ಎಂ ಗೋವಿಂದ ಪೈ ಜೀವನ ಚರಿತ್ರೆ | M Govinda Pai In Kannada

0
1254
ಎಂ ಗೋವಿಂದ ಪೈ ಜೀವನ ಚರಿತ್ರೆ
ಎಂ ಗೋವಿಂದ ಪೈ ಜೀವನ ಚರಿತ್ರೆ

ಎಂ ಗೋವಿಂದ ಪೈ ಜೀವನ ಚರಿತ್ರೆ, M Govinda pai information in kannada m govinda pai jeevana charitre in kannada m govinda pai in kannaḑa m govinda pai biography in kannada


Contents

M Govinda Pai In Kannada

ಎಂ ಗೋವಿಂದ ಪೈ ಅವರು ಮೊದಲ ರಾಷ್ಟ್ರಕವಿಯಾಗಿ ಪ್ರಸಿದ್ಧರಾಗಿರುವ ಇವರ ಜೀವನ ಚರಿತ್ರೆಯನ್ನು ಈ ಕೆಳಗಿನ ಲೇಖನದಲ್ಲಿ ವಿವರಿಸಲಾಗಿದೆ.

ಎಂ ಗೋವಿಂದ ಪೈ ಜೀವನ ಚರಿತ್ರೆ
M Govinda pai information in kannada

ಎಂ ಗೋವಿಂದ ಪೈ ಜೀವನ ಚರಿತ್ರೆ

ಪೀಠಿಕೆ :

ಗೋವಿಂದ ಪೈ ಅವರು ಕರ್ನಾಟಕ ಕಂಡ ಅಪರೂಪದ ಪ್ರತಿಭೆ ಆಗಿದ್ದು ಕನ್ನಡದ ಮುಂಚೂಣಿಯ ಕವಿ, ಚಿಂತಕ, ಇತಿಹಾಸಕಾರ ಮತ್ತು ವಿದ್ವಾಂಸ, ಕವಿ, ಅನುವಾದಕ ಅವರು ಜಗತ್ತಿನಾಂದ್ಯತ ಶಾಸ್ತ್ರೀಯ ಮತ್ತು ಆಧುನಿಕ ಎರಡೂ ಭಾಷೆಗಳಲ್ಲಿ ಸುಮಾರು 25 ಭಾಷೆಗಳಲ್ಲಿ ಜ್ಞಾನವನ್ನು ಹೊಂದಿದ್ದರು ಮತ್ತು ಯಾವಾಗಲೂ ಭಾಷೆಯಲ್ಲಿ ಹೊಸ ದಿಗಂತಗಳನ್ನು ಕಲಿಯುತ್ತಿದ್ದರು ಮತ್ತು ಅನ್ವೇಷಿಸುತ್ತಿದ್ದರು.

ವಿಷಯ ವಿವರಣೆ :

 ಸಾಹಿತ್ಯ, ಧರ್ಮ, ಇತಿಹಾಸ ಮತ್ತು ಸಂಸ್ಕೃತಿ. ತಮ್ಮ ಗ್ರಾಮ ಮತ್ತು ಅವರ ಧರ್ಮದ ಪಂಥದಿಂದ ಪ್ರಾರಂಭಿಸಿ ಅವರು ಬಾಹ್ಯಾಕಾಶ ಮತ್ತು ಸಮಯದಲ್ಲಿ ‘ಅನ್ಯ’ ಎಂದು ಕರೆಯಲ್ಪಡುವ ಧರ್ಮಗಳು ಮತ್ತು ಸಂಸ್ಕೃತಿಗಳ ಬಗ್ಗೆ ಅಧ್ಯಯನ ಮತ್ತು ಬರವಣಿಗೆಯನ್ನು ಮೀರಿದರು. ಹಿಂದೂ ಧರ್ಮದ ವಿವಿಧ ಪಂಗಡಗಳು, ಜೈನ ಧರ್ಮ, ಬೌದ್ಧ ಧರ್ಮ, ಕ್ರಿಶ್ಚಿಯನ್ ಧರ್ಮ, ಇಸ್ಲಾಂ ಧರ್ಮವನ್ನು ಗೋವಿಂದ ಪೈ ಅವರು ಸಂಶೋಧನೆಯ ಕ್ಷೇತ್ರವಾಗಿ ಅಥವಾ ಸಾಹಿತ್ಯ ರಚನೆಗಾಗಿ ಅಥವಾ ಅವರ ಭಾಷೆಗಳಿಗೆ ಅನುವಾದಕ್ಕಾಗಿ ಸಂಬೋಧಿಸಿದರು.

ಜನನ :

ಎಂ. ಗೋವಿಂದ ಪೈ ಅವರು ಮಾರ್ಚ್ 23, 1883 ರಲ್ಲಿ ಜನಿಸಿದರು. ಇವರು ಕೊಂಕಣಿ ಕುಟುಂಬದಲ್ಲಿ ಮಂಜೇಶ್ವರದಲ್ಲಿರುವ ಅವರ ತಾಯಿಯ ತವರುಮನೆ  ಮನೆಯಲ್ಲಿ ಗೋವಿಂದ ಪೈ ಜನಿಸಿದರು.

ಗೋವಿಂದ ಪೈ ಅವರು ಮಂಗಳೂರಿನವರು. ತಂದೆ ತಿಮ್ಮಪ್ಪ ಪೈಗಳು ಮತ್ತು ತಾಯಿ ದೇವಕಿಯಮ್ಮಇವರ ತಂದೆ ತುಂಬ ಸ್ಥಿತಿವಂತರು.

ಶಿಕ್ಷಣ :

ಗೋವಿಂದ ಪೈಗಳ ಪ್ರಾಥಮಿಕ ಶಿಕ್ಷಣ ಮಂಗಳೂರಿನಲ್ಲಿಯೇ ಮುಗಿಸಿದರು. ಇವರು ಮಂಗಳೂರಿನ ಸರಕಾರಿ ಕಾಲೇಜಿನಲ್ಲಿ ಇಂಟರ್‍ಮೀಡಿಯೆಟ್ಟಿನವರೆಗೆ ಶಿಕ್ಷಣ ಪಡೆದರು. ಖ್ಯಾತ ನವೋದಯ ಸಾಹಿತ್ಯದ ಆಚಾರ್ಯ ಪುರುಷರಾಗಿದ್ದ ಪಂಜೆ ಮಂಗೇಶರಾಯರು ಇವರಿಗೆ ಕನ್ನಡದ ಅಧ್ಯಾಪಕ ರಾಗಿದ್ದ ರು.

ವ್ಯಾಸಂಗಕ್ಕಾಗಿ ಮದರಾಸಿಗೆ ತೆರಳಿದರು. ನಂತರ ಪೈಯವರು ಮದ್ರಾಸಿನ ಕ್ರಿಶ್ಚಿಯನ್ ಕಾಲೇಜು ಸೇರಿದರು. ಅಲ್ಲಿ ಡಾ.ಎಸ್. ರಾಧಾಕೃಷ್ಣನ್ ಅವರು ಇವರ ಸಹಪಾಠಿಯಾಗಿದ್ದರು. ಬಿ.ಎ ತರಗತಿ ಕೊನೇ ವರ್ಷದ ಪರೀಕ್ಷೆ ನಡೆದಾಗಲೇ ತಂದೆಯ ಅನಾರೋಗ್ಯದ ಸುದ್ದಿ ತಿಳಿದು,ವ್ಯಾಸಂಗವನ್ನು ಬಿಟ್ಟು ಬಂದರು. ಅವರ ತಂದೆಯ ಮರಣದ ನಂತರ ಪದವಿ ಪಡೆಯುಲು ಕಾಲೇಜಿಗೆ ಹೋಗಲೇ ಇಲ್ಲ. ಬರೆದಿದ್ದ ಒಂದೇ ಪ್ರಶ್ನೆಪತ್ರಿಕೆ ಇಂಗ್ಲೀಷಿನಲ್ಲಿ ಪ್ರಥಮಸ್ಥಾನ ಪಡೆದು ಬಂಗಾರದ ಪದಕ ಪಡೆದರು. ಆದರೆ ಅವರ ಸಾಹಿತ್ಯದ ಅಧ್ಯಯನ ಜೀವನಪರ್ಯಂತ ನಿರಂತರವಾಗಿ ಮುಂದುವರೆಯಿತು.

ಸಾಹಿತ್ಯ :

ತಂದೆಯವರ ಮರಣದ ನಂತರ ಹಿರಿಯ ಮಗನಾದ ಇವರ ಮೇಲೆ ಮನೆತನದ ಎಲ್ಲ ಜವಾಬ್ದಾರಿ ಬಿತ್ತು. ಬಿ.ಎ ಪದವಿ ಪೂರ್ಣಗೊಳಿಸಲಿಲ್ಲ. ಮನೆಯಲ್ಲಿಯೇ ಅಮೂಲ್ಯ ಗ್ರಂಥಗಳನ್ನು ತರಿಸಿ ಓದಿದರು. ಕಾಲೇಜಿನಲ್ಲಿದ್ದಾಗ ಲ್ಯಾಟಿನ್ , ಫ್ರೆಂಚ್, ಸಂಸ್ಕ್ಕತ, ಪಾಲಿ, ಬಂಗಾಲಿ, ಭಾಷೆಗಳ ನ್ನು ಅಭ್ಯಸಿಸಿದ್ದರು. ಮನೆಯಲ್ಲಿ ಇನ್ನೂ ಹಲವು ಭಾಷೆಗಳನ್ನು ಅಭ್ಯಸಿಸಿ ಬಹುಭಾಷಾ ಪ್ರವೀಣರಾಗಿದ್ದರು. ಇವರ ಗ್ರಂಥಾಲಯದಲ್ಲಿ 43 ಭಾಷೆಗಳ ಸಾವಿರಾರು ಗ್ರಂಥ ಸಂಗ್ರಹವಿತ್ತು.

 ಇವರ ಮಾತೃಭಾಷೆ ಕೊಂಕಣಿ, ಪರಿಸರದ ಭಾಷೆ ತುಳು, ರಕ್ತಗತವಾದ ಭಾಷೆ ಕನ್ನಡ. ಕಲಿತದ್ದು ಇಂಗ್ಲೀಷಿನಲ್ಲಿ. ಮಲೆಯಾಳಿ ಮತ್ತು ತಮಿಳು ಆಜು ಬಾಜು ಭಾಷೆಗಳಾಗಿದ್ದವು. ಮರಾಠಿ ಗುಜರಾತಿ ಜರ್ಮನ್ ಗ್ರೀಕ್ ಮೊದಲಾದವು ಆಸಕ್ತ ಭಾಷೆಗಳಾಗಿದ್ದವು. ಮರಾಠಿ, ಜರ್ಮನ್ ಗ್ರೀಕ್ ಮೊದಲಾದ ಭಾಷೆಗಳನ್ನು ಕಲಿತು ಒಟ್ಟು ೨೫ ಭಾಷೆಗಳಲ್ಲಿ ಪ್ರಾವಿಣ್ಯತೆ ಪಡೆದು ಕೊಂಡಿದ್ದರು. 

 ಗೋವಿಂದ ಪೈಯವರು ನಂತರ ಮಂಜೇಶ್ವರದಲ್ಲಿ ನೆಲಸಿದ್ದರಿಂದ ಮಂಜೇಶ್ವರ ಗೋವಿಂದ ಪೈ ಎಂದೇ ಹೆಸರು ಗಳಿಸಿದರು.ಗೋವಿಂದ ಪೈಗಳು ‘ಗಿಳಿವಿಂಡು’, ‘ನಂದಾದೀಪ’ ಎಂಬ ಕಾವ್ಯ ಸಂಕಲನಗಳನ್ನು ಹೊರ ತಂದಿದ್ದಾರೆ.  ‘ವೈಶಾಖಿ’ ಹಾಗು ‘ಗೊಲ್ಗೊಥಾ’ ಎನ್ನುವ ಎರಡು ಖಂಡಕಾವ್ಯಗಳನ್ನು ಬರೆದಿದ್ದಾರೆ ‘ಹೆಬ್ಬೆರೆಳು’ ಎನ್ನುವ ಪದ್ಯಗಳನ್ನು ಒಳಗೊಂಡ ಏಕಾಂಕ ನಾಟಕವನ್ನೂ, ‘ಚಿತ್ರಭಾನು’ ಎನ್ನುವ ಗದ್ಯನಾಟಕವನ್ನೂ ಬರೆದಿದ್ದಾರೆ. ‘ತಾಯಿ‘, ‘ಕಾಯಾಯ್ ಕೊಮಾಜಿ’ ಎಂಬ ಸಾಮಾಜಿಕ ನಾಟಕಗಳನ್ನು ಬರೆದದ್ದಲ್ಲದೆ, ಜಪಾನಿನ ನಾಟಕಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಕರ್ನಾಟಕದ ಮೊದಲ ರಾಷ್ಟ್ರಕವಿ :

ಸಾಹಿತ್ಯ ಕ್ಷೇತ್ರದಲ್ಲಿನ ಅವರ ಬಹುಮುಖ ಸಾಧನೆಗಳಿಗಾಗಿ  ಗೋವಿಂದ ಪೈ ಅವರಿಗೆ 1949 ಆಗಸ್ಟ್  14 ರಂದು ಮದ್ರಾಸ್ ರಾಜ್ಯದ ಗವರ್ನರ್ ಆಗಿದ್ದ ಭಾವನಗರದ  ಮಹಾರಾಜರಿಂದ ರಾಷ್ಟ್ರಕವಿ ಎಂಬ ಬಿರುದನ್ನು ನೀಡಲಾಯಿತು.

ಸಂಶೋಧಕರಾಗಿ :

ಪದ್ಯಗಳನ್ನು ರಚಿಸುವುದು ಮತ್ತು ಸಂಶೋಧನೆ ಮಾಡುವುದು ವಿಭಿನ್ನ ಚಟುವಟಿಕೆಗಳಾಗಿವೆ, ಇದನ್ನು  ಗೋವಿಂದ  ಪೈ ಅವರು ಯಶಸ್ವಿಯಾಗಿ ನಡೆಸಿದರು. ಕನ್ನಡ ಮತ್ತು ಇಂಗ್ಲಿಷ್ ಎರಡರಲ್ಲೂ 250 ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಬರೆದಿದ್ದಾರೆ ಮತ್ತು ಅವು ಭಾಷೆ, ಸಾಹಿತ್ಯ, ಇತಿಹಾಸ ವಿಶೇಷವಾಗಿ ಕಾಲಗಣನೆ, ಸ್ಥಳನಾಮಗಳು ಇತ್ಯಾದಿಗಳನ್ನು ಒಳಗೊಂಡಿವೆ.

 ತುಳುನಾಡು ,  ವೇಣೂರು  ಮತ್ತು  ಕಾರ್ಕಳದ ಗೊಮ್ಮಟೇಶ್ವರನ  ಮೇಲೆ  , ಕನ್ನಡ ಕವಿಗಳು ಮತ್ತು ವಿದ್ವಾಂಸರ ದಿನಾಂಕಗಳು, ವಿವಿಧ ರಾಜ್ಯಗಳು ಮತ್ತು ರಾಜರ ಕಾಲಗಣನೆ ಮತ್ತು ವಂಶಾವಳಿಗಳು ಮತ್ತು ಪ್ರಮುಖ ಐತಿಹಾಸಿಕ ಘಟನೆಗಳ ದಿನಾಂಕಗಳು. ತಾರ್ಕಿಕ ಚಿಂತನೆ ಮತ್ತು ವಸ್ತುನಿಷ್ಠತೆ  ಗೋವಿಂದ  ಪೈ ಅವರ ಸಂಶೋಧನ ಲೇಖನಗಳ ಲಕ್ಷಣಗಳಾಗಿದ್ದವು. 

ನಾಡ ಭಕ್ತಿಗೀತೆಗಳು

ಗೋವಿಂದ ಪೈ ಅವರ ದೇಶಭಕ್ತಿ ತಮ್ಮ ತವರುನಾಡಾದ ತುಳುನಾಡಿನಿಂದ ಮೊದಲ್ಗೊಂಡು, ಕನ್ನಡನಾಡಿನ ಸುತ್ತಲೂ ಬಳ್ಳಿಯಂತೆ ಹಬ್ಬಿ, ಕಡೆಗೆ ಭಾರತಾಂಬೆಯ ಅಡಿದಾವರೆಗಳಲ್ಲಿ ಪುಷ್ಪವಾಗಿ ಸಮರ್ಪಣೆಗೊಂಡಿದೆ. “ಜಯ ಜಯ ತುಳುವ ತಾಯೆ ಮಣಿವೆ,  “ಜಯ ಜಯ ತುಳುವ ತಾಯೆ ಮಣಿವೆ, ತಂದೆ ತಾಯಂದಿರ ತಾಯೆ, ಭುವನದಿ ತ್ರಿದಿವಚ್ಛಾಯೆ” ಎಂಬುದು ಅವರ ತುಳುನಾಡಿನ ಕುರಿತ ಮೊದಲ ಸಾಲುಗಳು.“ತಾಯೆ ಬಾರ, ಮೊಗವ ತೋರ, ಕನ್ನಡಿಗರ ಮಾತೆಯೆ, ಹರಸು ತಾಯೆ, ಸುತರ ಕಾಯೆ. ನಮ್ಮ ಜನ್ಮದಾತೆಯೆ” ಎಂಬ ಅವರ ಹಾಡು ನಿರಂತರವಾಗಿ ಕನ್ನಡಿಗರ ತನುಮನ ಗಳಲ್ಲಿ ಮಾರ್ದನಿಸುತ್ತಿದೆ. “ಭಾರತಾಂಬೆಯ ಭಕ್ತಿ ನನಗಾತ್ಮಶಕ್ತಿ” ಎಂದು ತಾಯಿ ಭಾರತಾಂಬೆಗೆ ಧನ್ಯತೆಯನ್ನು ವ್ಯಕ್ತಪಡಿಸುತ್ತಾರೆ.

ನಿಧನ :

ಗೋವಿಂದ ಪೈ ಅವರು ಮಂಜೇಶ್ವರದಲ್ಲಿ 6-9-1963ರಲ್ಲಿ ಮರಣ ಹೊಂದಿದರು.

ಕೃತಿಗಳು :

ಗಿಳಿವಿಂಡು
ನಂದದೀಪ
ಹೃದಯ ರಂಗ
ವಿಟಂಕ

ಖಂಡಕಾವ್ಯಗಳು

ಗೊಲ್ಗೊಥಾ
ವೈಶಾಖಿ

ನಾಟಕಗಳು

ಹೆಬ್ಬೆರಳು
ಚಿತ್ರಭಾನು ಅಥವಾ ೧೯೪೨
ತಾಯಿ
ಜಪಾನಿನ ‘ನೋ’ ನಾಟಕಗಳು

ಗೌರವಗಳು :

1949 ರಲ್ಲಿ ಮದ್ರಾಸ್‌ ಸರಕಾರವು ಗೋವಿಂದ ಪೈಗಳಿಗೆ ರಾಷ್ಟ್ರ ಕವಿ ಎಂದು ಸನ್ಮಾನ ನೀಡಿ ಗೌರವಿಸಿತು.

ಕನ್ನಡದ ಪ್ರಥಮ ರಾಷ್ಟ್ರಕವಿ

ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ- 1950 ರಲ್ಲಿ ಮುಂಬಯಿಯಲ್ಲಿ ಜರುಗಿದ 34 ನೆಯ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಗೋವಿಂದ ಪೈ ಅವರು ಅಧ್ಯಕ್ಷರಾಗಿದ್ದರು.

ಇತರೆ ವಿಷಯಗಳು :

ಒನಕೆ ಓಬವ್ವ ಜೀವನ ಚರಿತ್ರೆ

ದ ರಾ ಬೇಂದ್ರೆ ಅವರ ಜೀವನ ಚರಿತ್ರೆ ಪ್ರಬಂಧ

ಕುವೆಂಪು ಅವರ ಬಗ್ಗೆ ಪ್ರಬಂಧ

FAQ :

1. ಎಂ ಗೋವಿಂದ ಪೈ ಅವರು ಯಾವಾಗ ಜನನ ಆದರು ?

ಎಂ. ಗೋವಿಂದ ಪೈ ಮಾರ್ಚ್ 23, 1883 ರಂದು ಜನಿಸಿದರು.

2.ಎಂ ಗೋವಿಂದ ಪೈ ಅವರಿಗೆ ರಾಷ್ಟ್ರ ಕವಿ ಬಿರುದನ್ನುಯಾವ ಸರಕಾರ ನೀಡಿತು ?

1949 ರಲ್ಲಿ ಮದ್ರಾಸ್‌ ಸರಕಾರವು ಗೋವಿಂದ ಪೈಗಳಿಗೆ ರಾಷ್ಟ್ರ ಕವಿ ಎಂದು ಸನ್ಮಾನ ನೀಡಿ ಗೌರವಿಸಿತು

3. ಎಂ ಗೋವಿಂದ ಪೈ ಅವರು ಯಾವಾಗ ಮರಣ ಹೊಂದಿದರು ?

ಮಂಜೇಶ್ವರದಲ್ಲಿ 6-9-1963ರಲ್ಲಿ ಮರಣ ಹೊಂದಿದರು.

LEAVE A REPLY

Please enter your comment!
Please enter your name here