Mugulu Nage Song Lyrics in Kannada | ಮುಗುಳು ನಗೆಯೇ ನೀ ಹೇಳು ಸಾಂಗ್‌ ರಿಲಿಕ್ಸ್‌ ಕನ್ನಡ

0
383
Mugulu Nage Song Lyrics in Kannada | ಮುಗುಳು ನಗೆಯೇ ನೀ ಹೇಳು ಸಾಂಗ್‌ ರಿಲಿಕ್ಸ್‌ ಕನ್ನಡ
Mugulu Nage Song Lyrics in Kannada | ಮುಗುಳು ನಗೆಯೇ ನೀ ಹೇಳು ಸಾಂಗ್‌ ರಿಲಿಕ್ಸ್‌ ಕನ್ನಡ

Mugulu Nage Song Lyrics in Kannada ಮುಗುಳು ನಗೆಯೇ ನೀ ಹೇಳು ಸಾಂಗ್‌ ರಿಲಿಕ್ಸ್‌ ಕನ್ನಡ song in kannada


Mugulu Nage Song Lyrics in Kannada

Mugulu Nage Song Lyrics in Kannada
Mugulu Nage Song Lyrics in Kannada

ಮುಗುಳು ನಗೆಯೇ ನೀ ಹೇಳು ಸಾಂಗ್‌ ರಿಲಿಕ್ಸ್‌ ಕನ್ನಡ

ಮುಗುಳು ನಗೆಯೇ ನೀ ಹೇಳು 
ಮುಗುಳು ನಗೆಯೇ ನೀ ಹೇಳು 
ಯಾರಿರದ ವೇಳೆಯಲ್ಲಿ 
ನೀ ಏಕೆ ಜೊತೆಗಿರುವೆ 
ತುಸು ಬಿಡಿಸಿ ಹೇಳು ನನಗೆ 
ನನ ತುಟಿಯೇ ಬೇಕೇ ನಿನಗೆ
ನನ್ನೆಲ್ಲಾ ನೋವಿಗೂ ನಗುವೆ 
ನೀ ಏಕೆ ಹೀಗೆ? 

ಮುಗುಳು ನಗೆಯೇ ನೀ ಹೇಳು 
ಮುಗುಳು ನಗೆಯೇ ನೀ ಹೇಳು 

ಸಾಕಾಗದ ಏಕಾಂತವ 
ನಿನ್ನಿಂದ ನಾ ಕಲಿತೆ 
ಯಾಕಾಗಿ ನೀ ಮರೆ ಮಾಚುವೆ 
ನನ್ನೆಲ್ಲಾ ಭಾವುಕತೆ
ಸೋತಂತಿದೆ ಸಂಭಾಷಣೆ 
ಗೆಲ್ಲುವುದು ನಿನಗೇ ಹೊಸತೆ 
ಅಳುವೊಂದು ಬೇಕು ನನಗೆ
ಅರೆ ಘಳಿಗೆ ಹೋಗು ಹೊರಗೆ
ಇಷ್ಟೊಳ್ಳೆ ಸ್ನೇಹಿತನಾಗಿ
ಕಾಡಿದರೆ ಹೇಗೆ  

ಮುಗುಳು ನಗೆಯೇ ನೀ ಹೇಳು 
ಮುಗುಳು ನಗೆಯೇ ನೀ ಹೇಳು 
ಯಾರಿರದ ವೇಳೆಯಲ್ಲಿ 
ನೀ ಏಕೆ ಜೊತೆಗಿರುವೆ 

ಕಣ್ಣಾಲಿಯ ಜಲಪಾತವ 
ಬಂಧಿಸಲು ನೀ ಯಾರು?
ನೀ ಮಾಡುವ ನಗೆ ಪಾಟಲು 
ಖಂಡಿಸಲು ನಾ ಯಾರು?
ಸಂತೊಷಕೂ ಸಂತಾಪಕೂ 
ಇರಲಿ ಬಿಡು ಒಂದೇ ಬೇರು 
ಕಂಗಳಲಿ ಬಂದಾ ಮಳೆಗೆ 
ಕೊಡೆ ಹಿಡಿವ ಆಸೆಯೆ ನಿನಗೆ 
ಅತ್ತು ಬಿಡು ನನ್ನಾ ಜೊತೆಗೆ 
ನಗಬೇಡ ಹೀಗೆ… 

ಮುಗುಳು ನಗೆಯೇ ನೀ ಹೇಳು 
ಮುಗುಳು ನಗೆಯೇ ನೀ ಹೇಳು 
ಯಾರಿರದ ವೇಳೆಯಲ್ಲಿ 
ನೀ ಏಕೆ ಜೊತೆಗಿರುವೆ

ಇತರೆ ವಿಷಯಗಳು :

ನೀರ ಬಿಟ್ಟು ನೆಲದ ಮೇಲೆ ದೋಣಿ ಸಾಗದು ಸಾಂಗ್‌

ನನ್ನ ಚೆಲುವೆ ಸಾಂಗ್ ಲಿರಿಕ್ಸ್

LEAVE A REPLY

Please enter your comment!
Please enter your name here