Keshava Nama Lyrics in Kannada | ಕೇಶವನಾಮ

0
150
Keshava Nama Lyrics in Kannada | ಕೇಶವನಾಮ
Keshava Nama Lyrics in Kannada | ಕೇಶವನಾಮ

Keshava Nama Lyrics in Kannada ಕೇಶವನಾಮ song lyrics in kannada


Keshava Nama Lyrics in Kannada

Keshava Nama Lyrics in Kannada
Keshava Nama Lyrics in Kannada | ಕೇಶವನಾಮ

ಈ ಲೇಖನಿಯಲ್ಲಿ ಕೇಶವನಾಮ ಲಿರಿಕ್ಸ್‌ ನಿಮಗೆ ಅನುಕೂಲವಾಗುವಂತೆ ನಮ್ಮ post ನಲ್ಲಿ ತಿಳಿಸಲಾಗಿದೆ.

ಕೇಶವನಾಮ

ಈಶ ನಿನ್ನ ಚರಣ ಭಜನೆ ಆಶೆಯಿಂದ ಮಾಡುವೆನು
ದೋಷ ರಾಶಿ ನಾಶ ಮಾಡು ಶ್ರೀಶ ಕೇಶವ||ಈಶ||

ಶರಣು ಹೊಕ್ಕೆನಯ್ಯ ಎನ್ನ ಮರಣ ಸಮಯದಲ್ಲಿ
ನಿನ್ನ ಚರಣ ಸ್ಮರಣೆ ಕರುಣಿಸಯ್ಯ ನಾರಾಯಣ
ಶೋಧಿಸೆನ್ನ ಭವದ ಕಲುಷ, ಭೋಧಿಸಯ್ಯ ಜ್ಞಾನವೆನಗೆ
ಬಾಧಿಸುವ ಯಮನ ಭಾಧೆ ಬಿಡಿಸು ಮಾಧವ
ಹಿಂದನೇಕ ಯೋನಿಗಳಲ್ಲಿ ಬಂದು ಬಂದು ನೊಂದೆ ನಾನು
ಇಂದು ಭವದ ಬಂಧ ಬಿಡಿಸೋ ತಂದೆ ಗೋವಿಂದ||ಈಶ||

ಭ್ರಷ್ಟನೆನಿಸ ಬೇಡ ಕ್ರಷ್ಣಾ ಇಷ್ಟು ಮಾತ್ರ ಬೇಡಿ ಕೊಂಬೆ
ಶಿಷ್ಟರೊಡನೆ ಇಟ್ಟು ಕಷ್ಟ ಬಿಡಿಸು ವಿಷ್ಣುವೇ
ಮದನನಯ್ಯ ನಿನ್ನ ಮಹಿಮೆ ವದನದಿಂದ ನುಡಿಯುವಂತೆ
ಹ್ರದಯದಲ್ಲಿ ಹುದುಗಿಸಯ್ಯ ಮಧುಸೂದನಾ
ಕವಿದು ಕೊಂಡು ಇರುವ ಪಾಪ ಸವೆದು ಪೋಗುವಂತೆ ಮಾಡು
ಜವನ ಭಾಧೆಯನ್ನು ಬಿಡಿಸೋ ಶ್ರೀತ್ರಿವಿಕ್ರಮ||ಈಶ||

ಕಾಮಜನಕ ನಿನ್ನ ನಾಮ ಪ್ರೇಮದಿಂದ ಪಾಡುವಂತ
ನೇಮವೆನಗೆ ಪಾಲಿಸಯ್ಯ ಸ್ವಾಮಿ ವಾಮನ
ಮೊದಲು ನಿನ್ನ ಪಾದ ಪೂಜೆ ಒದಗುವಂತೆ ಮಾಡು ಎನ್ನ
ಹ್ರದಯದೊಳಗೆ ಸದನಮಾಡೋ ಮುದದಿ ಶ್ರೀಧರ
ಹುಸಿಯನಾಡಿ ಹೊಟ್ಟೆ ಹೊರೆವ ವಿಷಯದಲ್ಲಿ ರಸಿಕನೆಂದು
ಹುಸಿಗೆ ಹಾಕದಿರೋ ಎನ್ನ ಹ್ರಷಿಕೇಶನೇ||ಈಶ||

ಕಾಮ ಕ್ರೋಧ ಬಿಡಿಸಿ ನಿನ್ನ ನಾಮ ಜಿಹ್ವೆಯೊಳಗೆ ನುಡಿಸೊ
ಶ್ರೀಮಹಾನುಭಾವನಾದ ದಾಮೋದರ
ಬಿದ್ದು ಭವದ ಅನೇಕ ಜನ್ಮ ಬಧ್ಧನಾಗಿ ಕಲುಷದಿಂದ
ಎದ್ದು ಕೋಪ ಬುಧ್ಧಿ ತೋರೊ ಪದ್ಮನಾಭನೆ
ಪಂಕಜಾಕ್ಷ ನೀನು ಎನ್ನ ಮಂಕ ಬುಧ್ಧಿಯನ್ನು ಬಿಡಿಸಿ
ಕಿಂಕರಣ ಮಾಡಿಕೊಳ್ಳೋ ಶಂಕರ್ಷಣಾ||ಈಶ||

ಏಸು ಜನುಮ ಬಂದರೇನು ದಾಸನಲ್ಲವೇನು ನಾನು
ಘಾಸಿ ಮಾಡದಿರು ಇನ್ನು ವಾಸುದೇವನೆ
ಬುಧ್ಧಿ ಶೂನ್ಯನಾಗಿ ಎನ್ನ ಬಧ್ಧಕಾಯ ಕುಹಕ ಮನವ
ತಿದ್ದಿ ಹ್ರದಯ ಶುಧ್ಧ ಮಾಡೋ ಪ್ರದ್ಯುಮ್ನನೇ
ಜನನಿ ಜನಕ ನೀನೆ ಎಂದು ನೆನೆವೆನಯ್ಯ ದೀನ ಬಂಧು
ಎನಗೆ ಮುಕ್ತಿ ಪಾಲಿಸಿಂದು ಅನಿರುದ್ಧನೇ||ಈಶ||

ಹರುಷದಿಂದ ನಿನ್ನ ನಾಮ ಸ್ಮರಿಸುವಂತೆ ಮಾಡು ಕ್ಷೇಮ
ಇರಿಸು ಚರಣದಲ್ಲಿ ಪ್ರೇಮ ಪುರುಷೋತ್ತಮ
ಸಾಧುಸಂಘ ಕೊಟ್ಟು ನಿನ್ನ ಪಾದ ಭಜನೆ ಇತ್ತು
ಎನ್ನ ಭೇದ ಮಾಡಿ ನೋಡದಿರೋ ಹೇ ಅಧೋಕ್ಷಜಾ
ಚಾರು ಚರಣ ತೋರಿ ಎನಗೆ ಪಾರುಗಾಣಿಸಯ್ಯ ಕೊನೆಗೆ
ಭಾರ ಹಾಕಿರುವೆ ನಿನಗೆ ನಾರಸಿಂಹನೇ
ಸಂಚಿತಾದಿ ಪಾಪಗಳು ಕಿಂಚಿತಾದ ಪೀಡೆಗಳು
ಮುಂಚಿತಾಗಿ ಕಳೆಯ ಬೇಕು ಸ್ವಾಮಿ ಅಚ್ಯುತಾ||ಈಶ||

ಜ್ಞಾನ ಭಕುತಿ ಕೊಟ್ಟು ನಿನ್ನ ಧ್ಯಾನದಲ್ಲಿ ಇಟ್ಟು ಸದಾ
ಹೀನ ಬುಧ್ಧಿ ಬಿಡಿಸೊ ಮುನ್ನ ಶ್ರೀಜನಾರ್ಧನ
ಜಪ ತಪಾನುಷ್ಠಾನವಿಲ್ಲ ಉಪಕಗಾಮಿಯಾದ ಎನ್ನ
ಕ್ರಪೆಯ ಮಾಡಿ ಕ್ಷಮಿಸ ಬೇಕು ಹೇ ಉಪೇಂದ್ರನೇ
ಮೊರೆಯ ಇಡುವೆನಯ್ಯ ನಿನಗೆ ಜಲದಿ ಶಯನ ಶುಭಮತಿಯ
ಇರಿಸೋ ಭಕ್ತರೊಳು ಪರಮ ಷುರುಷ ಶ್ರೀಹರಿ||ಈಶ||

ಹುಟ್ಟಿಸಲೇ ಬೇಡ ಇನ್ನು ಹುಟ್ಟಿಸಿದಕೆ ಪಾಲಿಸಿಂದು||2||
ಇಷ್ಟು ಮಾತ್ರ ಬೇಡಿ ಕೊಂಬೆ ಶ್ರೀಕೃಷ್ಣನೇ
ಸತ್ಯವಾದ ನಾಮಗಳನ್ನು ನಿತ್ಯದಲ್ಲಿ ಪಠಿಸುವರಿಗೆ
ಅರ್ತಿಯಿಂದ ಸಲಹುತಿರುವ ಕರ್ತ್ರ ಕೇಶವ
ಮರೆಯದಲೇ ಹರಿಯ ನಾಮ ಬರೆದು ಓದಿ ಪೇಳುವರಿಗೆ
ಕರೆದು ಮುಕ್ತಿ ಕೊಡುವ ನೆಲೆಯಾದಿ ಕೇಶವಾ||ಈಶ||

ಇತರೆ ವಿಷಯಗಳು :

ಲಕ್ಷ್ಮಿ ಅಷ್ಟ ಸ್ತೋತ್ರ ಕನ್ನಡ

ಸರಸ್ವತಿ ಅಷ್ಟೋತ್ತರ ಶತನಾಮಾವಳಿ

LEAVE A REPLY

Please enter your comment!
Please enter your name here