ ಯೋಜನೆ :

 • ನರ್ಮದಾ ನದಿಗೆ ಅಡ್ಡಲಾಗಿ ಸುಮಾರು 23 ಆಣೆಕಟ್ಟುಗಳನ್ನು ನಿರ್ಮಿಸಲಾಗಿದ್ದು ಸರ್ದಾರ್‌ ಸರೋವರ, ನರ್ಮದಾ ಸಾಗರ ಮತ್ತು ನರ್ಮದಾ ಮೇಲ್ದಂಡೆ ಯೋಜನೆಗಳು ಪ್ರಮುಖವಾಗಿವೆ. ಈ ಆಣೆಕಟ್ಟು ಆಂದ್ರ ಉತ್ತರ ಗುಜರಾತ್‌, ರಾಜಸ್ತಾನ ಮತ್ತು ಮಹಾರಾಷ್ಟ್ರದ ಕೆಲವು ಭಾಗಗಳಿಗೆ ನೀರಾವರಿ ಮತ್ತು ವಿದ್ಯುಚ್ಛಕ್ತಿ ಸೌಲಭ್ಯ ಒದಗಿಸಲಾಗಿದೆ. ಈ ಕಣಿವೆ ಯೋಜನೆ ಅನೇಕ ವಿವಾದಗಳಿಂದ ಕೂಡಿದ್ದು ವಿವಾದ ಬಗೆಹರಿಸಲು 1969ರಲ್ಲಿ “ನರ್ಮದಾ ಜಲ ಪ್ರಾಧಿಕಾರ” ಸ್ಥಾಪಿಸಲಾಯಿತು.

FAQ :

ಭಾರತದಲ್ಲಿಯೇ ಅತ್ಯಂತ ದೊಡ್ಡ ಎರಡನೇ ಎತ್ತರವಾದ ನದಿ ಕಣಿವೆ ಯೋಜನೆ ಯಾವುದು?

ಭಾಕ್ರಾ ನಂಗಲ್‌ ಯೋಜನೆ

ಭಾರತದಲ್ಲಿಯೇ ಅತ್ಯಂತ ಉದ್ದವಾದ ಆಣೆಕಟ್ಟು ಯಾವುದು?

ಹಿರಾಕುಡ್‌ ಆಣೆಕಟ್ಟು

ಇತರೆ ವಿಷಯಗಳು :

ವಿಶ್ವ ಭೂ ದಿನದ ಬಗ್ಗೆ ಮಾಹಿತಿ

ಭೂಮಿಯ ಬಗ್ಗೆ ಮಾಹಿತಿ

LEAVE A REPLY

Please enter your comment!
Please enter your name here