Nille Nille Kolhapura Devi Lyrics in Kannada | ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ ಸಾಂಗ್‌ ಲಿರಿಕ್ಸ್‌

0
207
Nille Nille Kolhapura Devi Lyrics in Kannada | ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ ಸಾಂಗ್‌ ಲಿರಿಕ್ಸ್‌
Nille Nille Kolhapura Devi Lyrics in Kannada | ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ ಸಾಂಗ್‌ ಲಿರಿಕ್ಸ್‌

Nille Nille Kolhapura Devi Lyrics in Kannada ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ ಸಾಂಗ್‌ ಲಿರಿಕ್ಸ್‌ song lyrics in kannada


Nille Nille Kolhapura Devi Lyrics in Kannada

Nille Nille Kolhapura Devi Lyrics in Kannada
Nille Nille Kolhapura Devi Lyrics in Kannada | ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ ಸಾಂಗ್‌ ಲಿರಿಕ್ಸ್‌

ಈ ಲೇಖನಿಯಲ್ಲಿ ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ ಸಾಂಗ್ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ ಸಾಂಗ್‌ ಲಿರಿಕ್ಸ್‌

ನಿಲ್ಲೆ ನಿಲ್ಲೆ ಕೊಲ್ಲಾಪುರದೇವಿ| 
ಇಲ್ಲೆ ಬಾರೆ ಗೆಜ್ಜೆ ಘಲ್ಲೆನುತ ||ಪ||

ಕರುಣಸಾಗರ ಹರಿತರುಣಿಯೇ ನೀ ಕೋಟಿ| 
ತರುಣ ಕಿರಣ ರತ್ನಾಭರಣನಿಟ್ಟು| 
ಮಣಿಕೌಂಸ್ತುಭ ವಕ್ಷಸ್ಥಳದಲ್ಲಿದ್ದ್ಹೊಳೆಯುವ| 
ಸುಪರಣವಾಹನಾ ಲಕ್ಷ್ಮಿ ಶರಣು ವಂದಿತಳೆ ||೧||

ಪಂಕಜಾಕ್ಷಿ ಪಂಕಜೋದ್ಭವನ ಜನನಿ| 
ಪಂಕಜಮುಖಿ ಪಾಲಿಸೆ ಎನ್ನ| 
ಪಂಕಜನಾಭನ ಅಂಕದಲ್ಲೊಪ್ಪುವ| 
ಪಂಕಜೆ ನಿನ್ನ ಪಾದಪಂಕಜಕೆರಗುವೆ ||೨||

ಮುಗುಳುನಗೆಯ ಮುತ್ತುಗಳು ಜಡಿತ ಕ| 
ರ್ಣಗಲ ವಾಲೆಯು ಕದಪಿನಲ್ಲ್ಹೊಳೆಯೆ| 
ಬಗೆ ಬಗೆ ಸರಬಂಗಾರವನಿಟ್ಟು ಮೂ| 
ರ್ಜಗವ ಮೋಹಿಸೊ ಜಗದಾಧಿಪತಿಯ ರಾಣಿ ||೩||

ಸಾಗರದೊಳಗ್ಹುಟ್ಟಿ ಆಗ ಶ್ರೀನಾಥನ| 
ಬ್ಯಾಗ ನೋಡಿ ಪರಮೋತ್ಸವದಿ| 
ನಾಗಶಯನ ನಾಗಾರಿವಾಹನನ| 
ರ್ಧಾಂಗಿ ಎನಿಸಿದಾನಂತ ಮಹಿಮಳೆ||೪||

ಶೇಷಗಿರಿಯ ಶ್ರೀನಿವಾಸನ ಎದೆಯಲ್ಲ್ಯಾ| 
ವಾಸವಾಗಿರಲ್ಯತಿ ಪ್ರೇಮದಲಿ| 
ಈಶ ನಾರದ ಬ್ರಹ್ಮಾಸುರರೊಡೆಯ ಭೀ| 
ಮೇಶಕೃಷ್ಣ ನ ನಿಜದಾಸರಿಗ್ವರನೀಹೊ ||೫||

ಇತರೆ ವಿಷಯಗಳು :

ಲಕ್ಷ್ಮಿ ಅಷ್ಟ ಸ್ತೋತ್ರ ಕನ್ನಡ

ಶಾಂತಕರಂ ಭುಜಗಶಯನಂ

LEAVE A REPLY

Please enter your comment!
Please enter your name here