Samasagalu in Kannada | ಸಮಾಸಗಳು

0
1294
Samasagalu in Kannada | ಸಮಾಸಗಳು
Samasagalu in Kannada | ಸಮಾಸಗಳು

Samasagalu in Kannada, ಸಮಾಸಗಳು, samasagalu kannada grammar


Contents

Samasagalu in Kannada

Samasagalu in Kannada
Samasagalu in Kannada ಸಮಾಸಗಳು

ಈ ಲೇಖನಿಯಲ್ಲಿ ಸಮಾಸಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮ post ನಲ್ಲಿ ತಿಳಿಸಿದ್ದೇವೆ.

ಸಮಾಸ

ಎರಡು ಅಥವಾ ಅನೇಕ ಪದಗಳು ಸೇರಿ ಒಂದು ಪದವಾಗುವಾಗ ಮಧ್ಯದಲ್ಲಿ ವಿಭಕ್ತಿ ಪ್ರತ್ಯಯ ಲೋಪವಾದಾಗ ‘ಸಮಾಸ’ ವೆನಿಸುವುದು. ಸಮ್ + ಆಸ= ಸಮಾಸ. ಸಮಾಸವೆಂದರೆ ಕೂಡುನುಡಿ. ಅಥವಾ ಪದವಿಧಿ. ಎರಡು ವರ್ಣಗಳು ಪರಸ್ಪರ ಕೂಡಿದರೆ ಸಂಧಿಯಾಗುವಂತೆ, ಎರಡು ಪದಗಳು ಪರಸ್ಪರ ಕೂಡಿದರೆ ಸಮಾಸವಾಗುತ್ತದೆ.

ಸಮಾಸದಲ್ಲಿ ಎಂಟು ವಿಧಗಳಿವೆ

  1. ತತ್ಪುರುಷ ಸಮಾಸ
  2. ಕರ್ಮಧಾರೆಯ ಸಮಾಸ
  3. ಅಂಶಿ ಸಮಾಸ
  4. ದ್ವಿಗು ಸಮಾಸ
  5. ದ್ವಂದ್ವ ಸಮಾಸ
  6. ಬಹುವ್ರೀಹಿ ಸಮಾಸ
  7. ಕ್ರಿಯಾ ಸಮಾಸ
  8. ಗಮಕ ಸಮಾಸ

ತತ್ಪುರುಷ ಸಮಾಸ

ಎರಡು ನಾಮಪದಗಳು ಸೇರಿ ಸಮಾಸ ಪದವಾದಾಗ ಉತ್ತರ ಪದದ ಅರ್ಥವು ಪ್ರಧಾನವಾಗಿದ್ದರೆ ‘ತತ್ಪುರುಷ ಸಮಾಸ’ ಎನ್ನುತ್ತಾರೆ.

ಉದಾ: ಮರದ + ಕಾಲ = ಮರಗಾಲ   

ಬೆಟ್ಟದ + ತಾವರೆ = ಬೆಟ್ಟದಾವರೆ   

ಕೈ + ತಪ್ಪು = ಕೈತಪ್ಪು 

ಹಗಲಿನಲ್ಲಿ + ಕನಸು = ಹಗಲುಗನಸು

ಕರ್ಮಧಾರೆಯ ಸಮಾಸ

 “ಪೂರ್ವೋತ್ತರ ಪದಗಳು ಲಿಂಗ, ವಚನ, ವಿಭಕ್ತಿಗಳಿಂದ, ಸಮನಾಗಿದ್ದು, ವಿಶೇಷಣ, ವಿಶೇಷ್ಯಗಳಿಂದ ಕೂಡಿ ಆಗುವ ಸಮಾಸಕ್ಕೆ ಕರ್ಮಧಾರೆಯ ಸಮಾಸ ಎನ್ನಲಾಗಿದೆ”.

ಉದಾ: ಕರಿದು + ಮೋಡ = ಕಾರ್ಮೋಡ

ಕೆಚ್ಚನೆ + ಪವಳ = ಕೆಂಬವಳ

ಮುಖವು + ಕಮಲದಂತೆ = ಕಮಲಮುಖ

ನಳನೆಯ + ರಾಜ = ನಳರಾಜ

ಹಿರಿದು + ಜೇನು = ಹೆಚ್ಚೇನು

ಇಪಾದ + ಸ್ವರ = ಇಂಚರ

ಅಂಶಿ ಸಮಾಸ

ಪೂರ್ವ ಮತ್ತು ಉತ್ತರ ಪದಗಳು ಅಂಶ ಮತ್ತು ಅಂಶಿ ಭಾವದಿಂದ ಸೇರಿದ್ದರೆ, ಅದನ್ನು ಅಂಶಿ ಸಮಾಸ ಎನ್ನುವರು.

ಉದಾ: ತಲೆಯ + ಮುಂದು = ಮುಂದಲೆ 

ಬೆರಳಿನ + ತುದಿ = ತುದಿಬೆರಳು 

ಕರೆಯ + ಒಳಗು = ಒಳಗೆರೆ

ತುಟಿಯ + ಕೆಳಗೆ = ಕೆಳದುಟಿ

ಮೈಯ + ಒಳಗೆ = ಒಳಮೈ

ದ್ವಿಗು ಸಮಾಸ

“ಪೂರ್ವ ಪದವು ಸಂಖ್ಯಾವಾಚಕವಾಗಿದ್ದು ಉತ್ತರಪದದಲ್ಲಿರುವ ನಾಮಪದದೊಡನೆ ಸೇರಿ ಆಗುವ ಸಮಾಸವೇ ದ್ವಿಗು ಸಮಾಸ”.

ಉದಾ: ಒಂದು + ಕಣ್ಣು = ಒಕ್ಕಣ್ಣು   

ಎರಡು + ಬಗೆ = ಇಬ್ಬಗೆ 

ಸಪ್ತ + ಸ್ವರ = ಸಪ್ತಸ್ವರ

ದ್ವಂದ್ವ ಸಮಾಸ 

ಎರಡು ಅಥವಾ ಹೆಚ್ಚು ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲಾ ಪದಗಳ ಅರ್ಥಗಳೂ ಪ್ರಧಾನವಾಗಿ ಉಳ್ಳ ಸಮಾಸಕ್ಕೆ ದ್ವಂದ್ವ ಸಮಾಸ ಎಂದು ಹೆಸರು.

ಉದಾ: ಗಿಡವೂ + ಮರವೂ = ಗಿಡಮರ

ಕಸವೂ + ಕಡ್ಡಿಯೂ = ಕಸಕಡ್ಡಿ

ರಾಮನು + ಲಕ್ಷ್ಮಣನೂ = ರಾಮಲಕ್ಷ್ಮಣ

ಬೆಟ್ಟವೂ + ಗುಡ್ಡವೂ = ಬೆಟ್ಟಗುಡ್ಡಗಳು

ಅಣ್ಣನು + ತಮ್ಮನು= ಅಣ್ಣತಮ್ಮಂದಿರು

ಬಹುವ್ರೀಹಿ ಸಮಾಸ

ಎರಡು ಅಥವಾ ಅನೇಕ ನಾಮಪದಗಳು ಸೇರಿ ಸಮಾಸವಾದಾಗ ಬೇರೊಂದು ಪದದ ಅರ್ಥವು ಪ್ರಧಾನವಾಗುಳ್ಳ ಸಮಾಸಕ್ಕೆ ಬಹುವ್ರೀಹಿ ಸಮಾಸವೆನ್ನುತ್ತಾರೆ.

ಉದಾ: ಕೆಂಪಾದ + ಕಣ್ಣು ಉಳ್ಳವ = ಕೆಂಗಣ್ಣ

ಚಕ್ರವನ್ನು + ಪಾಣಿಯಲ್ಲಿ ಉಳ್ಳವನು = ಚಕ್ರಪಾಣಿ

ಮೂರು + ಕಣ್ಣು +ಉಳ್ಳವ =ಮುಕ್ಕಣ್ಣ

ಕ್ರಿಯಾ ಸಮಾಸ

ಸಮಾಸದಲ್ಲಿ ಉತ್ತರ ಪದವು ಕ್ರಿಯಾ ಸೂಚಕವಾಗಿದ್ದರೆ ಅದು ಕ್ರಿಯಾ ಸಮಾಸವಾಗುತ್ತದೆ.

ಉದಾ: ಕಣ್ಣನ್ನು + ತೆರೆ = ಕಣ್ದೆರೆ

ಮೈಯನ್ನು + ತಡವಿ = ಮೈದಡವಿ

ಸುಳ್ಳನ್ನು +ಆಡು=ಸುಳ್ಳಾಡು

ಗಮಕ ಸಮಾಸ

ಪೂರ್ವ ಪದವು ಸರ್ವನಾಮ ಅಥವಾ ಕೃದಂತಗಳಲ್ಲಿ ಒಂದಾಗಿದ್ದು, ಉತ್ತರ ಪದವು ನಾಮ ಪದವಾಗಿದ್ದರೆ ಅದನ್ನು ಗಮಕ ಸಮಾಸವೆನ್ನುತ್ತಾರೆ.

ಉದಾ: ಮಾಡಿದುದು + ಅಡುಗೆ = ಮಾಡಿದಡುಗೆ

ಬಾಡಿದುದು + ಹೂವು = ಬಾಡಿದ ಹೂವು

ಉಡುವುದು + ದಾರ = ಉಡುದಾರ

ಯಾವುದು+ ಮರ=ಯಾವಮರ

ಇತರೆ ವಿಷಯಗಳು:

ಲೋಪ ಸಂಧಿಗೆ 10 ಉದಾಹರಣೆಗಳು

ಗಾದೆ ಮಾತುಗಳು

LEAVE A REPLY

Please enter your comment!
Please enter your name here