ಜೈನ ಧರ್ಮದ ಬಗ್ಗೆ ಮಾಹಿತಿ | Information about Jainism in Kannada

0
630
ಜೈನ ಧರ್ಮದ ಬಗ್ಗೆ ಮಾಹಿತಿ Information about Jainism Jaina Darmada Bagge Mahiti in Kannada
ಜೈನ ಧರ್ಮದ ಬಗ್ಗೆ ಮಾಹಿತಿ Information about Jainism Jaina Darmada Bagge Mahiti in Kannada

ಜೈನ ಧರ್ಮದ ಬಗ್ಗೆ ಮಾಹಿತಿ Information about Jainism Jaina Darmada Bagge Mahiti in Kannada


Contents

ಜೈನ ಧರ್ಮದ ಬಗ್ಗೆ ಮಾಹಿತಿ

Information about Jainism in Kannada
ಜೈನ ಧರ್ಮದ ಬಗ್ಗೆ ಮಾಹಿತಿ

ಈ ಲೇಖನಿಯಲ್ಲಿ ಜೈನ ಧರ್ಮದ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ Post ನಲ್ಲಿ ನೀಡಲಾಗಿದೆ.

ಜೈನ

೬ ನೇ ಶತಮಾನ ಹೊಸ ಮತಗಳ ಉದಯ ಕಾಲವೆಂದು ಪರಿಗಣಿಸಲಾಗಿದೆ. ಈ ಹೊಸ ಮತಗಳು ಕೇವಲ ಭಾರತದಲ್ಲಿ ಅಷ್ಟೆ ಅಲ್ಲದೆ ವಿಶ್ವದ ವಿವಿಧ ರಾಷ್ಟ್ರಗಳಲ್ಲಿ ಹೊಸ ಹೊಸ ಧರ್ಮಗಳು ಹುಟ್ಟಿದವು ಅವುಗಳೆಂದರೆ.

ಚೀನಾ – ತಾವೋಯಿಸಂ ಮತ್ತು ಕನಪ್ಯೂಷಿಯಸ್‌

ಇಸ್ರೆಲ್‌ – ಈಸಯ್ಯ

ಪರ್ಷಿಯಾ – ಜೋರಾಸ್ರೀಯನ್‌

ಭಾರತ – ಜೈನ ಮತ್ತು ಭೌದ್ದ

ಭಾರತದಲ್ಲಿ ಜೈನ ಮತ್ತು ಭೌದ್ದ ಧರ್ಮ ಬೆಳವಣಿಗೆಗೆ ಕಾರಣಗಳು

ಹಿಂದೂ ಧರ್ಮವನ್ನು ವಿರೋಧಿಸಿ ವಿರೋಧಿಸಿ ಬೆಳೆದವು. ವಿರೋಧಕ್ಕೆ ಕಾರಣವೆಂದರೆ

ವೈದಿಕ ಧರ್ಮದಲ್ಲಿನ ಜಾತಿ ವ್ಯವಸ್ಥೆ

ವೈದಿಕ ಧರ್ಮದಲ್ಲಿನ ಲಿಂಗ ತಾರತಮ್ಯ

ವೈದಿಕ ಧರ್ಮದಲ್ಲಿನ ಅನವಶ್ಯಕ ಯಜ್ಞಯಾಗಾದಿಗಳು

ವೈದಿಕ ಧರ್ಮದಲ್ಲಿನ ಕಠಿಣವಾದ ಸಂಸ್ಕೃತ ಭಾಷೆ

ಜೈನ ಧರ್ಮ

ಹಿಂದೂ ಧರ್ಮವನ್ನು ವಿರೋಧಿಸಿದ ಮೊಟ್ಟ ಮೊದಲ ಧರ್ಮವಾಗಿದೆ.

ಜೈನ ಧರ್ಮದ ಪ್ರತಿಪಾದಕರನ್ನು ತೀರ್ಥಂಕರರೆಂದು ಕರೆಯುತ್ತಾರೆ.

ತೀರ್ಥಂಕರ ಎಂದರೆ ಸಂಸಾರವೆಂಬ ಸಾಗರವನ್ನು ದಾಟಲು ದಾರಿ ತೋರಿಸುವವ ಎಂದರ್ಥ.

ಜೈನ ಧರ್ದ ಪರಂಪರೆಯಲ್ಲಿ ೨೪ ಜನ ತೀರ್ಥಂಕರರು ಕಂಡು ಬರುತ್ತಾರೆ.

ಮೊದಲ ತೀರ್ಥಂಕರ ವೃಷಭನಾಥ / ಆದಿನಾಥ

ವೃಷಭನಾಥ / ಅದಿನಾಥನನ್ನು ಜೈನ ಧರ್ಮದ ಸ್ಥಾಪಕ ಎಂದು ಜೈನರು ನಂಬುತ್ತಾರೆ.

೨೩ ನೇತೀರ್ಥಂಕರ ಪಾರ್ಶ್ವನಾಥ

೨೪ ನೇ ಮತ್ತು ಪ್ರಸಿದ್ದ ತೀರ್ಥಂಕರ ವರ್ಧಮಾನ ಮಹಾವೀರ

ವರ್ಧಮಾನ ಮಹಾವೀರ ಕ್ರಿ. ಪೂ. ೫೯೯ – ೫೨೭

ಈತ ಬಿಹಾರದ ವೈಶಾಲಿ ಪಕ್ಕದಲ್ಲಿರುವ ಕುಂದ/ಕುಂಡಲಿ ಎಂಬ ಗ್ರಾಮದಲ್ಲಿ ಜನಿಸಿದನು.

ಮೂಲ ಹೆಸರು – ವರ್ಧಮಾನ

ತಂದೆ – ಸಿದ್ದಾರ್ಥ

ತಾಯಿ – ತ್ರಿಶಲಾದೇವಿ

ಹೆಂಡತಿ – ಯಶೋಧೆ

ಮಗಳು – ಅನುಜ್ಜಾ

ಅಳಿಯ – ಜಮಾಲಿ

ಮಹಾವೀರ ತನ್ನ ತಂದೆ ತಾಯಿಯರ ಆಕಸ್ಮಿಕ ಮರಣದಿಂದಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ೩೦ ನೇ ವಯಸ್ಸಿನಲ್ಲಿ ಸಂಸಾರಿಕ ಜೀವನವನ್ನು ತ್ಯಜಿಸಿದನು.

ವರ್ಧಮಾನ ಲೋಕ ಜ್ಞಾನಕ್ಕಾಗಿ ತನ್ನ ಗುರುವಾಗಿ ಸ್ವೀಕರಿಸಿಕೊಂಡನು. ಇವನಿಂದ ಯಾವುದೇ ಜ್ಞಾನೋ ದಯವಾಗದ ಕಾರಣ ಇವನನ್ನು ಬಿಟ್ಟು ಅಲೆಮಾರಿ ಯಾದನು.

ಮಹಾವೀರ ಎಂದರೆ ಎಲ್ಲವನ್ನೂ ಜಯಿಸಿದವನು ಎಂದರ್ಥ. ಮಹಾವೀರ ತಾನು ಪಡೆದುಕೊಂಡ ಜ್ಞಾನವನ್ನು ತನ್ನ ೧೧ ಜನ ಶಿಷ್ಯರಿಗೆ ಬೋಧಿಸಿದನು.

ಜೈನ ಧರ್ಮದ ತತ್ವಗಳು ಅಥವಾ ಬೋಧನೆಗಳು

ಅಹಿಂಸೆ

ಸತ್ಯ

ಆಸ್ಥೇಯ

ಅಪರಿಗ್ರಹ

ಬ್ರಹ್ಮಚರ್ಯ

ತ್ರಿರತ್ನಗಳು

ಸಮ್ಯಕ್‌ ಜ್ಞಾನ

ಸಮ್ಯಕ್‌ ದರ್ಶನ

ಸಮ್ಯಕ್‌ ಚಾರಿತ್ರ್ಯ

ಗ್ರಂಥಗಳು

ಜೈನ ಧರ್ಮದ ಗ್ರಂಥಗಳಿಗೆ ಅಂಗಗಳು ಎಂದು ಕರೆಯುತ್ತಾರೆ.

ಇವು ಪ್ರಾಕೃತ ಭಾಷೆಯಲ್ಲಿದ್ದು ಅರ್ಧಮಾಗಧಿ ಲಿಪಿಯನ್ನು ಒಳಗೊಂಡಿವೆ.

ಶ್ವೇತಾಂಬರರು :

ಇವರು ಪಾರ್ಶವನಾಥನ ಅನುಯಾಯಿಗಳು

ಬಿಳಿಯ ಬಟ್ಟೆಗಳನ್ನು ಧರಿಸುತ್ತಿದ್ದರು.

ಇವರ ಆಚರಣೆಗಳು ಸರಳವಾಗಿದ್ದವು.

ಇವರ ನಾಯಕ ಸ್ಥೂಲಭದ್ರ

ಇವರು ಉತ್ತರ ಭಾರತದಲ್ಲಿ ಹೆಚ್ಚಾಗಿ ಕಂಡು ಬರುತ್ತಾರೆ.

ದಿಗಂಬರರು :

ಮಹಾವೀರನ ಅನುಯಾಯಿಗಳು

ಯಾವುದೇ ಬಟ್ಟೆಯನ್ನು ಧರಿಸುತ್ತಿರಲಿಲ್ಲ.

ಇವರ ಆಚರಣೆಗಳು ಕಠಿಣವಾಗಿದ್ದವು.

ಇವರ ನಾಯಕ ಭದ್ರಬಾಹು.

ಜೈನ ಧರ್ಮದ ಸಮ್ಮೇಳನಗಳು

ಮೊದಲ ಸಮ್ಮೇಳನ :

ಸ್ಥಳ – ಪಾಟಲಿಪುತ್ರ

ವರ್ಷ – ಕ್ರಿ. ಪೂ ೩೦೦

ಅಧ್ಯಕ್ಷ – ಸ್ಥೂಲಭದ್ರ

ಈ ಸಮ್ಮೇಳನದಲ್ಲಿ ಜೈನ ಧರ್ಮದ ಪವಿತ್ರ ಗ್ರಂಥಗಳಾದ ಅಂಗಗಳನ್ನು ಒಂದು ಕಡೆ ಕ್ರೋಡಿಕರಿಸಲಾಯಿತು.

ಎರಡನೇ ಮ್ಮೇಳನ :

ಸ್ಥಳ – ಗುಜರಾತ

ವರ್ಷ – ಕ್ರಿ. ಶಕ ೫೧೨

ಅಧ್ಯಕ್ಷ – ದೇವೇಂದ್ರ ಕ್ಷೇಮಕರಣ

ಈ ಸಮ್ಮೇಳನದಲ್ಲಿ ಜೈನ ಧರ್ಮದ ಪವಿತ್ರ ಗ್ರಂಥಗಳಾದ ಅಂಗಗಳನ್ನು ವಿಶ್ಲೇಷಣೆ ಮಾಡಿ ಗ್ರಂಥ ರೂಪದಲ್ಲಿ ಬಿಡುಗಡೆ ಮಾಡಲಾಯಿತು.

ಕಲೆ ಮತ್ತು ಶಿಲ್ಪಕ್ಕೆ ಜೈನ ಧರ್ಮದ ಕೊಡುಗೆ

ಜೈನ ಸನ್ಯಾಸಿಗಳು ತಂಗಲು ಕೆಲವು ಗುಹಾಲಯಗಳು ಮತ್ತು ಬಸದಿಗಳನ್ನು ನಿರ್ಮಿಸಲಾಯಿತು. ಅವುಗಳೆಂದರೆ ಉದಯಗಿರಿ, ಎಲ್ಲೋರಾ

ಉದಯಗಿರಿ – ಹುಲಿಯ ಗುಹೆ

ಓಡಿಸ್ಸಾ – ಇಂದ್ರಸಭಾ ಗುಹೆ

ಮೂಡಬಿದರೆ – ಸಾವಿರ ಕಂಬಗಳ ಬಸದಿ

ಶ್ರವಣಬೆಳಗೋಳ – ಗೊಮ್ಮಟೇಶ್ವರ ವಿಗ್ರಹ

FAQ

ಜೈನಧರ್ಮದ ಸ್ಥಾಪಕ ಯಾರು ?

ಮಹಾವೀರ

ಜೈನ ಧರ್ಮದ ಮೊದಲ ಸಮ್ಮೇಳನ ಎಲ್ಲಿ ನಡೆಯಿತು ?

ಪಾಟಲಿಪುತ್ರ

ಇತರೆ ವಿಷಯಗಳು :

ಆರ್ಥಿಕ ವಲಯಗಳ ಬಗ್ಗೆ ಮಾಹಿತಿ

ಕಾಲೇಜಿನ ದಿನಗಳ ಬಗ್ಗೆ ಪ್ರಬಂಧ

LEAVE A REPLY

Please enter your comment!
Please enter your name here