ಲೋಪ ಸಂಧಿಗೆ 10 ಉದಾಹರಣೆಗಳು | Lopa Sandhi Examples In Kannada

0
1688
Lopa Sandhi Examples In Kannada
Lopa Sandhi Examples In Kannada

ಲೋಪ ಸಂಧಿಗೆ 10 ಉದಾಹರಣೆಗಳು, Lopa Sandhi Examples In Kannada lopa sandhi ke udaharan in kannada lopa sandhi definition in kannada lopa sandhi in kannada


Contents

Lopa Sandhi Examples In Kannada:

Lopa Sandhi Examples In Kannada
Lopa Sandhi Examples In Kannada

ಸಂಧಿ ಎಂದರೇನು?

ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಾಸ ಬರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.ಉದಾ : ಹೊಸಗನ್ನಡ=ಹೊಸ+ಕನ್ನಡ, ಹೊಸ-ಪೂರ್ವಪದ, ಕನ್ನಡ-ಉತ್ತರಪದ ಪೂರ್ವಪದ+ಉತ್ತರಪದ=ಸಂಧಿಪದ.

ಸಂಧಿಗಳಲ್ಲಿ ಎರಡು ವಿಧ.

  • ಸ್ವರ ಸಂಧಿ => ವ್ಯಂಜನ ಸಂಧಿ
  • ಲೋಪ ಸಂಧಿ ಆದೇಶ ಸಂಧಿ
  • ಆಗಮ ಸಂಧಿ

ಲೋಪ ಸಂಧಿ:

ಲೋಪ ಸಂಧಿ ಸ್ವರದ ಮುಂದೆ ಸ್ವರ ಬಂದರೆ ಪೂರ್ವಪದದ ಸ್ವರವು ಸಾಮಾನ್ಯವಾಗಿ ಬಿಟ್ಟುಹೋಗುತ್ತದೆ . ಸಂಧಿಪದದಲ್ಲಿ ಬಿಟ್ಟುಹೋಗುವುದಕ್ಕೆ ಲೋಪವೆಂದೂ ಕರೆಯುತ್ತಾರೆ.ಈ ಸಂಧಿಗೆ ‘ಲೋಪಸಂಧಿ ‘ ಎನ್ನುವರು.

ಸಂಧಿಕಾರ್ಯ:

ಲೋಪ ಸಂಧಿ ಪೂರ್ವಪದದ ಕೊನೆಯ ಅಕ್ಷರ ಮತ್ತು ಉತ್ತರಪದದ ಮೊದಲ ಅಕ್ಷರಗಳ ಸಂಧಿಸುವಿಕೆಯಲ್ಲಿ ನಡೆಯುತ್ತದೆ.

  1. ಸಂಧಿ ಮಾಡುವಾಗ – ಪೂರ್ವಪದದಲ್ಲಿಯ ಒಂದು ಅಕ್ಷರವು ಸಂಧಿಪದದಲ್ಲಿ ಇಲ್ಲದಿದ್ದರೆ – ಲೋಪಸಂಧಿ. ಉದಾ: ಮಾತಿಲ್ಲ= ಮಾತು+ಇಲ್ಲ=ಇಲ್ಲಿ ‘ಉ’ ಸ್ವರ ಲೋಪ.
  2. ಸಂಧಿ ಮಾಡುವಾಗ – ಪೂರ್ವಪದ ಮತ್ತು ಉತ್ತರ ಪದಗಳಲ್ಲಿಯ ಎಲ್ಲ ಅಕ್ಷರಗಳು ಸಂಧಿಪದದಲ್ಲಿ ಇದ್ದು ಹೊಸದಾಗಿ ಒಂದು ಅಕ್ಷರ ಸಂಧಿಪದದಲ್ಲಿ ಬಂದಿದ್ದರೆ-ಆಗಮಸಂಧಿ. ಉದಾ: ಮನೆ+ಅನ್ನು = ಮನೆಯನ್ನು = ‘ಯ್’ ವ್ಯಂಜನ ಆಗಮ.
  3. ಸಂಧಿ ಮಾಡುವಾಗ – ಉತ್ತರ ಪದದ ಆದಿಯಲ್ಲಿಯ ಒಂದು ವ್ಯಂಜನವು ಸಂಧಿಪದದಲ್ಲಿ ಲೋಪವಾಗಿ ಆ ಸ್ಥಳದಲ್ಲಿ ಹೊಸದಾಗಿ ಮತ್ತೊಂದು ವ್ಯಂಜನವು ಆಗಮವಾಗಿ ಬಂದರೆ – ಆದೇಶ ಸಂಧಿ. ಉದಾ: ಮಳೆ+ಕಾಲ=ಮಳೆಗಾಲ=‘ಕ್’ವ್ಯಂಜನ ಲೋಪ. ‘ಗ್’ ವ್ಯಂಜನ ಆದೇಶ.
  4. ಎಲ್ಲಾ ಅಕ್ಷರಗಳು ಇದ್ದಷ್ಟೇ ಸಂಧಿಪದದಲ್ಲಿ ಇರುವುದು ‘ಪ್ರಕೃತಿಭಾವ’ / ವಿಸಂಧಿ.

ಸಂಧಿಯಾಗುವಾಗ ಸ್ವರದ ಮುಂದೆ ಸ್ವರವು ಬಂದಾಗ, ಅರ್ಥವು ಕೆಡದಿದ್ದ ಪಕ್ಷದಲ್ಲಿ ಪೂರ್ವಪದದ ಕೊನೆಯ ಸ್ವರವು ಲೋಪವಾಗುವುದು.:ಉದಾ:- ಮತ್ತು(ಉ)+ಒಬ್ಬ=ಮತ್ತೊಬ್ಬ.ಇಲ್ಲಿ ಪೂರ್ವಪದದ ಕೊನೆಯ ಸ್ವರ ‘ಉ’ ಕಾರ ಲೋಪವಾಗಿದೆ.ಉದಾ:- ಅಲ್ಲಿ(ಇ)+ಅಲ್ಲಿ=ಅಲ್ಲಲ್ಲಿ.ಇಲ್ಲಿ ಪೂರ್ವಪದದ ಕೊನೆಯ ಸ್ವರ ‘ಇ’ಕಾರ ಲೋಪವಾಗಿದೆ ಅಂದರೆ ಮಾಯವಾಗಿದೆ.

ಉದಾಹರಾಣೆಗಳು:

ದೇವರು + ಇಂದ = ದೇವರಿಂದ ( ಉಕಾರ ಲೋಪ ) 

( ಉ + ಇ )

ನನಗೆ + ಅಲ್ಲದೆ = ನನಗಲ್ಲದೆ (ಎಕಾರ ಲೋಪ)

ಹರಿವು + ಆಗಿ = ಹರಿವಾಗಿ (ಉಕಾರ ಲೋಪ)

ನೀವು + ಎಲ್ಲ = ನೀವೆಲ್ಲಾ (ಉಕಾರ ಲೋಪ)

ಕೂಸು + ಅನ್ನು = ಕೂಸನ್ನು (ಉಕಾರ ಲೋಪ)

ಇವನು + ಆರು = ಇವನಾರು (ಉಕಾರ ಲೋಪ)

ನಾಡು + ಇಗೆ = ನಾಡಿಗೆ (ಉಕಾರ ಲೋಪ)

ಊರು + ಊರು = ಊರೂರು (ಉಕಾರ ಲೋಪ)

ಏನು+ಏನು = ಏನೇನು (ಉಕಾರ ಲೋಪ)

ಅದು + ಏನು = ಅದೇನು (ಉಕಾರ ಲೋಪ)

ಹಣದ +ಆಸೆ = ಹಣದಾಸೆ (ಅಕಾರ ಲೋಪ)

ಏನು + ಆದುದು = ಏನಾದುದು (ಉಕಾರ ಲೋಪ)

ಬೇರೆ + ಒಬ್ಬ =ಬೇರೊಬ್ಬ (ಏಕಾರ ಲೋಪ)

ಲೋಪ ಸಂಧಿ ಎಂದರೇನು?

ಲೋಪ ಸಂಧಿ ಸ್ವರದ ಮುಂದೆ ಸ್ವರ ಬಂದರೆ ಪೂರ್ವಪದದ ಸ್ವರವು ಸಾಮಾನ್ಯವಾಗಿ ಬಿಟ್ಟುಹೋಗುತ್ತದೆ . ಸಂಧಿಪದದಲ್ಲಿ ಬಿಟ್ಟುಹೋಗುವುದಕ್ಕೆ ಲೋಪವೆಂದೂ ಕರೆಯುತ್ತಾರೆ.ಈ ಸಂಧಿಗೆ ‘ಲೋಪಸಂಧಿ ‘ಎನ್ನುವರು.

ಲೋಪ ಸಂಧಿ ಒಂದು ಉದಾಹರಣೆ ತಿಳಿಸಿ?

ದೇವರು + ಇಂದ = ದೇವರಿಂದ ( ಉಕಾರ ಲೋಪ ).

ಸಂಧಿ ಎಂದರೇನು?

ಎರಡು ಅಕ್ಷರಗಳ ನಡುವೆ (ಸ್ವರ ಇಲ್ಲವೆ ವ್ಯಂಜನ) ಕಾಲ ವಿಳಂಬವಿಲ್ಲದಂತೆ ಮತ್ತು ಅರ್ಥಕ್ಕೆ ವ್ಯತ್ಯಾಸ ಬರದಂತೆ ಸೇರಿಸಿ ಉಚ್ಛರಿಸುವುದು ಸಂಧಿ ಎನಿಸುವುದು.

ಇತರೆ ವಿಷಯಗಳು:

ಮಲೆನಾಡ ಗಿಡ್ಡ

ಪುಸ್ತಕದ ಮಹತ್ವದ ಕುರಿತು ಪ್ರಬಂಧ

ಶಿಕ್ಷಣದ ಮಹತ್ವ ಪ್ರಬಂಧ

LEAVE A REPLY

Please enter your comment!
Please enter your name here